Saturday, 23rd November 2024

ಕರ್ನಾಟಕ ಗೆಲ್ಲಿಸಿದ ಪಡಿಕ್ಕಲ್ ಶತಕ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ನಾಯರ್ ಪಡೆಗೆ ಐದು ವಿಕೆಟ್ ಜಯ ಆಂಧ್ರ ತಂಡಕ್ಕೆೆ ನಿರಾಸೆ

ವಿಶಾಖಪಟ್ಟಣಂ:
ದೇವದತ್ತ ಪಡಿಕ್ಕಲ್ ಅವರ ಸ್ಪೋೋಟಕ ಶತಕದ ಬಲದಿಂದ ಕರ್ನಾಟಕ ತಂಡ, ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ ಟಿ-20 ಕ್ರಿಿಕೆಟ್ ಟೂರ್ನಿಯ ‘ಎ’ ಗುಂಪಿನ ಮೂರನೇ ಸುತ್ತಿಿನ ಪಂದ್ಯದಲ್ಲಿ ಆಂಧ್ರ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ
ಇಲ್ಲಿನ ವೈ.ಎಸ್ ರಾಜಶೇಖರ ರೆಡ್ಡಿಿ ಕ್ರಿಿಕೆಟ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಆಂಧ್ರ, ನಿಗದಿತ 20 ಓವರ್‌ಗಳಿಗೆ ಐದು ವಿಕೆಟ್ ನಷ್ಟಕ್ಕೆೆ 184 ರನ್ ದಾಖಲಿಸಿತ್ತು. ಬಳಿಕ, ಸವಾಲಿನ ಗುರಿ ಹಿಂಬಾಲಿಸಿದ ಕರ್ನಾಟಕ ತಂಡ 18.5 ಓವರ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು 189 ರನ್ ಗಳಿಸಿ ಟೂರ್ನಿಯ ಎರಡನೇ ಗೆಲುವಿನ ನಗೆ ಬೀರಿತು.

ಆರಂಭಿಕ ಆಘಾತ: ಸವಾಲಿನ ಗುರಿ ಹಿಂಬಾಲಿಸಿದ ಕರ್ನಾಟಕಕ್ಕೆೆ ಚೀಪುರಪಲ್ಲಿ ಸ್ಟಿಿಫೆನ್ ಆರಂಭಿಕ ನೀಡಿದರು. ಆರಂಭಿಕರಾಗಿ ಕಣಕ್ಕೆೆ ಇಳಿದಿದ್ದ ಲವನೀತ್ ಸಿಸೋಡಿಯಾ ಹಾಗೂ ರೋಹನ್ ಕದಮ್ ಅವರ ವಿಕೆಟ್‌ಗಳನ್ನು ಸ್ಟಿಿಫೆನ್ ಕಬಳಿಸಿದರು. ಇದರೊಂದಿಗೆ ಕೇವಲ 7 ರನ್‌ಗಳಿಗೆ ಕರ್ನಾಟಕ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆೆ ಸಿಲುಕಿತು.

ಪಡಿಕ್ಕಲ್ ಸ್ಫೋೋಟಕ ಬ್ಯಾಾಟಿಂಗ್:
ಮೂರನೇ ಕ್ರಮಾಂಕದಲ್ಲಿ ಬ್ಯಾಾಟಿಂಗ್‌ಗೆ ಇಳಿದ ಕೆ.ಗೌತಮ್ 17 ಎಸೆತಗಳಲ್ಲಿ 35 ರನ್ ಚಚ್ಚಿಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ನಂತರ, ಪಂದ್ಯದುದ್ದಕ್ಕೂ ಏಕಾಂಗಿಯಾಗಿ ಹೋರಾಟ ನಡೆಸಿದ ದೇವದತ್ತ ಪಡಿಕ್ಕಲ್ ಸ್ಫೋೋಟಕ ಮಾಡಿದರು. ಆಂಧ್ರ ಬೌಲರ್‌ಗಳನ್ನು ಬೆವರಿಳಿಸಿದ ಎಡಗೈ ಬ್ಯಾಾಟ್‌ಸ್‌‌ಮನ್, ನೆರೆದಿದ್ದ ಕ್ರಿಿಕೆಟ್ ಪ್ರೇಮಿಗಳಿಗೆ ಭರ್ಜರಿ ರಸದೌತಣ ಉಣ ಬಡಿಸಿದರು. 60 ಎಸೆತಗಳನ್ನು ಎದುರಿಸಿದ ಅವರು, ಏಳು ಸಿಕ್ಸರ್ ಹಾಗೂ 13 ಬೌಂಡರಿಯೊಂದಿಗೆ 122 ರನ್‌ಗಳೊಂದಿಗೆ ಸ್ಫೋೋಟಕ ಶತಕ ಸಿಡಿಸಿ ಸಂಭ್ರಮಿಸಿದರು. ಇವರ ಭರ್ಜರಿ ಶತಕದ ಬಲದಿಂದ ಕರ್ನಾಟಕ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆ ಗೆಲುವಿನ ದಡ ಸೇರಿತು.

ಇದಕ್ಕೂ ಮುನ್ನ ಮೊದಲು ಬ್ಯಾಾಟಿಂಗ್ ಮಾಡಿದ್ದ ಆತಿಥೇಯ ಆಂಧ್ರ, ಮೊದಲನೇ ಬೇಗ ಕಳೆದುಕೊಂಡರೂ ಎರಡನೇ ವಿಕೆಟ್‌ಗೆ ಅದ್ಭುತ ಬ್ಯಾಾಟಿಂಗ್ ಮಾಡಿತು. ಮುರಿಯದ ಎರಡನೇ ವಿಕೆಟ್‌ಗೆ ಅಶ್ವಿಿನ್ ಹೆಬ್ಬಾಾರ್ ಹಾಗೂ ಪ್ರಶಾಂತ್ ಕುಮಾರ್ ಜೋಡಿಯು 139 ರನ್ ಸಿಡಿಸಿತು. ಅಮೋಘ ಬ್ಯಾಾಟಿಂಗ್ ಮಾಡಿದ ಅಶ್ವಿಿನ್ ಹೆಬ್ಬಾಾರ್ ಅವರು 44 ಎಸೆತಗಳಲ್ಲಿ 61 ರನ್ ಚಚ್ಚಿಿದರು. ಇವರ ಅದ್ಭುತ ಇನಿಂಗ್‌ಸ್‌‌ನಲ್ಲಿ ಒಂದು ಸಿಕ್‌ಸ್‌ ಹಾಗೂ ಏಳು ಬೌಂಡರಿಗಳಿದ್ದವು. ಇವರ ಜತೆ ಮತ್ತೊೊಂದು ತುದಿಯಲ್ಲಿ ಪ್ರಶಾಂತ್ ಕುಮಾರ್ ಅವರು 51 ಎಸೆತಗಳಲ್ಲಿ ಆರು ಸಿಕ್ಸರ್ ಮೂರು ಬೌಂಡರಿಗಳೊಂದಿಗೆ 79 ರನ್ ಸಿಡಿಸಿದರು.
ಕರ್ನಾಟಕದ ಪರ ವಿ ಕೌಶಿಕ್ ದುಬಾರಿಯಾದರೂ ಮೂರು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋೋರ್
ಆಂಧ್ರ: 20 ಓವರ್‌ಗಳಿಗೆ 184/5 (ಪ್ರಶಾಂತ್ ಕುಮಾರ್ 79, ಅಶ್ವಿಿನ್ ಹೆಬ್ಬಾಾರ್ 61; ವಿ.ಕೌಶಿಕ್ 35 ಕ್ಕೆೆ 3, ಶ್ರೇಯಸ್ ಗೋಪಾಲ್ 29 ಕ್ಕೆೆ 1, ಅಭಿಮನ್ಯು ಮಿಥುನ್ 34 ಕ್ಕೆೆ 1)
ಕರ್ನಾಟಕ: 18.5 ಓವರ್‌ಗಳಿಗೆ 189/5 (ದೇವದತ್ತ ಪಡಿಕ್ಕಲ್ ಔಟಾಗದೆ 122, ಕೆ.ಗೌತಮ್ 35; ಸ್ಟಿಿಫೆನ್ 39 ಕ್ಕೆೆ 2, ನರೇನ್ ರೆಡ್ಡಿಿ 20 ಕ್ಕೆೆ 1, ಕೆ.ವಿ ಕೌಶಿಕ್ 46 ಕ್ಕೆೆ 1)