Monday, 25th November 2024

ಪೆಟ್ರೋಲ್‌, ಡೀಸಲ್‌ ಜಿಎಸ್‌ಟಿ ವ್ಯಾಪ್ತಿಗೆ ಬರದಿರಲು ರಾಜ್ಯಗಳೇ ಕಾರಣ: ಹರ್‌ದೀಪ್‌ ಸಿಂಗ್‌ ಪುರಿ

ಕೋಲ್ಕತಾ: ಪೆಟ್ರೋಲ್‌, ಡೀಸಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ರಾಜ್ಯಗಳು ಒಪ್ಪುತ್ತಿಲ್ಲ. ಇದೇ ಕಾರಣಕ್ಕಾಗಿ ಅವುಗಳ ಬೆಲೆ ಕಡಿಮೆಯಾಗುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 100 ರೂ.ದಾಟಿದ್ದರೂ, ಟಿಎಂಸಿ ಸರ್ಕಾರ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸುತ್ತಲೇ ಇದೆ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ಗೆ 32 ರೂ. ತೆರಿಗೆ ವಿಧಿಸುತ್ತಿದೆ. ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 19 ಅಮೆರಿಕನ್‌ ಡಾಲರ್‌ ಇದ್ದಾಗ ನಮಗೆ ಪ್ರತಿ ಲೀಟರ್‌ಗೆ 32 ರೂ. ನೀಡ ಲಾಗುತ್ತಿತ್ತು. ಸದ್ಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 75 ಅಮೆರಿಕನ್‌ ಡಾಲರ್‌ಗೆ ಏರಿಕೆ ಯಾಗಿದ್ದರೂ, 32 ರೂ. ಗಳನ್ನೇ ಸರ್ಕಾರ ವಿಧಿಸುತ್ತಿದೆ ಎಂದಿದ್ದಾರೆ.