Sunday, 15th December 2024

ಗಾಂಧಿಯ ಪೋಟೋ ಬೇಕು, ಮೌಲ್ಯಾದರ್ಶಗಳು ಬೇಡ

ದಾಸ್ ಕ್ಯಾಪಿಟಲ್‌

ಟಿ.ದೇವಿದಾಸ್

dascapital1205@gmail.com

ಕೆಲವು ವರ್ಷಗಳೇ ಸಂದವು; ನಮಗೆ ವಿಚಿತ್ರವಾದ ಖಯಾಲಿ ಹುಟ್ಟಿಕೊಂಡು! ಅಕ್ಟೋಬರ್ ಎರಡು ಬಂತೆಂದರೆ ಎಲ್ಲಿಲ್ಲದ ಗಾಂಧಿಮೋಹ ಹುಟ್ಟಿಕೊಳ್ಳುತ್ತದೆ. ಗಾಂಧಿ ಚಿತ್ರಪಟಗಳು ಎಡೆ ರಾಜಾಜಿಸುತ್ತವೆ. ಕೋರ್ಟುಗಳಲ್ಲಿ, ಪೊಲೀಸ್ ಠಾಣೆಗಳಲ್ಲಿ, ಎಲ್ಲಾ ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜು, ವಿವಿಗಳಲ್ಲಿ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಪ್ರತಿ ಹೋರಾಟ, ಅಭಿಯಾನ, ವಿರೋಧಗಳ ಮುಂದೆ ಗಾಂಧಿಯ ಫೋಟೋ ಇರುವ ಬ್ಯಾನರ್‌ ಗಳು ಇದ್ದೇ ಇರುತ್ತವೆ.

ನಾವು ಹಿಡಿಯುವ ಎಲ್ಲ ನೋಟುಗಳಲ್ಲೂ ಗಾಂಧಿ ರಾರಾಜಿಸುತ್ತಾರೆ. ಆದರೆ ಯಾರೂ ಅಂತರಂಗದಲ್ಲಿ ತಮ್ಮನ್ನು ತಾವೇ ಶುದ್ಧೀಕರಿಸಿಕೊಳ್ಳಲು ಮುಂದಾಗು ವುದಿಲ್ಲ! ಆದರೆ, ಎಲ್ಲರಿಗೂ ತಮ್ಮಲ್ಲಿಲ್ಲದ ಆದರ್ಶವನ್ನು ಮೆರೆಸುದಕ್ಕೆ ಗಾಂಧಿ ಬೇಕು. ಗಾಂಧಿ ವಾದ ಬೇಕು. ಜೀವನದಲ್ಲಿ ಒಮ್ಮೆಯೂ ಪೊರಕೆ ಹಿಡಿಯದವನೂ ವೇದಿಕೆಯಲ್ಲಿ ಗಾಂಧಿಯ ಬಗ್ಗೆ, ಸ್ವಚ್ಛತೆಯ ಬಗ್ಗೆ ಮಾತಾಡುತ್ತಾನೆ. ಅದರಲ್ಲೂ ರಾಜಕಾರಣಿಗಳು ಪ್ರಮುಖರು. ಬಂದ್, ಸತ್ಯಾಗ್ರಹ, ಪ್ರತಿಭಟನೆ ಇತ್ಯಾದಿ ಸಂದರ್ಭಗಳಲ್ಲಿ ಗಾಂಽಯ ಚಿತ್ರಪಟ ಎಲ್ಲರಿಗೂ ಬೇಕು. ತಮ್ಮ ಲ್ಲಿಲ್ಲದ ಆದರ್ಶವನ್ನು ಗಾಂಧಿಯ ಪಟವನ್ನು ಹಿಡಿದುಕೊಂಡು ಸಾಂಕೇತಿಕವಾಗಿ ಇವತ್ತು ಒಂದು ದಿನದ ಮಟ್ಟಿಗಾದರೂ ತಾವೂ ಗಾಂಧಿಯಂತೆ ಎಂದು ಬಿಂಬಿಸಿಕೊಳ್ಳುವವರಿಗೇನೂ ಈ ದೇಶದಲ್ಲಿ ಕೊರತೆಯಿಲ್ಲ.

ಮೊದಲೆಲ್ಲ ಗಾಂಧಿ ಜಯಂತಿಯಂದು ಶಾಲಾ-ಕಾಲೇಜುಗಳಲ್ಲಿ, ಊರು-ಕೇರಿಗಳಲ್ಲಿ, ಸರಕಾರಿ- ಸರಕಾರೇತರ ಸಂಘ-ಸಂಸ್ಥೆಗಳಲ್ಲಿ ಸಾಮೂಹಿಕ ಶ್ರಮದಾನ ಅಂತ ಅರ್ಧದಿನ ಕೆಲವೊಮ್ಮೆ ದಿನಪೂರ್ತಿ ಸ್ವಚ್ಛತೆಯ ಕಾರ್ಯ ಕ್ರಮವಿರುತ್ತಿತ್ತು. Of course ಈಗಲೂ ದೇಶದ ಅನೇಕ ಭಾಗಗಳಲ್ಲಿ ಇದು ಅನೂಚಾನವಾಗಿ ನಡೆಯುತ್ತಲೇ ಇದೆ. ಗಾಂಧಿಯ ಹೆಸರಿನ ಅಥವಾ ನೆನಪ ಅಂತೂ ಆ ದಿನ ಸ್ವಚ್ಛತೆಯ ಅಭಿಯಾನವಿತ್ತು. ಇದರಿಂದಾಗಿ ಏನು ಪರಿವರ್ತನೆಯಾಗದಿದ್ದರೂ ಶಾಲಾ-ಕಾಲೇಜುಗಳು, ವಿವಿಗಳು, ನಗರ, ಊರು-ಕೇರಿಗಳು ಸ್ವಚ್ಛವಾಗುತ್ತಿತ್ತು.

ಜತೆಯಲ್ಲಿ ಗಾಂಧಿ ಜಯಂತಿಯ ಆಚರಣೆಯೂ ಆಗುತ್ತಿತ್ತು. ಸ್ವಲ್ಪಮಟ್ಟಿಗೆ ಮೈಮನಸಿನ ಕೊಳಕು ಮಾಯವಾಗುತ್ತಿತ್ತು. ವರ್ಷಕ್ಕೊಮ್ಮೆಯಾದರೂ ನಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗುವ ಈ ಪ್ರಕ್ರಿಯೆಯಲ್ಲಿ ಇಲ್ಲಿಯವರೆಗೂ ಅಂಥಾದ್ದೇನೂ ಮಹತ್ತರ ಬದಲಾವಣೆಗಳು ಸ್ಥಳೀಯ ಮಟ್ಟದಲ್ಲೂ, ಉನ್ನತ ಮಟ್ಟದಲ್ಲೂ ಆಗಲಿಲ್ಲವೆಂದೇ ಹೇಳಬೇಕು. ಕೇವಲ ಆಚರಣೆಯಿಂದ ಏನೂ ಆಗುವುದಿಲ್ಲವೆಂಬ ಅರಿವಿದ್ದೂ ನಾವು ಮಾಡುತ್ತಿರುವ ಅನೇಕ ಆಚರಣೆಗಳಲ್ಲಿ ಇದೂ ಒಂದು.

ಗಾಂಧಿಯಂತೂ ನಮಗೆ ಬೇಕೇ ಬೇಕು. ಇಲ್ಲದಿದ್ದರೆ ಸಾಂದರ್ಭಿಕವಾಗಿ ರಾಜಕಾರಣಿಗಳಿಗೆ ಸಾರ್ವಜನಿಕವಾಗಿ ಮಾತಾಡಲು ಆದರ್ಶದ ರೂಪಕವಾಗಿ ಬೇರೆ ಯಾವ ಉಪಾಯವೂ ಇರುವುದಿಲ್ಲ. ಆದರ್ಶದ ಮೇಲ್ಪಂಕ್ತಿಯಾಗಿ ಗಾಂಧಿಯನ್ನು ತಂದು ನಿಲ್ಲಿಸುವ ರಾಜಕಾರಣಿಗಳನ್ನು ಸೇರಿ ನಾವೆಲ್ಲರೂ ಯಾವ ಆಂಗಲ್‌ನಲ್ಲಿ ಗಾಂಧಿಯನ್ನು ಅನುಸರಿಸುತ್ತೇವೆ, ಗಾಂಧಿಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಮಾಜಿಕ ಬದುಕನ್ನು ಬಾಳುತ್ತೇವೆ. ಗಾಂಧಿಯ ರೂಪಕಗಳಲ್ಲಿ ಯಾವು ದಾದರೂ ಒಂದನ್ನು ಅಳವಡಿಸಿಕೊಳ್ಳುವ ಮಾನಸಿಕ ಮತ್ತು ಬೌದ್ದಿಕ ತಾಕತ್ತು ಯಾರಿಗಿದೆ? ಗಾಂಧಿಯ ಬದುಕು, ಬರಹ, ಮೌಲ್ಯಗಳ ಬಗ್ಗೆ ಇದಮಿತ್ಥಂ ಎನ್ನುವ ಧ್ವನಿಯಲ್ಲಿ ಗಾಂಧಿಯ ಬಗ್ಗೆ ತಾನು ಹೇಳಿದ್ದೇ ಆತ್ಯಂತಿಕ ಸತ್ಯ ಎನ್ನುವಂತೆ ಅಧಿಕೃತವಾಗಿ ಬರೆದ, ಹಾಡಿ ಹೊಗಳಿದ, ಬೇಕು ಬೇಕಾದ ಸಂದರ್ಭ-ಸನ್ನಿವೇಶಗಳಲ್ಲಿ ಗಾಂಧಿಯನ್ನು ಯಥೇಚ್ಛವಾಗಿ ಬಳಸಿಕೊಂಡ ಬರಹಗಾರರು, ಲೇಖಕರು, ಸಾಮಾಜಿಕ ಹೋರಾಟಗಾರರು, ಚಿಂತಕರು, ವಿದ್ವಾಂಸರು ಸಾಧಿಸಿ ತೋರಿಸಿದ್ದಾ ದರೂ ಏನನ್ನು? ಬರೆದು ಅಟ್ಟಕ್ಕೇರಿಸಿದರೆ ಹೊರತು ತಮ್ಮ ತಮ್ಮ ಬದುಕಿನಲ್ಲಿ ಗಾಂಧಿಯನ್ನು ಅಳವಡಿಸಿಕೊಂಡವರು ಯಾರಿದ್ದಾರೆ? ಮದ್ಯಪಾನ ವರ್ಜ್ಯ, ಅಪರಿಗ್ರಹದ ಬಗ್ಗೆ ಹೇಳಿದ ಗಾಂಧಿ ಹಾಗೆ ಬದುಕಿ ತೋರಿದರು.

ಹಾಗಂತ ಇವುಗಳಲ್ಲಿ ಯಾವ ರಾಜಕಾರಣಿ ಗಾಂಧಿಯನ್ನು ಅನುಸರಿಸಿದರು? ಗಾಂಧಿಯ ಸರಳ ಜೀವನದ ಬಗ್ಗೆ ಮಾತನಾಡುವ ಯಾವ ರಾಜಕಾರಣಿಯ ಅಥವಾ ಸಾಮಾಜಿಕ ಹೋರಾಟಗಾರನ ಜೀವನ ಸರಳವಾಗಿದೆ, ಹೇಳಿ? ಮನೆಯ ಮುಂದೆ ಲಕ್ಷ, ಕೋಟಿ ಮೌಲ್ಯದ ಬಂಗಲೆಯ ಮುಂದೆ ಅಷ್ಟೇ ಮೌಲ್ಯದ ಕಾರುಗಳು ನಿಂತಿರುತ್ತವೆ. ಯಾವ ರಾಜಕೀಯ ಪಕ್ಷವೂ ಗಾಂಧಿಯನ್ನು ಬಳಸಿಕೊಳ್ಳುವುದನ್ನು ಬಿಡಲಾರದು. ಬಿಟ್ಟರೆ ಅವುಗಳಿಗೆ ಅಸ್ತಿತ್ವವೇ ಇರಲಾರದು. ಯಾಕೆಂದರೆ, ಅವುಗಳು ಬದುಕಿದ್ದೇ ಗಾಂಧಿ ಹೆಸರಿನ ಆದರ್ಶದ ಸೋಗಲಾಡಿತನದಲ್ಲಿ! ಅಷ್ಟಕ್ಕೂ ಯಾವ ರಾಜಕಾರಣಿಗೂ ಗಾಂಧಿಯಲ್ಲಿದ್ದ ನೈತಿಕತೆ ಮತ್ತು ಮೌಲ್ಯಪ್ರಜ್ಞೆ ಹುಟ್ಟುವುದಕ್ಕೆ ಸಾಧ್ಯವೇ ಇಲ್ಲ ಎನ್ನಿಸುವಷ್ಟು ಇಂದಿನ ರಾಜಕಾರಣ ಬೆಳೆದಿದೆ.

ಕೇವಲ ಗಾಂಧಿ ಜಯಂತಿಯ ದಿನ ಮಾತ್ರ ಗಾಂಧಿ ನೆನಪಾಗುವುದು, ನೆನಪು ಮಾಡಿಕೊಳ್ಳುವುದು ನಮಗೆ ಷೋಕಿಯಾಗಿ ಬಿಟ್ಟಿದೆ. ಸ್ಟೇಜಿನಲ್ಲಿ ಮೈಕ್ ಮುಂದೆ ಗಾಂಧಿಮೌಲ್ಯಗಳ ಬಗ್ಗೆ ಮಾತನಾಡುವವರು ಯಾವ ಮೌಲ್ಯವನ್ನೂ ವೈಯಕ್ತಿಕ ಬದುಕಲ್ಲಿ ಪಾಲಿಸುವುದಿಲ್ಲ ಎಂಬುದು ಅನುಭವಜನ್ಯ ಸತ್ಯ. ಬೆವರು ಸುರಿಸಿ ಬಂದ ಫಲದಲ್ಲಿ ತನ್ನ ಅನ್ನವನ್ನು ತಾನು ಉಣ್ಣಬೇಕು ಎನ್ನುವ ಮೌಲ್ಯವೇ ಈಗ ಅಗ್ಗವಾಗಿದೆ. ಸರಕಾರದ್ದೇ ಅಥವಾ ಯಾರದ್ದೇ ತಲೆಹೊಡೆದು ಹಣ ಮಾಡಿ ಬದುಕುವ ಜನರಿಗೆ ಗಾಂಧಿಯೆಂಬ ಹೆಸರು ಮತ್ತು ಫೋಟೋ ಮಾತ್ರ ಸಾಕಾಗುತ್ತದೆಯೇ ಹೊರತು ಗಾಂಧಿಯ ಮೌಲ್ಯಗಳಲ್ಲ. ಜನರಿಗೆ ಹಣ, ಹೆಂಡ ಹಂಚಿ, ಹುಸಿ ಭರವಸೆಗಳನ್ನು ಹೇಳುತ್ತ ವೋಟು ಗಿಟ್ಟಿಸಿಕೊಂಡು ಜನತೆಯ ಹಣವನ್ನು ಲಪಟಾಯಿಸುವವರಿಗೆ ಗಾಂಧಿ ಜಯಂತಿ ಎಂಬುದು ಆಷಾಢಭೂತಿತನವನ್ನು ಪ್ರದರ್ಶನ ಮಾಡುವುದಕ್ಕೆ ಪ್ರತಿ ವರ್ಷ ಸಿಗುವ ಅವಕಾಶವಾಗಿ ಬಿಟ್ಟಿದೆ.

ಶಿಕ್ಷಕರು ಹೇಳಿದ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುವ ವಿದ್ಯಾರ್ಥಿಯನ್ನು ಗಾಂಧಿಯೆಂದು ಅಣಕಿಸುವ ಮಟ್ಟಿಗೆ ಗಾಂಧಿ ಫೇಮಸ್ಸಾದದ್ದು ಹಲವು ವರ್ಷಗಳ
ಹಿಂದೆಯೇ! ಸರಳತೆ, ಪ್ರಾಮಾಣಿಕತೆ, ಸತ್ಯವನ್ನು ತಕ್ಕಮಟ್ಟಿಗಾದರೂ ಅಭಿವ್ಯಕ್ತಿಸುವವರನ್ನು ಗಾಂಽಯೆಂದು ಹಂಗಿಸುವ ಅಣಕು ದುರ್ಬುದ್ಧಿ ನಮ್ಮ ಸಮಾಜದಲ್ಲಿ
ಹಾಸುಹೊಕ್ಕಾಗಿ ವಿಚಿತ್ರ ಕಾಯಿಲೆಯಾಗಿ ಬಿಟ್ಟಿದೆ! ಗಾಂಧಿ ಜಯಂತಿಯಂದು ಗಾಂಧಿಯ ಬಗ್ಗೆ ಮಾತನಾಡಬೇಕೆಂದು ಹಿಂದಿನ ದಿನ ವಿಷಯ ಸಂಗ್ರಹ ಮಾಡುವವರ ಬದುಕಲ್ಲಿ ಗಾಂಧಿ ಬಗ್ಗೆ ಎಂಥ ಸ್ಥಾನ-ಮಾನ ಇದ್ದೀತು? ಶ್ರಮ ಸಂಸ್ಕೃತಿಯನ್ನು ಶಾಲೆಗಳಲ್ಲಿ ಬೋಧಿಸುವ ಶಿಕ್ಷಕರಿಗೇ ಒಂದು ತಾಸು ಶ್ರಮವನ್ನು ದಾನಮಾಡುವ ಆಸಕ್ತಿ, ತಾಳ್ಮೆ ಇರುವುದಿಲ್ಲ. ಆದರ್ಶ ಯಾವತ್ತೂ ಉಪದೇಶ ಮಾಡುವುದಕ್ಕೆ ಮಾತ್ರ ಚೆನ್ನಾಗಿರುತ್ತದೆ.

ಒಬ್ಬ ಹೆಣ್ಣು ಮಧ್ಯರಾತ್ರಿಯಲ್ಲೂ ಒಬ್ಬಂಟಿಯಾಗಿ ಯಾವ ಭಯವೂ ಇಲ್ಲದೆ ಓಡಾಡಬೇಕು ಎನ್ನುವ ಗಾಂಽ ರಾಮರಾಜ್ಯಕ್ಕಾಗಿ ಕನವರಿಸಿದ್ದರು. ಮಧ್ಯರಾತ್ರಿಯಲ್ಲಿ ಹೆಣ್ಣಿಗೆ ಒಬ್ಬಂಟಿಯಾಗಿ ಓಡಾಡುವ ಅಗತ್ಯವೇನಿರುತ್ತದೆ? ರಾಮರಾಜ್ಯದಲ್ಲಿ ಕುಡುಕರಿಲ್ಲ ವಾಗಿತ್ತೇ ಎಂದು ಪ್ರಶ್ನಿಸುವವರಿಗೆ ಯಾವ ಮೌಲ್ಯಗಳನ್ನು ಹೇಳಿ ಏನು ಪ್ರಯೋಜನ? ಗಾಂಧಿಯ ಮೌಲ್ಯಗಳನ್ನು ಗಾಂಧಿ ಮಾತ್ರ ಪಾಲಿಸುವುದು ಸಾಧ್ಯವೇನೋ! ಅಷ್ಟಕ್ಕೂ ಮೌಲ್ಯಗಳನ್ನು ಜೀವಂತವಾಗಿ ಉಳಿಸಿಕೊಳ್ಳುವ ಯಾವ ಬದುಕಿಗಾಗಲೀ ಸದುದ್ದೇಶವಾಗಲೀ ಅಥವಾ ಸಾಧನೆಗಾಗಲೀ ಗಾಂಧಿ ಬೇಡ ವಾಗಿ ಗಾಂಧಿಜಯಂತಿ ಮಾತ್ರ ಬೇಕಾಗಿದೆ. ನಮ್ಮೊಳಗಿನ ಎಲ್ಲ ಹೊಲಸುಗಳನ್ನು ನಾಟಕಗಳನ್ನು ಮುಚ್ಚಿ ಆದರ್ಶದ ಸೋಗು ಹಾಕಲು ವರ್ಷಕ್ಕೊಮ್ಮೆಯಾದರೂ ಗಾಂಧಿ ಜಯಂತಿ ಬೇಕಾಗಿದೆ. ನಮ್ಮ ಕೊಳಕುಗಳನ್ನು ಗಾಂಧಿ ಹೆಸರಿನಲ್ಲಿ ಮುಚ್ಚುವ ಹುನ್ನಾರ ಇದರಲ್ಲಿದೆ!

ವರ್ಷಕ್ಕೊಂದು ದಿನ ಅಂತ ನಿರ್ದಿಷ್ಟಪಡಿಸಿ ನಾವು ಆಚರಿಸುವ ಡೇಗಳು ವರ್ಷ ಕಳೆದಂತೆ ಮೌಲ್ಯಹೀನವಾಗುತ್ತಿವೆ. ಗಾಂಽ ಪೋಟೋಕ್ಕಾಗಿ ಗಾಂಧಿ ಜಯಂತಿಯ ಹಿಂದಿನ ದಿನ ತಡಕಾಡುವ ನಾವು ಗಾಂಽ ಪೋಟೋಕ್ಕೆ ಸೀಮಿತವಾಗಿ ಗಾಂಧಿ ಜಯಂತಿಯನ್ನು ಮುಗಿಸುತ್ತೇವೆ. ಉಳಿದ 364 ದಿನಗಳಲ್ಲಿ ಗಾಂಧಿಯನ್ನು ಪೋಟೋ ರೂಪದಲ್ಲಿ ಅಣಕಿಸುತ್ತೇವೆ ಸಂದರ್ಭ ಸಿಕ್ಕಾಗಲೆಲ್ಲ!

ಇನ್ನೊಂದು ಮಜಾ ಏನೆಂದರೆ, ಗಾಂಧಿಯ ಹೆಸರಿನಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಮಾಡಿ ಅದಕ್ಕೊಂದು ಬಿಲ್ ಮಾಡಿ ದುಡ್ಡು ತಿನ್ನುವವರೂ ಇದ್ದಾರೆ. ಊರಿನ
ಸ್ವಚ್ಛತೆಯ ನೆಪದಲ್ಲಿ ಮನೆಯ ಹಿತ್ತಲನ್ನೂ ಸ್ವಚ್ಛಮಾಡಿಕೊಂಡ ಪುಣ್ಯಾತ್ಮರಿzರೆ. ಗಾಂಽ ಜಯಂತಿ ಆಚರಣೆ ಮಾಡುವುದರ ಮೂಲಕ ದೇಶವನ್ನೇ ಸ್ವಚ್ಛತೆ ಯಡಿಯಲ್ಲಿ ಒಂದು ಜಾಗೃತಿಯನ್ನು ಹುಟ್ಟಿಸು ವುದರೊಂದಿಗೆ ಪ್ರತಿಪ್ರಜೆಯೂ ಸ್ವಚ್ಛತೆಯನ್ನು ಸ್ವಯಂ ಅಭಿರುಚಿಯಿಂದ ಮಾಡಿಕೊಳ್ಳುತ್ತಾ ಗಾಂಧಿಯನ್ನು ಸ್ಮರಿಸುವ ಒಂದು ಮಹತ್ತರ ವಾದ ಕಾರ್ಯಕ್ಕೆ ದೇಶವ್ಯಾಪಿ ಹೊಸ ಸಂಚಲನೆಯನ್ನು ತಂದು, ಪರಿಸರ ಪ್ರಜ್ಞೆಯನ್ನು ವ್ಯಕ್ತಿ ಪ್ರಜ್ಞೆಯನ್ನಾಗಿಸುವಲ್ಲಿ ಈಗಿನ ಭಾರತ ಸರಕಾರ ಅದರಲ್ಲೂ ಮೋದಿಯವರ ಆಸಕ್ತಿ, ಶ್ರಮ, ಕಾರ್ಯಕ್ಷಮತೆ, ಕಾರ್ಯಪಟುತ್ತ, ಕಾರ್ಯದಕ್ಷತೆಯ ಪಾಲು ಬಹುದೊಡ್ಡದಾಗಿದೆ ಎಂದರೆ ಮೈಯಲ್ಲಿ ಅಗ್ನಿ ಸಂಚಾರವಾಗುತ್ತದೆ.

ಕಂಡಕಂಡ ಸ್ಥಳಗಳಲ್ಲಿ ಗಾಂಧಿಯ ಪಟ ವನ್ನಿಟ್ಟು ಷೋಕಿಗಾಗಿ ಗಾಂಧಿ ಹೆಸರಿನಲ್ಲಿ ಜಯಂತಿಯನ್ನು ಮಾಡುವುದರ ಬದಲು, ಗಾಂಧಿ ಜಯಂತಿ ಅಂದಾಕ್ಷಣ ಕಳೆದ ಐದೂವರೆ ವರ್ಷಗಳಿಂದ ಸ್ವಚ್ಛಭಾರತ ಅಭಿಯಾನ ನೆನಪಾಗುತ್ತಿದೆ. ಇದು ಭಾರತದಂಥ ರಾಷ್ಟ್ರಕ್ಕೆ ಮಹತ್ತರವಾದ ಪರಿವರ್ತನೆಯೂ ಸಾಧನೆಯೂ ಶ್ರೇಯಸ್ಸೂ ಆಗಿ ಕಾಣುತ್ತಿದೆ. ಗಾಂಽಯ ಜೀವನಮೌಲ್ಯಗಳನ್ನು ನಿರೂಪಿಸುವುದಕ್ಕಿಂತ ಅವರ ರೂಪಕಗಳನ್ನು ಇಂದಿನ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿ ಕೊಂಡು ಅನುಸರಿಸುವ ಬಗೆಯನ್ನು ನಾವು ಕಲಿಯುವುದಕ್ಕೆ ಇದೊಂದು ಮಾರ್ಗ ವಾಗಿದೆ.

ಯಾಕೆಂದರೆ ಯಾರಿಂದಲೂ ಯಾವ ಮೌಲ್ಯಗಳನ್ನೂ ಕೇಳದ, ಒಪ್ಪದ, ಅನುಸರಿಸಲಾಗದ ದಿನಗಳಲ್ಲಿ ನಾವಿದ್ದೇವೆ. ಇದು ಸರಿಹೊತ್ತಿನ ಸಮಾಜದ ದುರಂತ.
ಗಾಂಧಿಯಂಥ ವ್ಯಕ್ತಿಗಳ ರೂಪಕಗಳನ್ನು ಮಾದರಿಯಾಗಿ ಟ್ಟುಕೊಂಡು ಪ್ರಸ್ತುತ ಭಾರತಕ್ಕೆ ಬೇಕಾದ ನೈರ್ಮಲ್ಯ ಮತ್ತು ಆರೋಗ್ಯಯುಕ್ತ ಭಾರತವನ್ನು ಕಟ್ಟಲು ಸಾಧ್ಯವಿದೆಯೆಂದು ಗಾಂಽ ಅಂದಿದ್ದನ್ನು ಮೋದಿ ನೇತೃತ್ವದ ಭಾರತ ಸರ್ಕಾರ ತಕ್ಕಮಟ್ಟಿಗಾದರೂ ಸಾಕಾರಗೊಳಿಸುತ್ತಿದೆ. ಆದ್ದರಿಂದ ಇದರ ಸಂಪೂರ್ಣ ಕ್ರೆಡಿಟ್ ಗಾಂಽಗೇ ಸಲ್ಲಬೇಕು.

ಗಾಂಧಿ, ಸರ್ದಾರ್ ಪಟೇಲ್, ಮೊರಾರ್ಜಿ ದೇಸಾಯಿ, ನರೇಂದ್ರ ಮೋದಿ- ನಾಲ್ವರೂ ಗುಜರಾತಿನ ನೆಲದವರು. ದೇಶ ಕಂಡ ಅಪ್ಪಟ ಈ ರಾಷ್ಟ್ರಭಕ್ತರು ಬಯಸಿ ಬದುಕಿದ್ದು ಸರಳಜೀವನವನ್ನು. ಗಾಂಧಿ ಪ್ರತಿಪಾದಿಸುತ್ತಿದ್ದ ಪರಿಕಲ್ಪನೆಗಳಲ್ಲಿ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶ್ರದ್ಧಾ, ಸರ್ವತ್ರ ಭಯ ವರ್ಜನ, ಶರೀರ ಕ್ರಮ, ಅಸ್ವಾದ, ಸರ್ವಧರ್ಮಭಾವ, ಸ್ವದೇಶಿ, ಸ್ಪರ್ಶಭಾವನಾ, ಕಾಮವನ್ನು ಗೆಲ್ಲುವುದು, ಅಪರಿಗ್ರಹ, ದೀನದಲಿತೋದ್ಧಾರ, ಸಮಾಜೋದ್ಧಾರ, ನಿಸ್ಪೃಹತೆ, ಶ್ರಮಗೌರವ, ತುಳಿತಕ್ಕೊಳಕ್ಕಾಳಗಾದವರಲ್ಲಿ ಕಾರ್ಪಣ್ಯ- ಇವೇ ಮುಂತಾದವು ಪ್ರಮುಖವಾದುವು.

ಸ್ವತಃ ಕೈಯಲ್ಲಿ ಪೊರಕೆ, ಬಕೆಟ್ ಹಿಡಿದು ಗಾಂಧಿ ಸ್ವಚ್ಛತೆಗೆ ಮುಂದಾಗುತ್ತಿದ್ದರು. ದಾರಿಬದಿಯಲ್ಲಿ ಹೊಲಸನ್ನು ತೆಗೆದುಹಾಕುತ್ತಿದ್ದ ಗಾಂಧಿಗೆ ಯಾವುದೂ
ಅಸಹ್ಯ ವಾಗದೆ ಸ್ವಚ್ಛತೆಯೆಂಬುದು ಬದುಕಿನಲ್ಲಿ ನೈಜವಾಗೇ ಇತ್ತು. ನಮ್ಮ ನಮ್ಮ ದೇಹವನ್ನು ಆರೋಗ್ಯದಿಂದ ಇಟ್ಟುಕೊಳ್ಳಬೇಕು ಅಂದರೆ ನಿತ್ಯವೂ ಅದಕ್ಕೆ ಶುಚಿತ್ವ ಬೇಕೇ ಬೇಕು. ಅದೇ ರೀತಿ ಪರಿಸರದ ಶುಚಿತ್ತ್ವ ವೈಯಕ್ತಿಕವಾದ ನೆಲೆಯಲ್ಲೂ ಸಮೂಹದ ನೆಲೆಯಲ್ಲೂ ಆರೋಗ್ಯಕ್ಕೆ ಅತೀ ಅಗತ್ಯ. ಇದು ತೀರಾ ವೈಯಕ್ತಿಕವಾದ ಪ್ರeಯೆಂದು ಗಾಂಧಿಗೆ ಅರಿವಿದ್ದರೂ ಸಾಮೂಹಿಕವಾದ ಸ್ವಚ್ಛತೆಗೆ ಅವರು ಮಹತ್ತ್ವ ವನ್ನು ಕೊಟ್ಟಿದ್ದರು. ತಾನಿರುವಷ್ಟು ಕಾಲ ಅದನ್ನು
ಪಾಲಿಸಿದರು. ತನ್ನ ಬಟ್ಟೆಯನ್ನೂ ತಾನೇ ಶುಚಿಮಾಡಿಕೊಳ್ಳುತ್ತಿದ್ದ ಗಾಂಽಗೆ ಸ್ವಚ್ಛತೆಯೆಂದರೆ ಕೇವಲ ಸಾಂಕೇತಿಕವಾಗಿಯೋ ಪ್ರಾತಿನಿಧಿಕವಾಗಿಯೋ ಇರಲಿಲ್ಲ.
ಅಂತಸ್ಥವಾಗಿತ್ತು.

ಮಹಾಪುರುಷರ ಜಯಂತಿಯಂದು ಅವರ ಚಿತ್ರಪಟಗಳನ್ನು ಮಾತ್ರ ಪ್ರದರ್ಶಿಸಿಕೊಂಡು ಆಚರಣೆಯನ್ನು ಕೇವಲ ನಾಮ್‌ಕೆವಾಸ್ತೆಗೆ ಮಾತ್ರ ಸೀಮಿತ ವಾಗಿಸಿಕೊಂಡು ನಾವು ಪುನೀತರಾದೆವು ಎಂಬ ಭಾವನೆಯನ್ನು ಹೊಂದುವುದರಲ್ಲಿ ಯಾವ ಪುರುಷಾರ್ಥವನ್ನೂ ಸಾಧಿಸಿದಂತಾಗುವುದಿಲ್ಲ. ಗಾಂಧಿ ಸೇರಿದಂತೆ ಮುಂತಾದ ಮಹನೀಯರು ಕೇವಲ ಆಚರಣೆಯ ಉತ್ಸವ ಮೂರ್ತಿಯಾಗುವುದರಲ್ಲಿ ಯಾವ ಸಾರ್ಥಕ್ಯವೂ ಇಲ್ಲ. ಇವರುಗಳ ಜೀವನಮೌಲ್ಯವನ್ನು ಸ್ವಲ್ಪಮಟ್ಟಿ ಗಾದರೂ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇವುಗಳನ್ನು ಬೋಽಸಿ ಅನುಷ್ಠಾನಕ್ಕೆ ತಂದರೆ ಇವರುಗಳ ಜಯಂತಿಯ ಆಚರಣೆಗೆ ಒಂದು ಅರ್ಥ ಸುರಿಸುತ್ತದೆ. ಕೇವಲ ಇದೊಂದು ಮಾತ್ರ ಸಾಧ್ಯವಾಗದೆ ಇವರುಗಳು ನಮ್ಮ ಅರಿವಿಗೆ ದಕ್ಕಬೇಕಾಗಿದೆ.

ಸ್ವಚ್ಛತೆಯ ಪ್ರಜ್ಞೆ ಮೈ-ಮನಸಿಗಾವರಿಸಿಕೊಳ್ಳಬೇಕಿದೆ. ಇದಕ್ಕಾಗಿ ಗಾಂಧಿ ಚಿತ್ರಪಟ ಬೇಕು. ಪ್ರಾತಿನಿಽಕವಾಗಿ ಗಾಂಧಿಯ ಚಿತ್ರಪಟವನ್ನು ಹಿಡಿದೇ ನಾವು
ಅವರ ಹೆಸರಲ್ಲಿ ಇಂಥವುಗಳನ್ನು ಆಚರಿಸುತ್ತೇವೆ. ಆದರೆ ಈ ಆಚರಣೆ ಕೇವಲ ಗಾಂಽಯ ಚಿತ್ರಪಟ ಹಿಡಿದ ಆ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಬದಲಿಗೆ ಗಾಂಽಯು ತನ್ನ ಬದುಕಿನಲ್ಲಿ ಅಳವಡಿಸಿಕೊಂಡ ಸ್ವಚ್ಛತೆಯ ಬಗೆಗಿನ ವಿಶಾಲ ಪ್ರeಯಿಂದ ಕಂಡ ಸ್ವಸ್ಥ ರಾಷ್ಟ್ರ ನಿರ್ಮಾಣದ ಕೈಂಕರ್ಯವೂ ಈಡೇರಬೇಕಾಗಿದೆ.
ಈ ದೇಶದಲ್ಲಿ ಹುಟ್ಟಿ ಸಮಷ್ಟಿಪ್ರಜ್ಞೆಯಲ್ಲಿ ಸಾತ್ವಿಕ ಮಾದರಿ ಹಾಗೂ ಮೌಲ್ಯಯುಕ್ತ ಜೀವನವನ್ನು ಬಾಳಿಬದುಕಿ ಸಮಾಜೋದ್ಧಾರಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಸಾಧು-ಸಂತರ, ಮಹಾಪುರುಷರ ಚಿತ್ರಪಟವನ್ನು ನಮಗೆ ಬೇಕಾದಾಗ ಮಾತ್ರ ಬಳಸಿಕೊಳ್ಳುವ ಕೆಟ್ಟ ಅಭ್ಯಾಸ ನಿಲ್ಲಬೇಕಿದೆ.

ಅವರ ಭಾವಚಿತ್ರವನ್ನು ಹಿಡಿದುಕೊಂಡು ತಮ್ಮ ಸ್ವಾರ್ಥ ಸಾಧನೆ ಮಾಡಿಕೊಳ್ಳುವವರು ಅಂಥ ಪುಣ್ಯಾತ್ಮರ ಜಯಂತಿಯ ದಿನದಲ್ಲಿ ಅವರ ಜೀವನಮೌಲ್ಯಗಳನ್ನು
ಸಾಕಾರಗೊಳಿಸಲು ಆದಿನ ಮಾತ್ರ ಪ್ರಯತ್ನಿಸಿ, ಆಮೇಲೆ ಮರೆತುಬಿಟ್ಟರೆ ಯಾವ ಸಾರ್ಥಕತೆ ಬರಲು ಸಾಧ್ಯ? ಈ ಹಿನ್ನೆಲೆಯಲ್ಲಿ ನಮಗೆ ಗಾಂಧಿ ಮುಖ್ಯವಾಗ ಬೇಕೇ ಹೊರತು ಗಾಂಧಿಯ ಚಿತ್ರಪಟವಲ್ಲ. ಮನಸಿನಲ್ಲಿ ಗಾಂಧಿಯ ರೂಪಕಗಳು ನೆಲೆಗೊಳ್ಳಬೇಕಿದೆ. ಗಾಂಧಿಯಂಥ ವ್ಯಕ್ತಿಗಳ ಸರಳತೆಯನ್ನು ಭಾರತ ಮಾತ್ರ ವಲ್ಲ ವಿಶ್ವದ ಅನೇಕ ದೇಶಗಳು ಅವಾಹಿಸಿಕೊಳ್ಳಬೇಕಿದೆ.