Thursday, 19th September 2024

ಕರ್ನಾಟಕ ಹೈಕೋರ್ಟ್ ನ ಸಿಜೆ ಆಗಿ ರಿತುರಾಜ್ ಅವಾಸ್ತಿ ನೇಮಕ

ಬೆಂಗಳೂರು : ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಅಲಹಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ರಿತುರಾಜ್ ಅವಾಸ್ತಿ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಸೇರಿದಂತೆ 8 ರಾಜ್ಯಗಳ ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.  ಸುಪ್ರೀಂ ಕೋರ್ಟ್ ಕೊಲಿಜಿಯಂ ಸೆ.16 ರಂದು ನಡೆದ ಸಭೆಯಲ್ಲಿ, 2021 ನ್ಯಾಯಾಧೀಶರನ್ನು ಉನ್ನತ ಮುಖ್ಯ ನ್ಯಾಯಮೂರ್ತಿಗಳಾಗಿ ಮೇಲ್ದರ್ಜೆಗೇರಲು ಶಿಫಾರಸು ಮಾಡಿದೆ ಎಂದು ತಿಳಿಸಿದೆ.

  1. ರಾಜೇಶ್ ಬಿಂದಾಲ್ – ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದವರನ್ನು, ಅಲಹಾಬಾದ್ ಮುಖ್ಯ ನ್ಯಾಯ ಮೂರ್ತಿಯಾಗಿ ನೇಮಕ ಮಾಡಲಾಗಿದೆ.
  2. ರಂಜಿತ್ ವಿ. ಮೊರೆ – ಮೇಘಾಲಯ ನ್ಯಾಯಮೂರ್ತಿಗಳನ್ನು, ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿ ನೇಮಕ
  3. ಸತೀಶ್ ಚಂದ್ರ ಶರ್ಮಾ – ಕರ್ನಾಟಕದ ನ್ಯಾಯಮೂರ್ತಿಗಳನ್ನು, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿ ನೇಮಕ ಮಾಡಲಾಗಿದೆ.
  4. ಪ್ರಕಾಶ್ ಶ್ರೀವಾಸ್ತವ – ಮಧ್ಯಪ್ರದೇಶ ನ್ಯಾಯಮೂರ್ತಿಗಳನ್ನು, ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳನ್ನಾಗಿ ನೇಮಕ ಮಾಡಲಾಗಿದೆ.
  5. ಆರ್.ವಿ.ಮಲಿಮಠ್ – ಹಿಮಾಚಲ ಪ್ರದೇಶ ನ್ಯಾಯಮೂರ್ತಿಗಳನ್ನು, ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾಗಿ ನೇಮಕ
  6. ರಿತು ರಾಜ್ ಅವಾಸ್ತಿ – ಅಲಹಾಬಾದ್ ನ್ಯಾಯಮೂರ್ತಿಗಳನ್ನು, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ
  7. ಅರವಿಂದ ಕುಮಾರ್ – ಕರ್ನಾಟಕ ನ್ಯಾಯಮೂರ್ತಿಗಳನ್ನು, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ
  8. ಪ್ರಶಾಂತ್ ಕುಮಾರ್ ಮಿಶ್ರಾ – ಛತ್ತೀಸ್ ಗಢ ನ್ಯಾಯಮೂರ್ತಿಗಳನ್ನು, ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ