Thursday, 12th December 2024

ಉತ್ತರಾರಾಧನೆ ಅಂಗವಾಗಿ ಮಹಾರಥೋತ್ಸವ

ಮಾನ್ವಿ: ಪಟ್ಟಣದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಜಗನ್ನಾಥದಾಸರ ಸನ್ನಿಧಾನದಲ್ಲಿ ಶ್ರೀ ಜಗನ್ನಾಥದಾಸರ 212ನೇ ಆರಾಧನಾ ಮಹೋತ್ಸವದ ಅಂಗವಾಗಿ ನಡೆದ ಉತ್ತರಾರಾಧನೆ ಅಂಗವಾಗಿ ಸುಪ್ರಭಾತ ಸೇವೆ, ಸಾಮೂಹಿಕ ಹರಿಕಥಾಮೃತಸಾರ ಪಾರಾಯಣ, ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ, ವಿಶೇಷವಾದ ಹೂವಿನ ಅಲಂಕಾರ, ಹಸ್ತೋದಕ, ಕನಕಾಭಿಷೇಕ, ತುಳಸಿ ಅರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಆರಾಧನಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಮಹಾರಥೋತ್ಸವ ಸ್ವಸ್ತಿವಾಚನ ಮತ್ತು ಮಹಾಮಂಗಳಾರತಿ ನಡೆಯಿತು. ರಥೋತ್ಸವ ವೇಳೆ ಭಕ್ತರು ಪರಸ್ಪರ ಗುಲಾಲು ಎರಚುವ ಮೂಲಕ ಭಕ್ತಿ ಗೀತೆಗಳನ್ನು ದಾಸರ ಕೀರ್ತನೆಗಳನ್ನು, ಹಾಡುತ್ತ ಭಕ್ತಿಪರವಶರಾಗಿ ರಥೋತ್ಸವ ನೆರವೇರಿಸಿದರು. ವಿವಿಧ ಭಜನ ಮಂಡಳಿಗಳವರು,ಮಹಿಳಾ ಭಜನ ಮಂಡಳಿಯವರು ದಾಸರ ಕೀರ್ತನೆಗಳನ್ನು ಹಾಡಿದರು ಮಕ್ಕಳು ಕೋಲಾಟ ಪ್ರದರ್ಶಿಸಿದರು.

ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರಾದ ರಾಘವೇಂದ್ರ ದೇಸಾಯಿ, ಮಂಚಾಲಿ ವೆಂಕಯ್ಯ ಶೆಟ್ಟಿ, ಕಿರುಸೂರು ವಿಜಿ, ಶ್ರೀ ಜಗನ್ನಾಥದಾಸರ ಸನ್ನಿದಾನದ ವ್ಯವಸ್ಥಾಪಕರಾದ ಕೃಷ್ಣ ಮೂರ್ತಿ ಜೋಷಿ, ಇಬ್ರಾಂಪುರ ವಿಜಯಚಾರ್ಯರು, ಗೋಪಾಲಚಾರ್ಯರು ಸೇರಿದಂತೆ ಇನ್ನಿತರರು ಇದ್ದರು.

ಕೋವಿಡ್ ಹಿನ್ನಲೆಯಲ್ಲಿ ಆರಾಧನಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು,ಭಕ್ತರು ಮಾಸ್ಕ್ ದರಿಸಿಕೊಂಡು ಸಾಮಾಜಿಕ ಅಂತರವನ್ನು ಪಾಲಿಸಿ ಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.