ಅಭಿಪ್ರಾಯ
ರಮಾನಂದ ಶರ್ಮಾ
ಇತ್ತೀಚಿನ ವರ್ಷಗಳಲ್ಲಿ ಅರುಣ್ ಜೇಟ್ಲಿ ಯವರು ರೂಪಿಸಿದ ಬ್ಯಾಂಕ್ ದಿವಾಳಿ ಕಾನೂನು ಸಾಲಗಾರರ ಪರ ಎನ್ನುವ ಅಭಿಪ್ರಾಯ ಕೇಳುತ್ತಿದ್ದು, ಪ್ರಕರಣಗಳ ಇತ್ಯರ್ಥಕ್ಕೆ ಈ ಮಾರ್ಗದ ಮೂಲಕ ಪ್ರಯತ್ನಿಸಲು ಕೆಲವು ಬ್ಯಾಂಕುಗಳು ಹಿಂಜರಿಯುತ್ತಿವೆಯಂತೆ. ಈ ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ ಬ್ಯಾಂಕ್ ಬ್ಯಾಲೆನ್ಸ ಶೀಟ್ ಗಳನ್ನು ಅನುತ್ಪಾದಕ ಮತ್ತು ಕೆಟ್ಟ ಸಾಲಗಳಿಂದ ಮುಕ್ತಗೊಳಿಸುತ್ತದೆ. ಆದರೆ ಕೆಲವು ಅರ್ಥಿಕ ತಜ್ಞರ ಪ್ರಕಾರ ಈ ಪ್ರಕ್ರಿಯೆಯು yet another brick to the wall ಅಗುವುದೇ ಹೊರತು, ಬ್ಯಾಂಕ್ಗಳನ್ನು ಸಂಪೂರ್ಣವಾಗಿ ಕೆಟ್ಟ ಸಾಲಗಳಿಂದ ಮುಕ್ತ ಮಾಡಲು ಸಾಧ್ಯವಿಲ್ಲ.
ಕಳೆದ ಮೂರು ವರ್ಷಗಳಿಂದ ಸುದ್ದಿ ಮಾಡುತ್ತಿರುವ ‘ಬ್ಯಾಂಡ್ ಬ್ಯಾಂಕ’ ಅಥವಾ ನ್ಯಾಷನಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಮಿಟೆಡ್ (National Asset Reconstruction Compny Limted -NARCL) ಸದ್ಯದಲ್ಲಿಯೇ ಅನಾವರಣಗೊಳ್ಳುತ್ತಿದೆ. ಈಗಾಗಲೇ ಈ ಪರಿಕಲ್ಪನೆ ಕೆಲವು ಯುರೋಪಿಯನ್-ಅಮೆರಿಕ ದೇಶ ಗಳಲ್ಲಿ ಮತ್ತು ಜಪಾನ್ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಹಲವು ಅಡೆ-ತಡೆಗಳು ಮತ್ತು ಚಿಂತನ ಮಂಥನಗಳಿಂದ ಹೊರ ಬಂದು ಮತ್ತು ವಿದೇಶಗಳಲ್ಲಿ ಅವು ಹೇಗೆ ಕಾರ್ಯ ನಿರ್ವಹಿಸುತ್ತವೆ ಎನ್ನುವುದನ್ನು ಪರಾಮ ರ್ಶಿಸಿ, ಈ ಬ್ಯಾಂಕ್ ಸ್ಥಾಪನೆಗೆ ರಿಸರ್ವ್ ಬ್ಯಾಂಕ್, ಭಾರತೀಯ ಬ್ಯಾಂಕು ಗಳ ಸಂಘ ದ ಮೂಲಕ ಅನುಮತಿ ನೀಡಿದೆ. ಸಾರ್ವಜನಿಕ ರಂಗದ ಬ್ಯಾಂಕುಗಳು 51% ಪಾಲುದಾರಿಕೆ ಹೊಂದಿ ದ್ದು, ಕೆನರಾ ಬ್ಯಾಂಕ್ ದೊಡ್ಡ ಪಾಲುಗರನಾಗಿದ್ದು 12% ಪಾಲನ್ನು ಹೊಂದಲಿದೆ.
ಪಂಜಾಬ್ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾ, ಇಂಡಿಯನ್ ಬ್ಯಾಂಕ್ , ಬ್ಯಾಂಕ್ ಆಪ್ ಬರೋಡಾ , ಮತ್ತು ಬ್ಯಾಂಕ್ ಆಫ್ ಮಹಾರಾಷ್ಟಗಳು ಇತರ ಪಾಲುದಾರ ಬ್ಯಾಂಕುಗಳು(ಖಾತರಿ) ನೀಡುತ್ತದೆ. ಸುಮಾರು 6000 ಕೋಟಿಯ ಈ ಬ್ಯಾಂಕಿನ ಅಧಿಕೃತ (authorised capital) ಬಂಡವಾಳ 200 ಕೋಟಿಗಳು. ಆರಂಭದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಇರುವ 2 ಲಕ್ಷ ಕೋಟಿ ರು. ಕೆಟ್ಟ ಸಾಲ (bad loan)ನ್ನು ಈ ಬ್ಯಾಂಕಿಗೆ ವರ್ಗಾಯಿಸಲಾಗುವುದು ಮತ್ತು ತಕ್ಷಣಕ್ಕೆ 500 ಕೋಟಿ ರು. ಗೂ ಮೀರಿ ಬಾಕಿ ಇರುವ 22 ಸಾಲದ ಖಾತೆಗಳಲ್ಲಿರುವ 89 ಸಾವಿರ ಕೋಟಿ ರು. ಕೆಟ್ಟ ಸಾಲವನ್ನು ವರ್ಗಾಯಿಸಲಾಗುವುದು.
ಬ್ಯಾಂಕ್ ದಿವಾಳಿ ಕಾನೂನಡಿಯಲ್ಲಿ ಸದ್ಯ ಇತ್ಯರ್ಥ (resolution) ನಿರೀಕ್ಷಿಸುತ್ತಿರುವ ಸಾಲ ಬಾಕಿ ಪ್ರಕರಣಗಳು ಬ್ಯಾಡ್ ಬ್ಯಾಂಕ್ ಗೆ ವರ್ಗಾಯಿಸಲ್ಪಡುವುದಿಲ್ಲ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ: ಈ ಬ್ಯಾಂಕ್ ಗುರುತಿಸಲ್ಪಟ್ಟ ಬ್ಯಾಂಕುಗಳ ಕೆಟ್ಟ ಸಾಲವನ್ನು ಖರೀದಿಸುತ್ತದೆ. ಹೀಗೆ ಸಾಲವನ್ನು ಖರೀದಿಸುವಾಗ ಬ್ಯಾಡ್ ಬ್ಯಾಂಕ್ ಪರಸ್ಪರ ಒಪ್ಪಂದವಾದ ಸಾಲಮೊತ್ತದ 15% ಮೊತ್ತವನ್ನು ಸಾಲವನ್ನು ವರ್ಗಾಯಿಸುವ ಬ್ಯಾಂಕಿಗೆ ನಗದಾಗಿ ನೀಡುತ್ತದೆ ನಿಗದಿ ಮಾಡಿದ ಸಾಲ ವಸೂಲಾಗದಿದ್ದರೆ, ಸರಕಾರದ ಗ್ಯಾರಂಟಿ ಅಥವಾ ಖಾತರಿಯನ್ನು ನಗದೀಕರಿಸಲಾಗುವುದು.
ಸ್ವತ್ತು ನಿರ್ಮಾಣ ಮತ್ತು ಸ್ವತ್ತು ನಿರ್ವಹಣಾ ಕಂಪನಿಗಳನ್ನು (Asset Reconstruction Company- ARC & Asset Management Company-AMC) ಸ್ಥಾಪಿಸಿ ಒತ್ತಡಕ್ಕೊಳಗಾದ ಸಾಲವನ್ನು ತೆಗೆದುಕೊಳ್ಳುತ್ತವೆ ಮತ್ತು ಅವುಗಳನ್ನು ನಿರ್ವಹಿಸುತ್ತಾ ಬದಲಿ ಖರೀದಿದಾರರಿಗೆಗೆ ಅಥವಾ ಹೂಡಿಕೆದಾರರಿಗೆ ಮಾರುತ್ತದೆ. ಈ ಬ್ಯಾಡ್ ಬ್ಯಾಂಕುಗಳು ಸ್ವಿಸ್ ಚಾಲೆಂಜ್ ಮಾದರಿಯಲ್ಲಿ, ಬೇರೆ ARC ಮತ್ತು AMC ಗಳನ್ನು ಆಮಂತ್ರಿಸಿ ಸಾಲಕ್ಕೆ ಹೆಚ್ಚಿನ ಮೊತ್ತ ದೊರಕು ವಂತೆ ಪ್ರಯತ್ನಿಸುತ್ತವೆ.
ಬ್ಯಾಂಕುಗಳಿಗೆ ಏನು ಲಾಭ? : ಬ್ಯಾಂಕಿಂಗ್ ಉದ್ಯಮದಲ್ಲಿ 8.35 ಲಕ್ಷ ಕೋಟಿ ರು. ಅನುತ್ಪಾದಕ ಅಥವಾ ಕೆಟ್ಟ ಸಾಲಗಳು ಇವೆ. ಇದು ಒಟ್ಟು ಸಾಲದ 7.48% ಎಂದು ಹೇಳಲಾಗುತ್ತದೆ. ಸಾರ್ವಜನಿಕರಂಗದ ಬ್ಯಾಂಕುಗಳಲ್ಲಿ ಇದು 9.54% ರಷ್ಟು ಇದೆ. ದೊಡ್ಡ ಪ್ರಮಾಣದ ಸಾಲಗಳನ್ನು ಪಡೆಯುವ ಉದ್ಯಮ ರಂಗದ ಅನುತ್ಪಾದಕರ ಅಥವಾ ಕೆಟ್ಟ ಸಾಲದ ಪ್ರಮಾಣ 11.30% ಇದ್ದು, ಬ್ಯಾಂಕಿಂಗ್ ವಲಯದ ಲೆಕ್ಕಾಚಾರವನ್ನು ಕೆಟ್ಟ ಸಾಲದಿಂದ ಕ್ಲೀನ್ ಆಗುತ್ತದೆ. ಬ್ಯಾಲೆನ್ಸ್ ಶೀಟ್ ಕ್ಲೀನ್ ಅದರೆ, ಬ್ಯಾಂಕುಗಳಿಗೆ ಸರಕಾರದಿಂದ ದೊರಕುವ ಷೇರು ಬಂಡವಾಳದ ಪ್ರಮಾಣ ಹೆಚ್ಚಾಗುತ್ತದೆ. ಈ ಷೇರು ಬಂಡವಾಳ ಹೆಚ್ಚು ಸಾಲ ನೀಡಿ ಬ್ಯಾಂಕಿನ ಬಿಜಿನೆಸ್ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯವಾಗುತ್ತದೆ.
ಎಷ್ಟೋ ಬ್ಯಾಂಕುಗಳು ಶೇರು ಬಂಡವಾಳದ ಕೊರತೆಯಿಂದ ಹೆಚ್ಚಿಗೆ ಸಾಲ ನೀಡಲಾಗುತ್ತಿಲ್ಲ ಎಂದು ಹೇಳಲಾಗುತ್ತದೆ. ಬ್ಯಾಂಕುಗಳಿಂದ ಬ್ಯಾಡ್ ಬ್ಯಾಂಕಿಗೆ
ವರ್ಗಾವಣೆಯಾಗುವ ಸಾಲಕ್ಕೆ ಈಗಾಗಲೇ ಗಳಿಸಿದ ಲಾಭದಿಂದ 100% ಪೊವಿಷನ್ ಮಾಡಿರುವದರಿಂದ, ಬ್ಯಾಡ್ ಬ್ಯಾಂಕನವರು ವಸೂಲಿ ಮಾಡಿದ ಮೊತ್ತ
ಮೂಲ ಬ್ಯಾಂಕಿಗೆ ಬರುವಾಗ ಅದು ಬ್ಯಾಂಕಿನ ಲಾಭದ ಪೋರ್ಟ ಫೋಲಿಯೋಕ್ಕೆ (profit polio) ಜಮಾ ಅಗುತ್ತದೆ. ಬ್ಯಾಡ್ ಬ್ಯಾಂಕ್ ಪರಿಕಲ್ಪನೆ ಇನ್ನೊಂದು ಬ್ಯಾಂಕ್ ಅಗಿರದೇ, ಇದನ್ನು ಒಂದು ರೀತಿಯ ‘ಬ್ಯಾಂಕ್ ಸಾಲ ವಸೂಲಾತಿ ಬ್ಯಾಂಕ್’ ಎನ್ನಬಹುದು.
ಬ್ಯಾಂಕ್ ಸಾಲ ವಸೂಲಿಗಾಗಿ ಈಗಿರುವ, ಸಂಧಾನ, ನ್ಯಾಯಾಲಯ, ಲೋಕ ಅದಾಲತ್, ಸಾಲ ವಸೂಲಾತಿ ಮಂಡಳಿ (Debt Recovery Tribunal –DRT), ಅಸೆಟ್ ಪುನರ್ನಿಮಾಣ- ಅಸೆಟ್ ನಿರ್ವಹಣೆ ಕಂಪನಿಗಳು (Asset Reconsstruction Company -ARC & Asset Management Company-AMC), ಬ್ಯಾಂಕ್ ದಿವಾಳಿ ಕಾನೂನು (Insolvency& Bankruptcy Code-IBC) ಮತ್ತು ಸರ್ಫೇಸಿ ಕಾನೂನುಗಳು (Securitisation & Reconstuction Of Financial Assets & Enforcement of Security Act 2002) ನಿರೀಕ್ಷಿತ ಫಲವನ್ನು ನೀಡದಿರುವುದು, ಸರಕಾರ ಕೆಲವು ದೇಶಗಳಲ್ಲಿ ಪ್ರಚಲಿತ ಇರುವ ಮತ್ತು ಸಾಕಷ್ಟು ಯಶಸ್ವಿಯಾಗಿರುವ ಈ ವ್ಯವಸ್ಥೆಯನ್ನು ಪ್ರಯತ್ನಿಸುವಂತೆ ಮಾಡಿದೆ.
ಇತ್ತೀಚಿನ ವರ್ಷಗಳಲ್ಲಿ ಅರುಣ್ ಜೇಟ್ಲಿಯವರು ರೂಪಿಸಿದ ಬ್ಯಾಂಕ್ ದಿವಾಳಿ ಕಾನೂನು ಸಾಲಗಾರರ ಪರ ಎನ್ನುವ ಅಭಿಪ್ರಾಯ ಕೇಳುತ್ತಿದ್ದು, ಪ್ರಕರಣಗಳ ಇತ್ಯರ್ಥಕ್ಕೆ ಈ ಮಾರ್ಗದ ಮೂಲಕ ಪ್ರಯತ್ನಿಸಲು ಕೆಲವು ಬ್ಯಾಂಕುಗಳು ಹಿಂಜರಿಯುತ್ತಿವೆಯಂತೆ. ಒಂದು ಪ್ರಕರಣದಲ್ಲಿ ಒಂದ ದೊಡ್ಡ ಬ್ಯಾಂಕ್ ಈ ಮಾರ್ಗದ
ಮೂಲಕ ವಸುಲಾಗುವ ಸಾಲ ಬಾಕಿಯಲ್ಲಿ ತನ್ನಗೆ ಗಮನಾರ್ಹ ಹೇರ್ ಕಟ್ (ನಷ್ಟ) ಅಗಿದೆ ಎಂದು ನ್ಯಾಯಾಲಯದ ಮೊರೆ ಹೊಕ್ಕಿದೆ. ಕೆಲವು ಪ್ರಕರಣಗಳ ಇತ್ಯರ್ಥದಲ್ಲಿ (resolution) ಸಾಲ ನೀಡಿದ ಬ್ಯಾಂಕುಗಳು 95% ವರೆಗೆ ಹೇರ್ ಕಟ್ (ನಷ್ಟ) ಅನುಭವಿಸುತ್ತಿದ್ದು, ವಿಡಿಯೊಕಾನ್ ಪ್ರಕರಣದಲ್ಲಿ ಈ ಬೆಳವಣಿಗೆ ಯನ್ನು ಸುಪ್ರೀಮ್ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು ಎಕಾನಾಮಿಕ್ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಬ್ಯಾಡ್ ಬ್ಯಾಂಕ್ ಸ್ಥಾಪನೆಯಿಂದ ಕೆಲವು ಬ್ಯಾಂಕುಗಳು ಕೆಟ್ಟ ಸಾಲ ಅಥವಾ ಅನುತ್ಪಾದಕ ಸಾಲದ ವಸೂಲಿ ಬಹುತೇಕ ಬ್ಯಾಂಕುಗಳಿಂದ ಕಳಚಿಕೊಳ್ಳುತ್ತಿದ್ದು, ಬ್ಯಾಂಕ್ಗಳು ತಮ್ಮ ಮಾನವ ಸಂಪನ್ಮೂಲವನ್ನು ತಮ್ಮ ಕೋರ್ ಬಿಜಿನೆಸ್ ಅದ ಠೇವಣಿ ಸಂಗ್ರಹ ಮತ್ತು ಸಾಲ ನೀಡುವಿಕೆಗೆ ಬಳಸಿಕೊಳ್ಳಬಹುದು ಎನ್ನುವ ಆಭಿಪ್ರಾಯ ಬ್ಯಾಡ್ ಬ್ಯಾಂಕ್ ಪರಿಕಲ್ಪನೆಯ ಹಿಂದೆ ಇದೆ. ಇಂದು ಬ್ಯಾಂಕುಗಳ ಗಮನಾರ್ಹ ಎನರ್ಜಿ ಸಾಲ ವಸೂಲಾತಿ, ಅನುತ್ಪಾದಕ ಅಸ್ತಿಗಳ ನಿರ್ವಹಣೆಯಲ್ಲಿ
ವ್ಯರ್ಥ ಅಗುತ್ತಿದ್ದು, ಇದನ್ನು ಬ್ಯಾಂಕುಗಳ ಬಿಜಿನೆಸ್ ಬೆಳವಣಿಗೆಗೆ ಬಳಸಿಕೊಳ್ಳುವ ದೂರಗಾಮಿ ಉದ್ದೇಶ ಇದರ ಹಿಂದೆ ಕಾಣುತ್ತಿದೆ.
ಹಾಗೆಯೇ ಬ್ಯಾಂಕುಗಳಲ್ಲಿ ಸಾಲ ವಸೂಲಾತಿ ನಿಟ್ಟಿನಲ್ಲಿ ಅನುಭವಿಗಳು ಇಲ್ಲದಿರುವುದು, ಈ ಕೊರತೆಯನ್ನು professionally managed ಬ್ಯಾಡ್ ಬ್ಯಾಂಕ್ ಗಳು ನಿರ್ವಹಿಸುತ್ತವೆ ಎನ್ನಲಾಗುತ್ತಿದೆ. ಬ್ಯಾಡ್ ಬ್ಯಾಂಕುಗಳಲ್ಲಿ India Debt Resolution company ಗಳು ಇದ್ದು, ಅವು ತಮ್ಮಲ್ಲಿರುವ ವೃತ್ತಿಪರರ ಮೂಲಕ ಸಾಲ ವಸೂಲಾತಿ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದು ಬ್ಯಾಂಕ್ ಸಿಬ್ಬಂದಿ ಸಾಲ ವಸೂಲಾತಿಯ ಸುದೀರ್ಘ ಮತ್ತು ಜಿಗ್ ಜಾಗ್ ಪಯಣದಿಂದ ಮುಕ್ತ
ಗೊಳಿಸುತ್ತಾರೆ.
ಮೇಲು ನೋಟಕ್ಕೆ ಈ ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ ಬ್ಯಾಂಕ್ ಬ್ಯಾಲೆನ್ಸ ಶೀಟ್ಗಳನ್ನು ಅನುತ್ಪಾದಕ ಮತ್ತು ಕೆಟ್ಟ ಸಾಲಗಳಿಂದ ಮುಕ್ತಗೊಳಿಸುತ್ತದೆ. ಆದರೆ ಕೆಲವು ಅರ್ಥಿಕ ತಜ್ಞರ ಪ್ರಕಾರ ಈ ಪ್ರಕ್ರಿಯೆಯು yet another brick to the wall ಅಗುವುದೇ ಹೊರತು, ಬ್ಯಾಂಕ್ಗಳನ್ನು ಸಂಪೂರ್ಣವಾಗಿ ಕೆಟ್ಟ ಸಾಲ ಗಳಿಂದ ಮುಕ್ತ ಮಾಡಲು ಸಾಧ್ಯವಿಲ್ಲ. ಬ್ಯಾಂಕುಗಳಲ್ಲಿ 100 ರು. ವಸೂಲಾಗುವಾಗ, ಇನ್ನೊಂದು ನೂರು ಅನುತ್ಪಾದಕವಾಗವ ಪರಿಸ್ಥಿತಿ ಇರುವಾಗ ,ಕೆಟ್ಟ
ಸಾಲಗಳನ್ನು ಬ್ಯಾಡ್ ಬ್ಯಾಂಕ್ಗೆ ವರ್ಗಾಯಿಸುವ ಪ್ರಕ್ರಿಯೆಗೆ ಕೊನೆ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ ಕಷ್ಟ ಸಾಧ್ಯ. ಬ್ಯಾಂಕ್ ದಿವಾಳಿ ಕಾನೂನಿನಡಿಯಿಲ್ಲಿ ಕೆಟ್ಟ
ಸಾಲವನ್ನು ವಸೂಲು ಮಾಡುವಾಗ ಬ್ಯಾಂಕುಗಳು ಹೇರ್ ಕಟ್ ಅನುಭವಿಸುವುದು ತೀರಾ ಸಾಮಾನ್ಯ.
ಇದೇ ಪರಿಸ್ಥಿತಿ ಸಾಲಗಳನ್ನು ಬ್ಯಾಡ್ ಬ್ಯಾಂಕ್ಗೆ ವರ್ಗಾಯಿಸುವಾಗ ಮುಂದುವರೆದರೆ? ಕೆಟ್ಟ ಸಾಲ ವಸೂಲಾತಿಯಲ್ಲಿ ಬ್ಯಾಡ್ ಬ್ಯಾಂಕುಗಳು ಎಷ್ಟರಮಟ್ಟಿಗೆ ಫಲಪ್ರದವಾಗಬಹುದು ಎಂದು ಹೇಳುವುದಕ್ಕೆ ಇನ್ನೂ ಕೆಲಕಾಲ ಬೇಕಾಗಬಹುದು. ಆದರೆ, ಬ್ಯಾಂಕ್ ಕಾರ್ಮಿಕ ಸಂಘಟನೆಗಳು ಮತ್ತು ಕೆಲವು ಪ್ರಜ್ಞಾವಂತರು ಬ್ಯಾಂಕ್ ಸಾಲ ಮರುಪಾವತಿ ಮಾಡದಿರುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವ ಮತ್ತು ಸಾಲ ನೀಡುವ ಬ್ಯಾಂಕುಗಳಿಗೆ ನಷ್ಟ ಮಾಡುವ ಏಕಬಾರಿ ತೀರುವಳಿ (one time settlement), ಮತ್ತು ಸಾಲ ಮನ್ನಾದಂತಹ ಕ್ರಮಗಳನ್ನು ನಿಲ್ಲಿಸಬೇಕು ಅಥವಾ ನಿಯಂತ್ರಿಸಬೇಕು ಎಂದು ಒತ್ತಾಯ ಮಾಡುತ್ತಾರೆ.
ದೊಡ್ಡ ಸಾಲವನ್ನು ನೀಡುವಾಗ ತೆಗೆದುಕೊಂಡ ಸೆಕ್ಯರಿಟಿಯನ್ನು ಮೊದಲು ವಿಲೇವಾರಿ ಮಾಡಿ, ಬಾಕಿ ಉಳಿದ ಸಾಲಕ್ಕೆ ಬ್ಯಾಡ್ ಬ್ಯಾಂಕ್ ಬಾಗಿಲನ್ನು ಬಡಿಯಿರಿ ಎಂಧು ಸಲಹೆ ನೀಡುತ್ತಿದ್ದಾರೆ. ಕೆಟ್ಟ ಸಾಲಕಕ ತಾರ್ಕಿಕ ಅಂತ್ಯ ಹೇಗಾಗುವುದೋ ತಿಳಿಯದು. ಅದರೆ ಸದ್ಯಕ್ಕಂತೂ ಬ್ಯಾಂಕುಗಳು ಕೆಟ್ಟ ಸಾಲದ ಭಾರವನ್ನು ಸ್ವಲ್ಪಮಟ್ಟಿಗೆ ಇಳಿಸಿಕೊಳ್ಳಬಹುದು.