Sunday, 15th December 2024

ಸಣ್ಣ ಸಮುದಾಯಗಳು ಮುಖ್ಯವಾಹಿನಿಗೆ ಬರಲಿ: ಕೆಂಪು ರಾಜು

ವೈ.ಎನ್.ಹೊಸಕೋಟೆ: ಸಣ್ಣ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಂಪು ರಾಜು ತಿಳಿಸಿದರು.

ಗ್ರಾಮದ ಪಂಚಾಯತಿಯ ಆವರಣದಲ್ಲಿ ಶುಕ್ರವಾರ ಶ್ರೀ ದೇವಶಿಲ್ಪಿ ವಿಶ್ವಕರ್ಮ ಜಯಂತಿಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿಶ್ವಕರ್ಮ ಸಮುದಾಯವು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ ಇಂತಹ ಸಣ್ಣ ಸಮುದಾಯಗಳ ಪ್ರಗತಿ ಕಾಣಬೇಕಾದರೆ ಸರ್ಕಾರದ ಸಹಾಯ ಮತ್ತು ಸಹಕಾರ ಅಗತ್ಯವಾಗಿ ಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯ ನಂದೀಶ್, ಅನಿಲ್ ಕುಮಾರ್ ಮುಖಂಡರಾದ ಸಿದ್ದೇಶ್ವರ್, ಎ.ಒ.ನಾಗರಾಜ್, ತಿಪ್ಪೇಸ್ವಾಮಿ,ಜಿ.ಬಿ. ಸತ್ಯನಾರಾಯಣ, ಗೋಪಾಲಕೃಷ್ಣ, ಮಣಿಕಂಠಚಾರಿ, ಮಧುಸೂದನ ಚಾರಿ, ಅಂಜನಚಾರಿ ಹಾಜರಿದ್ದರು.