Friday, 22nd November 2024

ಮೆಕ್‌ಡೊನಾಲ್ಡ್ಸ್ ಇಂಡಿಯಾ, ಮೆಕ್‌ಕೆಫೆ ಮೆನುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪಾನೀಯಗಳ ಸೇರ್ಪಡೆ

ಮುಂಬೈ: ಆರೋಗ್ಯಕರ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಮತ್ತು ಪಾನೀಯಗಳಿಗೆ ಹೆಚ್ಚುತ್ತಿರುವ ಗ್ರಾಹಕರ ಆದ್ಯತೆಗೆ ಅನುಗುಣವಾಗಿ, ಮೆಕ್‌ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ತನ್ನ ಮೆಕ್‌ಕೆಫೆ ಮೆನುವಿಗೆ -ಟರ್ಮೆರಿಕ್ ಲ್ಯಾಟೆ ಮತ್ತು ಮಸಾಲ ಕಡಕ್ ಚಾಯ್ ಎನ್ನುವ ಎರಡು ಹೊಸ ಸೇರ್ಪಡೆಗಳನ್ನು ಘೋಷಿಸಿದೆ. ಕಳೆದ ವರ್ಷದಿಂದ ರೋಗನಿರೋಧಕ ಶಕ್ತಿ ಎಂಬುದು ನಮ್ಮ ಮನಸ್ಸಿನಲ್ಲಿ ಮತ್ತು ನಮ್ಮ ನಾಲಿಗೆಯ ತುದಿಯಲ್ಲಿಯೇ ಇವೆ ಮತ್ತು ವಿಶೇಷವಾಗಿ, ಪ್ರಸ್ತುತದಲ್ಲಿ ಬಹಳ ನಿರ್ಣಾಯಕವಾಗಿದೆ.

ಈ ಹೊಸ ಪಾನೀಯಗಳು ರುಚಿಕರವಾಗಿರುವುದು ಮಾತ್ರವಲ್ಲದೆ ನಿಮ್ಮ ದೇಹವನ್ನು ಶುದ್ಧಗೊಳಿಸುವ, ಕರುಳಿನ ಆರೋಗ್ಯವನ್ನು ಸುಧಾರಿಸುವ, ಸೋಂಕುಗಳ ವಿರುದ್ಧ ಹೋರಾಡುವ, ಜೊತೆಗೆ ಇನ್ನೂ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುವಂತಹ ಅರಿಶಿನ, ಕರಿಮೆಣಸು ಮತ್ತು ಶುಂಠಿಯಂತಹ ರೋಗನಿರೋ ಧಕ ಶಕ್ತಿಯನ್ನು ಹೆಚ್ಚಿಸುವ ಪದಾರ್ಥಗಳಿಂದ ಕೂಡಿದೆ. ಟರ್ಮೆರಿಕ್ ಲ್ಯಾಟೆ ಯು – ಶೀತ, ಕೆಮ್ಮು, ಕಟ್ಟಿದ ಮೂಗು ಮತ್ತು ಇನ್ನೂ ಅನೇಕ ಕಾಯಿಲೆಗಳನ್ನು ಎದುರಿಸಲು ಬಳಸುವ ಹಳೆಯ ಆಯುರ್ವೇದ ಪರಿಹಾರವಾದ “ಹಲ್ದಿ ದೂಧ್” ನ/ “ಅರಿಶಿನ ಹಾಲಿನ” ಒಂದು ವಿಶಿಷ್ಟ ಬೆಳವಣಿಗೆಯಾಗಿದೆ. ಈ ಪಾನೀಯವು ಅರಿಶಿನದ ವಿಶೇಷಣಗಳಿಂದ ತುಂಬಿರುತ್ತದೆ ಮತ್ತು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿರೋಧಕದ ಗುಣಲ ಕ್ಷಣಗಳಿಂದ ಸಮೃದ್ಧ ವಾಗಿರುವ ಏಲಕ್ಕಿ ಮತ್ತು ಕೇಸರಿಯಂತಹ ಇತರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿ ಸುವ ಪದಾರ್ಥಗಳಿಂದ ತುಂಬಿದೆ.

ಮಸಾಲಾ ಕಡಕ್ ಚಾಯ್ ಒಂದು ಕಪ್‌ನಲ್ಲಿನ ಹಿತವಾಗಿದ್ದು, ಈ ಸಾಂಪ್ರದಾಯಿಕ ಪಾನೀಯವು ಭಾರತೀಯ ಗ್ರಾಹಕರ ಪ್ರೀತಿ ಮತ್ತು ಭಾವನೆಯಿಂದ ಸ್ಫೂರ್ತಿ ಪಡೆದಿದೆ. ಇದು ಲ್ಯಾಟೆ ಗುಣಮಟ್ಟವನ್ನು ಹೊಂದಿದ್ದು, ನಿಮಗೆ ಧಿಡೀರ್ ಶಕ್ತಿ ನೀಡಲು ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ಪ್ಯಾಕ್ ಮಾಡಲಾಗಿದೆ!

ಮೆಕ್‌ಡೊನಾಲ್ಡ್÷್ಸ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ನ ನಿರ್ದೇಶಕರಾದ ಅರವಿಂದ್ ಎಪಿ ರವರು ಮೆನುವಿನಲ್ಲಿ ಹೊಸ ಸೇರ್ಪಡೆಗಳ ಕುರಿತು ಮಾತನಾಡುತ್ತಾ, “ಮೆನು ನಾವೀನ್ಯತೆ ನಮ್ಮ ನಿರಂತರ ಪ್ರಯಾಣವಾಗಿದೆ ಮತ್ತು ಈ ಹೊಸ ಕೊಡುಗೆಗಳನ್ನು ಮೆಕ್‌ಕೆಫೆ ಮೆನುವಿ ನಲ್ಲಿ ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಭಾರತೀಯ ರಸನೇಂದ್ರಿಯವನ್ನು ಮೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುವ ಪಾಕವಿಧಾನಗಳು ಮತ್ತು ಉತ್ಪನ್ನಗಳನ್ನು ಸಕ್ರಿಯವಾಗಿ ಹುಡುಕುತ್ತಿದ್ದಾರೆ ಎಂದು ಹಲವಾರು ಅಧ್ಯಯನಗಳು ಮತ್ತು ಸಂಶೋಧನೆ ಗಳು ಎತ್ತಿ ತೋರಿಸಿವೆ. ಯಾವಾಗಲೂ ಗ್ರಾಹಕರ ನಿರೀಕ್ಷೆಯನ್ನು ಮೀರಿದ ಬ್ರಾ÷್ಯಂಡ್ ಆಗಿ, ಈ ಸೇರ್ಪಡೆಗಳು ನಮ್ಮ ಗ್ರಾಹಕರಿಗೆ ಸೂಕ್ತ ಆಯ್ಕೆಗಳನ್ನು ನೀಡುತ್ತವೆ. ” ಎಂದರು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಹೊಸ ಪಾನೀಯಗಳು ಎಲ್ಲಾ ಮೆಕ್ ಕೆಫೆ ಅಂಗಡಿಗಳಲ್ಲಿ ಲಭ್ಯವಿದೆ. ಗ್ರಾಹಕರು ಈ ಪಾನೀಯಗಳನ್ನು ಸಂಪರ್ಕ ರಹಿತ ಡೆಲಿವರಿ, ಸಂಪರ್ಕರಹಿತ ಟೇಕ್‌ಔಟ್, ಪ್ರಯಾಣದಲ್ಲಿರುವಾಗ ಅಥವಾ ಹತ್ತಿರದ ಮೆಕ್ ಕೆಫೆ ಔಟ್ಲೆಟ್ ನಲ್ಲಿ ಆರ್ಡರ್ ಮಾಡಬಹುದು. ಮೆಕ್‌ಕ್ಯಾಫ್ ಬಿಸಿ ಮತ್ತು ತಣ್ಣನೆಯ ಕಾಫಿ ಆಯ್ಕೆಗಳ ಜೊತೆಗೆ ೨೦ ಕ್ಕೂ ಹೆಚ್ಚು ಗ್ಯಾಸ್‌ರಹಿತ ಡೈರಿ ಮತ್ತು ಹಣ್ಣಿನ ಪಾನೀಯಗಳನ್ನು ಹೊಂದಿದೆ ಎಂದು ಹೆಮ್ಮೆಪಡುತ್ತದೆ.

ಮೆಕ್‌ಡೊನಾಲ್ಡ್ಸ್ ತಮ್ಮ ಗ್ರಾಹಕರು ಮತ್ತು ಉದ್ಯೋಗಿಗಳ ಸಂಪೂರ್ಣ ಸುರಕ್ಷತೆಯನ್ನು ಖಾತ್ರಿಪಡಿಸುವ ಸುವರ್ಣ ಖಾತರಿಯ ಭರವಸೆಯ ಭಾಗವಾಗಿ ಕಠಿಣ ಸುರಕ್ಷತೆ ಮತ್ತು ನೈರ್ಮಲ್ಯ ಪ್ರೋಟೋಕಾಲ್‌ಗಳನ್ನು ಜಾರಿಗೆ ತಂದಿದೆ.

ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳನ್ನು ಅದರ ಸಂಪೂರ್ಣ ಒಡೆತನದ ಅಂಗಸAಸ್ಥೆಯಾದ ಹಾರ್ಡ್ಕಾಸ್ಟಲ್ ರೆಸ್ಟೋರೆಂಟ್ ಪ್ರೈ. ಲಿಮಿಟೆಡ್ ವೆಸ್ಟ್ಲೈಫ್ ಡೆವಲಪ್‌ಮೆಂಟ್ ಲಿಮಿಟೆಡ್ ಮುಖಾಂತರ ನಿರ್ವಹಿಸುತ್ತದೆ.

ವೆಸ್ಟ್ಲೈಫ್ ಡೆವಲಪ್‌ಮೆಂಟ್ ಕುರಿತು: ವೆಸ್ಟ್ಲೈಫ್ ಡೆವಲಪ್‌ಮೆಂಟ್ ಲಿಮಿಟೆಡ್ ತನ್ನ ಅಂಗಸಂಸ್ಥೆ ಹಾರ್ಡ್ ಕ್ಯಾಸಲ್ ರೆಸ್ಟೋರೆಂಟ್ ಪ್ರೈ. ಲಿಮಿಟೆಡ್ ಮೂಲಕ ಭಾರತದಲ್ಲಿ ಕ್ವಿಕ್ ಸರ್ವಿಸ್ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಕೇಂದ್ರೀಕರಿಸಿದೆ.
ಕಂಪನಿಯು ಭಾರತೀಯ ಅಂಗಸಂಸ್ಥೆಯ ಮೂಲಕ ಮೆಕ್‌ಡೊನಾಲ್ಡ್ಸ್ ಕಾರ್ಪೊರೇಷನ್ ಯುಎಸ್‌ಎ ಜೊತೆ ಮಾಸ್ಟರ್ ಫ್ರಾಂಚೈಸೀ ಸಂಬಂಧವನ್ನು ಹೊಂದಿದ್ದು, ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳ ಸರಪಳಿಯನ್ನು ಪಶ್ಚಿಮ ಮತ್ತು ದಕ್ಷಿಣ ಭಾರತದಲ್ಲಿ ನಿರ್ವಹಿಸುತ್ತದೆ.

ಹಾರ್ಡ್ಕ್ಯಾಸಲ್ ರೆಸ್ಟೋರೆಂಟ್‌ಗಳ ಕುರಿತು: ಹಾರ್ಡ್ಕ್ಯಾಸಲ್ ರೆಸ್ಟೋರೆಂಟ್ ಪ್ರೈವೇಟ್ ಲಿಮಿಟೆಡ್ (ಎಚ್‌ಆರ್‌ಪಿಎಲ್) ಮೆಕ್‌ಡೊನಾಲ್ಡ್ಸ್ ಫ್ರಾಂಚೈಸಿ ಆಗಿದ್ದು, ಭಾರತದ ಪಶ್ಚಿಮ ಮತ್ತು ದಕ್ಷಿಣ ಮಾರುಕಟ್ಟೆಗಳಲ್ಲಿ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳನ್ನು ಹೊಂದಲು ಮತ್ತು ನಿರ್ವಹಿಸಲು ಹಕ್ಕುಗಳನ್ನು ಹೊಂದಿದೆ. ಎಚ್‌ಆರ್‌ಪಿಎಲ್ ೧೯೯೬ ರಲ್ಲಿ ಪ್ರಾರಂಭವಾದಾಗಿನಿಂದ ಭಾರತದ ಈ ಭಾಗದಲ್ಲಿ ಫ್ರಾಂಚೈಸಿ ಆಗಿದೆ.

ಎಚ್‌ಆರ್‌ಪಿಎಲ್ ತೆಲಂಗಾಣ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಛತ್ತೀಸ್‌ಗಢ್, ಆಂಧ್ರಪ್ರದೇಶ, ಗೋವಾ ಮತ್ತು ಮಧ್ಯಪ್ರದೇಶ ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಕೆಲವು ಭಾಗಗಳಲ್ಲಿನ ೪೨ ನಗರಗಳಲ್ಲಿ ಅದರ ೩೦೫ (ಜೂನ್ ೩೦, ೨೦೨೧ ರಂತೆ) ಮೆಕ್‌ಡೊನಾಲ್ಡ್ಸ್ ರೆಸ್ಟೋ ರೆಂಟ್‌ಗಳಲ್ಲಿ ವಾರ್ಷಿಕವಾಗಿ ಸುಮಾರು ೨೦೦ ಮಿಲಿಯನ್ ಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ, ಮತ್ತು ೧೦,೦೦೦ ಕ್ಕೂ ಹೆಚ್ಚು ಉದ್ಯೋಗಿಗಳಿಗೆ ನೇರ ಉದ್ಯೋಗವನ್ನು ಒದಗಿಸುತ್ತದೆ. ಸ್ವತಂತ್ರ ರೆಸ್ಟೋರೆಂಟ್‌ಗಳು, ಡ್ರೈವ್-ಥ್ರೂಗಳು, ೨೪/೭, ಮೆಕ್‌ಡೆಲಿವರಿ ಮತ್ತು ಸಿಹಿ ಕಿಯೋಸ್ಕ್ಗಳು ಸೇರಿದಂತೆ ವಿವಿಧ ಸ್ವರೂಪಗಳು ಮತ್ತು ಬ್ರಾಂಡ್ ವಿಸ್ತರಣೆಗಳ ಮೂಲಕ ಮೆಕ್‌ಡೊನಾಲ್ಡ್ಸ್ ಕಾರ್ಯನಿರ್ವಹಿಸುತ್ತದೆ.

ಮೆನುವಿನಲ್ಲಿ ಬರ್ಗರ್‌ಗಳು, ಫಿಂಗರ್ ಫುಡ್‌ಗಳು, ವ್ರಾ÷್ಯಪ್ಸ್, ಅನ್ನದ ವೈಶಿಷ್ಟ್ಯಗಳು, ಮತ್ತು ಬಿಸಿ ಮತ್ತು ತಂಪು ಪಾನೀಯಗಳ ಜೊತೆಗೆ ವ್ಯಾಪಕ ಶ್ರೇಣಿಯ ಸಿಹಿತಿಂಡಿಗಳಿವೆ. ಹಲವಾರು ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳು ಇನ್-ಹೌಸ್ ಮೆಕ್‌ಕ್ಯಾಫ್ ಅನ್ನು ಹೊಂದಿವೆ. ಮೆಕ್‌ಡೊನಾಲ್ಡ್ಸ್ ವ್ಯವಸ್ಥೆಯ ಆಧಾರ ಸ್ತಂಭಗಳು – ಗುಣಮಟ್ಟ, ಸೇವೆ, ಸ್ವಚ್ಛತೆ ಮತ್ತು ಮೌಲ್ಯ – ಎಚ್‌ಆರ್‌ಪಿಎಲ್ ಕಾರ್ಯನಿರ್ವಹಿಸುವ ಪ್ರತಿಯೊಂದು ರೆಸ್ಟೋರೆಂಟ್‌ಗಳಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ.