ವಿಶೇಷ ವರದಿ: ವೆಂಕಟೇಶ್ ಆರ್.ದಾಸ್ ಬೆಂಗಳೂರು
ದಿನೇ ದಿನೆ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಮುಜುಗರ ತಪ್ಪಿಸಿಕೊಳ್ಳುವುದಕ್ಕಾಗಿ ತಮಿಳುನಾಡು ಮಾದರಿಯಲ್ಲಿ ರಾಜ್ಯ ಸರಕಾರವೂ ತೆರಿಗೆಯಲ್ಲಿ ವಿನಾಯಿತಿ ನೀಡಲು ಚಿಂತನೆ ನಡೆಸಿದೆ.
ಈಗಾಗಲೇ ಪೆಟ್ರೋಲ್ ಬೆಲೆ ಶತಕ ದಾಟಿ 107 ರು. ಆಗಿದೆ. ಡೀಸೆಲ್ ಬೆಲೆ ಕೂಡ ಶತಕದ ಅಂಚಿನಲ್ಲಿದೆ. ಕೆಲವು ರಾಜ್ಯಗಳಲ್ಲಿ ಡೀಸೆಲ್ ಬೆಲೆಯೂ ನೂರರ ಗಡಿ ಮುಟ್ಟಿದೆ. ಹೀಗಿರುವಾಗ ರಾಜ್ಯದಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರ ಮುಂದೆ ಮುಖ ಉಳಿಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ರಾಜ್ಯ ಸರಕಾರ ಬಂದಿದೆ ಎನ್ನಲಾಗಿದೆ.
ರಾಜ್ಯ ಸರಕಾರಕ್ಕೆ ಪೆಟ್ರೋಲ್ ಮೇಲಿನ ತೆರಿಗೆಯಿಂದ ಬರುವ ಆದಾಯ ಮತ್ತು ಇನ್ನಿತರ ಹಣಕಾಸು ಪರಿಸ್ಥಿತಿ ಯನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಪ್ರಮಾಣದ ತೆರಿಗೆ ವಿನಾಯತಿ ನೀಡಲು ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ. ಮುಂದೆ ಉಪಚುನಾವಣೆ, ಬಿಬಿಎಂಪಿ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಈ ಚುನಾವಣೆಗಳ ಮೇಲೆ ಪ್ರಭಾವ ಬೀರಬ ಹುದು. ಈ ಕಾರಣದಿಂದ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆಗೊಳಿಸುವ ಮೂಲಕ ಜನರ ಮನಗೆಲ್ಲುವ ಪ್ರಯತ್ನ ನಡೆಸಲು ತೀರ್ಮಾನಿಸಲಾಗಿದೆ.
ತಮಿಳುನಾಡು ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ 3 ರು. ತೆರಿಗೆ ಕಡಿತ ಮಾಡಿದೆ. ಹೀಗಾಗಿ, ತಮಿಳು ನಾಡಿನಲ್ಲಿ ಉಳಿದ ರಾಜ್ಯಗಳಿಗಿಂತ ಪೆಟ್ರೋಲ್, ಡೀಸೆಲ್ ದರ ಕಡಿಮೆಯಿದೆ. ತಮಿಳುನಾಡು ಸರಕಾರಕ್ಕೆ ಇದರಿಂದ 1160 ಕೋಟಿ ರು. ವಾರ್ಷಿಕ ಹೊರೆ ಬೀಳಲಿದೆ. ಆದರೂ, ತಮಿಳುನಾಡು ಸರಕಾರ ದರ ಕಡಿಮೆಗೊಳಿಸಿ ತೀರ್ಮಾನ ಕೈಗೊಂಡಿದೆ. ಅದೇ ಮಾದರಿಯಲ್ಲಿ ರಾಜ್ಯ ಸರಕಾರವೂ ತೆರಿಗೆ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.
ಪೆಟ್ರೋಲ್ ಮೂಲಬೆಲೆ 36 ರುಪಾಯಿ ಇದ್ದು, ಕೇಂದ್ರ ಸರಕಾರ 32.90 ರು. ತೆರಿಗೆ ವಿಧಿಸುತ್ತಿದೆ. 4 ರು. ಡೀಲರ್ ಕಮಿಷನ್ ಇದ್ದು, ಉಳಿದ 3 ರು.
ತೆರಿಗೆಯನ್ನು ರಾಜ್ಯ ಸರಕಾರ ವಿಧಿಸುತ್ತಿದೆ. ಇದರಲ್ಲಿ ಕನಿಷ್ಠ 2 ರು. ತೆರಿಗೆ ಕಡಿತಗೊಳಿಸಿದರೆ, ಒಟ್ಟು 106 ರು. ಗೆ ಪೆಟ್ರೋಲ್ ದೊರೆಯಲಿದೆ. ಆದರೆ, ರಾಜ್ಯ ಸರಕಾರಕ್ಕೆ ಇದರಿಂದ ವಾರ್ಷಿಕ ಕನಿಷ್ಠ 1500 ಕೋಟಿ ರು.ಗಿಂತ ಅಽಕ ಹೊರೆ ಬೀಳಲಿದೆ. ಈಗಾಗಲೇ, ಕೋವಿಡ್ ಕಾರಣದಿಂದ ರಾಜ್ಯದ ಬೊಕ್ಕಸ ಖಾಲಿ ಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ಇಷ್ಟೊಂದು ದೊಡ್ಡ ಗಾತ್ರದ ನಷ್ಟಕ್ಕೆ ಸರಕಾರ ಮುಂದಾಗಲಿದೆಯೇ ಎಂಬು ದನ್ನು ಕಾದು ನೋಡಬೇಕಿದೆ.
***
ಸತತ 4 ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ
ದೆಹಲಿ: ದೇಶದಲ್ಲಿ ಸತತ 6 ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು
ಭಾನುವಾರ ಪೆಟ್ರೋಲ್ ದರವನ್ನು ಲೀಟರಿಗೆ 30 ಪೈಸೆ ಮತ್ತು ಡೀಸೆಲ್ ದರ ಲೀಟರಿಗೆ 35ಪೈಸೆಗಳಷ್ಟು ಹೆಚ್ಚಿಸಿವೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಅನುಗುಣವಾಗಿ ದೇಶದಲ್ಲಿ ಇಂಧನ ದರ ಹೆಚ್ಚಾಗುತ್ತಿದೆ. ಭಾನುವಾರದ ದರ ಏರಿಕೆಯಿಂದಾಗಿ ಡೀಸೆಲ್ ದರವು ಲೀಟರಿಗೆ ? 100ರ ಗಡಿ ದಾಟಿರುವ ಪ್ರದೇಶಗಳ ಸಾಲಿಗೆ ಗುಜರಾತ್ನ ಗಾಂಧಿನಗರವೂ ಸೇರಿಕೊಂಡಿದೆ. ಗಾಂಧಿನಗರ ದಲ್ಲಿ ಡೀಸೆಲ್ ದರ ಲೀಟರಿಗೆ ? 100.21ರಷ್ಟಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ ? 107.71 ಮತ್ತು ಡೀಸೆಲ್ ದರ ಲೀಟರಿಗೆ ? 98.46ಕ್ಕೆ ಏರಿಕೆ ಆಗಿದೆ.
***
ರಾಜ್ಯದ ಹಣಕಾಸು ಪರಿಸ್ಥಿತಿ ನೋಡಿಕೊಂಡು ಪೆಟ್ರೋಲ್ ಮೇಲಿನ ತೆರಿಗೆ ವಿನಾಯಿತಿ ಮಾಡುವ ಕುರಿತು ಚಿಂತನೆ ನಡೆಸುತ್ತೇವೆ. ರಾಜ್ಯದ ಒಟ್ಟಾರೆ
ಹಣಕಾಸು ಪರಿಸ್ಥಿತಿ ತೆರಿಗೆ ವಿನಾಯಿತಿ ನೀಡುವ ರೀತಿಯಲ್ಲಿದ್ದರೆ ಸಾರ್ವಜನಿಕರಿಗೆ ಅನುಕೂಲ ಮಾಡಲು ನಮ್ಮದೇನು ಅಭ್ಯಂತರವಿಲ್ಲ.
– ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ