Saturday, 21st September 2024

ಪ್ರಗತಿಪರರೇಕೆ ಪದೇ ಪದೆ ಮಂಗ್ಯಾ ಆಗಲು ಬಯಸುತ್ತಾರೆ !

ಬೇಟೆ

ಜಯವೀರ ವಿಕ್ರಮ ಸಂಪತ್ ಗೌಡ, ಅಂಕಣಕಾರ

ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಎಂದು ಕರೆಯಿಸಿಕೊಳ್ಳುವವರಿಗೆ ಮಾನ-ಮರ್ಯಾದೆ ಇಲ್ಲ. ಇದು ನನಗೆ ಗೊತ್ತಿರದ ಸಂಗತಿಯೇನೂ ಅಲ್ಲ. ಕಾರಣ ಅವರೇ ಅದನ್ನು ಹಲವು ಸಲ ಸಾಬೀತು ಮಾಡಿದ್ದಾರೆ. ಆದರೆ ಅವರಿಗೆ ಕನಿಷ್ಠ ಆತ್ಮಸಾಕ್ಷಿಯೂ ಇಲ್ಲವಲ್ಲ, ಅದು ಬೇಸರ ಹುಟ್ಟಿಸುವ ಸಂಗತಿ. ನನಗೆ ಎಷ್ಟೋ
ಸಲ, ಈ ಪ್ರಗತಿಪರರು ಮನುಷ್ಯರಂತೆ ಏಕೆ ಯೋಚಿಸುವುದಿಲ್ಲ ಎಂದು ಅನಿಸಿದ್ದಿದೆ.

ಮನುಷ್ಯರಲ್ಲಿರುವ ಭಾವ ಕೋಶಗಳು ಇವರಲ್ಲಿ ಇಲ್ಲವಾ, ಇವರೇ ಅವನ್ನು ಕಿತ್ತು ಹಾಕಿದ್ದಾರಾ ಅಥವಾ ಹುಟ್ಟುವಾಗಲೇ ಆ ಕೋಶರಹಿತರಾಗಿ ಹುಟ್ಟುತ್ತಾರಾ, ಗೊತ್ತಿಲ್ಲ. ಪ್ರಗತಿಪರರು ಮತ್ತು ಬುದ್ಧಿಜೀವಿಗಳ ನಡೆ-ನುಡಿಗಳನ್ನು ಗಮನಿಸಿದವರಿಗೆ ಈ ಸಂದೇಹ ಕಾಡದಿರದು. ಇವರ ಧೋರಣೆಗಳು ಸಾಮಾನ್ಯವಾಗಿ ಬಹುಸಂಖ್ಯಾತರಿಗಿಂತ ಭಿನ್ನವಾಗಿರುತ್ತವೆ. ಯಾವತ್ತೂ ಸಮಾಜ ಹಿತ, ಚಿಂತನೆಗೆ ವಿರುದ್ಧವಾಗಿರುತ್ತವೆ. ಹಾಗಿರುವುದರಿಂದಲೇ ಅವರನ್ನು ಪ್ರಗತಿಪರರು ಎಂದು ಕರೆಯುವುದಾದರೆ, ಅವರಿಗೆ ಬೇರೆ ವಿಶೇಷಣ ಕೊಡುವುದು ಲೇಸು. ಪ್ರಗತಿಪರ ಮತ್ತು ಬುದ್ಧಿಜೀವಿ ಎಂಬುದು ತುಂಬಾ ಒಳ್ಳೆಯ ಪದಗಳು. ಆದರೆ ಈ ದರ್ವೇಶಿಗಳು ಆ ಪದಗಳ ಅರ್ಥವನ್ನೇ ಹಾಳು ಮಾಡಿಬಿಟ್ಟಿದ್ದಾರೆ.

ಇವರನ್ನು ಲದ್ದಿಜೀವಿಗಳು ಎಂದು ಕರೆದರೆ, ಅದಕ್ಕಿಂತ ಸಮಂಜಸವಾದದು ಬೇರೆ ಇರಲಾರದು. ಈ ಮಾತನ್ನು ಹೇಳುವಾಗ, ನನಗೆ ಗೌರಿ ಲಂಕೇಶ ಎಂಬ ಪರಪುಟ್ಟ, ಶುದ್ಧ ತಿಕ್ಕಲು, ಪಾಚಿಗಟ್ಟಿದ ಮನಸ್ಥಿತಿಯ, ಮಾಜಿ ಮತ್ತು ದಿವಂಗತ ಪತ್ರಕರ್ತೆಯ ನೆನಪಾಗುತ್ತದೆ. ಮೊನ್ನೆ ಇವಳ ಸತ್ತ ದಿನದಂದು ‘ನಾನು ಗೌರಿ’ (ನಿಜವಾಗಿ ಅದು ‘ನಾನು ಗೋರಿ’) ಎಂದು ಕೆಲವು ಆತ್ಮಗಳು, ಪ್ರೇತಾತ್ಮಗಳು ಚೀರಿಕೊಂಡವು. ಬುದ್ಧಿಯಲ್ಲಿ ಮತ್ತು ಆಕೃತಿಯಲ್ಲಿ ಸೊಳ್ಳೆಬತ್ತಿಯಂತಿದ್ದ ಗೌರಿ ಲಂಕೇಶಳ ಹೆಸರಿನಲ್ಲಿ, ತಮ್ಮ ಎದೆಯ ಮೇಲೆ ‘ನಾನು ಗೌರಿ’ ಎಂದು ಬರೆಯಿಸಿಕೊಳ್ಳುವ ಕೆಲವರ ಮನಸ್ಥಿತಿ ಎಷ್ಟು ಗಟಾರ ಹಿಡಿದಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು.

ಅದು ಅವರವರ ಪ್ರಾರಬ್ಧ ಮತ್ತು ಇಚ್ಛಾ ಪ್ರಾರಬ್ಧ! ತನಗೆ ತಿಪ್ಪೆಯೇ ಇಷ್ಟ ಎಂದು ಹೇಳಿದವರ ಮುಂದೆ ಚಿರೋಟಿ ಇಟ್ಟರೂ ಅವರೂ ತಾಟು ಒದೆಯುತ್ತಾರೆ. ಇರಲಿ. ಈ ಗೌರಿ ಲಂಕೇಶ್ ಎಂಬ ಸೊಳ್ಳೆಬತ್ತಿ, ಸಾಕೇತರಾಜ್ ಎಂಬ ನಕ್ಸಲ ಮುಖಂಡ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸತ್ತಾಗ, ಎದೆ ಎದೆ ಬಡಿದುಕೊಂಡಿದ್ದಳು. ಸಾಕೇತರಾಜನ ಹೆಣದ ಮುಂದೆ ಕುಳಿತು ಪ್ರತಿಭಟಿಸಿದ್ದಳು. ಆಗಿನ ಮುಖ್ಯಮಂತ್ರಿ ಧರಂಸಿಂಗ್ ಮನೆಯ ಮುಂದೆ ದೊಡ್ಡ ಪ್ರಹಸನ ಮಾಡಿದ್ದಳು.

ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಡುವುದಿಲ್ಲ ಎಂದು ‘ಕ್ಯಾ ಸೀನ್ ಹೈ’ ಎಂಬ ರೀತಿಯಲ್ಲಿ ಡ್ರಾಮಾ ಮಾಡಿದ್ದಳು. ನಕ್ಸಲ ನಾಯಕನೊಬ್ಬ ಸತ್ತಿದ್ದಕ್ಕೆ ಅವಳ ಅಂತರಂಗ ಹರಿದು ಬಂದಿತ್ತು. (ಆ ಹೊತ್ತಿಗಾಗಲೇ ತಾನೊಬ್ಬ ಪತ್ರಕರ್ತೆ ಎಂಬ ಸಾಮಾನ್ಯ ಜ್ಞಾನವನ್ನೂ ಅವಳು ಕಳೆದುಕೊಂಡಿದ್ದಳು. ಪತ್ರಕರ್ತೆಯಾಗಿ
ಹೊಸತಾಗಿ ಬರೆಯುವುದು ಅಥವಾ ಕೊಡುವುದು ಏನೂ ಉಳಿದಿರಲಿಲ್ಲ. ಕೊನೆಕೊನೆಗೆ ಅವಳು ಗೈಡ್‌ಗಳನ್ನು ಪ್ರಿಂಟ್ ಮಾಡಿಕೊಂಡು, ರದ್ದಿ ಪುಸ್ತಕಗಳನ್ನು ಮಾರಾಟ ಮಾಡುವ ಸ್ಥಿತಿ ತಲುಪಿದ್ದಳು. ಅಪ್ಪ ಎಂದೋ ಬರೆದಿದ್ದನ್ನು ಪ್ರಿಂಟ್ ಮಾಡುವುದರ ಹೊರತಾಗಿ ಅವಳಲ್ಲಿ ಬೇರೇನೂ ಉಳಿದಿರಲಿಲ್ಲ.

ಸಾರಾಯಿ ಮತ್ತು ಸಿಗರೇಟ್ ಖರ್ಚಿಗೆ ಹಣ ಸಾಕಾಗುತ್ತಿರಲಿಲ್ಲ. ಅಂಥವಳು ಹಾಗೆ ಸತ್ತಿದ್ದರೆ, ‘ನಾನು ಗೋರಿ’ ಎಂದು ನಾವೇ ಬರೆಯಬೇಕಾಗಿತ್ತು. ಅವಳನ್ನು
ಯಾರೋ ದುರಾತ್ಮರು ಗುಂಡು ಹೊಡೆದು ಸಾಯಿಸಿ, ಒಂದೆರಡು ಗುಂಡುಗಳನ್ನು ವೇಸ್ಟ್ ಮಾಡಿಬಿಟ್ಟರು. ಈಗ ಅವಳ ಹೆಸರುಗಳನ್ನೂ ಕೆಲವು ಗಂಜಿಗಿರಾಕಿಗಳು ‘ನಾನು ಗೌರಿ’ ಎಂದು ಹೇಳಿಕೊಳ್ಳುತ್ತಾರೆ. ಇವರು ಇನ್ನೆಷ್ಟು ಕಿಲುಬು ಹಿಡಿದಿರಬಹುದು, ಯೋಚಿಸಿ.) ಇಷ್ಟೆಲ್ಲಾ ಡ್ರಾಮಾಗಳಾಗಿ ಕೇವಲ ಐದು ದಿನಗಳ ನಂತರ,
ಸಾಕೇತ ರಾಜನ ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು, ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಮೀಸಲು
ಪೊಲೀಸ್ ಪಡೆಯ ಏಳು ಪೇದೆಗಳನ್ನು ಹತ್ಯೆ ಮಾಡಿದಾಗ, ಇದೇ ‘ಸೊಳ್ಳೆಬತ್ತಿ’ ಆ ಘಟನೆಯನ್ನು ಖಂಡಿಸಲೂ ಇಲ್ಲ, ಒಂದೇ ಒಂದು ಮಾತನ್ನೂ ಆಡಲಿಲ್ಲ. ಅವಳಿಗೆ ಸಾಕೇತರಾಜ ಮಾತ್ರ ಮನುಷ್ಯ ಎನಿಸಿದ್ದ.

ಪೊಲೀಸ್ ಪೇದೆಗಳ ಕುಟುಂಬಗಳ ಸದಸ್ಯರ ಕಣ್ಣೀರು ಅವಳಲ್ಲಿ ಅನುಕಂಪವನ್ನೇ ಮೂಡಿಸಲಿಲ್ಲ. ಈ ಪ್ರಗತಿಪರರು ಎಂದು ಕರೆಯಿಸಿ ಕೊಳ್ಳುವವರು ಆ ಘಟನೆ ಯನ್ನು ಖಂಡಿಸಲೇ ಇಲ್ಲ. ಮಾನವ ಹಕ್ಕುಗಳ ಬಗ್ಗೆ ಮಾತಾಡುವ ಇವರಿಗೆ, ಪೊಲೀಸ್ ಪೇದೆಗಳ ಹತ್ಯೆ ಯಾವ ಕನಿಕರ, ದುಃಖವನ್ನು ಮೂಡಿಸುವುದಿಲ್ಲ ಎಂದಾದರೆ, ಇವರು ಅದೆಂಥ ಗೋಸುಂಬೆಗಳಾಗಿರಬಹುದು, ಹಿಪೊಕ್ರೇಟ್ ಗಳಾಗಿರಬಹುದು? ಈ ಪ್ರಗತಿಪರರ ಯೋಚನೆಯೇ ಮನೆಹಾಳು. ಇವರಿಗೆ
ಜನ ತಮ್ಮ ಬಗ್ಗೆ ಏನೆಂದು ಭಾವಿಸಬಹುದು ಎಂದೂ ಯೋಚಿಸುವುದಿಲ್ಲ. ಇವರ ಯೋಚನೆ ಕೆಟ್ಟು ಕಿಲುಬು ಹಿಡಿದಿದೆ ಎಂಬುದೂ ಗೊತ್ತಾಗುವುದಿಲ್ಲ. ‘ಊರಿಗೇ ಒಂದು ದಾರಿಯಾದರೆ, ಪೋರನಿಗೆ ಒಂದು ದಾರಿ’ ಎಂಬ ಗಾದೆಯಂತೆ ಇವರ ನಡೆ. ಇವರ ನಿರ್ಧಾರಗಳಿಂದ ನಾಲ್ಕು ಜನರಿಗೆ ಉಪಕಾರವಾಗಿದ್ದರೆ ಅದನ್ನು ಅವರೇ ಹೇಳಬೇಕು.

ಸ್ವಲ್ಪ ವಿವೇಚನೆ, ವಿವೇಕ ಇರುವವರಿಗೆ ಇವರ ಚಿಂತನೆಯಲ್ಲಿ ಹುರುಳಿಲ್ಲ ಎಂಬುದು ಗೊತ್ತಾಗುತ್ತದೆ. ಆದರೆ ಅವರು ಮಾತ್ರ ತಮ್ಮ ಕಿತ್ತುಹೋದ ಚಿಂತನೆಯ ಮೂಸೆಯಲ್ಲಿ ನರಳುತ್ತಿರುತ್ತಾರೆ. ಇಂಥವರಿಗೆ ಗೌರಿ ಲಂಕೇಶ್ ಒಂದು ಆದರ್ಶ. ಆಕೆ ಬದುಕಿದ್ದಾಗ, ಅವಳು ಬರೆದ ಒಂದು ಸಾಲನ್ನು ಓದದಿದ್ದರೂ ಪರವಾಗಿಲ್ಲ. (ಅವಳು ಬರೆದಿದ್ದನ್ನು ಓದುವಂತಿರಲಿಲ್ಲ ಎಂಬುದು ಬೇರೆ ಮಾತು) ಸತ್ತ ನಂತರ ಅವಳು ‘ನಾನು ಗೌರಿ’ಯಾಗಿಬಿಟ್ಟಿದ್ದಾಳೆ.

ಅವಳನ್ನು ಒಂದು ಪ್ರತಿಮೆಯಾಗಿ ಬಳಸಿಕೊಂಡು, ತಮ್ಮ ಅಸ್ತಿತ್ವ ಕಾಣುವವರ ಮನಸ್ಥಿತಿ ಅದೆಷ್ಟು ನಾರುತ್ತಿರಬಹುದು ಎಂಬುದನ್ನು ಊಹಿಸಬಹುದು. ಈ
ಪ್ರಗತಿಪರರಿಗೆಲ್ಲ ಈಗ ಗೌರಿ ಒಂದು ಸಂಕೇತ. ಅವರ ಹೋರಾಟಗಳಲ್ಲೆಲ್ಲ ‘ಸೊಳ್ಳೆಬತ್ತಿ’ ಉರಿಯುತ್ತಿರುತ್ತದೆ. ಪ್ರಗತಿಪರ ಎಂದು ಕರೆಯಿಸಿಕೊಳ್ಳುವವರ
ಪಾಲಿಗೆ ಆಕೆ ಒಬ್ಬ ಹುತಾತ್ಮ! ಇಂಥ ಮಂಗಾಟಗಳನ್ನು ಕೆಲವು ಸಾಹಿತಿಗಳೂ ಬೆಂಬಲಿಸುತ್ತಾರೆ. ಬದುಕಿದ್ದಾಗ ಯಾವ ಗಂಡಸರನ್ನೂ ಆಕರ್ಷಿಸದ, ಯಾವ ಜೀವಿಗಳನ್ನೂ ಸೆಳೆಯದ ಈ ಗೌರಿ ಸತ್ತ ಬಳಿಕ ‘ಕನ್ನಗಿ’ಯಂತೆ ಕ್ರಾಂತಿ ಕಾರಿಯಾಗಿ ರುವುದು ಸಮಕಾಲೀನ ಪ್ರಗತಿಪರರ ಡಾಂಬರು ಹಿಡಿದ ಬುದ್ಧಿಯ ಪ್ರತೀಕ.
‘ನಾನು ಗೋರಿ’ ಎಂದು ಅರಚುವವರು ಬರೀ ವೆಬ್‌ಸೈಟಿಗಷ್ಟೇ ಸೀಮಿತ ವಾಗಿದ್ದರೂ, ತಮ್ಮ ಅಸ್ತಿತ್ವಕ್ಕಾಗಿ, ಆ ಪ್ರೇತಾತ್ಮವನ್ನೇ ನೆಚ್ಚಿಕೊಂಡಿರುವುದು
ಪ್ರಗತಿಪರರ ಬೌದ್ಧಿಕ ಮಟ್ಟ ವೃಷಭಾವತಿಯಲ್ಲಿ ಲೀನವಾಗಿರುವುದರ ಸಂಕೇತವೂ ಹೌದು.

ದುರ್ವ್ಯಸನಗಳಿಂದ ಹೆಣ್ಣಿನ ಸಹಜ ಆಕರ್ಷಣೆಗಳನ್ನೂ ಕಳೆದುಕೊಂಡಿದ್ದ ಗೌರಿ, ಬದುಕಿರುವಾಗಲೇ ತನಗೇ ‘ಗೋರಿ’ ತೋಡಿಕೊಂಡಿದ್ದಳು. ಅಂಥವಳು ಗುಂಡೇಟು ತಿಂದು ಸತ್ತಳೆಂಬ ಒಂದು ಕಾರಣಕ್ಕೆ ಪ್ರಗತಿಪರರಿಗೆ ‘ಚಳವಳಿಯ ಚೈತನ್ಯ’ವಾಗುವುದು ಸಹ ಹೀನ ಮನಸ್ಥಿತಿಯ ದ್ಯೋತಕವೇ. ಯಾವತ್ತೂ ಇಂಥ ಪ್ರತಿಮೆಗಳು ಮುಂಬರುವ ದಿನಗಳಲ್ಲಿ ‘ಸೊಳ್ಳೆಬತ್ತಿ’ ಮನಸ್ಥಿತಿಯಿರುವ ಯೋಚನೆಗಳನ್ನೇ ಹುಟ್ಟುಹಾಕುತ್ತವೆಯೇ ಹೊರತು, ಉತ್ತಮ ಅಥವಾ ಸಮಚಿತ್ತದ, ಬಹುತ್ವ ಸ್ವೀಕರಿಸುವ ಆಲೋಚನೆಗಳನ್ನು ಹುಟ್ಟುಹಾಕುವುದಿಲ್ಲ.

ಹೀಗಾಗಿ ನನಗೆ ಇಂಥ ಯೋಚನೆಗಳನ್ನು ಪೊರೆಯುವ, ಪ್ರೋತ್ಸಾಹಿಸುವ ಮತ್ತು ಅಳವಡಿಸಿಕೊಳ್ಳುವವರು ಸಮಾಜಕ್ಕೆ ಯಾವ ರೀತಿಯಿಂದಲೂ ಹಿತವಾಗಿರಲಾರರು. ಜರ್ಮನಿಯಲ್ಲಿ ಹಿಟ್ಲರ್ ಸತ್ತು ಅವೆಷ್ಟೋ ವರ್ಷಗಳಾದರೂ ಅವನೇ ಆರಾಧ್ಯದೈವವೆಂದು ಪೂಜಿಸುವವರ, ಅವನ -ಟೋ-ಪಿಂಡಗಳನ್ನು ಇಟ್ಟು ರೋಽಸುವವರ ದೊಡ್ಡ ಸಮೂಹವೇ ಇತ್ತು. ಇಂದಿಗೂ ಅವರ ಪಾಲಿಗೆ ಹಿಟ್ಲರ್ ನಾಯಕನೇ. ಅವರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ. ಮನುಷ್ಯರ ಮಾಂಸಗಳನ್ನು ಸೇವಿಸಿ ವಿಕೃತ ಆನಂದಪಡುವ ಇದಿ ಅಮೀನ್ ಇಂದಿಗೂ ಉಗಾಂಡದಲ್ಲಿ ಅನೇಕರಿಗೆ ‘ನಾನು ಗೋರಿ’ಯ ರೀತಿಯಲ್ಲಿ ಪ್ರತಿಮೆಯೇ.

ಆತ ತನ್ನ ಅಧಿಕಾರ ಅವಧಿಯಲ್ಲಿ ಏನಿಲ್ಲವೆಂದರೂ ಐದು ಲಕ್ಷ ಜನರನ್ನು ಸಾಯಿಸಿದ್ದ. ಅಂಥ ನರಹಂತಕನನ್ನೂ ತಮ್ಮ ‘ಚೈತನ್ಯದ ಚಿಲುಮೆ’ ಎಂದು ಭಾವಿಸು ವವರಿದ್ದಾರೆ. ಇಂಥ ದರವೇಶಿ ಭಂಡನನ್ನು ಆರಾಧಿಸುವವರು ಉಗಾಂಡದಲ್ಲಿ ಈಗಲೂ ಸಿಗುತ್ತಾರೆ. ಜೀವ ವಿರೋಧಿಯಾಗಿದ್ದ, ಮಾನವ ಹಕ್ಕುಗಳ ಬಗ್ಗೆ
ಸೈರಣೆಯೇ ಇಲ್ಲದ ವ್ಯಕ್ತಿಯನ್ನೂ ತಮ್ಮ ನಾಯಕ ಎಂದು ಹೇಳಿಕೊಳ್ಳುವ ಮನಸ್ಥಿತಿಯ ಜನರಿರುವುದನ್ನು ನೋಡಿದ್ದೇವೆ. ಇಂಥವರು ಸಮಾಜಕ್ಕೆ ಯಾವ
ರೀತಿಯಿಂದಲೂ ಪ್ರಯೋಜನಕ್ಕೆ ಬರಲಾರರು. ಇವರು ಆಗಾಗ ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ತಮ್ಮ ‘ಪ್ರತಿಮೆ’ಗಳ ಹೆಸರು ಹೇಳಿಕೊಂಡು ಸದ್ದು ಮಾಡುತ್ತಾರೆ. ನಮ್ಮ ಬಹುತೇಕ ಪ್ರಗತಿಪರರ ಪಾಡೂ ಹೀಗೇ ಆಗಿದೆ.

ಅವರಿಗೆ ತಮ್ಮನ್ನು ಯಾರೂ ಗಮನಿಸುವುದಿಲ್ಲ, ಮಾತಾಡಿಸುವುದಿಲ್ಲ, ತಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ವ್ಯಸನ, ವಿಷಾದ, ವಿಷಣ್ಣತೆಯಿಂದ ಅವರು ಒಳಗೊಳಗೇ ಕುದಿಯುತ್ತಿರುತ್ತಾರೆ. ಈ ಸಂಗತಿಗಳೇ ಅವರಲ್ಲಿ ಒಂದು ಅಬ್ಬೇಪಾರಿತನವನ್ನೂ ಸೃಷ್ಟಿಸಿರುತ್ತದೆ. ಅದು ಅವರನ್ನು ಮತ್ತಷ್ಟು ಮಂಗ್ಯಾನ ರೀತಿಯಲ್ಲಿ ವರ್ತಿಸುವಂತೆ ಮಾಡುತ್ತದೆ. ಹೀಗಾಗಿ ಅವರ ವರ್ತನೆಗಳು, ಮಾತುಗಳು ಸಹಜವಾಗಿರುವುದಿಲ್ಲ. ಭಾರತದಲ್ಲಿರುವ ಪ್ರಗತಿಪರರು ಇದಕ್ಕೆ ಹೊರತಾ ಗಿಲ್ಲ. ಅವರ ಮೂಲ ಸಮಸ್ಯೆಯಿರುವುದು ಯಾವುದೋ ಓಬೀರಾಯನ ಕಾಲದ ಸಿದ್ಧಾಂತಗಳನ್ನು ಇಂದಿಗೂ ಪ್ರಸ್ತುತವೆಂದು ನಂಬಿಕೊಂಡಿರುವುದು ಮತ್ತು
ಕಮ್ಯುನಿಸ್ಟ್ ಸಿದ್ಧಾಂತಗಳು ಒಡೆದ ಮೊಟ್ಟೆಯೆಂದು ಭಾವಿಸದಿರುವುದು.

ಯಾರು ಡೇಟ್ ಬಾರ್‌ಆದ (ಛ್ಡಿmಜ್ಟಿqs) ಸಿದ್ಧಾಂತಗಳನ್ನು ನೆಚ್ಚಿಕೊಳ್ಳುತ್ತಾರೋ, ಅದೇ ಪರಮಸತ್ಯ ಎಂದು ಭಾವಿಸುತ್ತಾರೋ, ಅವರು ಸಹಜವಾಗಿ ವರ್ತಿಸಲು ಸಾಧ್ಯವೇ ಇಲ್ಲ. ಅಲ್ಲದೇ ಅವರು ಆರಾಧಿಸುವ ‘ಪ್ರತಿಮೆ’ಗಳೂ ತಿರಸಟ್ಟು ವ್ಯಕ್ತಿಗಳೇ ಆಗಿರುತ್ತಾರೆ. ನೀವು ಇತಿಹಾಸವನ್ನು ನೋಡಿದರೆ, ಇದಕ್ಕೆ ನೂರಾರು ನಿದರ್ಶನಗಳು ಸಿಗುತ್ತವೆ. ಹೀಗಾಗಿ ಪ್ರಗತಿಪರರು ಎಂದು ಕರೆಯಿಸಿಕೊಳ್ಳುವವರು ಸಹಜವಾಗಿ, ಯಾರಂತೆ ಊರಂತೆ ವರ್ತಿಸಲು ಸಾಧ್ಯವೇ ಇಲ್ಲ. ಅವರ ಯೋಚನೆಯ ಡಿ.ಎನ್. ಎ ವಕ್ರವಾಗಿರುತ್ತದೆ.

ಅವರಿಂದ ನೀವು ಸರಿಯಾದ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಅವರು ಇರುವುದೇ ಹಾಗೆ. ಮಬ್ಬಾದ ಕನ್ನಡಕ ಹಾಕಿ ಹೊರಗಿನ ಜಗತ್ತನ್ನು ನೋಡಿದರೆ, ಲೋಕವೆಲ್ಲಾ ಮಬ್ಬಾಗಿಯೇ ಕಾಣುತ್ತದೆ. ಈ ಪ್ರಗತಿಪರರ ಸ್ಥಿತಿಯೂ ಹಾಗೆ ಆಗಿದೆ. ಹೀಗಾಗಿ ಅವರು ತಾಲಿಬಾನಿಗಳನ್ನೂ ಬೆಂಬಲಿಸುತ್ತಾರೆ. ತಾಲಿಬಾನಿಗಳು ಮನುಷ್ಯರೇ ಅಲ್ಲವಾ, ಅವರ ಸಮಸ್ಯೆಗಳನ್ನು ಎಂದಾದರೂ] ಕೇಳಿದ್ದೀರಾ, ಅವರಿಗೂ ಅವರದ್ದೇ ಆದ ಬದುಕುಬುದಿದೆ, ಅವರನ್ನು ನೋಯಿ ಸುವುದೆಂದರೆ ಮಾನವ ಹಕ್ಕುಗಳನ್ನು ಉಲ್ಲಂಸಿದಂತೆ ಎಂದು ಭಾಷಣ ಮಾಡಿ, ಎಲ್ಲರ ಮುಂದೆ ಮಂಗ್ಯಾ ಆಗುತ್ತಾರೆ. ಅದೇನು ಖುಷಿಯೋ?!