Sunday, 15th December 2024

ಸರಸ್ವತಿ ನಾಗರಿಕತೆಯಲ್ಲಿ ಕೊಚ್ಚಿ ಹೋದ ಆರ್ಯನ್ ಇತಿಹಾಸ

ವೀಕೆಂಡ್ ವಿಥ್ ಮೋಹನ್

ಮೋಹನ್ ವಿಶ್ವ

camohanbn@gmail.com

ಎಡಚರರು ಭಾರತೀಯ ಇತಿಹಾಸವನ್ನು ಪ್ರತಿನಿಧಿಸುವ ಆಯಕಟ್ಟಿನ ವಿಶ್ವವಿದ್ಯಾಲಯಗಳಲ್ಲಿ ತಮ್ಮ ನೆಲೆಯನ್ನು ಕಂಡುಕೂಳ್ಳುತ್ತಿದ್ದಂತೆಯೇ ಮಾಡಿದ ಮೊದಲ ಕೆಲಸ ಸುಳ್ಳು ಇತಿಹಾಸವನ್ನು ಸೃಷ್ಟಿಸಿದ್ದು. ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆಯನ್ನು ನಾಶ ಮಾಡುವ ಸಲುವಾಗಿ ಬ್ರಿಟಿಷ್ ಅಧಿಕಾರಿ ‘ಮೆಕಾಲೆ’ ನೂತನ
ಶಿಕ್ಷಣ ಪದ್ದತಿಯಡಿಯಲ್ಲಿ ಸಂಸ್ಕೃತ ಭಾಷೆಯನ್ನು ನಾಶ ಮಾಡುವ ಸಲುವಾಗಿ ಶಿಕ್ಷಣ ಪದ್ಧತಿಯಲ್ಲಿ ಇಂಗ್ಲಿಷ್ ಭಾಷೆಯನ್ನು ಆಳವಾಗಿ ಪಸರಿಸಿದ್ದ.

ಸಂಪದ್ಭರಿತ ಭಾರತವನ್ನು  ಲೂಟಿ ಮಾಡಬೇಕೆಂದರೆ ಪ್ರಾಚೀನ ಶಿಕ್ಷಣ ಪದ್ಧತಿಯನ್ನು ನಾಶ ಮಾಡಿದರೆ ಮಾತ್ರ ಸಾಧ್ಯವೆಂಬ ಅಂಶ ಆತನಿಗೆ ಚೆನ್ನಾಗಿ ತಿಳಿ ದಿತ್ತು. ಆತನು ಹಾಕಿಕೊಟ್ಟಂತಹ ಶಿಕ್ಷಣ ನೀತಿಯನ್ನು ಸ್ವತಂತ್ರ್ಯಾ ನಂತರವೂ ಮುಂದುವರೆಸಿಕೊಂಡು ಬಂದಂತಹ ನೆಹರು ನೇತೃತ್ವದ ಸರಕಾರ, ಶಿಕ್ಷಣ ನೀತಿಯ ನಿಯಂತ್ರಣವನ್ನು ಎಡಚರರ ಕೈಗೆ ಕೊಟ್ಟಿತ್ತು. ಸ್ವಾತಂತ್ರ್ಯ ಪೂರ್ವದಿಂದಲೂ ದೇಶದ ಜತೆಗೆ ನಿಲ್ಲದ ಎಡಚರರು, ಸ್ವಾತಂತ್ರ ನಂತರವೂ ಸಹ ಬ್ರಿಟಿಷರು ಮಾಡುತ್ತಿದ್ದಂತಹ ಭಾರತೀಯ ಭವ್ಯ ಸಂಸ್ಕೃತಿಯ ವಿನಾಶದ ಕೆಲಸವನ್ನು ಶಿಕ್ಷಣ ನೀತಿಗಳಲ್ಲಿ ಮಾಡ ತೊಡಗಿ ದರು.

ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಅಂಡುಗಳನ್ನು ಊರಿ ಮನ ಬಂದಂತೆ ಭಾರತೀಯ ಇತಿಹಾಸವನ್ನು ಎಡಚರರು ತಿರುಚಿದರು, ತಾವು ತಿರುಚಿದ ಇತಿಹಾಸದ ಪರವಾಗಿ ಸರಕಾರವೇ ನಿಂತಾಗ ಎಡಚರರಿಗೆ ಆನೆಬಲ ಬಂದಿತ್ತು. ಏಳು ದಶಕಗಳ ಕಾಲ ತಿರುಚಿದ ಭಾರತೀಯ ಇತಿಹಾಸವನ್ನು ತಮ್ಮ ತೆಕ್ಕೆಯಲ್ಲಿಟ್ಟು ಕೊಂಡಿದ್ದ ಎಡಚರರಿಗೆ, ಭಾರತೀಯ ಇತಿಹಾಸದಲ್ಲಿ ತಾವು ಅನುಮೋದಿಸಿದ ಅತಿ ದೊಡ್ಡ ಸುಳ್ಳಾಗ್ಗಿದ್ದಂತಹ ’ಆರ್ಯರ ಆಕ್ರಮಣ’ದ ವಾದಕ್ಕೆ, ವೈಜ್ಞಾನಿಕವಾಗಿ ’ಸರಸ್ವತಿ’ ನದಿಯ ನಾಗರಿಕತೆಯ ಸಂಸ್ಕೃತಿಯು ಎಳ್ಳು ನೀರು ಬಿಟ್ಟಿದೆ.

ಮಧ್ಯ ಏಷ್ಯಾದಿಂದ ಬಂದು ಭಾರತೀಯರ ಮೇಲೆ ಆಕ್ರಮಣ ಮಾಡಿ ಭಾರತೀಯರಿಗೆ ನಾಗರಿಕತೆಯನ್ನು ಆರ್ಯರು ಕಲಿಸಿದ್ದಾರೆಂಬ ಸುಳ್ಳು ಇತಿಹಾಸವನ್ನು ಎಡಚರರು ಬ್ರಿಟಿಷರ ಜತೆಗೆ ಸೇರಿ ಸೃಷ್ಟಿಸಿದ್ದರು. ಬ್ರಿಟಿಷರು ಹುಟ್ಟುಹಾಕಿದ್ದ ಆರ್ಯನ್ನರ ದಾಳಿಯ ವಾದಕ್ಕೆ ಸರಿಯಾದ ಸಾಕ್ಷ್ಯಾಧಾರಗಳ ಕೊರತೆ ಎದುರಾದಾಗ, ಮರುಪರಿಷ್ಕರಿಸಿ ಇಂಡೋ ಆರ್ಯನ್ ವಲಸೆ ಸಿದ್ಧಾಂತ ವೆಂದು ಮರು ನಾಮಕರಣ ಮಾಡಲಾಯಿತು. ಸಿಂಧೂ ನದಿಯ ನಾಗರಿಕರ ಮೇಲೆ ಆರ್ಯರು ಆಕ್ರಮಣ ಮಾಡಿದ್ದಿದ್ದರೆ, ಉತ್ಖನನದ ಸಮಯದಲ್ಲಿ ಲಕ್ಷಾಂತರ ಜನರ ಮಾರಣಹೋಮದ ಕುರುಹುಗಳು ಸಿಗಬೇಕಿತ್ತು. ಆದರೆ ಅಲ್ಲಿ ಸಿಕ್ಕಿದ್ದು ಒಂದಷ್ಟು ಅಸ್ಥಿಪಂಜರಗಳು ಮಾತ್ರ, ಸಿಕ್ಕ ಅಸ್ಥಿ ಪಂಜರಗಳ ಮೇಲೆ ಯಾವ ರೀತಿಯ ದಾಳಿಯ ಸಾಕ್ಷಿಯೂ ಸಿಗಲಿಲ್ಲ.

ಈಟಿ, ಭರ್ಜಿಯಲ್ಲಿ ಹಲ್ಲೆ ಮಾಡಿರುವ ಯಾವ ಕುರುಹೂ ಇರಲಿಲ್ಲ. ಯಾವಾಗ ಆರ್ಯರ ಆಕ್ರಮಣದ ಸುಳ್ಳು ಇತಿಹಾಸ ನೆಲ ಕಚ್ಚಿತ್ತೊ, ಮತ್ತೊಂದು ತಿರುಚಿದ
ಆರ್ಯರ ವಲಸೆ ಇತಿಹಾಸವನ್ನು 1900 BCಗೆ ಎಡಚರು ತೆಗೆದುಕೊಂಡು ಹೋದರು. ಅವರು ಭಾರತಕ್ಕೆ ಬಂದ ನಂತರ ’ಋಗ್ವೇದ’ದ ಕಾಲವನ್ನು 1600 BC ಗೆ ತೆಗೆದುಕೊಂಡು ಹೋದರು. ‘ಋಗ್ವೇದ’ದಲ್ಲಿ ಸರಸ್ವತಿ ನದಿಯು ಹಿಮಾಲಯದ ತಪ್ಪಲಿನಿಂದ ಹಿಡಿದು ಗುಜರಾತಿನವರೆಗೂ ಮೈದುಂಬಿ ಹರಿಯುತ್ತಿದ್ದ ಳೆಂದು ಉಲ್ಲೇಖಿಸಲಾಗಿದೆ.

ವೈಜ್ಞಾನಿಕವಾಗಿ 6000 ವರ್ಷಗಳಿಗೂ ಹಿಂದೆ ಮೈದುಂಬಿ ಹರಿಯುತ್ತಿದ್ದಂತಹ ಸರಸ್ವತಿ ನದಿಯು ಸುಮಾರು 1900 BCಯಲ್ಲಿ ಬತ್ತಿ ಹೋಗಿದ್ದಾಳೆ. ಇವರ ಸುಳ್ಳು ಇತಿಹಾಸದ ಪ್ರಕಾರ 1900 BC ನಲ್ಲಿ ಬತ್ತಿ ಹೋದ ಸರಸ್ವತಿ ನದಿಯ ಹರಿವಿನ ಬಗ್ಗೆ 1600 BCನಲ್ಲಿ ’ಋಗ್ವೇದ’ದಲ್ಲಿ ಹೇಗೆ ಉಲ್ಲೇಖ ಮಾಡಲು ಸಾಧ್ಯ? 1970ರ ದಶಕದಲ್ಲಿ ಮೊಟ್ಟ ಮೊದಲ ಬಾರಿಗೆ ಅಮೆರಿಕ ಉಪಗ್ರಹವೊಂದು ಹಿಮಾಲಯದಲ್ಲಿ ಹುಟ್ಟಿ ಗುಜರಾತಿನಲ್ಲಿ ಸಮುದ್ರ ಸೇರುವ ಒಣಗಿ ಹೋದ ಬೃಹತ್ ನದಿಯ ಸೆಲೆಯನ್ನು ಗುರುತು ಹಚ್ಚಿತ್ತು. ನದಿಯು ಹರಿವಿನ ಹಲವಾರು ಕಣಿವೆಗಳನ್ನು ಉತ್ಖನನ ಇಲಾಖೆಯವರು ವೈಜ್ಞಾನಿಕ ಪರೀಕ್ಷೆಗೊಳಪಡಿಸಿದಾಗ ಸುಮಾರು 6000 ವರ್ಷಗಳ ಹಿಂದೆ ಬೃಹತ್ ನದಿಯೊಂದು ಆ ಜಾಗದಲ್ಲಿ ಮೈದುಂಬಿ ಹರಿಯುತ್ತಿಯೆಂಬ ಅಂಶ ಬೆಳಕಿಗೆ ಬಂತು. ಈ ನದಿಯು ವೇದಗಳಲ್ಲಿ ಉಖವಾಗಿರುವ ಸರಸ್ವತಿ ನದಿಯೆಂಬ ನಿರ್ಧಾರಕ್ಕೆ ವಿಜ್ಞಾನಿಗಳು ಬಂದರು.

ಸಿಂಧೂ ನದಿಯ ವಸತಿ ಪ್ರದೇಶವೆಂದು ಹೇಳುತ್ತಿದ್ದಂತಹ ಸುಮಾರು ಶೇ.60ರಷ್ಟು ಪ್ರದೇಶಗಳು ಸರಸ್ವತಿ ನದಿಯ ತಟದಲ್ಲಿದ್ದಂತಹ ವಸತಿ ಪ್ರದೇಶ ಗಳಾಗಿದ್ದವು. ಭಾರತೀಯ ವೈದಿಕ ಪರಂಪರೆಯ ನಿಜವಾದ ಅನುಷ್ಠಾನವಾದದ್ದು ಸರಸ್ವತಿ ನದಿಯ ತೀರದಂದು ಹೇಳಲಾಗುತ್ತಿದೆ. ಋಗ್ವೇದವು ಸರಸ್ವತಿ ನದಿಯನ್ನು ಅತ್ಯಂತ ವೇಗವಾಗಿ ಹರಿಯುವ ಪ್ರವಾಹಗಳ ಮಾತೆಯೆಂದು ವರ್ಣಿಸಿದೆಯೇ ಹೊರತು ಒಣಗಿ ಹೋದಂತಹ ಸರೋವರ ಅಥವಾ ಕಣಿವೆಯೆಂದು ಎಲ್ಲಿಯೂ ಹೇಳಿಲ್ಲ. ಋಗ್ವೇದದಲ್ಲಿ ಹೇಳಿರುವ ಪ್ರಕಾರ ಸರಸ್ವತಿಯು ಮೈದುಂಬಿ ಹರಿಯುತ್ತಿರುವ ನದಿಯಾಗಿದ್ದರಿಂದ, ಋಗ್ವೇದವನ್ನು ರಚಿಸಿ ಕನಿಷ್ಠವೆಂದರೂ 6000 ವರ್ಷಗಳಾಗಿವೆ.

ಹಾಗಾದರೆ ಎಡಚರು ಹೇಳುವ ಪ್ರಕಾರ 1900 ವರ್ಷಗಳ ಹಿಂದೆ ವಲಸೆ ಬಂದಂತಹ ಆರ್ಯರು ಋಗ್ವೇದವನ್ನು ಸಂಕಲಿಸಿದರೆಂಬ ಅಂಶ ಸುಳ್ಳಾಯಿತಲ್ಲ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲಾಗದ ಎಡಚರರು ಮ್ಯಾಕ್ಸ್ ಮುಲ್ಲರ್‌ನ ಡೋಂ ವಾದದ ಮೊರೆ ಹೋಗಿ ಅಡಗಿಕೊಳ್ಳುತ್ತಾರೆ. ಉತ್ಖನನದ ಸಮಯದಲ್ಲಿ ಸಿಗುವ ವಸ್ತುಗಳ ವಿವರಗಳನ್ನು ತಿಳಿಯಲು ವೈಜ್ಞಾನಿಕವಾಗಿ ಕಾರ್ಬನ್ ಡೇಟಿಂಗ್ ಮಾಡುತ್ತಾರೆ, ಸರಸ್ವತಿ ನಾಗರಿಕತೆಯ ನಗರಗಳಲ್ಲಿ ಸಿಕ್ಕಂತಹ ವಸ್ತುಗಳ ಕಾರ್ಬನ್
ಡೇಟಿಂಗ್ ಮಾಡಿದಾಗ, ಅಲ್ಲಿ ಸಿಕ್ಕ ಅವಶೇಷಗಳು ಸುಮಾರು 6500 ದಿಂದ 9000 ವರ್ಷಗಳ ಹಳೆಯದ್ದಾಗಿದ್ದವೆಂಬುದು ತಿಳಿದು ಬಂದಿದೆ. ಬ್ರಿಟಿಷರು ತಾವು ನಡೆಸಿದ ಸಾಮ್ರಾಜ್ಯಶಾಹಿ ಆಡಳಿತವು ಸರಿಯಿತ್ತೆಂದು ಸಾಬೀತು ಪಡಿಸಲು ಸೃಷ್ಟಿಸಿದ ಸುಳ್ಳು ಇತಿಹಾಸವು, ಇಂದು ಸರಸ್ವತಿ ನಾಗರೀಕತೆಯ ಅವಶೇಷ ಗಳಿಂದ ಬೆತ್ತಲಾಗಿದೆ. ಆರ್ಯರು ಭಾರತಕ್ಕೆ ಬಂದರು.

ತಮ್ಮ ಉದ್ದೇಶವನ್ನು ಈಡೇರಿಸಲು ಬ್ರಿಟಿಷರು ಸುಳ್ಳು ಇಂಡೋ – ಆರ್ಯನ್ ಇತಿಹಾಸವನ್ನು ಸೃಷ್ಟಿಸಿದ್ದರು. ಬ್ರಿಟಿಷರು ಸೃಷ್ಟಿಸಿದ್ದ ಇತಿಹಾಸವನ್ನು ಸ್ವಾತಂತ್ರ್ಯ ನಂತರವೂ ಬೆಳೆಸಿ, ಉಳಿಸಿಕೊಂಡಂತಹ ಕೀರ್ತಿ ಎಡಚರ ಎಡಬಿಡಂಗಿಗಳಿಗೆ ಸಲ್ಲಬೇಕು. 1891ರಲ್ಲಿ ಅಮೆರಿಕದ ’ಚಿಕಾಗೊ’ನಲ್ಲಿ ನಡೆದ ಸರ್ವಧರ್ಮ ಸಮ್ಮೇಳನವು ಇತರ ಧರ್ಮದ ವಿಚಾರಗಳನ್ನು ಮೂಲೆಗುಂಪು ಮಾಡಿ ’ಕ್ರಿಶ್ಚಿಯನ್’ ಧರ್ಮವೇ ಉನ್ನತ ಧರ್ಮವೆಂಬ ಉದ್ದೇಶವನ್ನೊಳಗೊಂಡಿತ್ತು, ಆದರೆ ಸ್ವಾಮಿ ವಿವೇಕಾನಂದರು ಸಮ್ಮೇಳನದಲ್ಲಿ ಮಾಡಿದ ಭಾಷಣವು ಕ್ರಿಶ್ಚಿಯನ್ ಧರ್ಮವು ಹಿಂದೂ ಧರ್ಮಕ್ಕಿಂತಲೂ ಎಷ್ಟೋ ಶತಮಾನಗಳ ಹಿಂದಿದೆಯೆಂಬ ವಿಚಾರವನ್ನು ಸಾಬೀತುಪಡಿಸಿತ್ತು. ಆದರೆ ಎಡಚರು ಇತಿಹಾಸವು ಸನಾತನ ಭಾರತೀಯ ಸಂಸ್ಕೃತಿ ಸುಳ್ಳು,

ಆರ್ಯರ ಸಿದ್ದಾಂತವೇ ಸರಿಯೆಂಬ ವಿಷಯವನ್ನು ಇಪ್ಪತ್ತನೆಯ ಶತಮಾನದಲ್ಲಿ ಹೇಳಿಕೊಂಡು ಬಂದಿದ್ದರು. ರೋಮಿಲಾ ಥಾಪರ್, ಅರುಂಧತಿ ರಾಯ್‌ರಂತಹ ಸುಳ್ಳು ಇತಿಹಾಸಕಾರರು ಸೃಷ್ಟಿಸಿದ ಇತಿಹಾಸವನ್ನು ಬೆಂಬಲಿಸಲು ಪ್ರಣವ್ ರಾಯ, ಬುರ್ಖಾ ದತ್ತ್, ಸಾಗರಿಕ ಗೋಸ್, ರಾಜದೀಪ್ ಸರ್ ದೇಸಾಯಿರಂತಹ ಪತ್ರಕರ್ತರು ನಿಂತರು. ಉತ್ತರ ಪ್ರದೇಶದ ಸಿನೌಲಿ ಎಂಬ ಹಳ್ಳಿಯಲ್ಲಿ ಸಿಕ್ಕ ಸುಮಾರು 50 ಕ್ಕೂ ಹೆಚ್ಚು ಸಮಾಧಿಗಳು 4500 ವರ್ಷಗಳ ಹಳೆಯದ್ದೊಂದು ಪುರಾತತ್ವ ಇಲಾಖೆ ಸಾಬೀತುಪಡಿಸಿದೆ. ಈ ಸಮಾಧಿಗಳಲ್ಲಿ ಸಿಕ್ಕ ಮಣ್ಣಿನ ಮಡಿಕೆಗಳು, ಹೆಣ್ಣಿನ ಆಭರಣಗಳು, ಯುದ್ಧ ಮಾಡಲು ಬಳಸುತ್ತಿದ್ದ ಕತ್ತಿ, ಗುರಾಣಿ ಗಳು, ಯುದ್ಧದ ಸಮಯದಲ್ಲಿ ಶತ್ರುಗಳಿಂದ ರಕ್ಷಿಸಿಕೊಳ್ಳಲು ವೃತ್ತಾಕಾರದ ಕವಚಗಳು, ಕುದುರೆಯ ರಥಗಳು ಪ್ರಾಚೀನ ಭಾರತೀಯ ಸಂಸ್ಕೃತಿಯು ಅದೆಷ್ಟು
ಹಳೆಯದ್ದೆಂಬುದನ್ನು ಹೇಳುತ್ತವೆ. ಸರಸ್ವತಿ ನದಿಯ ಹರಿವಿನ ತಟದಲ್ಲಿ ಬೆಳೆದಿರುವ ಈ ನಾಗರಿಕತೆಯು ಮತ್ತೊಮ್ಮೆ ಮ್ಯಾಕ್ಸ್ ಮುಲ್ಲರ್ ಹೇಳಿದ ಇತಿಹಾಸ ವೆಲ್ಲವು ಸುಳ್ಳು ಎಂಬುದನ್ನು ಸಾಬೀತು ಪಡಿಸಿವೆ.

ಭಾರತೀಯರಿಗೆ ಕುದುರೆಯ ಪರಿಚಯವನ್ನು ಮಾಡಿಸಿದ್ದೇ ಆರ್ಯರೆಂದು ಬ್ರಿಟಿಷರು ಹೇಳಿದ್ದ ಸುಳ್ಳನ್ನು ಈ ಉತ್ಕನನವು ಸುಳ್ಳೆಂದು ತೋರಿಸಿದೆ. ದಕ್ಷಿಣ ಯೂರೋಪ್, ಮಧ್ಯ ಏಷ್ಯಾ ಹಾಗು ಉತ್ತರ ಭಾರತದ ಜನಸಾಮಾನ್ಯರ ಜೀನ್ ಮ್ಯಾಪಿಂಗ್ ನಿಂದ ಎಲ್ಲರ ವರ್ಣತಂತುಗಳಲ್ಲಿ ಸಾಮ್ಯತೆಯಿರುವುದು ಕಂಡು ಬಂದಿದೆ. ಆದರೆ ಈ ಜೀನ್ ಮ್ಯಾಪಿಂಗ್‌ನಲ್ಲಿ ಕಂಡುಬರುವ ಪುರಾತನವಾದ ಅನುವಂಶಿಕ ಧಾತುವಿನ ಮೂಲವಿರುವುದು ಭಾರತದಲ್ಲಿ ಮಾತ್ರ. ಯುರೋಪ್ ಹಾಗು ಮಧ್ಯ ಏಷ್ಯಾಗಳಲ್ಲಿ ಈ ಅನುವಂಶಿಕ ಧಾತುವಿನ ಕುರುಹೇ ಇಲ್ಲ.

ವಿಜ್ಞಾನಿಗಳ ಈ ಸಂಶೋಧನೆಯಿಂದ ತಿಳಿದು ಬರುವ ಅತ್ಯಂತ ಪ್ರಮುಖ ವಿಷಯವೆಂದರೆ ಭಾರತದ ಮೂಲಪುರುಷ ಯೂರೋಪ್ ಹಾಗೂ ಇತರ ಜಾಗಗಳಿಗೆ ವಲಸೆ ಹೋಗಿ ಅಲ್ಲಿನ ಜನರಿಗೆ ನಾಗರಿಕತೆ ಕಲಿಸಿಕೊಟ್ಟಿದ್ದ. ಬ್ರಿಟಿಷ್ ಹಾಗೂ ಎಡಚರು ಹೇಳುತ್ತಿದ್ದಂತಹ ಆರ್ಯನ್ನರ ವಲಸೆ ಸುಳ್ಳು, ಬದಲಿಗೆ ಭಾರತದಿಂದ ಜನರು ವಿಶ್ವದ ಇತರ ಭೂ ಪ್ರದೇಶಗಳಿಗೆ ವಲಸೆ ಹೋಗಿದ್ದರು. ಭಾರತೀಯ ಸಮಾಜದಲ್ಲಿರುವ ವಿರೋಧಾಭಾಸವನ್ನು ಪಟ್ಟಿ ಮಾಡಿದ್ದಂತಹ ಬ್ರಿಟಿಷರು, ಸಮಾಜದ ಜನರ ಮುಂದೆ ಅದನ್ನೇ ದೊಡ್ಡದಾಗಿ ಬಿಂಬಿಸಿ ಜನರ ನಡುವೆ ಒಡಕುಗಳನ್ನು ಸೃಷ್ಟಿಸಿದ್ದರು. ಜನರ ನಡುವೆ ಒಡಕುಗಳನ್ನು ಸೃಷ್ಟಿಸಿ ಒಡೆದು
ಅಳುವ ನೀತಿಯನ್ನು ಶುರು ಮಾಡಿದ್ದರು. ಒಡೆದು ಅಳುವ ನೀತಿಯಡಿಯಲ್ಲಿ ಪ್ರತ್ಯೇಕ ಜಾತಿಗಣತಿಯ ಮೂಲಕ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದರು.

1872ರಲ್ಲಿ ಮೊಟ್ಟಮೊದಲ ಬಾರಿಗೆ ಜಾನ್ ರಿಸ್ಲೇ ನೇತೃತ್ವದಲ್ಲಿ ಮೊಟ್ಟಮೊದಲ ಜಾತಿಗಣತಿಯನ್ನು ಮಾಡಲಾಯಿತು, ಅಂದು ಆತ ಹೇಳಿದ ಮಾತುಗಳು ಇಂದಿಗೂ ಪ್ರಚಲಿತದಲ್ಲಿದೆ. ’ಎಲ್ಲಿಯವರೆಗೂ ಜಾತಿಗಳು ಇರುತ್ತದೆಯೋ ಅಲ್ಲಿಯವರೆಗೂ ಭಾರತವು ಇರುವುದು ಅಸಾಧ್ಯ’, ಬುದ್ಧಿವಂತ ಬ್ರಿಟಿಷರು ಮೇಲ್ಜಾತಿಯ ಮೇಲೆ ಶೋಷಣೆಯ ಮಿಥ್ಯ ಆರೋಪಗಳನ್ನು ಮಾಡಿ ಹಿಂದುಳಿದ ಜನಾಂಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟರು. ಇದರ ಮುಂದುವರೆದ ಬಾಗವಾಗಿ ಉತ್ತರ ಭಾರತದವರು ಆರ್ಯರು, ದಕ್ಷಿಣ ಭಾರತದವರು ದ್ರಾವಿಡರೆಂದು ಹೇಳಿ, ದ್ರಾವಿಡರು ಆರ್ಯರ ದಾಳಿಯಿಂದ ತಪ್ಪಿಸಿಕೊಂಡು ದಕ್ಷಿಣಕ್ಕೆ ಬಂದವರೆಂದು ಹೇಳುವ ಮೂಲಕ ಭಾರತವನ್ನು ಉತ್ತರ ಹಾಗೂ ದಕ್ಷಿಣವೆಂಬ ಎರಡು ಭಾಗವನ್ನಾಗಿಸಿ ಬಿಟ್ಟರು.

ಸ್ವಾತಂತ್ರ್ಯಾ ನಂತರ ಇವರ ಸುಳ್ಳು ಇತಿಹಾಸಕ್ಕೆ ಪುಷ್ಟಿಕೊಟ್ಟವರು ಎಡಚರರು, ಇಂದಿಗೂ ಈ ಸುಳ್ಳು ಇತಿಹಾಸವನ್ನು ಜೀವಂತವಾಗಿಸಿ ಎಡಚರರು ಆಗಾಗ
ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ. ಒಂದು ಕಾಲದಲ್ಲಿ ಜಗತ್ತಿನ ಬೃಹತ್ ನಾಗರಿಕತೆಯ ತೊಟ್ಟಿಲಾಗಿದ್ದಂತಹ ಸರಸ್ವತಿ ನದಿಯು ಸುಮಾರು 1900 BCE ಹೊತ್ತಿಗೆ ಬತ್ತಿ ಹೋಗಿತ್ತು. ಬ್ರಿಟಿಷರ ಇತಿಹಾಸದ ಪ್ರಕಾರ ಇಂತಹ ಸಮಯದಲ್ಲಿ ಆರ್ಯರು ಭಾರತಕ್ಕೆ ಬಂದದ್ದು, ನೆಲೆಸಿದ್ದು ಹಾಗೂ ನಾಗರಿಕತೆಯನ್ನು ಹೇಳಿಕೊಟ್ಟಿದ್ದು.

ಬತ್ತಿ ಹೋಗಿದ್ದಂತಹ ನದಿಯ ತೀರಕ್ಕೆ ಯಾರಾದರೂ ವಲಸೆ ಬರುತ್ತಾರೆಯೇ ? ನೀರೇ ಇಲ್ಲದಂತಹ ಭೂಭಾಗಕ್ಕೆ ಹೊರಗಿನವರು ವಲಸೆ ಬಂದು ತಮ್ಮ
ಜೀವನವನ್ನು ಕಟ್ಟುಕೊಳ್ಳಲು ಸಾಧ್ಯವೇ ? ಕಾವೇರಿ ನೀರಿನ ಸಂಪರ್ಕವಿಲ್ಲದ ಜಾಗಗಳಲ್ಲಿ ಮನೆಯನ್ನು ಕಟ್ಟಿಸಲು ಹಿಂದೇಟು ಹಾಕುವ ಕಾಲವಿದು, ಅಂತಹು ದರಲ್ಲಿ ಬತ್ತಿ ಹೋಗಿದ್ದಂತಹ ನದಿಯ ತೀರದಲ್ಲಿ ಆರ್ಯರು ಬಂದರೆಂಬುದು ಸುಳ್ಳಲ್ಲವೆ ? ಕನಿಷ್ಠ ಸಾಮಾನ್ಯ ಜ್ಞಾನವಿರುವ ಹತ್ತು ವರ್ಷದ ಹುಡುಗನಿಗೂ ಈ ವಿಷಯ ಅರ್ಥವಾಗುತ್ತದೆ, ಆದರೆ ಡೋಂಗಿ ಎಡಚರರಿಗೆ ಅರ್ಥವಾಗುವುದಿಲ್ಲ. ನೀರಿನ ಅಭಾವವುಂಟಾದಾಗ ಅಲ್ಲಿನ ಜನರು ಮತ್ತೊಂದು ಜಾಗಕ್ಕೆ ವಲಸೆ ಹೋಗುತ್ತಾರೆ ಹೊರತು, ಅಲ್ಲಿಯೇ ಇದ್ದು ಜೀವನ ನಡೆಸುವುದಿಲ್ಲ.

ನೀರಿಲ್ಲದ ಜಾಗಕ್ಕೆ ವಲಸೆ ಬಂದಂತಹ ಬ್ರಿಟಿಷ್ ಕಲ್ಪಿತ ಆರ್ಯರು ದೊಡ್ಡ ಮೂರ್ಖರಾಗಿಯೇ ಇರಬೇಕು. ಸ್ವಾತಂತ್ರ್ಯ ನಂತರ ಎಡಚರ ಇತಿಹಾಸಕಾರರು ಶಾಲಾ ಪಠ್ಯ ಪುಸ್ತಕಗಳಲ್ಲಿ ಇದೇ ಸುಳ್ಳು ಇತಿಹಾಸವನ್ನು ಮಕ್ಕಳ ತಲೆಗೆ ತುಂಬಿ ಬಂಡವಾಳಶಾಹಿಗಳ ಎಂಜಲು ಕಾಸಿನ ನಿಯ್ಯತ್ತಿಗೆ ತಲೆಬಾಗಿದ್ದರು.
ಕಾಲೋನಿಯಾಲ್ ಚರಿತ್ರೆಕಾರರಿಗೆ ಐರೋಪ್ಯ ಜನಾಂಗವೇ ಶ್ರೇಷ್ಠವೆಂಬ ಅಹಂಕಾರವಿತ್ತು, ತಮ್ಮ ದಬ್ಬಾಳಿಕೆಯನ್ನು ಸರಿಯೆಂದು ಹೇಳಲು ತಾವು ಹೋದ ಲೆಲ್ಲವೂ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ತಾವೇ ಮೇಲೆಂಬಂತೆ ಬಿಂಬಿಸುತ್ತಿದ್ದರು. ಇಂದಿಗೂ ಅಷ್ಟೇ ಅಮೆರಿಕ ದೇಶದ ವಸಹಾತುಶಾಹಿ ನೀತಿಗೆ ದಕ್ಷಿಣ ಅಮೆರಿಕ ಖಂಡವೇ ತತ್ತರಿಸಿ ಹೋಗಿದೆ, ಇರಾಕ್, ಸಿರಿಯಾ, ಅಫ್ಘಾನಿಸ್ತಾನ ದೇಶಗಳು ಹೀನಾಯ ಪರಿಸ್ಥಿತಿಯನ್ನು ತಲುಪಿವೆ.

ಬಿಳಿ ಬಣ್ಣದ ಚರ್ಮವನ್ನು ನೋಡಿದಾಕ್ಷಣ ಭಾರತೀಯರಿಗೆ ಅದೇನೋ ಗೌರವ, ಅದೇನೋ ಭಯ, ಅವರೇ ಶ್ರೇಷ್ಟರೆಂಬ ಮನೋಭಾವ ಇಂದಿಗೂ ಇದೆ. ಕಚೇರಿಗಳಲ್ಲಿ ಬಿಳಿಯರನ್ನು ಕಂಡರೆ ಸಾಕು ಇಲ್ಲಸಲ್ಲದ ಸವಲತ್ತುಗಳನ್ನು ನೀಡಲು ತಯಾರಾಗಿಬಿಡುತ್ತಾರೆ,ಈ ಮನಸ್ಥಿತಿಯಿಂದ ಹೊರಬಂದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವರನ್ನೂ ಒಬ್ಬ ಪ್ರತಿಸ್ಪರ್ದಿಯಂತೆಯೇ ನೋಡಬೇಕು. ಇಲ್ಲವಾದಲ್ಲಿ ಎಡಚರರ ಸುಳ್ಳು ಆರ್ಯನ್ ಇತಿಹಾಸವನ್ನೇ ನಂಬಿ ಬದುಕಿ ದಂತಾಗಿಬಿಡುತ್ತದೆ. ಮೆಸಪಟೋಮಿಯಾ ನಾಗರಿಕತೆಯನ್ನು ಜಗತ್ತಿನ ನಾಗರಿಕತೆಯ ಮೂಲವೆಂದು ಜಗತ್ತಿಗೆ ಹೇಳಿವೆ ಮೂಲಕ ಯೂರೋಪಿಯನ್ನರು ಜಗತ್ತಿನ ಮಧ್ಯ ಬಿಂದುವಾಗಿದ್ದರು.

ಜಗತ್ತಿಗೆ ಕೃಷಿಯನ್ನು ಮೊಟ್ಟಮೊದಲ ಬಾರಿಗೆ ಹೇಳಿಕೊಟ್ಟಿದ್ದು ಮೆಸಪಟೋಮಿಯನ್ನರು, ನಂತರ ಭಾರತ, ಇರಾನ್, ಮಧ್ಯ ಏಷ್ಯಾ ಹಾಗೂ ಯೂರೋಪಿನ ಇತರ ದೇಶಗಳಿಗೆ ಹರಡಿತ್ತೆಂದು ಹೇಳಿದ್ದರು. ಆದರೆ ಹರಪ್ಪ ಹಾಗೂ ಮೊಹೆಂಜೋದಾರೋ ನಾಗರಿಕತೆಯಲ್ಲಿ ಕೃಷಿ ಚಟುವಟಿಕೆಗಳು ಸರಾಗವಾಗಿ
ನಡೆಯುತ್ತಿದ್ದವು. 6000 ವರ್ಷಗಳ ಹಿಂದೆ ಭೋರ್ಗರೆದು ಹರೆಯುತ್ತಿದ್ದಂತಹ ಸರಸ್ವತಿ ನದಿ ತೀರದ ನಾಗರಿಕತೆಯ ಉಲ್ಲೇಖವನ್ನು ಮುಚ್ಚಿ ಹಾಕಿ, ಭಾರತ ದಲ್ಲಿನ ತಮ್ಮ ’ಕಾಲೋನಿಯಲ’ ನೀತಿ ಸರಿಯೆಂಬುದನ್ನು ಸಾಬೀತು ಪಡಿಸಲು ಇತಿಹಾಸವನ್ನು ತಿರುಚಿದ್ದರು.ಪಶ್ಚಿಮ ಏಷ್ಯಾದಲ್ಲಿ ಉಗಮಗೊಂಡ ಸೆಮೆಟಿಕ ಹಾಗೂ ಅಬ್ರಹಾಮಿಕ್ ಪಂಥಗಳ ಮೂಲ ಮನಸ್ಥಿತಿಯೇ ಅಹಂಕಾರದಿಂದ ಕೂಡಿದೆ, ಜಗತ್ತಿನಲ್ಲಿ ತಾವು ಹೇಳಿದ್ದೇ ಸರಿ ಇತರರು ಹೇಳಿರುವುದೆಲ್ಲವೂ ತಪ್ಪು, ತಮ್ಮ ವಿಚಾರವನ್ನು ಒಪ್ಪದಿರುವವರನ್ನು ಕ್ರುಸೇಡ್ ಅಥವಾ ಜಿಹಾದ್ ಮೂಲಕ ಕೊಲ್ಲುವ ಅಥವಾ ಪರಿವರ್ತನೆ ಮಾಡುವ ಪ್ರೌಢಿಮೆಯನ್ನು ಮೂಡಿಸಿಕೊಂಡಿ ರುವವರನ್ನು ನಾಗರಿಕರೆನ್ನಲಾಗುತ್ತದೆಯೇ ? ಇಂತಹ ಮನಸ್ಥಿತಿಯು ಹುಟ್ಟಿಕೊಂಡಿದ್ದು ಮೆಸಪಟೋಮಿಯಾದ ನಾಡಿನಲ್ಲಿಯೇ!

ಹಾಗಾದರೆ ಮೆಸಪಟೋಮಿಯಾದ ನಾಗರಿಕತೆ ಹೇಗಿದ್ದಿರಬಹುದೆಂದು ಊಹಿಸಿಕೊಳ್ಳಿ, ಇಂತಹವರಿಂದ ಭಾರತೀಯರಾದ ನಾವು ನಾಗರಿಕತೆಯನ್ನು ಕಳಿತೆ ವೆಂಬುದು ಶುದ್ಧ ಸುಳ್ಳು. ಪ್ರಾಕೃತಿಕ ಅವಘಡಗಳು ಸಂಭವಿಸಿದ ಕಾರಣ ಸರಸ್ವತಿ ನದಿಯ ಮೂಲ ನೆಲೆಯಾಗಿದ್ದಂತಹ ಹಿಮಾಲಯದ ನೀರಿನ ಸೆಲೆ ಬತ್ತಿ ಹೋಗಿತ್ತು, ಭೋರ್ಗರೆದು ಹರೆಯುತ್ತಿದ್ದಂತಹ ಸರಸ್ವತಿ ನದಿಯು ನಿಧಾನವಾಗಿ ಒಣಗಲು ಶುರುವಾಗಿತ್ತು. ಪ್ರಾಕೃತಿಕ ವಿಕೋಪಗಳ ಪರಿಣಾಮವಾಗಿ ತನ್ನ ಹರಿಯುವಿಕೆಯ ದಿಕ್ಕನ್ನೂ ಬದಲಿಸಿದ್ದಂತಹ ಸರಸ್ವತಿ ನದಿ ಕ್ರಮೇಣವಾಗಿ ನೀರಿನ ಸೆಲೆಯೇ ಇಲ್ಲದಂತಾಗಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು.

ವೈಜ್ಞಾನಿಕವಾಗಿ ಸಿಕ್ಕ  ಅವಶೇಷಗಳು ಈ ನದಿಯ ತಟದಲ್ಲಿ ಬೆಳೆದು ನಿಂತಹ ಅನೇಕ ನಗರಗಳ ನಾಗರೀಕತೆಯ ಸಾಕ್ಷಿಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಮೂಲಕ, ಬ್ರಿಟಿಷ್ ಹಾಗೂ ಎಡಚರರ ಆರ್ಯನ್ ಸುಳ್ಳು ಇತಿಹಾಸಕ್ಕೆ ನೀರು ಬಿಟ್ಟಿದೆ.