ಬೆಂಗಳೂರು : ರಾಜ್ಯದಲ್ಲಿ ಕರೋನಾ 3ನೇ ಅಲೆಯ ಆತಂಕದ ನಡುವೆಯೂ ಶಾಲಾ ಕಾಲೇಜು ಆರಂಭ ಗೊಂಡಿದೆ. ಆದರೆ ಕೊರೋನಾ ಆರಂತಕದ ನಡುವೆಯೂ ಈಗಾಗಲೇ 6 ರಿಂದ 12ನೇ ತರಗತಿಗಳನ್ನು ಆರಂಭಿಸಲಾಗಿದೆ.
ಅಕ್ಟೋಬರ್ 1 ರಿಂದ ತರಗತಿ ಹಾಜರಾತಿ ಶೇ.100ಕ್ಕೂ ಹೆಚ್ಚಾಗಲಿದೆ. 1 ರಿಂದ 5ನೇ ತರಗತಿ ಆರಂಭ ಯಾವಾಗ ಆಗಲಿದೆ ಎನ್ನುವ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ವಾರ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಈ ಸಭೆಯಲ್ಲಿ 1 ರಿಂದ 5ನೇ ತರಗತಿ ಆರಂಭಕ್ಕೆ ಮನವಿ ಮಾಡಲಾಗುತ್ತದೆ. ರಾಜ್ಯದಲ್ಲಿ ಈಗ ಡೆಂಗ್ಯೂ, ವೈರಲ್ ಫೀವರ್ ಇದೆ. ಇದರಿಂದಾಗಿ, ಸದ್ಯಕ್ಕೆ 3 ರಿಂದ 5ನೇ ತರಗತಿ ಆರಂಭ ಕುರಿತಂತೆ ಮನವಿ ಮಾಡುವುದಾಗಿ ತಿಳಿಸಿದರು.
ದಸರಾ ರಜೆಯ ಬಳಿಕ 1 ರಿಂದ 5ನೇ ತರಗತಿ ಆರಂಭ ಕುರಿತಂತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ನವೆಂಬರ್ ನಿಂದ 1, 2ನೇ ತರಗತಿ ಆರಂಭ ಕುರಿತಂತೆ ತಯಾರಿ ನಡೆಸಲಾಗುತ್ತಿದೆ. ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ದಸರಾ ರಜೆಯ ಬಳಿಕ 3, 4 ಮತ್ತು 5ನೇ ತರಗತಿ ಆರಂಭಿಸುವ ಚಿಂತನೆ ಇದೆ ಎಂದರು.