Sunday, 15th December 2024

ಮಾಲ್ಡೀವ್ಸ್ನಲ್ಲಿ ಜರುಗಿದ 25ನೇ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಉತ್ಸವ

ಮಾಲ್ಡೀವ್ಸ್: ಇಂಟರ್ನೇಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಜಂಟಿಯಾಗಿ ಮಾಲ್ಡೀವ್ಸ್ ರಾಷ್ಟ್ರದ ದ್ವೀಪ ಪ್ರದೇಶ ಮಫುಸಿ ಇಲ್ಲಿನ ಕಾಣಿ ಗ್ರ್ಯಾಂಡ್ ಸೆಮಿನರ್ ಸಭಾಗೃಹದಲ್ಲಿ 25ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವನ್ನು ಶನಿವಾರ ಸಂಜೆ ಆಯೋಜಿಸಿದ್ದು ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ನೆರವೇರಿದ ಸಮ್ಮೇಳನವನ್ನು ಮಾಜಿ ಎಂಎಲ್ಸಿ ಡಿ.ಎಸ್. ವೀರಯ್ಯ ಲಾಂಛನ ಬಿಡುಗಡೆಗೊಳಿಸಿ ಉದ್ಘಾಟಿಸಿದರು.

ಕಾಣಿ ಗ್ರ್ಯಾಂಡ್ ಸಂಸ್ಥೆಯ ನಿರ್ದೇಶಕ ಎಸ್. ತನೇರ್, ಡಾ| ಸತೀಶ್ ಕುಮಾರ್ ಎಸ್. ಹೊಸಮನಿ, ಡಿ.ಎಸ್. ವಿಶ್ವನಾಥ್ ಮೈಸೂರು ಶಂಕ್ರೇ ಗೌಡ ಮೈಸೂರು, ದಿಲೀಪ್ ಎಸ್. ಗಡ್ಯಾಲ್, ನಾಟ್ಯಾಂಜಲಿ ಕಲಾಕೇಂದ್ರದ ನಿರ್ದೇಶಕಿ ಮತ್ತು ಗುರು ಡಾ| ಸಹನಾ ಭಟ್ ಅತಿಥಿ ಅಭ್ಯಾಗತರುಗಳಾಗಿದ್ದರು.

ನಾಗರಾಜ್ ಎಸ್. ಉಪಾಧ್ಯಾಯ, ಮಹಾಂತೇಶ್ ಚಂದ್ರಕಾಂತ್ ಮಹಾಜನ್, ಡಾ| ಪ್ರಭು ಚವ್ಹಾಣ್ ಮೊಹಂತ್ರಿ, ಡಾ| ಅಶೋಕ್ ನರೋಡೆ, ಲೇಖಶ್ರೀ ಪಟ್ನಾಯಿಕ್, ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಡಾ. ಸತೀಶ್ ಕುಮಾರ್ ಹೊಸಮನಿಯವರ ಕಾವ್ಯಧಾರೆ ಹಾಗು ಪುಸ್ತಕ ಪ್ರೀತಿ ಮತ್ತು ಡಾ‌ ಅಶೋಕ್ ನರೋಡೆಯವರ ಮಹಾಕಾವ್ಯಗಳಲ್ಲಿ ಬುದ್ಧ ಕೃತಿಗಳನ್ನು ಅತಿಥಿವರ್ಯರು ಬಿಡುಗಡೆಗೊಳಿಸಿದರು.

ಡಾ| ಎಂ.ಪಿ. ವರ್ಷ ಮೈಸೂರು ಅಧ್ಯಕ್ಷತೆಯಲ್ಲಿ ಜಾಗತಿಕ ಸಾಮರಸ್ಯ ವಿಷಯದಲ್ಲಿ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ ನಡೆಸಲ್ಪಟ್ಟಿತು. ಕವಿಗೋಷ್ಠಿಯಲ್ಲಿ ಭಗವಾನ್ ಬಿಂಡಿಗನವಿಲೆ, ಡಾ| ಅರ್ಚನಾ ಅಥಣಿ, ಪ್ರಶಾಂತ್ ಮೈಸೂರು, ಮೊಹ್ಮದ್ ಆರೀಫ್ ಕಲಕಟ್ಟಾ ಪ್ರಥ್ವಿರಾಜ್ ಭಟ್ ಪಾಲ್ಗೊಂಡರು.

ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮಹಾದೇವ ಸತ್ತಿಗೆರೆ ಹಾಸ್ಯ ಪ್ರಹಸನ, ಗುರು ಡಾ| ಸಹನಾ ಭಟ್ ನಿರ್ದೇಶನದಲ್ಲಿ ನಾಟ್ಯಾಂಜಲಿ ಕಲಾ ಕೇಂದ್ರದ ಕಲಾವಿದೆಯರು ಶಾಸ್ತ್ರೀಯ ನೃತ್ಯಾವಳಿ ಉತ್ತಮವಾಗಿ ಮೂಡಿ ಬಂತು. ಗೋ.ನಾ. ಸ್ವಾಮಿ, ಶಿವರಾಜ್ ಪಿ.ಬಿ. ಪುಷ್ಪ ಆರಾಧ್ಯ ಇವರು ಸಂಗೀತ ಕಚೇರಿ ಪ್ರಸ್ತುತಪಡಿಸಿದರು.

ಇಚಿಟರ್ನೇಶನಲ್ ಕಲ್ಚರಲ್ ಫೆಸ್ಟ್ ಕೌನ್ಸಿಲ್ನ್ ಕಾರ್ಯಾಧ್ಯಕ್ಷ ಇಂ| ಕೆ.ಪಿ. ಮಂಜುನಾಥ ಸಾಗರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಕು| ಪ್ರತಿಭಾ ಗೌಡ ಕಾರ್ಯಕ್ರಮ ನಿರೂಪಿಸಿದರು. ಗ್ಲೋಬಲ್ ಪೀಸ್ ಫೌಂಡೇಶನ್ನ ಕಾರ್ಯದರ್ಶಿ ಶಿವ ಗುಂಟಕ ಹೈದರಾಬಾದ್ ವಂದಿಸಿದರು.