ರಾಜ್ಯಪಾಲರ ಬಳಿ ದೂರು ಹೋದರೂ ತಲೆ ಕೆಡಿಸಿಕೊಳ್ಳದ ಸಿಬ್ಬಂದಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಕ್ರಮ ಹಾಗೂ ದುಂದು ವೆಚ್ಚ, ಹಣಕಾಸು ಪೋಲು ಮಾಡುತ್ತಿರುವುದಕ್ಕೆ ಅಂತ್ಯ ಇಲ್ಲವಾಗಿದೆ. ಸರಕಾರಕ್ಕೆ ನಷ್ಟ ಉಂಟು ಮಾಡುತ್ತಿರುವ ವಿವಿಯ ಆಡಳಿತ ಮಂಡಳಿಗೆ ಚಾಟಿ ಬೀಸಬೇಕಿದೆ.
ಬಗೆದಷ್ಟು ವಿವಿಯ ಅಕ್ರಮಗಳು ಬೆಳಕಿಗೆ ಬರುತ್ತಿವೆ. ಇವೆಲ್ಲವೂ ಸರಕಾರದ ಗಮನದಲ್ಲಿದ್ದರೂ, ರಾಜ್ಯಪಾಲರ ಅಂಗಳಕ್ಕೆ ದೂರು ತಲುಪಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಕಾರದ ನಿರ್ಲಕ್ಷ್ಯ ಧೋರಣೆಯಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯ ಇಲ್ಲದಿದ್ದರೂ ದುಂದು ವೆಚ್ಚ ಮಾಡುತ್ತಿರುವ ಕುಲಪತಿಗಳ ವಿರುದ್ಧ ತನಿಖೆ ಮಾಡದಿರುವ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟವಾಗಿದೆ.
ಕೆಲ ಸಿಬ್ಬಂದಿಗೆ ಕಾನೂನುಬಾಹಿರವಾಗಿ ವೇತನ ರಕ್ಷಣೆ ನೀಡುವ ಮೂಲಕ ಬೆಂಗಳೂರು ವಿವಿಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ
ಸಿಂಡಿಕೇಟ್ ಸದಸ್ಯರಾದ ಸುಧಾಕರ್ ಅವರು ದೂರು ನೀಡಿದ್ದರೂ ಸರಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವಿ-ಲವಾಗಿರುವ ಹಾಗೂ ಪಾರದರ್ಶಕ ಆಡಳಿತ ನೀಡದ ಈ ವಿವಿಗೆ ಪಾಠ ಕಲಿಸಬೇಕಾದ ಅನಿವಾರ್ಯತೆ ಇದೆ.
ಸುಧಾಕರ್ ಅವರ ದೂರಿನಂತೆ, ಕುಲಪತಿ ಕೆ.ಆರ್.ವೇಣುಗೋಪಾಲ್ ಅವರು ವಿಶ್ವವಿದ್ಯಾಲಯಗಳ ಕಾಯಿದೆ ಉಲ್ಲಂಘಿಸಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಕೆಲ ಸಿಬ್ಬಂದಿಗೆ ವೇತನ ರಕ್ಷಣೆ ನೀಡಿರುವುದು ತಿಳಿದು ಬಂದಿದೆ. ವೇತನ ರಕ್ಷಣೆ ಹೆಸರಿನಲ್ಲಿ ವಿವಿಯ ಖಜಾನೆ ಬರಿದು ಮಾಡುವಂತಾ ಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಽನಿಯಮ 2000 ರ ಸೆಕ್ಷನ್ 48(4) ಉಲ್ಲಂಸಿ ವಿಶ್ವವಿದ್ಯಾಲಯ ಇಲ್ಲಿಯವರೆಗೂ 2 ಕೋಟಿಗೂ ಅಧಿಕ ಹಣವನ್ನು ಸುಮಾರು 6 ಪ್ರಾಧ್ಯಾಪಕರಿಗೆ ವೇತನ ರಕ್ಷಣೆ ಹೆಸರಲ್ಲಿ ಪಾವತಿಸಿದೆ. ಇದು ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ. ಸೇವಾ ರಕ್ಷಣೆ ನೀಡುತ್ತಿರುವುದು ಕಾನೂನಾತ್ಮಕವಾಗಿ ವಿರೋಧವಾಗಿದೆ. ಇಂದಿಗೂ ಪ್ರತಿ ತಿಂಗಳು ವಿವಿಯು ಲಕ್ಷಾಂತರ ರುಪಾಯಿಗಳನ್ನು ಪ್ರಾಧ್ಯಾಪಕರಿಗೆ ಅಕ್ರಮವಾಗಿ ಪಾವತಿಸುತ್ತಿದೆ. ತಕ್ಷಣ ವೇತನ ರಕ್ಷಣೆ ಆದೇಶ ಹಿಂಪಡೆಯಬೇಕು, ಹೆಚ್ಚುವರಿ ಸಂಬಳ ಹಿಂಪಡೆಯಬೇಕು ಎಂದು ಸಿಂಡಿಕೇಟ್ ಸದಸ್ಯರಾದ ಸುಧಾಕರ್ ಅವರು ಆಗ್ರಹಿಸಿದ್ದಾರೆ.
ಭಾರಿ ಭ್ರಷ್ಟಾಚಾರ
2018 ರ ಬ್ಯಾಕ್‌ಲಾಗ್ ಹುದ್ದೆಯ ನೇಮಕದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎನ್ನುವ ಮತ್ತೊಂದು ಆರೋಪ ಕೇಳಿಬಂದಿದೆ. 2018ರ ಬ್ಯಾಕ್‌ಲಾಗ್ ಹುzಯ ನೇಮಕ ಸಂದರ್ಭದಲ್ಲಿ ಯುಜಿಸಿ ಕಾಯಿದೆಯನ್ನು ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ. ಭರ್ತಿ ಹುದ್ದೆಯನ್ನೇ ಖಾಲಿ ಮಾಡಿಸಿದ ಆರೋಪ ವಿಶ್ವವಿದ್ಯಾಲಯದ ಮೇಲಿದೆ.
ಬೆಂಗಳೂರು ವಿವಿಯ ಮೂರು ವಿಭಾಗಗಳಲ್ಲಿ ಕೆಲವರಿಗೆ ಎರಡೆರಡು ಪೋಸ್ಟ್ ಗಳನ್ನು ನೀಡಲಾಗಿದೆ. ಈ ಮೊದಲು ಪ್ರಾಧ್ಯಾಪಕರಾಗಿದ್ದವರು ಬ್ಯಾಕ್‌ಲಾಗ್‌ನಲ್ಲಿ ಮತ್ತೆ ಪ್ರಾಧ್ಯಾಪಕರಾಗಿ ಪ್ರತ್ಯೇಕವಾಗಿ ನೇಮಕವಾಗಿದ್ದಾರೆ. ಮೂರು ನಿಕಾಯಗಳಲ್ಲಿ ಒಬ್ಬರಿಗೆ ಒಂದು ಹುದ್ದೆ, ಎರಡು ಪೋಸ್ಟ್ ಕೊಡಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಿಯಮಗಳ ಅಡಿಯಲ್ಲಿ ಒಬ್ಬರೇ ಎರಡು ಹುದ್ದೆಗಳನ್ನು ಹೊಂದಲು ಅವಕಾಶ ಇಲ್ಲ. ಈ ಕುರಿತು ಸಮಗ್ರವಾಗಿ ತನಿಖೆ ನಡೆಸಿದಾಗಲೇ ಸತ್ಯಾಂಶ ಹೊರ ಬೀಳಲಿದೆ.