Friday, 22nd November 2024

ಕರೋನಾ ಬದಲು, ರೇಬಿಸ್ ಚುಚ್ಚುಮದ್ದು: ವೈದ್ಯ, ನರ್ಸ್ ಅಮಾನತು

ಥಾಣೆ: ಕರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಕರೋನಾ ಲಸಿಕೆ ಬದಲು, ರೇಬಿಸ್ ಚುಚ್ಚುಮದ್ದು ನೀಡಿದ ಘಟನೆ ಸಂಭವಿಸಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಆಸ್ಪತ್ರೆಯಲ್ಲಿ ನಡೆದಿದೆ. ಕರೋನಾ ಸೋಂಕಿತನಿಗೆ ಲಸಿಕೆ ಬದಲು ರೇಬಿಸ್ ಚುಚ್ಚುಮದ್ದು ನೀಡಿದ ವೈದ್ಯರು ಹಾಗೂ ನರ್ಸ್ ಅವರನ್ನು ಸೇವೆಯಿಂದ ಅಮಾನತು ಗೊಳಿಸಲಾಗಿದೆ.

ಥಾಣೆ ಸ್ಥಳೀಯ ಆಡಳಿತ ನಡೆಸುವ ಆಸ್ಪತ್ರೆಗೆ ರಾಜ್‍ಕುಮಾರ್ ಯಾದವ್ ಎಂಬುವರು ಬಂದು ಲಸಿಕೆ ನೀಡುವಂತೆ ಕೇಳಿಕೊಂಡಿದ್ದರು. ಆದರೆ, ಕರ್ತವ್ಯದಲ್ಲಿದ್ದ ಡಾಕ್ಟರ್ ಹಾಗೂ ನರ್ಸ್ ಅವರು ಗಳು ರಾಜಕುಮಾರ್ ಅವರಿಗೆ ರೇಬಿಸ್ ಚುಚ್ಚುಮದ್ದು ನೀಡಿದ್ದರು.

ಕೊರೊನಾ ಲಸಿಕೆ ಬದಲು ರೇಬಿಸ್ ಚುಚ್ಚುಮದ್ದು ಪಡೆದ ರಾಜ್‍ಕುಮಾರ್ ಅವರ ಆರೋಗ್ಯ ಸ್ಥಿರವಾಗಿದ್ದು ಯಾವುದೆ ಅಡ್ಡ ಪರಿಣಾಮ ಉಂಟಾಗಿಲ್ಲ. ಆದರೂ ಕರ್ತವ್ಯಲೋಪವೆಸಗಿದ ವೈದ್ಯ ಸಿಬ್ಬಂದಿಯನ್ನು ಸ್ಥಳೀಯ ಆಡಳಿತ ಅಮಾನತುಗೊಳಿಸಿದೆ.