Sunday, 24th November 2024

ಇಂದು ಅನರ್ಹರ ಹಣೆಬರಹ ನಿರ್ಧಾರ !

ಇಡೀ ರಾಜ್ಯದ ಗಮನ ಸುಪ್ರೀಂ ತೀರ್ಪಿನತ್ತ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿರುವ ಅನರ್ಹರು

ಮೈತ್ರಿಿ ಪಕ್ಷದ ಸರಕಾರ ಮುರಿದು ಬೀಳಲು ಕಾರಣವಾದ ಅನರ್ಹ ಶಾಸಕರ ಹಣೆಬರಹವನ್ನು ಸುಪ್ರೀಂ ಕೋರ್ಟ್ ಬುಧವಾರ ಬರೆಯಲಿದ್ದು, ಸುಪ್ರೀಂ ತೀರ್ಪಿನ ಮೇಲೆ ಡಿ.5ರ ಉಪಚುನಾವಣೆ ಕಣದ ಸ್ವರೂಪ ನಿರ್ಧಾರವಾಗಲಿದೆ.
ಸುಪ್ರೀಂ ಕೋರ್ಟ್ ತೀರ್ಪಿನತ್ತ ಇಡೀ ರಾಜ್ಯದ ಗಮನ ನೆಟ್ಟಿಿದೆ. ಚುನಾವಣೆ ಮುಂದೂಡುವಂತೆ ಕೋರಿ ಅನರ್ಹ ಶಾಸಕರು ಬುಧವಾರವೇ ಅರ್ಜಿ ಸಲ್ಲಿಸಲಿದ್ದು, ಇದನ್ನು ತಕ್ಷಣವೇ ವಿಚಾರಣೆಗೆ ಅಂಗೀಕರಿಸಲು ಸುಪ್ರೀಂ ಕೋರ್ಟ್ ತೀರ್ಮಾನಿಸಿದೆ. 15 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆ ಮುಂದೂಡುವಂತೆ ಕಳೆದ ವಾರ ಅನರ್ಹ ಶಾಸಕರ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಉಪಚುನಾವಣೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ ವ್ಯಕ್ತಪಡಿಸಿದ್ದಲ್ಲದೆ, ನಿಮಗಾಗಿ ಆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.

ಶಾಸಕರ ಅನರ್ಹತೆ ಪ್ರಕರಣಕ್ಕೆೆ ಸಂಬಂಧಿಸಿ ಬುಧವಾರ ತೀರ್ಪು ನೀಡಲಿದ್ದು ಅಂದೇ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸೋಣ ಎಂದು ಅದು ಸೂಚನೆ ನೀಡಿತ್ತು. ಈ ಹಿನ್ನೆೆಲೆಯಲ್ಲಿ ಬುಧವಾರ ಏಕಕಾಲಕ್ಕೆೆ ಶಾಸಕರ ಅನರ್ಹತೆ ಪ್ರಕರಣಕ್ಕೆೆ ಸಂಬಂಧಿಸಿದ ತೀರ್ಪು ಪ್ರಕಟವಾಗಲಿದ್ದು, ಅದೇ ಕಾಲಕ್ಕೆೆ ಚುನಾವಣೆ ಮುಂದೂಡುವಂತೆ ಶಾಸಕರು ಮಾಡಿಕೊಳ್ಳಲಿರುವ ಮನವಿಯ ವಿಚಾರಣೆ ನಡೆಯಲಿದೆ. ಮೂಲಗಳ ಪ್ರಕಾರ, ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ತೀರ್ಪನ್ನು ಮರಳಿ ಹಾಲಿ ಸ್ಪೀಕರ್‌ಗೆ ಸುಪ್ರೀಂ ಕೋರ್ಟ್ ಕಳಿಸಿದರೆ ಉಪಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿಿದೆ.

ಏಕೆಂದರೆ ಅನರ್ಹ ಶಾಸಕರು ಈಗಾಗಲೇ ಸುಪ್ರೀಂ ಎದುರು ಸಲ್ಲಿಸಿರುವ ಅರ್ಜಿಯಲ್ಲಿ, ತಮ್ಮ ವಿಷಯದಲ್ಲಿ ಹಿಂದಿನ ಸ್ಪೀಕರ್ ಸಹಜ ನ್ಯಾಾಯ ಪಾಲನೆ ಮಾಡಿಲ್ಲ. ರಾಜೀನಾಮೆಗೆ ಸಂಬಂಧಿಸಿ ಕರೆದು ವಿಚಾರಣೆ ಮಾಡಿಲ್ಲ ಎಂದು ವಿವರಿಸಿದ್ದರು. ಇದನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದರೆ ಹಿಂದಿನ ಸ್ಪೀಕರ್ ತೀರ್ಮಾನ ಹಾಲಿ ಸ್ಪೀಕರ್ ಅಂಗಳಕ್ಕೆೆ ತಲುಪಲಿದೆ. ಹಾಲಿ ಸ್ಪೀಕರ್ ಅವರು ಸದಸ್ಯತ್ವಕ್ಕೆೆ ರಾಜೀನಾಮೆ ನೀಡಿದ ಶಾಸಕರನ್ನು ಕರೆಸಿ, ಕಾರಣ ಕೇಳಿದರೆ ಅನರ್ಹ ಶಾಸಕರು ತಮ್ಮ ರಾಜೀನಾಮೆ ವಾಪಸ್ ಪಡೆಯುವ ಸಾಧ್ಯತೆಗಳು ಜಾಸ್ತಿಿ.

ಈಗಾಗಲೇ ಸದರಿ ಶಾಸಕರನ್ನು ಕಾಂಗ್ರೆೆಸ್ ಹಾಗೂ ಜೆಡಿಎಸ್‌ನಿಂದ ಉಚ್ಚಾಾಟನೆ ಮಾಡಿರುವುದರಿಂದ ರಾಜೀನಾಮೆ ವಾಪಸ್ ಪಡೆದರೆ ಈ ಎಲ್ಲರೂ ತಮ್ಮ ತಮ್ಮ ಸದಸ್ಯತ್ವ ಉಳಿಸಿಕೊಳ್ಳಲಿದ್ದಾರೆ. ಹೀಗೆ ಅವರು ಶಾಸಕ ಸ್ಥಾಾನ ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷೇತರರಾಗಿ ಉಳಿದುಕೊಳ್ಳಬಹುದು. ಅಥವಾ ಬಿಜೆಪಿಗೂ ಸೇರಬಹುದು. ತಮ್ಮದೇ ಪ್ರತ್ಯೇಕ ಗುಂಪನ್ನು ಸ್ಥಾಾಪಿಸಿಕೊಂಡು ಮುಂದಿನ ಹೆಜ್ಜೆೆಯಿಡಬಹುದು. ಅಂತಹ ಸನ್ನಿಿವೇಶ ಉದ್ಭವವಾದರೆ ಡಿಸೆಂಬರ್ ಐದರಂದು ನಡೆಸಲು ಉದ್ದೇಶಿಸಿರುವ ಉಪಚುನಾವಣೆ ರದ್ದುಪಡಿಸಬೇಕಾದ ಅನಿವಾರ್ಯತೆ ಸುಪ್ರೀಂ ಕೋರ್ಟ್ ಮುಂದೆ ಬರುತ್ತದೆ ಎಂದು ಹೇಳಲಾಗುತ್ತಿಿದೆ.

ಟಿಕೆಟ್‌ಗಾಗಿ ಜಿದ್ದಾಾಜಿದ್ದಿ:
ಸ್ಪೀಕರ್ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಿಹಿಡಿದರೆ ಉಪಚುನಾವಣೆ ನಡೆಯಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತದೆ. ಆಗ ಅನರ್ಹರು ಸ್ಪರ್ಧೆ ಮಾಡುವ ಅವಕಾಶವೂ ಕೈತಪ್ಪಲಿದೆ. ಆಗ ಅನರ್ಹರು ತಮ್ಮ ಆಪ್ತರಿಗೆ ಟಿಕೆಟ್ ನೀಡುವಂತೆ ಒತ್ತಾಾಯ ಮಾಡಲಿದ್ದಾಾರೆ. ಇದು ಸಹಜವಾಗಿಯೇ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳಲು ಕಾರಣವಾಗಿದೆ. ಅನರ್ಹರ ತೀರ್ಪನ್ನು ನೋಡಿಕೊಂಡೆ ಮುಂದಿನ ಹೆಜ್ಜೆೆಯನ್ನಿಿಡಲು ತೀರ್ಮಾನಿಸಿರುವ ಬಿಜೆಪಿ, ಅನಂತರವೇ ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆೆ ನಡೆಸಲಿದೆ. ಉಪಚುನಾವಣೆ ನಡೆದರೆ ಕನಿಷ್ಠ 8 ಸ್ಥಾಾನ ಗೆಲ್ಲಲೇಬೇಕಾಗಿರುವ ಬಿಜೆಪಿ ಇತ್ತ ಅನರ್ಹರನ್ನು, ಅತ್ತ ಪಕ್ಷದ ಅತೃಪ್ತರನ್ನು ಬಿಡದ ಪರಿಸ್ಥಿಿತಿಯಲ್ಲಿದೆ. ಹೀಗಾಗಿ, ಅನರ್ಹರ ತೀರ್ಪು ರಾಜ್ಯ ರಾಜಕಾರಣದ ನಿರ್ಣಾಯಕ ಕ್ಷಣವಾಗಲಿದೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಿಯೆಗೆ ನಿರಾಸಕ್ತಿ
ಇಡೀ ರಾಜ್ಯದ ಗಮನ ಅನರ್ಹರ ತೀರ್ಪಿನ ಮೇಲಿರುವ ಕಾರಣದಿಂದ ಮಂಗಳವಾರದ ನಾಮಪತ್ರ ಸಲ್ಲಿಕೆ ಪ್ರಕ್ರಿಿಯೆ ನೀರಸವಾಗಿತ್ತು. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆೆಸ್ ಮತ್ತು ಜೆಡಿಎಸ್ ಅನರ್ಹರ ತೀರ್ಪು ನೋಡಿಕೊಂಡೇ ಮುಂದಿನ ಹೆಜ್ಜೆೆ ಇಡಲಿವೆ. ಹೀಗಾಗಿ, ಉಪಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ ಮಂಗಳವಾರ ಕೇವಲ ಎರಡು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿವೆ. ಹುಣಸೂರು ಕ್ಷೇತ್ರದಿಂದ ಕರ್ನಾಟಕ ರಾಷ್ಟ್ರೀಯ ಸಮಿತಿಯ ಅಭ್ಯರ್ಥಿ ಮತ್ತು ಗೋಕಾಕನಿಂದ ಪಕ್ಷೇತರ ಅಭ್ಯರ್ಥಿಯೊಬ್ಬರು ಮಾತ್ರವೇ ನಾಮಪತ್ರ ಸಲ್ಲಿಕೆ ಮಾಡಿದ್ದಾಾರೆ. ಬೆಂಗಳೂರು ವ್ಯಾಾಪ್ತಿಿಯ ನಾಲ್ಕು ಕ್ಷೇತ್ರಗಳು ಸೇರಿ ಉಳಿದ ಯಾವುದೇ ಕ್ಷೇತ್ರಗಳಲ್ಲಿ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.