Friday, 22nd November 2024

15 ಕ್ಷೇತ್ರಗಳ ಮಿನಿ ವಿಶ್ಲೇಷಣೆ

ಗೋಕಾಕ
ಫೋಟೊ: ರಮೇಶ್ ಜಾರಕಿಹೊಳಿ, ಲಖನ್ ಜಾರಕಿಹೊಳಿ
* ರಮೇಶ್ ಜಾರಕಿಹೊಳಿ ಬಿಜೆಪಿಯಿಂದ ಸ್ಪರ್ಧೆ ಖಚಿತ
* ಕಾಂಗ್ರೆೆಸ್ ಪಾಳಯದಲ್ಲಿ ಯಾರನ್ನು ನಿಲ್ಲಿಸಬೇಕೆಂಬ ಗೊಂದಲ
* ಕೈನಿಂದ ಲಖನ್ ಹೆಸರು ಖಚಿತವಾಗಿತ್ತು. ಇದೀಗ ಅಶೋಕ್ ಪೂಜಾರಿ ಎಂಟ್ರಿಿಯಿಂದ ಗೊಂದಲ
* ಲಖನ್ ಪರ ಸತೀಶ್, ಅಶೋಕ್ ಪೂಜಾರಿಗೆ ಟಿಕೆಟ್ ನೀಡಬೇಕೆಂದು ಕೆಪಿಸಿಸಿ ಸಭೆಯಲ್ಲಿ ಚರ್ಚೆ
* ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಿಂದ, ಬಿಜೆಪಿಗೆ ಗೋಕಾಕ ಸುಲಭದ ತುತ್ತು

ಕಾಗವಾಡ
ಫೋಟೋ : ರಾಜುಕಾಗೆ, ಶ್ರೀಮಂತಪಾಟೀಲ್
* ಬಿಜೆಪಿಯಲ್ಲಿ ಕಾಗೆ ಬಂಡಾಯದ್ದೇ ಸಮಸ್ಯೆೆ
* ಬಿಜೆಪಿಯಿಂದ ಶ್ರೀಮಂತಪಾಟೀಲ್ ಸ್ಪರ್ಧೆ ಖಚಿತ
* ಕಾಂಗ್ರೆೆಸ್‌ನಿಂದ ರಾಜುಕಾಗೆ ಸ್ಪರ್ಧಿಸಿದರೆ ಬಿಜೆಪಿಗೆ ಹೊಡೆತ
* ರಾಜುಕಾಗೆ ಹಾಗೂ ಮೂಲ ಕಾಂಗ್ರೆೆಸ್ ಮತ ಒಂದಾದರೆ ಶ್ರೀಮಂತಪಾಟೀಲ್‌ಗೆ ಸಂಕಷ್ಟ
* ರಾಜುಕಾಗೆ ಬಂಡಾಯ ಶಮನಕ್ಕೆೆ ಬಿಜೆಪಿ ಮುಂದಾಗುವ ಸಾಧ್ಯತೆ

ಅಥಣಿ
ಫೋಟೋ : ಮಹೇಶ್ ಕುಮಟಳ್ಳಿಿ, ಕಾಂಗ್ರೆೆಸ್
* ಅಥಣಿ ಬಿಜೆಪಿ ಸರಕಾರದ ಪ್ರತಿಷ್ಠೆೆಯ ಪ್ರಶ್ನೆೆ
* ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ಸಿಗುವುದು ಡೌಟ್
* ಡಿಸಿಎಂ ಕ್ಷೇತ್ರವಾಗಿದ್ದರೂ, ಮಹೇಶ್ ಕುಮಟಳ್ಳಿಿಗೆ ಟಿಕೆಟ್ ಫಿಕ್‌ಸ್‌?
* ಕಾಂಗ್ರೆೆಸ್‌ನಲ್ಲಿ ಒಂದು ಕ್ಷೇತ್ರಕ್ಕೆೆ 15 ಆಕಾಂಕ್ಷಿಿಗಳು
* ಮಹಾರಾಷ್ಟ್ರದಲ್ಲಾಾಗಿರುವ ಹಿನ್ನಡೆಯಿಂದ ಸವದಿಗೆ ಈ ಚುನಾವಣೆ ಹಿನ್ನಡೆ

ಯಲ್ಲಾಾಪುರ
ಫೋಟೋ : ಶಿವರಾಮ್ ಹೆಬ್ಬಾಾರ್, ಭೀಮಣ್ಣ ನಾಯ್‌ಕ್‌
* ಸಾಂಪ್ರದಾಯಿಕ ಬಿಜೆಪಿ ಮತದಾರರ ಬೆಂಬಲ ಹೆಬ್ಬಾಾರ್‌ಗೆ
* ಆದರೆ ಬಿಜೆಪಿಯಲ್ಲಿ ಒಳಜಗಳದ ಸಾಧ್ಯತೆ ಹೆಚ್ಚಿಿದೆ.
* ಭೀಮಣ್ಣ ನಾಯ್‌ಕ್‌‌ಗೆ ವರ್ಕ್‌ಔಟ್ ಆಗುವುದೇ ಅನುಕಂಪ?
* ಅನರ್ಹವಾದರೂ, ಹೆಚ್ಚು ಅನುದಾನ ತಂದಿರುವುದೇ ಹೆಬ್ಬಾಾರ್‌ಗೆ ಟ್ರಂಪ್ ಕಾರ್ಡ್?
* ಮುಂದಿನ 20 ದಿನದಲ್ಲಿ ಬಿಜೆಪಿ ಸ್ಥಳೀಯ ನಾಯಕರನ್ನು ಒಮ್ಮತ್ತಕ್ಕೆೆ ಪಡೆಯುವುದು ಸವಾಲು

ಹಿರೇಕೆರೂರು
ಫೋಟೋ : ಬಿ.ಸಿ.ಪಾಟೀಲ್, ಯು.ಬಿ.ಬಣಕಾರ್
* ಕಳೆದ ಚುನಾವಣೆಯ ಎದುರಾಳಿಗಳೇ ಈ ಬಾರಿಯೂ ಎದುರಾಗಲಿದ್ದಾಾರೆ.
* ಆದರೆ ಕಾಂಗ್ರೆೆಸ್‌ನಲ್ಲಿದ್ದ ಬಿ.ಸಿ.ಪಾಟೀಲ್ ಬಿಜೆಪಿಯಿಂದ, ಬಿಜೆಪಿಯಲ್ಲಿದ್ದ ಬಣಕಾರ್ ಕಾಂಗ್ರೆೆಸ್‌ನಿಂದ ಸ್ಪರ್ಧೆ
* 2018ರ ಚುನಾವಣೆಯಲ್ಲಿ ಸಾವಿರ ಮತಗಳ ಅಂತರದಲ್ಲಿ ಸೋತಿದ್ದ ಬಣಕಾರ್
* ಗೆದ್ದರೆ ಕ್ಷೇತ್ರಕ್ಕೆೆ ಸಚಿವ ಸ್ಥಾಾನ ಖಚಿತ ಎನ್ನುವ ರೀತಿಯಲ್ಲಿ ಪ್ರಚಾರ
* ಕಾಂಗ್ರೆೆಸ್ ಅಭ್ಯರ್ಥಿ ಘೋಷಣೆಯಲ್ಲಿಯೂ ಮುಗಿಯದ ಗೊಂದಲ ಬಿಜೆಪಿಗೆ ವರದಾನ

ರಾಣೆಬೆನ್ನೂರು
ಫೋಟೋ : ಆರ್.ಶಂಕರ್, ಕೆ.ಬಿ.ಕೋಳಿವಾಡ
* ಪಕ್ಷೇತರವಾಗಿದ್ದ ಶಂಕರ್‌ಗೆ ಬಿಜೆಪಿ ಸಾಂಪ್ರಾಾದಾಯಿಕ ಮತಗಳ ಬೆಂಬಲ
* ಕೋಳಿವಾಡ ಹಾಗೂ ಅವರ ಪುತ್ರನಿಗೆ ಕ್ಷೇತ್ರದಲ್ಲಿರುವ ವಿರೋಧ ಬಿಜೆಪಿಗೆ ವರದಾನ
* ರಾಜೀನಾಮೆ ನೀಡದಿದ್ದರೂ, ಅನರ್ಹಗೊಳಿಸಿದ್ದಾಾರೆ ಎನ್ನುವ ಆರೋಪವನ್ನು ಬಳಸಿಕೊಳ್ಳಲಿರುವ ಶಂಕರ್
* ಈ ಬಾರಿ ಗೆದ್ದರೆ ಮತ್ತೆೆ ಮಂತ್ರಿಿಯಾಗುವ ಸಾಧ್ಯತೆ

ವಿಜಯನಗರ
ಫೋಟೋ : ಆನಂದ್ ಸಿಂಗ್, ಕಾಂಗ್ರೆೆಸ್
* ಪ್ರತ್ಯೇಕ ಜಿಲ್ಲೆೆಗಾಗಿ ರಾಜೀನಾಮೆ ನೀಡಿದ್ದಾಾರೆ ಎನ್ನುವ ಅನುಕಂಪ ಆನಂದ್‌ಸಿಂಗ್ ಮೇಲೆ
* ಬಿಜೆಪಿ ಮಾತೃಪಕ್ಷವಾಗಿರುವುದರಿಂದ, ಸ್ಥಳೀಯರನ್ನು ತಮ್ಮ ಕಡೆ ಸೆಳೆಯುವುದು ಸುಲಭ
* ಕಾಂಗ್ರೆೆಸ್ ಪಾಳಯದಲ್ಲಿ ಅಭ್ಯರ್ಥಿ ಆಯ್ಕೆೆ ಗೊಂದಲ ಮುಗಿಯದಿರುವುದು ಸಿಂಗ್‌ಗೆ ವರದಾನ
* ಬಿಜೆಪಿ ಭದ್ರಕೋಟೆಯಾಗಿರುವುದರಿಂದ ಗೆಲುವು ಸುಲಭ ಎನ್ನುವ ಲೆಕ್ಕಾಾಚಾರ
* ಬಳ್ಳಾಾರಿ ಉಸ್ತುವಾರಿ ಡಿಕೆಶಿ ಪಡೆಯುವುದರಿಂದ, ಡಿಕೆ ಪ್ಲಾಾನ್ ವರ್ಕ್‌ಔಟ್ ಆದರೆ ಎನ್ನುವ ಆತಂಕದಲ್ಲಿ ಬಿಜೆಪಿ

ಯಶವಂತಪುರ
ಫೋಟೋ : ಎಸ್.ಟಿ ಸೋಮಶೇಖರ, ರಾಜಕುಮಾರ್ ನಾಯ್ಡು
* ಎಸ್.ಟಿ.ಸೋಮಶೇಖರ್‌ಗೆ ಬಿಜೆಪಿ ಸ್ಥಳೀಯ ನಾಯಕರ ವಿರೋಧ ಸಾಧ್ಯತೆ
* ಕಾಂಗ್ರೆೆಸ್‌ನಿಂದ ರಾಜ್‌ಕುಮಾರ್ ಸ್ಪರ್ಧೆ ಬಹುತೇಕ ಖಚಿತ
* ಸ್ಥಳೀಯ ಬಿಜೆಪಿಗರ ಬಂಡಾಯ ತಣಿಸುವುದೇ ಸವಾಲು
* ರಾಜ್‌ಕುಮಾರ್‌ಗೆ ಡಿಕೆ ಶಿವಕುಮಾರ್ ಬೆಂಬಲ ಸಾಧ್ಯತೆ
* ಸೋಮಶೇಖರ್‌ಗೆ ಸಾಂಪ್ರದಾಯಿಕ ಬಿಜೆಪಿ ಮತಗಳ ಬೆಂಬಲ

ಮಹಾಲಕ್ಷ್ಮಿ ಲೇಔಟ್
ಫೋಟೋ : ಗೋಪಾಲಯ್ಯ, ಶಿವರಾಜ್
* ಬಿಜೆಪಿಯಿಂದ ಸ್ಪರ್ಧಿಸುವ ಗೋಪಾಲಯ್ಯಗೆ ಜೆಡಿಎಸ್ ಬೆಂಬಲ ಸಾಧ್ಯತೆ
* ಸ್ಥಳೀಯವಾಗಿ ಉತ್ತಮ ಹೆಸರು ಮಾಡಿರುವ ಗೋಪಾಲಯ್ಯ
* ಬಿಬಿಎಂಪಿ ಸದಸ್ಯ ಶಿವರಾಜ್ ಬಗ್ಗೆೆ ಮತದಾರರಿಗೆ ಹೆಚ್ಚು ಒಲವಿಲ್ಲ
* ಜೆಡಿಎಸ್-ಬಿಜೆಪಿ ಮತ ಒಂದಾದರೆ ಗೆಲುವು ಸುಲಭ
* ಬಿಜೆಪಿ ಒಳಜಗಳ ಸರಿಪಡಿಸಿಕೊಳ್ಳುವ ಸವಾಲು ಗೋಪಾಲಯ್ಯ ಮುಂದೆ

ಚಿಕ್ಕಬಳ್ಳಾಪುರ
ಫೋಟೋ : ಡಿ.ಸುಧಾಕರ್, ಅಂಜಿನಪ್ಪ
* ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ಹೇಳಿ ಅಚ್ಚರಿ ಮೂಡಿಸಿರುವ ಸುಧಾಕರ್
* ಪಕ್ಷೇತರವಾಗಿ ಸ್ಪರ್ಧಿಸಿ, ಜೆಡಿಎಸ್ ಮತ ಸೆಳೆಯುವ ಲೆಕ್ಕಾಾಚಾರದಲ್ಲಿ ಸುಧಾಕರ್
* ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲಿರುವ ಸುಧಾಕರ್
* ಡಿ.ಸುಧಾಕರ್ ವಿರುದ್ಧ ಅಂಜಿನಪ್ಪ ಪ್ರಬಲ ಅಭ್ಯರ್ಥಿಯಲ್ಲ ಎನ್ನುವ ಮಾತು ಕ್ಷೇತ್ರದಲ್ಲಿ
* ಜೆಡಿಎಸ್ ಬಾಹ್ಯ ಬೆಂಬಲ ನೀಡಿದರೂ ಬಿಜೆಪಿಗೆ ಅನುಕೂಲ

ಶಿವಾಜಿನಗರ
ಫೋಟೋ : ರೋಷನ್ ಬೇಗ್, ಕಟ್ಟಾಾ ಸುಬ್ರಮಣ್ಯ ನಾಯ್ಡು
* ಬಿಜೆಪಿಯ ಕಟ್ಟಾಾ ಸುಬ್ರಮಣ್ಯ ನಾಯ್ಡು ಪಕ್ಷೇತರ ಸ್ಪರ್ಧೆ, ಬಿಜೆಪಿಗೆ ತಲೆಬಿಸಿ
* ಬಿಜೆಪಿಯಿಂದ ರೋಷನ್ ಬೇಗ್ ಅಥವಾ ಅವರ ಪುತ್ರ ಸ್ಪರ್ಧೆ ಖಚಿತ
* ಅಲ್ಪಸಂಖ್ಯಾಾತರ ಹಾಗೂ ಬಿಜೆಪಿ ಮತ ಒಂದಾದರೆ ಬಿಜೆಪಿಗೆ ಗೆಲುವು ಸುಲಭ
* ಕಾಂಗ್ರೆೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆೆಯೇ ಗೊಂದಲಮಯ
* ಯಡಿಯೂರಪ್ಪ ಆಪ್ತ ಕಟ್ಟ ಮನವೊಲಿಸುವುದು ಸುಲಭ

ಹೊಸಕೋಟೆ
ಫೋಟೋ : ಎಂಟಿಬಿ, ಶರತ್ ಬಚ್ಚೇಗೌಡ
* ಸಂಸದ ಬಚ್ಚೇಗೌಡ ಪುತ್ರನೇ ಬಿಜೆಪಿಗೆ ಕಂಟಕ
* ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಬಿಜೆಪಿ ಮತವಿಭಜನೆ
* ಎಂಟಿಬಿ ನಾಗರಾಜ್‌ಗೆ ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ
* ಕಾಂಗ್ರೆೆಸ್‌ಗೆ ಅಭ್ಯರ್ಥಿಯ ಅಯ್ಕೆೆಯಲ್ಲಿಯೇ ಸಮಸ್ಯೆೆ
* ಜೆಡಿಎಸ್ ಯಾರನ್ನು ಕಣಕ್ಕಿಿಳಿಸಲಿದೆ ಎನ್ನುವುದೇ ಕುತೂಹಲ

ಹುಣಸೂರು
ಫೋಟೋ : ಸಿ.ಪಿ.ಯೋಗೀಶ್ವರ, ಎಚ್.ಎಸ್.ಮಂಜುನಾಥ
* ಎಚ್.ವಿಶ್ವನಾಥರ ಬದಲಿಗೆ ಯೋಗೀಶ್ವರ ಸ್ಪರ್ಧೆ ಬಹುತೇಕ ಖಚಿತ
* ಯೋಗೀಶ್ವರ ಸ್ಪರ್ಧೆಗೆ ವಿಶ್ವನಾಥ ಒಪ್ಪಿಿಗೆ
* ವಿಶ್ವನಾಥ ಹಾಗೂ ಅವರ ಪುತ್ರನಿಗೆ ಪಕ್ಷದಲ್ಲಿ ಸೂಕ್ತ ಸ್ಥಾಾನಮಾನದ ಭರವಸೆ
* ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪ್ರಬಲ ಸ್ಪರ್ಧೆ ಒಡ್ಡುವ ಸಾಧ್ಯತೆ
* ಆಪರೇಷನ್ ಕಮಲ ರೂವಾರಿಯನ್ನು ಗೆಲ್ಲಿಸಿಕೊಂಡು ಬರುವ ಒತ್ತಡದಲ್ಲಿ ಬಿಜೆಪಿ

ಕೆ.ಆರ್‌ಪೇಟೆ
ಫೋಟೋ : ಜೆಡಿಎಸ್, ಕೆ.ಬಿ.ಚಂದ್ರಶೇಖರ
* ಜೆಡಿಎಸ್‌ನಿಂದ ನಿಖಿಲ್ ಕುಮಾರಸ್ವಾಾಮಿ, ಭವಾನಿ ರೇವಣ್ಣ ಸ್ಪರ್ಧೆಯ ಬಗ್ಗೆೆ ಗಾಳಿಮಾತು
* ಬಿಜೆಪಿಗೆ ಬಂದಿರುವ ನಾರಾಯಣ ಗೌಡಗೆ ಪಕ್ಷ ಸಂಘಟನೆಯದ್ದೇ ತಲೆಬಿಸಿ
* ಕೆ.ಆರ್.ಪೇಟೆಯಲ್ಲಿ ಜೆಡಿಎಸ್-ಕಾಂಗ್ರೆೆಸ್ ನೇರ ಹಣಾಹಣಿ ಖಚಿತ
* ಉಪಚುನಾವಣೆಯಲ್ಲಿ ಗೆಲುವಿಗಿಂತ ಪಕ್ಷ ಸಂಘಟನೆಗೆ ಬಿಜೆಪಿ ಒತ್ತು
* ಜೆಡಿಎಸ್ ಅಭ್ಯರ್ಥಿ ಮೇಲೆ, ಚುನಾವಣೆ ನಿರ್ಧಾರ

ಕೆ.ಆರ್.ಪುರ
ಫೋಟೋ : ಬೈರತಿ ಬಸವರಾಜ್, ನಾರಾಯಣ ಸ್ವಾಾಮಿ
* ವೈಯಕ್ತಿಿಕ ವರ್ಚಸ್ಸಿಿನ ಮೇಲೆ ಗೆಲ್ಲುವ ಲೆಕ್ಕಾಾಚಾರದಲ್ಲಿ ಬೈರತಿ
* ನಂದೀಶ್ ರೆಡ್ಡಿಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾಾನ ನೀಡುವ ಮೂಲಕ, ಬಂಡಾಯ ತಣ್ಣನೆ
* ಈಗಾಗಲೇ ಉಪಚುನಾವಣೆ ಕಸರತ್ತು ಆರಂಭಿಸಿರುವ ಕಾಂಗ್ರೆೆಸ್‌ನ ನಾರಾಯಣಸ್ವಾಾಮಿ
* ನಂದೀಶ್ ರೆಡ್ಡಿಿ ಬೆಂಬಲಕ್ಕೆೆ ಮನವಿ ಮಾಡಲಿರುವ ಬೈರತಿ