Friday, 20th September 2024

ನಾಳೆ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಎಂತೆಂಥವರಿದ್ದಾರೆ!

ಕೇವಲ ಮೂರು ಗಂಟೆಯ ಪರೀಕ್ಷೆೆಯ ಅಂಕಗಳು ವಿದ್ಯಾಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಪಾಲಕರಾದ ನೀವು ಮರೆತು ಮಗುವಿನ ಕ್ರಿಿಯಾಶೀಲತೆಯನ್ನು ತುಳಿದು ಹಾಕಬೇಡಿ.

ಒಮ್ಮೆೆ ಸಿಂಗಪುರದ ಶಾಲೆಯ ಪ್ರಾಾಂಶುಪಾಲರು ತಮ್ಮೆೆಲ್ಲ ವಿದ್ಯಾಾರ್ಥಿಗಳ ಪೋಷಕರಿಗೆ ಒಂದು ಪತ್ರ ಬರೆದರು. ಅದರಲ್ಲೇನು ವಿಶೇಷ ಎಂದು ಕೇಳುತ್ತೀರಾ? ಆ ಪತ್ರದಲ್ಲಿ ಹೀಗೆ ಬರೆಯಲಾಗಿತ್ತು. ಪ್ರೀತಿಯ ಪೋಷಕರೆ, ನಿಮ್ಮ ಮಗ/ಮಗಳ ಪರೀಕ್ಷೆೆಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿವೆ. ಮಕ್ಕಳಿಗಿಂತ ಹೆಚ್ಚು ಆತಂಕ, ಒತ್ತಡದಲ್ಲಿ ನೀವಿದ್ದೀರೆಂದು ನನಗೆ ಗೊತ್ತು.
ಆದರೆ ಮಕ್ಕಳ ಮೇಲೆ ಒತ್ತಡ ಹೇರುವ ಮುನ್ನ ನಾನು ಬರೆದಿರುವುದನ್ನು ಒಮ್ಮೆೆ ಓದಿ. ನಾಳೆ ಪರೀಕ್ಷೆೆ ಬರೆಯುವ ಮಕ್ಕಳಲ್ಲಿ ಎಂತೆಂಥವರಿದ್ದಾಾರೆ, ಅವರಲ್ಲಿ ನಿಮ್ಮ ಮಗುವಿನ ಸಾಮರ್ಥ್ಯವೇನು ಎಂದು ಯೋಚಿಸಿ.

ಅಲ್ಲೊೊಬ್ಬ ಚಿತ್ರಕಾರನಿದ್ದಾಾನೆ. ಅವನಿಗೆ ಗಣಿತದ ಸೂತ್ರಗಳು, ಲೆಕ್ಕಗಳು ಉಪಯೋಗಕ್ಕೆೆ ಬರುವುದಿಲ್ಲ. ಅಲ್ಲೊೊಬ್ಬ ಉದ್ಯಮಿಯಿದ್ದಾಾನೆ. ಅವನಿಗೆ ಇತಿಹಾಸದಲ್ಲಿ, ಇಂಗ್ಲಿಿಷ್ ಸಾಹಿತ್ಯದಲ್ಲಿ ಎಳ್ಳಷ್ಟೂ ಆಸಕ್ತಿಿಯಿಲ್ಲ. ಅಲ್ಲೊೊಬ್ಬ ಸಂಗೀತ ಮಾಂತ್ರಿಿಕನಿದ್ದಾಾನೆ. ಅವನಿಗೆ ಕೆಮಿಸ್ಟ್ರಿಿಯ ಅಂಕಗಳು ಬೇಕಿಲ್ಲ. ಅಲ್ಲೊೊಬ್ಬ ಆಟಗಾರನಿದ್ದಾಾನೆ. ಅವನಿಗೆ ಫಿಸಿಕಲ್ ಫಿಟ್‌ನೆಸ್ ಬೇಕೇ ವಿನಾ ನಿಮ್ಮ ಫಿಸಿಕ್‌ಸ್‌ ಸಿದ್ಧಾಾಂತಗಳಲ್ಲ. ನಿಮ್ಮ ಮಗು ಎಲ್ಲ ವಿಷಯಗಳಲ್ಲೂ ಹೆಚ್ಚಿಿನ ಅಂಕ ಗಳಿಸಿದರೆ ಬಹಳ ಒಳ್ಳೆೆಯದು. ಆದರೆ ಒಂದು ವೇಳೆ ಅವನು/ಅವಳು ಪರೀಕ್ಷೆೆಯಲ್ಲಿ ಫೇಲ್ ಆದರೆ, ನೀವು ನಿರೀಕ್ಷಿಿಸಿದ ಅಂಕಗಳನ್ನು ಗಳಿಸದಿದ್ದರೆ ದಯವಿಟ್ಟು ಅವರ ಆತ್ಮವಿಶ್ವಾಾಸವನ್ನು ಕುಗ್ಗಿಿಸಬೇಡಿ. ಮಗುವಿಗೆ ತನ್ನ ಸಾಮರ್ಥ್ಯದ ಮೇಲೆ ತನಗೇ ನಂಬಿಕೆ ಹೋಗುವಂತೆ ಮಾಡಬೇಡಿ. ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರೀತಿಯಿಂದ ‘ಪರವಾಗಿಲ್ಲ ಬಿಡೋ. ಇದು ಕೇವಲ ಪರೀಕ್ಷೆೆಯಷ್ಟೇ. ನೀನು ಸೋತಿದ್ದು ಪರೀಕ್ಷೆೆಯಲ್ಲೇ ಹೊರತು ಬದುಕಿನಲ್ಲಲ್ಲ. ನಿನ್ನ ಮುಂದೆ ವಿಸ್ತಾಾರವಾದ ಜೀವನವಿದೆ’ ಎಂದು ಹೇಳಿ. ಅವರಲ್ಲಿರುವ ಕಲಾವಿದನನ್ನು, ಚಿತ್ರಕಾರನನ್ನು, ಗಾಯಕನನ್ನು, ಆಟಗಾರನನ್ನು ಗುರುತಿಸಿ, ಬೆಳೆಸಿ. ಸಂಗೀತದ ಕೀ ಬೋರ್ಡ್ ನುಡಿಸಬೇಕಾದವನನ್ನು ಕಂಪ್ಯೂೂಟರ್ ಕೀ ಬೋರ್ಡ್ ಮುಂದೆ ಕೂರುವಂತೆ ಮಾಡಬೇಡಿ. ಮೈದಾನದಲ್ಲಿರಬೇಕಾದವನ್ನು ಎಂಎನ್‌ಸಿ ಕಂಪನಿಯಲ್ಲಿ ಕೊಳೆಸಬೇಡಿ. ಕೇವಲ ಮೂರು ಗಂಟೆಯ ಪರೀಕ್ಷೆೆಯ ಅಂಕಗಳು ವಿದ್ಯಾಾರ್ಥಿಯ ಜೀವನವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಪಾಲಕರಾದ ನೀವು ಮರೆತು ಮಗುವಿನ ಕ್ರಿಿಯಾಶೀಲತೆಯನ್ನು ತುಳಿದು ಹಾಕಬೇಡಿ.

ಇನ್ನೊೊಂದು ಮಾತು, ಜಗತ್ತಿಿನಲ್ಲಿ ಕೇವಲ ವೈದ್ಯರು, ಇಂಜಿನಿಯರ್‌ಗಳು ಮಾತ್ರ ಸಂತೋಷದಿಂದ ಬದುಕುತ್ತಿಿರುವವರು ಎಂಬ ಭ್ರಮೆಯಿಂದ ದಯವಿಟ್ಟು ಹೊರ ಬನ್ನಿಿ.

ಅವರಿಬ್ಬರು ತುಂಟ ಹುಡುಗರು. ಪ್ರಾಾಣ ಸ್ನೇಹಿತರು ಬೇರೆ. ಹಾಗಿದ್ದ ಮೇಲೆ ತುಂಟತನಕ್ಕೆೆ ಕೊನೆಯಿದೆಯೇ? ಅವರಿಬ್ಬರಿಗೂ ಶಾಲೆಗೆ ಹೋಗುವುದೆಂದರೆ ಅಲರ್ಜಿ. ಒಂದು ದಿನ ಇಬ್ಬರೂ ಸೇರಿ ಒಂದು ಉಪಾಯ ಮಾಡಿದರು. ಪಕ್ಕದ ಮನೆಯ ಕೊಟ್ಟಿಿಗೆಯಿಂದ ಮೂರು ಕುರಿಮರಿಗಳನ್ನು ಕದ್ದು ತಂದು ಅವುಗಳ ಬೆನ್ನ ಮೇಲೆ 1, 2, 4 ಎಂದು ಬರೆದರು. ನಂತರ ಕುರಿಗಳನ್ನು ರಾತ್ರಿಿ ನಿಧಾನವಾಗಿ ತಂದು ಶಾಲೆಯ ಕಟ್ಟಡದೊಳಗೆ ಬಿಟ್ಟು ಹೋದರು. ಬೆಳಗ್ಗೆೆ ಶಾಲೆಗೆ ಬಂದ ಶಿಕ್ಷಕಕ ಮೂಗಿಗೆ ಏನೋ ವಾಸನೆ ಬಡಿಯಿತು. ಕಾರಿಡಾರ್‌ನ ಅಲ್ಲಲ್ಲಿ, ಮೆಟ್ಟಿಿಲುಗಳ ಮೇಲೆ ಕುರಿಯ ಹಿಕ್ಕೆೆ ಬಿದ್ದಿತ್ತು. ಮೂತ್ರ ವಾಸನೆ ಮೂಗಿಗೆ ರಾಚುತ್ತಿಿತ್ತು. ತಕ್ಷಣ ಕುರಿಗಳಿಗಾಗಿ ಹುಡುಕಾಟ ನಡೆಯಿತು. ಸ್ವಲ್ಪ ಹೊತ್ತಿಿನಲ್ಲೇ ಮೂರು ಕುರಿಗಳು ಸಿಕ್ಕಿಿ ಬಿದ್ದವು.

ಶಾಲೆಯವರಿಗೆ ಆಶ್ಚರ್ಯ! 1, 2 ಹಾಗೂ 4ನೇ ನಂಬರ್‌ನ ಕುರಿಗಳು ಸಿಕ್ಕಿಿವೆ. ಹಾಗಾದರೆ ಆ 3ನೇ ಕುರಿ ಎಲ್ಲಿ ತಪ್ಪಿಿಸಿಕೊಂಡಿದೆ ಎಂದು ತಲೆಬಿಸಿಯಾಯಿತು. ತರಗತಿಗಳಿಗೆ ರಜಾ ಘೋಷಿಸಿದ ಶಿಕ್ಷಕರು ಆ 3ನೇ ನಂಬರ್ ಕುರಿಯ ಜಾಡು ಹಿಡಿದು ಹೊರಟರು. ಶಿಕ್ಷಕರು, ಆಯಾಗಳು ಎಲ್ಲ ಸೇರಿ ಹುಡುಕಿದರೂ 3ನೇ ಕುರಿ ಸಿಗಲೇ ಇಲ್ಲ! ಯಾಕೆ ಹೇಳಿ? ಆ ಕುರಿ ಇದ್ದರೆ ತಾನೆ ಸಿಗುವುದು? ಇಲ್ಲದಿದ್ದನ್ನು ಹುಡುಕಿದರೆ ಹೇಗೆ ಸಿಗುತ್ತದೆ? ಆ ಇಬ್ಬರು ಮಾಡಿದ ತುಂಟಾಟಿಕೆಯಿಂದ ಶಾಲೆಯವರಿಗೆ ಸುಸ್ತಾಾಯಿತಷ್ಟೇ ವಿನಾ ಬೇರೇನೂ ಸಿಗಲಿಲ್ಲ.

ಹಾಗಾದರೆ ನಮ್ಮಲ್ಲಿಯೂ ಎಷ್ಟೋೋ ಜನ ‘ಆ 3ನೇ ನಂಬರ್ ಕುರಿ’ಗಾಗಿ ಹುಡುಕಾಡುತ್ತಿಿರುವವರಿದ್ದಾಾರೆ ಅಲ್ಲವೇ? ಬದುಕಿನಲ್ಲಿ ಎಲ್ಲ ಇದ್ದರೂ, ಏನೋ ಇಲ್ಲವೆಂದು ಕೊರಗುತ್ತಾಾ ಸುಮ್ಮನೆ ಹುಚ್ಚರಂತೆ ಹುಡುಕಾಡುತ್ತಿಿರುತ್ತಾಾರೆ. ತಾವೇನನ್ನು ಹುಡುಕುತ್ತಿಿದ್ದೇವೆ ಎಂದೂ ಕೆಲವರಿಗೆ ತಿಳಿದಿರುವುದಿಲ್ಲ.
*ಅ್ಞ ಚಿಛ್ಞ್ಚಿಿಛಿ ಟ್ಛ ಟಞಛಿಠಿಜ್ಞಿಿಜ ಜಿ ್ಝಡಿ ್ಝ್ಟಜಛ್ಟಿಿ ಠ್ಞಿ ಠಿಛಿ ್ಟಛಿಛ್ಞ್ಚಿಿಛಿ ಟ್ಛ ಞ್ಞ ಟಠಿಛ್ಟಿಿ ಠಿಜ್ಞಿಿಜ. ಅಂದರೆ ಯಾವುದೋ ಒಂದು ‘ಇಲ್ಲ’ ಎಂಬುದು ನಮ್ಮ ಅವೆಷ್ಟೋೋ ‘ಇದೆ’ಗಳ ಖುಷಿಯನ್ನು ಹಾಳುಗಡೆವಿ ಬಿಡುತ್ತದೆ. ಹಾಗಾದರೆ ಇನ್ನು ಮುಂದೆ ನಾವು ‘3ನೇ ನಂಬರ್ ಕುರಿ’ಯ ಹಿಂದೆ ಅಲೆಯುವುದನ್ನು ಬಿಟ್ಟು ಜೀವನವನ್ನು ಹಿಡಿ ಹಿಡಿಯಾಗಿ ಅನುಭವಿಸೋಣವಲ್ಲವೆ?

ಎಂದಿನಂತೆ ತರಗತಿ ಗಿಜಿಗಿಜಿ ಎನ್ನುತ್ತಿಿತ್ತು. ವಿದ್ಯಾಾರ್ಥಿಗಳಿಬ್ಬರು ಹೊಡೆದಾಡುತ್ತಿಿದ್ದರು. ನನ್ನ ಪೆನ್ ಇದು ಎಂದು ಕೂಗುತ್ತಿಿದ್ದರು. ಶಿಕ್ಷಕಿ ಬಂದು, ‘ಏನಾಯ್ತು’ ಎಂದರು. ಇಬ್ಬರೂ ಒಂದೇ ಸಮನೇ ‘ಇದು ನನ್ನ ಪೆನ್ನು, ಇವಳು ಕದ್ದಿದ್ದಾಾಳೆ, ಆವತ್ತು ನನ್ನ ರಬ್ಬರ್ ಕದ್ದಿದ್ಳು. ನಂಗೆ ಇವಳು ಇಷ್ಟಾಾನೆ ಇಲ್ಲ’ ಎಂದು ಕೂಗಿದರು. ಈ ಮಕ್ಕಳಿಗೆ ಇಷ್ಟ, ಪ್ರೀತಿ, ಸಿಟ್ಟು, ದ್ವೇಷ ಎಂಬ ಪದಗಳನ್ನು ಅರ್ಥೈಸುವುದು ಕಷ್ಟವಾಗಿತ್ತು. ಸ್ವಲ್ಪ ಯೋಚಿಸಿ ಶಿಕ್ಷಕಿ ‘ನಾಳೆ ಎಲ್ಲರೂ ಆಲೂಗಡ್ಡೆೆಗಳನ್ನು ತನ್ನಿಿ, ನಿಮಗೆ ಎಷ್ಟು ಜನ ಇಷ್ಟವಿಲ್ಲ, ಯಾರ್ಯಾಾರನ್ನು ದ್ವೇಷಿಸುತ್ತೀರಿ ಎಂದು ಲೆಕ್ಕ ಹಾಕಿ’ ಎಂದರು. ಮಕ್ಕಳು ಉತ್ಸಾಾಹದಿಂದ ‘ನನಗೆ ಮೂರು ಜನ ಇಷ್ಟ ಇಲ್ಲ, ನಂಗೇ ಐದು’ ಎಂದರು. ನಂತರ ಯಾರ್ಯಾಾರು ಎಷ್ಟು ಜನರನ್ನು ದ್ವೇಷಿಸುತ್ತಾಾರೋ ಅಷ್ಟು ಆಲೂಗಡ್ಡೆೆಗಳನ್ನು ಒಂದು ಚೀಲಕ್ಕೆೆ ಹಾಕಿ ತರುವಂತೆ ಹೇಳಿದರು.

ಮರುದಿನ ಒಬ್ಬರು ಐದು ಆಲೂಗಡ್ಡೆೆ, ಒಬ್ಬರು ಏಳು, ಹೀಗೆ ಚೀಲದಲ್ಲಿ ಆಲೂಗಡ್ಡೆೆಗಳಿದ್ದವು. ಅವನ್ನು ಯಾವುದೇ ಕಾರಣಕ್ಕೂ ಎಲ್ಲಿಯೂ ಬಿಟ್ಟು ಹೋಗುವಂತಿಲ್ಲ. ನೀವು ಒಂದು ವಾರ ಎಲ್ಲಿಗೆ ಹೋದರೂ ಅದನ್ನು ನಿಮ್ಮ ಜತೆ ತೆಗೆದುಕೊಂಡೇ ಹೋಗಬೇಕು ಎಂದರು. ಮಕ್ಕಳು ಇದಕ್ಕೆೆ ಒಪ್ಪಿಿದರು. ಎರಡು ದಿನಕ್ಕೆೆ ಸುಸ್ತಾಾದರು. ಆದರೂ ಶಿಕ್ಷಕಿ ಬಿಡಲಿಲ್ಲ. ಒಂದು ವಾರ ಇದು ಹೀಗೆ ಇರಬೇಕು ಎಂದರು. ಆಲೂಗಡ್ಡೆೆ ಕೊಳೆಯುತ್ತಾಾ ಬಂತು. ಅದರ ವಾಸನೆಯಿಂದ ಹಿಂಸೆ ಎನಿಸಿತು. ಆದರೂ ಜತೆಗಿಟ್ಟುಕೊಂಡು ಓಡಾಡಬೇಕಿತ್ತು. ಅಂತೂ ಇಂತು ಒಂದು ವಾರ ಮುಗಿಯಿತು.ಮಕ್ಕಳೆಲ್ಲ ಆಲೂಗಡ್ಡೆೆ ಚೀಲ ಎಸೆದು ಖುಷಿಯಿಂದ ಶಾಲೆಗೆ ಬಂದರು. ಶಿಕ್ಷಕಿ ಏಕೆ ಹೀಗೆ ಮಾಡಿದ್ದು ಎನ್ನುವ ಕುತೂಹಲ ಮಕ್ಕಳಿಗಿತ್ತು. ‘ಹೇಗಿತ್ತು ಈ ಒಂದು ವಾರ’ ಎಂದು ಕೇಳಿದರು. ಒಬ್ಬೊೊಬ್ಬರೇ ‘ಮಿಸ್ ಸಾಕಾಗಿ ಹೋಯ್ತು ಭಾರ ಅಂದ್ರೆೆ ಭಾರ, ವಾಸನೇ ಬೇರೆ’ ಎಂದಂದರು. ನಿಮ್ಮ ಬಳಿ ಇದ್ದ ಆಲೂಗಡ್ಡೆೆ ಮೊದಲಿಗೆ ಭಾರ, ಆಮೇಲೆ ಸಹಿಸಲಸಾಧ್ಯ ಎನಿಸಿದೆ. ಅಷ್ಟೇ ಅಲ್ಲದೆ ನಿಮ್ಮ ಬಳಿ ಇದ್ದ ಕೊಳೆತ ಆಲೂಗಡ್ಡೆೆ ಇಡೀ ತರಗತಿಗೇ ಕೆಟ್ಟ ವಾಸನೆ ಹರಡಿದೆ. ಅಸಲಿಗೆ ಇದು ಆಲೂಗಡ್ಡೆೆಯಲ್ಲ. ನಿಮ್ಮ ಬಳಿ ಇದ್ದ ದ್ವೇಷದ ಕಣ. ನೀವು ‘ಅವರು ನನಗೆ ಇಷ್ಟ ಇಲ್ಲ, ನಾನು ಹೇಟ್ ಮಾಡ್ತಿಿನಿ’ ಎಂದೆಲ್ಲಾಾ ಮಾತನಾಡುತ್ತೀರ. ಆದರೆ ಯಾರನ್ನೇ ಆಗಲಿ ದ್ವೇಷಿಸಿದರೆ ಸಿಗುವುದು ಕೊಳೆತ ವಾಸನೆಯಷ್ಟೆೆ.

ದ್ವೇಷ ಮೆಲ್ಲಗೆ ನಿಮ್ಮೊೊಳ ಹೊಕ್ಕು, ನಿಮ್ಮ ಮನಸ್ಸಿಿನ ಸ್ವಾಾಸ್ಥ್ಯವನ್ನೇ ಹಾಳು ಮಾಡುತ್ತದೆ. ಕೊಳೆತ ಆಲೂಗಡ್ಡೆೆಯನ್ನು ನಮ್ಮ ಜತೆ ಇಟ್ಟುಕೊಂಡು ಓಡಾಡಿದರೆ ಕೊಳೆತ ವಾಸನೆಯೇ ಬರುತ್ತದೆ ಹೊರತು ಇನ್ನೇನಲ್ಲ. ಆ ಭಾರವನ್ನು ಒಮ್ಮೆೆ ಮನಸ್ಸಿಿನಿಂದ ಇಳಿಸಿ ನೋಡಿ. ಎಲ್ಲರನ್ನೂ ಪ್ರೀತಿಸಿ, ಕ್ಷಮಿಸಿ, ನಕಾರಾತ್ಮಕ ಆಲೋಚನೆಗಳನ್ನು ದೂರ ತಳ್ಳಿಿ ನೋಡಿ, ಜೀವನ ಚೆಂದ ಎಂದೆನಿಸದೇ ಇರದು.

ಚೆಂದದ ಜೋಡಿಯೊಂದಿತ್ತು. ಹುಡುಗಿಗೆ ಕೋಪ, ಪ್ರೀತಿ ಎರಡೂ ಜಾಸ್ತಿಿ. ಹುಡುಗನಿಗೆ ತಾಳ್ಮೆೆ, ಪ್ರೀತಿಯೇ ಆಸ್ತಿಿ. ಕಣ್ಣು ಕುಕ್ಕುವಂಥ ಜೋಡಿ. ಆಕೆಗೆ ಮನೆಯವರ ಮೇಲೆ ಕೋಪ ಬಂದರೆ ಅವರೆದುರಿಗೆ ಒಂದು ಮಾತೂ ಹೇಳದೇ ಸೀದ ಇವನ ಬಳಿ ಬಂದು ‘ನೀನು ಅವತ್ತು ಹಾಗೆ ಮಾಡಿದೆ, ಹೀಗೆ ಮಾಡಿದೆ’ ಎಂದು ಜೋರು ಮಾಡಿ ತನ್ನ ಕೋಪ ಕಮ್ಮಿಿ ಮಾಡಿಕೊಳ್ಳುತ್ತಿಿದ್ದಳು. ಇದನ್ನು ನೋಡಿದವರೆಲ್ಲ ಪಾಪ ಆ ಹುಡುಗನ ಮೇಲೆ ಇಷ್ಟು ಕೋಪ ಮಾಡುತ್ತಾಾಳಲ್ಲ ಎಂದಂದುಕೊಳ್ಳುತ್ತಿಿದ್ದರು. ಆದರೆ ಅವಳು ಕೋಪದಲ್ಲಿ ಆಡಿದ ಮಾತುಗಳ್ಯಾಾವೂ ಸತ್ಯವಲ್ಲ ಎಂದು ಅವ ಅರ್ಥ ಮಾಡಿಕೊಂಡಿದ್ದ. ನಗುತ್ತಾಾ ಅವಳು ಹೇಳಿದ ಎಲ್ಲವನ್ನು ಕೇಳುತ್ತಿಿದ್ದ. ಅಂತೆಯೇ ಒಂದು ದಿನ ಅವನಿಗೆ ವಿದೇಶದಲ್ಲಿ ಉನ್ನತ ವ್ಯಾಾಸಂಗ ಮಾಡುವ ಅವಕಾಶ ಒದಗಿ ಬಂತು. ಅದಕ್ಕು ಮುನ್ನಾಾ ದಿನ ಅವಳ ಬಳಿ ಬಂದು ‘ನನ್ನ ಮದುವೆಯಾಗುತ್ತೀಯಾ?’ ಎಂದು ಕೇಳಿದ. ಆಕೆಯೂ ಒಪ್ಪಿಿದಳು. ನಂತರ ಮನೆಯಲ್ಲಿ ಮಾತನಾಡಿ ಒಂದು ವರ್ಷದ ನಂತರ ವಿವಾಹಕ್ಕೆೆ ದಿನ ಗೊತ್ತು ಮಾಡಿಯಾಗಿತ್ತು. ಆತ ವಿದೇಶಕ್ಕೆೆ ತೆರಳಿದ. ಪತ್ರ, ಪೋನ್‌ಗಳ ಮೂಲಕ ಮಾತುಕತೆ ನಡೆಯುತ್ತಿಿತ್ತು. ಇದು ವರ್ಷಾನುಗಟ್ಟಲೆ ನಡೆಯುತ್ತಿಿತ್ತು. ಆದರೆ ಒಂದು ದಿನ ಹುಡುಗಿ ರಸ್ತೆೆ ದಾಟುವಾಗ ಕಣ್ಣು ಮಂಜಾಯಿತು, ಆಕೆಗೆ ಪ್ರಜ್ಞೆೆ ಬಂದಾಗ ಆಸ್ಪತ್ರೆೆಯಲ್ಲಿದ್ದಳು. ಅಪ್ಪ ಅಮ್ಮ ಕಣ್ಣೀರಿಡುತ್ತಿಿದ್ದರು. ಇವಳಿಗೂ ಕಣ್ಣೀರು.

‘ಅಳಬೇಡಿ’ ಎಂದು ಹೇಳಬೇಕೆನಿಸಿದರೂ ಮಾತು ಹೊರಡುತ್ತಿಿಲ್ಲ. ಎಷ್ಟೇ ಪ್ರಯತ್ನಿಿಸಿದರೂ ಆಗುತ್ತಿಿಲ್ಲ. ಆಗಲೇ ತಿಳಿದದ್ದು ಆಕೆಗೆ ಅಪಘಾತವಾಗಿದ್ದು, ಮಿದುಳಿಗೆ ಪೆಟ್ಟು ಬಿದ್ದ ಕಾರಣ ಆಕೆ ಇನ್ನೆೆಂದೂ ಮಾತನಾಡಲಾರಳು ಎಂದು. ಎಷ್ಟೇ ಕಣ್ಣೀರಿಟ್ಟರೂ ಏನೂ ಆಗುವಂತಿರಲಿಲ್ಲ. ಫೋನ್ ರಿಂಗ್ ಕೇಳಿದ ಕೂಡಲೇ ಬೆಚ್ಚಿಿ ಬೀಳುತ್ತಿಿದ್ದಳು, ಕಣ್ಣೀರಾಗುತ್ತಿಿದ್ದಳು. ಹುಡುಗನ ಬಳಿ ಮಾತನಾಡಲು ಸಾಕಷ್ಟಿಿದ್ದರೂ ಮಾತಿಲ್ಲದೇ ಸುಮ್ಮನಾದಳು. ತಾನೇ ದೂರವಾಗಬೇಕೆಂದು ನಿರ್ಧರಿಸಿ, ಊರು ಬಿಟ್ಟಳು. ಕಷ್ಟಪಟ್ಟು ಜೀವನ ರೂಪಿಸಿಕೊಂಡಳು. ಸನ್ನೆೆಯ ಮೂಲಕ ಮಾತನಾಡುವುದನ್ನು ಕಲಿತಳು. ಕೆಲಸ ಗಿಟ್ಟಿಿಸಿಕೊಂಡಳು. ತಿಂಗಳುಗಳು ಕಳೆದವು. ಹಳೇ ಸ್ನೇಹಿತೆಯೊಬ್ಬಳು ಸಿಕ್ಕು ‘ಅವನು ಮದುವೆಯಾಗುತ್ತಿಿದ್ದಾಾನೆ’ ಎಂದಳು. ಇವಳ ಬಳಿ ಉತ್ತರವಿಲ್ಲ. ‘ತಗೊ ಕಾರ್ಡ್ ನೋಡು’ ಎಂದಳು. ಆಶ್ಚರ್ಯ! ಕಾರ್ಡ್‌ನಲ್ಲಿ ಅವಳದ್ದೇ ಹೆಸರಿತ್ತು. ಆಗ ನೆನಪಾದದ್ದು ಎಲ್ಲಾಾ ಸರಿಯಾಗಿದ್ದಿದ್ದರೆ ಇಂದು ಅವರಿಬ್ಬರು ಮದುವೆಯಾಗಬೇಕಿತ್ತು ಎಂದು.

ಇಷ್ಟು ದಿನ ಅವಳನ್ನು ನೋಡುವ, ಮಾತನಾಡುವ ಪ್ರಯತ್ನವೇ ಮಾಡದವನು ಕಾರ್ಡ್‌ನಲ್ಲಿ ತನ್ನ ಹೆಸರು ಹಾಕಿಸಿದ್ದು ಏಕೆ ಎಂಬ ಪ್ರಶ್ನೆೆ ಅವಳಿಗೆ ಬಂತು. ಅವನು ಇಷ್ಟು ದಿನ ಆಕೆಗೆ ಕಾಣಿಸಿಕೊಳ್ಳದೇ ಇದ್ದದ್ದಕ್ಕೆೆ ಕಾರಣ, ಆತ ಸನ್ನೆೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿಿದ್ದ. ‘ಅವಳಿಗೆ ನಿನ್ನನ್ನು ಪ್ರೀತಿಸುತ್ತಿಿದ್ದೇನೆ, ಜೀವನ ಪರ್ಯಂತ ನಿನ್ನ ಜತೆಯೇ ಇರಬೇಕು’ ಎಂದು ಹೇಳಬೇಕಿತ್ತು. ಆದರೆ ಅವಳಿಗೆ ಅದನ್ನು ಅರ್ಥ ಮಾಡಿಸುವ ಸಲುವಾಗಿ ಸನ್ನೆೆಯಲ್ಲಿ ಮಾತನಾಡುವುದನ್ನು ಕಲಿಯುವುದು ಮುಖ್ಯವಾಗಿತ್ತು.

ಮನುಷ್ಯನಿಗೆ ತಾಳ್ಮೆೆ, ಪ್ರೀತಿ ಜೀವನದಲ್ಲಿ ತುಂಬಾ ಮುಖ್ಯವಾದ್ದು. ಪರಿಸ್ಥಿಿತಿಗಳಿಂದ ದೂರ ಓಡುವುದು ಹೇಡಿತನವಾಗುವುದಿಲ್ಲವೆ? ಎಲ್ಲಾಾ ಸಮಸ್ಯೆೆಗಳಿಗೂ ಪರಿಹಾರ ಇದ್ದೇ ಇರುತ್ತದೆ. ಪರಿಸ್ಥಿಿತಿಗಳ ಹೊಡೆತಕ್ಕೆೆ ಸಿಕ್ಕು ಮನಸ್ಸು ನೋಯಿಸಬೇಕು ಎಂದೇನಿಲ್ಲ. ಏಕೆಂದರೆ ಇನ್ಯಾಾರೋ ನಿಮ್ಮ ಮನಸ್ಸನ್ನು ಹೀಗೆಯೇ ನೋಯಿಸಬಹುದಲ್ಲವೆ?

ವರದಿಗಾರನೊಬ್ಬಾಾತ ಅಜ್ಜಯ್ಯರೊಬ್ಬರನ್ನು ಮಾತನಾಡಿಸಿ ಮಾನವಾಸಕ್ತಿಿಯ ವರದಿಯೊಂದನ್ನು ಬರೆಯಲು ಯೋಜನೆ ಹಾಕಿದ. ಅದರಂತೆ ಅಜ್ಜಯ್ಯನನ್ನು ಮಾತನಾಡಿಸಿದ. ‘ಅಜ್ಜ ಈಗೇನಾದರು ನಿಮಗೆ ಒಂದು ಪತ್ರ ಬಂದು; ಅದರಲ್ಲಿ ನಿಮ್ಮ ದೂರದ ಸಂಬಂಧಿಯೊಬ್ಬರು ತಮ್ಮ ಹತ್ತುಕೋಟಿ ಆಸ್ತಿಿಯನ್ನು ನಿಮ್ಮ ಹೆಸರಿಗೆ ಬರೆದಿಟ್ಟಿಿದ್ದಾಾರೆ ಎಂದು ಬರೆದಿದ್ದರೆ?’ ಎಂದು ಪ್ರಶ್ನೆೆ ಹಾಕಿದ. ಅದಕ್ಕೆೆ ಮುಗುಳ್ನಕ್ಕ ಅಜ್ಜಯ್ಯ, ‘ಮಗೂ ಆಗಲೂ ನನ್ನ ವಯಸ್ಸು ತೊಂಬತ್ತೆೆಂಟೇ ಇರುತ್ತದೆ. ಅದೇನು ಬದಲಾಗುವುದಿಲ್ಲವಲ್ಲಪ್ಪ’ ಎಂದ.
ಹಣ, ಆಸ್ತಿಿ ಎಂದಾದರೂ ಬದಲಾಗಬಹುದು ಆದರೆ ವಯಸ್ಸು? ಎಷ್ಟೇ ಹಣವಿದ್ದರೂ ಸಮಯ ಖರೀದಿಸಲಾಗದು. ನಾಳೆ ಏನಾಗುತ್ತದೆ ಎಂದು ಯಾರೂ ತಿಳಿಯರು. ಈ ಕ್ಷಣವೇ ಜೀವಂತ ಅಲ್ಲವೆ?