ಸಹಾಯಕ ಸಬ್ ಇನ್ಸ್ಪೆಕ್ಟರ್ ಯಿಂದ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ
ಬೆಂಗಳೂರು: ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಅಧ್ಯಕ್ಷತೆ ವಹಿಸಿದ ಇಂದಿನ ಸಂಪುಟ ಸಭೆಯಲ್ಲಿ, ಗೃಹ ಇಲಾಖೆಯಿಂದ ಪ್ರಸ್ತಾಪಿತ ವಾದ, A.S.I ಸಿಬ್ಬಂದಿಗಳಿಗೆ, ಮುಂದಿನ ಶ್ರೇಣಿಗೆ ಬಡ್ತಿ ಪಡೆಯಲು ಪ್ರಸ್ತುತ ಇದ್ದ 5 ವರ್ಷಗಳ ಕನಿಷ್ಠ ಸೇವಾ ಅವಧಿಯನ್ನು ನಾಲ್ಕು ವರ್ಷಗಳಿಗೆ ಇಳಿಸಲು ಒಪ್ಪಿಗೆ ನೀಡಿದೆ.
ಈ ಸಂಬಂಧ ಗೃಹ ಇಲಾಖೆಯಿಂದ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು. A.S.I ಶ್ರೇಣಿಯ ಅಭ್ಯರ್ಥಿಗಳಿಗೆ ಮುಂಬಡ್ತಿ ಪಡೆಯಲು, ಈ ನಿರ್ಧಾರ ಸಹಾಯಕವಾಗಲಿದೆ.
ಗೃಹ ಇಲಾಖೆಯ ಇನ್ನೊಂದು ಪ್ರಸ್ತಾವನೆ ಯಾದ, ಪೊಲೀಸ್ ಸಿಬ್ಬಂದಿಗಳಿಗೆ, ರೂಪಾಯಿ 14.5 ಕೋಟಿ ವೆಚ್ಚದಲ್ಲಿ, ಇಲಾಖೆಯ ನಿಸ್ತಂತು ಸಂಪರ್ಕ ಜಾಲಕ್ಕೆ ಆಧುನಿಕ ಸ್ಪರ್ಶ ನೀಡಿ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿನ ಸಚಿವ ಸಂಪುಟದ ಸಭೆ ಒಪ್ಪಿಗೆ ನೀಡಿದೆ.