Sunday, 17th November 2024

ನಟ, ನಿರ್ಮಾಪಕ ಸಚಿನ್‌ ಜೋಶಿಗೆ ನಾಲ್ಕು ತಿಂಗಳು ತಾತ್ಕಾಲಿಕ ಜಾಮೀನು

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಂಬಂಧ ಜೈಲು ಪಾಲಾಗಿದ್ದ ನಟ, ನಿರ್ಮಾಪಕ ಸಚಿನ್‌ ಜೋಶಿ ಅವರಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಾಲ್ಕು ತಿಂಗಳ ಅವಧಿಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

ಮುಂಬೈ ಮೂಲದ ಓಂಕಾರ್‌ ರಿಯಾಲ್ಟರ್ಸ್‌ ಸಂಸ್ಥೆ ಜೊತೆ ₹ 100 ಕೋಟಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಜೋಶಿ ಅವರನ್ನು ಬಂಧಿಸ ಲಾಗಿತ್ತು. ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ಸಂಜೀವ್‌ ಖನ್ನಾ ಅವರ ಪೀಠವು ವಿಚಾರಣೆ ನಡೆಸಿ, ಸಮಯ ವಿಸ್ತರಣೆ ಕೋರಿ ಯಾವುದೇ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ತಾತ್ಕಾಲಿಕ ಜಾಮೀನು ಸೆಷನ್ಸ್‌ ನ್ಯಾಯಾಲಯ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದೂ ಪೀಠ ಹೇಳಿದೆ. ಜೋಶಿ ಅವರ ಪರ ರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ವಾದವನ್ನು ಪರಿಗಣಿಸಿದ ಪೀಠವು, ನಟನಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು ಜಾಮೀನು ಮಂಜೂರು ಮಾಡಿತು.