ಋತು ವಿದ್ಯಾದಾಯಕಿ ಸಿನು ಜೋಸೆಫ್ ಸಂದರ್ಶನ
ಸಂದರ್ಶಕ: ಪಿ.ಎಂ.ವಿಜಯೇಂದ್ರ ರಾವ್
ಸಿನು ಜೋಸೆಫ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ, ಋತು ವಿದ್ಯೆ ಮತ್ತು ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಅವರ ಸಾಧನೆಯನ್ನು
ಗಮನಿಸಿ ಅವರಿಗೇಕೆ ಮ್ಯಾಗ್ಸೇಸೆ ಪ್ರಶಸ್ತಿ ಇನ್ನೂ ನೀಡಿಲ್ಲ ಎಂಬುದು ಆಶ್ಚರ್ಯ. ಸನಾತನ ಪರಂಪರೆಯ ಬಗ್ಗೆ ಮಾತನಾಡುವವರನ್ನು
ಕಂಡರೆ ಮ್ಯಾಗ್ಸೇಸೆ ಸಮಿತಿಗೆ ತಿರಸ್ಕಾರವೇ?
ಧಾರಾವಾಹಿ ಹಬ್ಬದ ಸಂಭ್ರಮ ಶುರುವಾಗಿದೆ. ದಸರೆಗೆ ಧಾರ್ಮಿಕ ಪ್ರಾಮುಖ್ಯತೆಯಷ್ಟೇ ನಾಡಹಬ್ಬವೆಂಬ ಪ್ರಸಿದ್ಧಿಯೂ ಇದೆ. ಧರ್ಮ-ವರ್ಗಗಳ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬರನ್ನೂ ಒಟ್ಟುಗೂಡಿಸುವ ನಿರಂತರ ಪ್ರಕ್ರಿಯೆಗೆ ಹಬ್ಬಗಳು ಮತ್ತೊಂದು ನೆಪವಷ್ಟೆ.ದೇವೀ ಸ್ತುತಿಗೆ ಇದು ಪ್ರಶಸ್ತವಾದ ಕಾಲ. ಸ್ತ್ರೀಶಕ್ತಿಯನ್ನು ಗುರುತಿಸುವುದಕ್ಕೆ ಸುಸಮಯ. ಸ್ತ್ರೀಯರನ್ನು ಪೂಜ್ಯಯೋಗ್ಯರನ್ನಾಗಿಸಿರುವ ಸನಾತನ ಪರಂಪರೆಯ ಉದ್ದಗಲ ಗಳನ್ನು ಬೆಂಗಳೂರಿನವರೇ ಆದ ಸಿನು ಜೋಸೆಫ್ ಅಭ್ಯಸಿಸಿದ್ದಾರೆ. ಅಂದು ಶಬರೀಮಲೈನಲ್ಲಿ ಗಲಭೆಗೆ ಕಾರಣ ರಾದ ಕಿರಾತಕರ ಬಾಯಿಗೆ ತಮ್ಮ ಅಪಾರ ಅಧ್ಯಯನದಿಂದ ಹೊಮ್ಮಿದ ಅಧಿಕಾರವಾಣಿಯಿಂದ ಬೀಗಹಾಕಿದವರಲ್ಲಿ ಸಿನು ಪ್ರಮುಖರು. ಮಹಿಳೆಯರು ಮತ್ತು ಶಬರಿಮಲೈ: ನಿಬಂಧನೆಗಳ ಹಿಂದಿನ ವೈಚಾರಿಕತೆ ಎಂಬ ಪುಸ್ತಕದಲ್ಲಿ ಅಯ್ಯಪ್ಪ ದೇವಸ್ಥಾನದ ಮಹಿಮೆಯನ್ನು ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಅದರ ತಾರ್ಕಿಕ ವಿಸ್ತರಣೆಯಾಗಿ ಕಳೆದ ವರ್ಷ ಋತು ವಿದ್ಯಾ: ಮಾಸಿಕ ಪದ್ಧತಿಯಲ್ಲಿನ ಸನಾತನ ವಿಜ್ಞಾನ ಎಂಬ ವಿದ್ವತ್ಪೂರ್ಣ ಪುಸ್ತಕವನ್ನು ಹೊರತಂದರು. ಇದೇ ವಿಷಯವಾಗಿ ಕ್ಲಬ್ ಹೌಸ್ನ್‌ಲ್ಲಿ ಪ್ರೌಢವಾಗಿ ವಾದ ಮಂಡಿಸುವ ಸಿನೂರರ ಮಾತು ಕೇಳುವುದು ಜ್ಞಾನಪ್ರದ.
ಋತುವಿದ್ಯೆ ಕುರಿತಾದ ಮಾಹಿತಿಯನ್ನು ಮಹಿಳೆಯರೂ ಸೇರಿದಂತೆ ಹೆಚ್ಚಿನ ಜನರಿಗೆ ದೊರಕಿಸುವ ಉದ್ದೇಶ ದಿಂದ ಅವರನ್ನು ಕಳೆದ ವಾರ ಸಂದರ್ಶಿ ಸಿದೆ. ಇ-ಮೇಲ್ ಮೂಲಕವೇ ಕಳಿಸಿದ ಹಲವು ಪ್ರಶ್ನೆಗಳಿಗೆ ಸಿನು ಶ್ರದ್ಧೆಯಿಂದ, ಸವಿವರವಾಗಿ ಉತ್ತರಿಸಿzರೆ. ಅದರ ಸಾರಾಂಶವನ್ನು ನಿಮ್ಮೊಡನೆ ಹಂಚಿಕೊಳ್ಳಲು ದೇವಿಯ ಹಬ್ಬದ ಸಂದರ್ಭವೇ ಸೂಕ್ತವೆನಿಸಿತು. ಹೌದು, ಸ್ಥಳದ ಅಭಾವದಿಂದ ಸುದೀರ್ಘ ಸಂದರ್ಶನದ ತುಣುಕನ್ನಷ್ಟೇ ಇಲ್ಲಿ ನೀಡಲಾಗಿದೆ.
ಮಶ್ವರಂನ ಕ್ಲೂನಿ ಕಾನ್ವೆಂಟ್ನಲ್ಲಿ ಸಿನು ಓದಿದ್ದು. ಅದಕ್ಕೂ ಋತು ವಿದ್ಯೆಗೂ ಏನೂ ಸಂಬಂಧವಿಲ್ಲ. ಹರಯ ದಿಂದಲೂ ವಿಜ್ಞಾನದಲ್ಲಿ ಆಸಕ್ತಿ. ಜೀವ ಶಾಸ್ತ್ರದಲ್ಲೂ, ಜೀವ ವಿಜ್ಞಾನದಲ್ಲೂ ಇನ್ನಿಲ್ಲದ ಕುತೂಹಲ. ಸ್ವಯಂಸೇವಕಿಯಾಗಿ NGO ಒಂದರ ಜತೆ ಸಂಪರ್ಕ ಬೆಳೆಯುತ್ತದೆ. ಅಲ್ಲಿ ಸೇವೆ ಸಲ್ಲಿಸು ವಾಗ, ಕೌಮಾರ್ಯಕ್ಕೆ ಕಾಲಿಟ್ಟ ಬಾಲಕಿಯರು ಮತ್ತು ಮಹಿಳೆಯರು ತಮ್ಮ ಆ ದಿನಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಋತುಮತಿಯರೇಕೆ ಪಪಾಯ ತಿನ್ನಬಾರದು, ಅವರಿಗೆ ಮಾಂಸಾಹಾರವೇಕೆ ವರ್ಜ್ಯ, ಮೊಸರನ್ನು ತಿಂದರೆ ಏನಾಗುತ್ತದೆ, ವ್ಯಾಯಾಮವೇಕೆ ನಿಷಿದ್ಧ, ಮುಂತಾದ ಪ್ರಶ್ನೆಗಳಿಗೆ ಉತ್ತರಿಸಲು ಸಜ್ಜಾಗುವ ನಿಟ್ಟಿನಲ್ಲಿ ಸಿನು ಅವರ ಸುದೀರ್ಘ ಜ್ಞಾನಾರ್ಜನೆಯ ಪಯಣ ಆರಂಭ.
ಋತು ವಿದ್ಯೆಯ ಆಳ ವಿಸ್ತಾರಗಳನ್ನರಸಿ ಅವರು ದೇಶಪರ್ಯಟನೆ ಕೈಗೊಳ್ಳುತ್ತಾರೆ. ಹಿಂದೂಗಳ ರಜಸ್ವಲಾ ನಿಯಮಗಳ ಪರಿಚಯ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅವುಗಳ ಹಿಂದಿನ ದಟ್ಟ ವೈಚಾರಿ ಕತೆ ಅವರಿಗೆ ಗೋಚರವಾಗುತ್ತದೆ. ಮತ್ತಷ್ಟು ಜ್ಞಾನ ಪಡೆಯಲು ಕೋಶಗಳಲ್ಲಿ ಮುಳುಗುತ್ತಾರೆ. ಸದ-ದರ್ಶನ, ಆಯುರ್ವೇದ, ತಂತ್ರ, ಚಕ್ರ, ಯೋಗ, ಆಗಮಶಾಸ್ತ್ರ, ಜ್ಯೋತಿಷ ಶಾಸ್ತ್ರಗಳ ಅಧ್ಯಯನ ದಲ್ಲಿ ನಿರತರಾಗುತ್ತಾರೆ.
ಋತು ಮತ್ತು ಸಂತಾನೋತ್ಪತ್ತಿಯ ಸಂದರ್ಭದಲ್ಲಿ ಹೆಂಗಸಿನ ಆರೋಗ್ಯದಲ್ಲಿ ಸಂಭವಿಸುವ ಏರುಪೇರುಗಳನ್ನು ನಿವಾರಿಸುವ ಸಾಮರ್ಥ್ಯ ಭಾರತೀಯ ಜ್ಞಾನ ಪರಂಪರೆಯಲ್ಲಿರುವುದು ಅವರನ್ನು ಚಕಿತರನ್ನಾಗಿಸುತ್ತದೆ. ಅಂತಹ ಆಳವಾದ ವೈಚಾರಿಕತೆಯನ್ನೂ ನಮ್ಮ ಪೂರ್ವಿಕರು ಎಷ್ಟು ಸರಳವಾದ ಆಚಾರವಿಚಾರಗಳ ಮೂಲಕ ಸಾರ್ವತ್ರಿಕಗೊಳಿಸುವಲ್ಲಿ ಸಫಲರಾದರು ಎಂದು ಸಿನು ಬೆರಗಾಗುತ್ತಾರೆ. ಲಾಗಾಯ್ತಿನಿಂದಲೂ ಅನುಷ್ಠಾನದಲ್ಲಿರುವ ಹಿಂದೂ ಪದ್ಧತಿ ಋತು ಆರೋಗ್ಯವನ್ನು ನಿಭಾಯಿಸಬಲ್ಲದೆಂಬುದರಲ್ಲಿ ಅವರ ವಿಶ್ವಾಸ ಅಚಲ.
ಋತುಸಮಯದ ಆರೋಗ್ಯ ಕುರಿತು ನವಯೌವನಿಗರಲ್ಲಿ ಮತ್ತು ಸಾಮಾನ್ಯ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಯೋಜಿಸುತ್ತಿದ್ದ ಕಾರ್ಯಾಗಾರ ಗಳಲ್ಲಿ ಮೂಡಿದ ಪ್ರಶ್ನೆಗಳಿಗೆ ಉತ್ತರಗಳನ್ನರಸಿ ಹೊರಟ ಸಿನು ಜ್ಞಾನಸಂಪನ್ನರಾಗಿ ರೂಪಾಂತರಗೊಳ್ಳುತ್ತಾರೆ. ನನಗೆ ಅವರಲ್ಲಿ ಆಕರ್ಷವಾಗಿ ಕಾಣುವ ಅಂಶ ಅವರ ಪರಿ ಪಕ್ವತೆಯಷ್ಟೇ ಅಲ್ಲ, ಅವರ ವಿನಯ. ನಾನು ಅವರಲ್ಲಿ ಜಾಗೃತಿ ಮೂಡಿಸಿದ್ದಲ್ಲ, ಅವರಿಂದ ನಾನು ಕಲಿತೆ ಎಂಬ ಅಸಾಧಾರಣ ವಿನಯ. ಅವರ ಹಿತಕಾರೀ ವ್ಯಕ್ತಿತ್ವವೇ ಅವರು ಕೈಗೊಂಡ ಋತು ವಿದ್ಯೆಯ ಪ್ರಸರಣದ ಸಾಫಲ್ಯದಲ್ಲಿ ಮುಖ್ಯಪಾತ್ರ ವಹಿಸಿದೆ ಎನ್ನುವುದು ನನ್ನ ಗ್ರಹಿಕೆ.
ಋತು ವಿಜ್ಞಾನವೆಂಬ ಪರಿಕಲ್ಪನೆಯನ್ನು ಅರ್ಥೈಸುವಲ್ಲಿ ಋತು ವಿದ್ಯಾ ಎಂಬ ಶಬ್ದದ ಬಳಕೆ ಸಾಮಾನ್ಯರಲ್ಲಿಲ್ಲ. ಆದರೆ, ಹಾಗಾಗಲೆಂಬುದು ಸಿನೂ
ಆಶಯ. ಎಷ್ಟು ಮಂದಿ ಮಹಿಳೆಯರು ಋತು ವಿದ್ಯಾವಂತೆಯರಾಗಿದ್ದಾರೆ ಎಂಬ ನನ್ನ ಪ್ರಶ್ನೆಗೆ ಸಿನು ಕೊಡುವ ಉತ್ತರ ಆಶ್ಚರ್ಯ ಮೂಡಿಸುತ್ತದೆ:
ಅರೆ-ನಗರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗಿಂತ, ಪಾಶ್ಚಿಮಾತ್ಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದ ಗ್ರಾಮೀಣ ಮಹಿಳೆಯರು
ಹೆಚ್ಚು ಋತು-ಶಿಕ್ಷಿತರು! ಋತು ವಿದ್ಯೆಯ ಆಚರಣೆಯಲ್ಲಿ ಕಂಡುಬರುವ ಪದ್ಧತಿಗಳನ್ನು ಸಿನೂರಿಗೆ ಪರಿಚಯಿಸಿದವರು ಅವರು ಭೇಟಿ ಮಾಡಿದ ಹಳ್ಳಿ
ಅಜ್ಜಿಯಂದಿರು. ಹಾಗೆಂದೇ ಋತು ವಿದ್ಯಾ ಪುಸ್ತಕವನ್ನು ಅವರಿಗೇ ಸಮರ್ಪಿಸಿದ್ದಾರೆ.
ಋತು ವಿಜ್ಞಾನದಲ್ಲಿ ಪ್ರಸ್ತಾಪಿಸಲಾದ ನಿಯಮಗಳನ್ನು ಅನುಸರಿಸುವಲ್ಲಿ ಹಳ್ಳಿಯ ಹೆಂಗಸರದ್ದೇ ಮೇಲುಗೈ. ಆ ಕಾರಣಕ್ಕೇ, ಮುಟ್ಟಿನ ಸಮಸ್ಯೆಗಳು ಪಟ್ಟಣದ ಮತ್ತು ಪಾಶ್ಚಿಮಾತ್ಯ ಹೆಂಗಸರಿಗಿಂತ ಗ್ರಾಮೀಣ ಹೆಂಗಸರಲ್ಲಿ ಕಡಿಮೆ ಎನ್ನುತ್ತಾರೆ ಸಿನು.
ಈ ವಿಷಯ ಬಹಳಷ್ಟು ಜನರ ಹುಬ್ಬೇರಿಸುತ್ತದಾದರೂ ವಾಸ್ತವ. ಸದ್ಯಕ್ಕೆ ಲಭ್ಯವಿರುವ ಪ್ರಕಟಿತ ಅಧ್ಯಯನಗಳಲ್ಲದೆ ಸಿನೂರ ಕ್ಷೇತ್ರ ಸಮೀಕ್ಷೆಗಳು
ಕೂಡ ಅದನ್ನು ಹೊರತಂದಿವೆ. ಡಿಸ್ಮೆನೋರಿಯ ಎಂದು ಹೆಸರಿಸಲಾದ ಮುಟ್ಟಿನ ಅವಧಿಯಲ್ಲಿ ಕಾಣಿಸಿಕೊಳ್ಳುವ ಯಾತನಾಮಯ ನೋವು
ಪಟ್ಟಣದ ಯುವತಿಯರ ಹೆಚ್ಚು. ಉದಾಹರಣೆಗೆ, ನಾಗಪುರ ಜಿಯಲ್ಲಿ (2011 ರಲ್ಲಿ) ಸಂಗ್ರಹಿಸಲಾದ ಮಾಹಿತಿಯ ಪ್ರಕಾರ ಆ ಸಮಸ್ಯೆ ಪ್ರತಿಶತ 41.78 ಗ್ರಾಮೀಣ ಯುವತಿಯರಲ್ಲಿದ್ದು ನಗರಪ್ರದೇಶದ ಯುವತಿಯರಲ್ಲಿ ಅದರ ಪ್ರಮಾಣ 72.61 ರಷ್ಟಿತ್ತು.
ಅತಿ ಹೆಚ್ಚು ರಕ್ತಸ್ರಾವದ ಸಮಸ್ಯೆ ಪ್ರತಿಶತ 23 ಭಾರತೀಯ ಮಹಿಳೆಯರಲ್ಲಿದ್ದರೆ, ಇಂಗ್ಲೆಂಡ್ನಲ್ಲಿ ಆ ಸಮಸ್ಯೆ ಪ್ರತಿಶತ 52 ರಷ್ಟು. ಪಾಶ್ಚಿಮಾತ್ಯ ಮತ್ತು
ನಗರಪ್ರದೇಶದ ಹೆಂಗಸರಲ್ಲಿ ಮುಟ್ಟಿನ ತೊಂದರೆಗಳು ಹೆಚ್ಚಿರುವುದಕ್ಕೆ ಕಾರಣ ಆ ಸಮಸ್ಯೆಗಳನ್ನು ತೊಡೆಯಬಲ್ಲ ಸಾಂಸ್ಕೃತಿಕ ಅಭ್ಯಾಸಗಳ ಪರಿಜ್ಞಾನ ಅವರಿಗಿಲ್ಲದಿರುವುದು ಅಥವಾ ತಮ್ಮ ನೆಲದ ಸ್ಥಳೀಯ ಪದ್ಧತಿಗಳಿಂದ ಅವರು ದೂರವಾಗಿರುವುದು ಅಥವಾ ಅವುಗಳ ವಿರುದ್ಧ ಬಂಡೆದ್ದಿರುವುದು ಎಂದು ವಿಷಾದದಿಂದ ನುಡಿಯುತ್ತಾರೆ ಸೀನು.
ಯಾವುದನ್ನು ಮಾಡಬೇಡ ಎಂಬ ಕಿವಿಮಾತಿಗೆ ತದ್ವಿರುದ್ಧವಾಗಿ ವರ್ತಿಸುವುದು ಆಧುನಿಕತೆ ಅನ್ನುವಂಥ ಸನ್ನಿವೇಶವಿದೆ. ಅಂತಹ ಧೋರಣೆಯ
ಹೆಣ್ಣುಮಕ್ಕಳ ಶಿಕ್ಷಣವೇ ಅವರಿಗೆ ಮುಳುವಾಗಿ ಅದಕ್ಕೆ ಅನಾರೋಗ್ಯದ ದೊಡ್ಡ ಬೆಲೆ ತೆತ್ತುತ್ತಿದ್ದಾರೆ, ಎಂದು ಸಿನು ವಿಷಣ್ಣರಾಗುತ್ತಾರೆ. ಯಾರು ಅಕ್ಷರಸ್ಥರು ಎಂಬುದನ್ನು ಪುನರ್ವಿಮರ್ಶಿಸಬೇಕೇನೋ!
Ted Talk ಸರಣಿಗಾಗಿ ಅವರು ನೀಡಿದ ಉಪನ್ಯಾಸವೊಂದರಲ್ಲಿ (ಅದು ಯೂ-ಟ್ಯೂಬಿನಲ್ಲಿ ಲಭ್ಯವಿದೆ) ಹೇಳುವಂತೆ ಭಾರತೀಯ ಮಹಿಳೆಯರು
ಒಟ್ಟಾರೆ ರಜಸ್ವಲಾರೋಗ್ಯ ಗಳಿಸಿಕೊಂಡಿರುವುದಕ್ಕೆ ಗೊಡ್ಡು ಆಚಾರಗಳೆಂದು ಹೀಗಳೆಯಲ್ಪಡುವ ಅವರ ಋತು ನಿಯಮಗಳು; ಅವು ಸಮಸ್ಯೆಯನ್ನು
ಸೃಷ್ಟಿಸುತ್ತಿಲ್ಲ, ಬದಲಾಗಿ ಪರಿಹಾರವನ್ನೊದಗಿಸುತ್ತಿವೆ.
ಬಹಿಷ್ಠೆಯಾಗುವುದೆಂದರೆ ಮಲಿನವಾಗುವುದೆಂಬ ಪರಿಕಲ್ಪನೆ ಸಾರ್ವತ್ರಿಕ. ಆದರೆ, ಬಾಲ್ಯವನ್ನು ಕಳೆದು ಕೌಮಾರ್ಯಕ್ಕೆ ಕಾಲಿಡುವ ಹೆಣ್ಣಿನ ಜೀವಿತದ
ಆ ಮುಖ್ಯ ಮೈಲಿಗಲ್ಲನ್ನು ಸಂಭ್ರಮದಿಂದ ಆಚರಿಸುವುದೂ ಉಂಟು. ಇದರಲ್ಲಿ ವಿರೋಧಾಭಾಸವಿದೆಯೇ ಎಂಬ ನನ್ನ ಪ್ರಶ್ನೆಯನ್ನು ಸಿನು ತಳ್ಳಿ ಹಾಕುತ್ತಾರೆ. ಭಾರತೀಯ eನ ಪರಂಪರೆಯಲ್ಲಿ ಮೂಡಿಬಂದ ಯಾವುದೇ ಸಾಂಸ್ಕೃತಿಕ ಆಚರಣೆಯಲ್ಲಿ ವೈರುಧ್ಯ ಸಾಧ್ಯವೇ ಇಲ್ಲ. ಒಂದು ವೇಳೆ ಯಾರದರೂ ಗೊಂದಲವಿದ್ದರೆ, ಅದಕ್ಕೆ ಕಾರಣ ಅವರ ಅಜ್ಞಾನ.
ತಾರುಣ್ಯಕ್ಕೆ ಕಾಲಿಟ್ಟ ಹುಡುಗಿಯರನ್ನು ಪ್ರಶ್ನಿಸಿದ್ದೇನೆ: ’ಋತುವಿನ ವಧಿಯ ರಕ್ತ ಅಶುದ್ಧವೆಂಬ ಕಲ್ಪನೆ ಏಕೆ?’ ಅವರಲ್ಲಿ ಸ್ಪಷ್ಟ ಅರಿವಿದೆ. ದೇಹದಲ್ಲಿನ ಕಶ್ಮಲಗಳನ್ನು ಮುಟ್ಟು ಹೊರಹಾಕುತ್ತದೆ. ಇದನ್ನು ಅವರ ತಾಯಂದಿರೂ, ಅಜ್ಜಿಯರೂ ಹೇಳಿಕೊಟ್ಟದ್ದು. ಇದರ ಅರಿವಿಲ್ಲದವರಿಗೆ (ಪಟ್ಟಣಿಗರಿಗೆ) ಅದು ಮೂಢನಂಬಿಕೆಯಾಗಿ ಕಾಣುತ್ತದೆ.
ರಜಸ್ವಲೆಯ ಶರೀರವನ್ನು ಆಂತರಿಕವಾಗಿ ಶುದ್ದೀಕರಿಸುವ ಪ್ರಕ್ರಿಯೆಯೇ ಮುಟ್ಟು. ಆಯುರ್ವೇದದಲ್ಲಿ ಇದನ್ನು ವಿವರಿಸಲಾಗಿದೆ. ಆಮವೆಂದು
ಕರೆಯಲಾಗುವ ಮಲಿನವಸ್ತುಗಳು ಹೊರಹಾಕಲ್ಪಡುತ್ತವೆ. ಪಚನಕ್ರಿಯೆ ಅಸಮರ್ಪಕವಾದಾಗ ಆಮ ಸಂಗ್ರಹಗೊಳ್ಳುತ್ತದೆ. ಅರಗಿಸಿಕೊಳ್ಳಲಾಗದ ಅಥವಾ ಅರಗಿಸಿಕೊಳ್ಳಲು ಕಷ್ಟವಾದ ಆಹಾರ (ಉದಾ: ಮಾಂಸ)ವನ್ನು ಸೇವಿಸಿದಾಗ ಅದರ ಒಂದು ಭಾಗವು ಉದರದ ಕೊಳೆಯುತ್ತದೆ. ಕರುಳಿನಲ್ಲಿ ಕೊಳೆತ ಆಹಾರದಿಂದ ವಿಷವು ಆಮದ ರೂಪದಲ್ಲಿ ಉತ್ಪತ್ತಿಯಾಗುತ್ತದೆ. ಆಮ ಹೆಚ್ಚಾದಾಗ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. ಸಂತಾನೋ
ತ್ಪತ್ತಿಯ ಮೇಲೂ ಪರಿಣಾಮ ಬೀರುತ್ತದೆ. ಮುಟ್ಟು ಆ ವಿಷವನ್ನು ಯಾವ ಖರ್ಚಿಲ್ಲದೆ ಹೊರಹಾಕುತ್ತದೆ.
ಆಮ ಹೊರಹಾಕಲ್ಪಟ್ಟು ಸಂತಾನಸಾಮರ್ಥ್ಯ ವೃದ್ಧಿಸುತ್ತದೆ. ಕೆಲವರಲ್ಲಿ ಬೊಕ್ಕೆ/ಮೊಡವೆಗಳ ರೂಪದಲ್ಲಿ ಕಲ್ಮಶ ಹೊರಬೀಳಬಹುದು. ಊರ್ಧ್ವ ಮುಖವಾಗಿ ಸಂಚರಿಸಿದ ತ್ಯಾಜ್ಯ ವಾಂತಿಯಾಗಿಯೂ ಹೊರಹಾಕಲ್ಪಡ ಬಹುದು. ಮುಟ್ಟಾದಾಗ ಬರುವ ನೋವು/ಸೆಳೆತ ಮುಂತಾದ ಸಮಸ್ಯೆಗಳೆಲ್ಲ ವಕ್ಕೂ ಅನಿಯಂತ್ರಿತ ಆಮವೇ ಕಾರಣ ಮತ್ತು ಅದಕ್ಕೆ ಮುಖ್ಯ ಕಾರಣ ದೋಷಪೂರ್ಣ ಆಹಾರ ಸೇವನೆ ಮತ್ತು ಅಶಿಸ್ತಿನ ಜೀವನಶೈಲಿ.
ನಿಯಮಿತ ಆಹಾರಸೇವನೆಯಿಂದ ಹಾಗೂ ಯೋಗಭ್ಯಾಸದಿಂದ ಮುಟ್ಟಿನ ತೊಂದರೆಗಳನ್ನು ನೀಗಿಸಿಕೊಳ್ಳಬಹುದು. ಮುಟ್ಟಿನ ಸಮಯದಲ್ಲಿನ
ತೊಂದರೆಗಳನ್ನು ಆಯುರ್ವೇದ ಸ್ವಾಭಾವಿಕ ಎಂದು ಪರಿಗಣಿಸುವುದಿಲ್ಲ. ಆಮವೆಂದರೆ ಏನು ಮತ್ತು ಅದಕ್ಕೂ ಮುಟ್ಟಿನ ತೊಂದರೆಗಳಿಗೂ ಇರುವ ಸಂಬಂಧವೇನು ಎಂಬುದನ್ನು ಅರ್ಥಮಾಡಿಕೊಂಡಾಗಷ್ಟೇ ಆಂತರಿಕ ಮಲಿನ ವಸ್ತುಗಳನ್ನು ವಿಲೇವಾರಿ ಮಾಡುವ ಮಾಸಿಕ ಪ್ರಕ್ರಿಯೆಯೇ ಮುಟ್ಟು ಎಂಬ ಹಳ್ಳಿ ಹೆಂಗಸರ ಗ್ರಹಿಕೆ ನಮಗೆ ಅರ್ಥವಾಗಬಲ್ಲದು. ದುರದೃಷ್ಟವಶಾತ, ಅಭಿವ್ಯಕ್ತಿಯಲ್ಲಿನ ತೊಡಕು ಮತ್ತು ಅದನ್ನು ಅರ್ಥೈಸುವಲ್ಲಿನ ಅಸಮರ್ಥತೆ ಅಪಾರ್ಥ ವನ್ನು ಸೃಷ್ಟಿಸಿದೆ.
ಎಂತಲೇ, ಮುಟ್ಟು ಎಂದರೆ ಮಲಿನ, ಮುಟ್ಟಿನಿಂದ ಹೆಣ್ಣು ಅಶುದ್ಧಗೊಳ್ಳುತ್ತಾಳೆ ಎಂಬಂಥ ತಪ್ಪು ಕಲ್ಪನೆಗಳು ನಮ್ಮಲ್ಲಿವೆ. ವಾಸ್ತವದಲ್ಲಿ ಮುಟ್ಟಿನಿಂದ ಆಕೆ ಶುದ್ಧಳಾಗುತ್ತಾಳೆ. ಮುಟ್ಟಿನ ನಂತರ ಆಕೆ ಹೆಚ್ಚು ಲವಲವಿಕೆಯುಳ್ಳವಾಗುತ್ತಾಳೆ. ಅದರಿಂದಲೇ ಕಾಂತಿಯುಕ್ತಳಾಗುತ್ತಾಳೆ. ಅವಳ ತ್ವಛೆಯೂ ಕಂಗೊಳಿಸುತ್ತದೆ. ಈ ಸಂದರ್ಭದಲ್ಲಿ ಏಳುವ ಮತ್ತೊಂದು ಮುಖ್ಯ ವಿಷಯ ಸ್ವಚ್ಛತೆ. ಆ ಕುರಿತಾಗಿಯೂ ಸಿನೂರ ನಿಲುವು ಸ್ಪಷ್ಟ. ಮೆನ್ಸ್ಟ್ರುಅಲ್ ಹೈಜೀನ್ (menstrual hygiene) ಎಂಬುದು ಅಪ್ರಸ್ತುತ. ಅದೇನಿದ್ದರೂ, ಅಭಿವೃದ್ಧಿಶೀಲ ದೇಶಗಳಲ್ಲಿ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲು ಮುಟ್ಟು-ಸಂಬಂಧಿ ಉತ್ಪನ್ನಗಳನ್ನು ತಯಾರಿಸುವ ಬೃಹತ್ ಕಂಪನಿಗಳು ಹುಟ್ಟಿಹಾಕಿರುವ ಪರಿಕಲ್ಪನೆ.
ಕಾರ್ಪೊರೆಟ್ ವಲಯದ ಸಾಮಾಜಿಕ ಹೊಣೆಗಾರಿಕೆ (Corporate Social Responsibility) ಯೋಜನೆಯಡಿಯಲ್ಲಿ ಸಿನೂರ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡಲು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಸಂಸ್ಥೆಗಳು ಹಾತೊರೆದದ್ದಿದೆ. ಅವರ ಉದ್ದೇಶ ಗ್ರಾಮೀಣ ಮಾರುಕಟ್ಟೆ ಯನ್ನು ಆಕ್ರಮಿಸು ವುದು. ಆ ಕಾರಣಕ್ಕೆ ಹಳ್ಳಿ ಹೆಂಗಸರ ಅಭ್ಯಾಸಗಳನ್ನು ನಿಷಿದ್ಧಗೊಳಿಸುವ ಹುನ್ನಾರ. ಅವರನ್ನು ಹಿಂದುಳಿದವರೆಂದು ಜರೆಯುತ್ತಾರೆ. ಕೋಕ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಅದನ್ನು ಅನುಮೋದಿಸದೇ ಆ ಕಂಪನಿ ನೀಡಲು ಮುಂದಾದ ಆಕರ್ಷಕ ಇಡುಗಂಟನ್ನು ತಿರಸ್ಕರಿಸಿದ ಬ್ಯಾಡ್ಮಿಂಟನ್ ಚಾಂಪಿಯನ್ ಪುಲ ಗೋಪಿಚಂದ್ ಅವರಂತೆಯೇ ದಿಟ್ಟ ನಿಲುವಿನ ಮೌಲ್ಯಾಧಾರಿತ ಸಿನು ನಮ್ಮೆಲ್ಲರ ಗೌರವಾದರಗಳಿಗೆ
ಭಾಜನರು. ಸಿನೂರಲ್ಲಿ ಒಂದು ಅಸಮಾಧಾನವಿದೆ.
ಮುಟ್ಟಿನರಿವನ್ನು ಮೂಡಿಸುವಲ್ಲಿ ನಿರತರಾಗಿರುವ ಬಹುತೇಕ NGO ಗಳು, ತಮಗೆ ಸಿಗುವ ನಿಧಿಯ ಪ್ರಲೋಭನೆಯಿಂದಾಗಿ ಒಂದಲ್ಲ ಒಂದು ಮುಟ್ಟು
ಸಂಬಂಧಿ ಉತ್ಪನ್ನಗಳನ್ನು ಜನಪ್ರಿಯಗೊಳಿಸುವುದರಲ್ಲಿ ನಿರತರಾಗಿವೆ. ಹೈಜೀನ್ ವಿಚಾರದಲ್ಲಿ ಸುಳ್ಳುಗಳನ್ನು ಹರಿಬಿಡಲಾಗುತ್ತಿದೆ. ಮೆನ್ಸ್ಟ್ರುಅಲ್ ಹೈಜೀನ್ ಎಂದಾಕ್ಷಣ ನಮ್ಮ ಗಮನ ಸಂಬಂಧಿತ ಉತ್ಪನ್ನಗಳತ್ತ ಹರಿಯುತ್ತದೆ.
ಅಂತಹ ಉತ್ಪನ್ನಗಳಿಂದ ವಂಚಿತರಾದ (ಗ್ರಾಮೀಣ) ಹೆಣ್ಣುಮಕ್ಕಳು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸದೇ ಶಾಲೆಗಳಿಂದ ಹೊರಬೀಳುತ್ತಿzರೆಂದು
ಭಾವಿಸಲಾಗುತ್ತದೆ. ಇದು ಶುದ್ಧ ಸುಳ್ಳು, ಎಂದು ದಾಖಲೆಸಮೇತ ವಾದಿಸುತ್ತಾರೆ ಸಿನು. ಪ್ರತಿಶತ ೧೨ ಭಾರತೀಯ ಮಹಿಳೆಯರಿಗಷ್ಟೇ ಸ್ಯಾನಿಟರಿ ನ್ಯಾಪ್ಕಿನ್ ಲಭ್ಯವಿದೆ, ಉಳಿದವರು ಮರಳು, ಬೂದಿ, ಚಿಂದಿಬಟ್ಟೆ ಮುಂತಾದವನ್ನು ಬಳಸುತ್ತಾರೆ ಎಂಬ ಅಂಶ ಅಧ್ಯಯನವೊಂದರಿಂದ ತಿಳಿಯ ಲ್ಪಟ್ಟಿದೆ ಎಂಬ ವದಂತಿಯನ್ನು ಹರಡಲಾಗಿದೆ. (ಇಂತಹ ವದಂತಿಗಳು ಕೊರೋನಾ ವೈರಸ್ಗಿಂತ ವೇಗವಾಗಿ ಎಡೆ ಹರಡಲು ಸಾಮಾಜಿಕ ಜಾಲ
ತಾಣ ರೆಕ್ಕೆ-ಪುಕ್ಕ, ಕಾಲು, ಚಕ್ರಗಳೆಲ್ಲವನ್ನೂ ಒದಗಿಸುತ್ತದೆ.) ಬಿಲ್ ಮತ್ತು ಮೆಲಿಂಡಾ ಗೇಟ್ಸ ಪ್ರತಿಷ್ಠಾನವೂ ತನ್ನದೊಂದು ವರದಿಯಲ್ಲಿ ಬಳಸಿ ಕೊಂಡಿರುವ ಈ ಮಾಹಿತಿಗೆ ಯಾವುದೇ ಆಧಾರವಿಲ್ಲ.
ಈ ಮಾಹಿತಿಯನ್ನು ಪತ್ತೆಹಚ್ಚಲು ಸಿನು ಒಂದು ವರ್ಷ ಕಳೆದರು. ಬಾಸ್ಟನ್ ನಲ್ಲಿನ ಮಾಸಿಕ ಚಕ್ರ ಸಂಶೋಧನಾ ಸಮಾಜದ (Society of
Menstrual Cycle Research) ಅಂತರ ರಾಷ್ಟ್ರೀಯ ಸಂಶೋಧಕರನ್ನು ಸಂಪರ್ಕಿಸಿದರು. ಸಿನು ಮತ್ತವರ ತಂಡದ ಸದಸ್ಯರು ವಿಶ್ವಾದ್ಯಂತ ಪ್ರಕಟ ವಾಗಿರುವ 150 ಕ್ಕೂ ಮಿಗಿಲಾದ ಸಂಶೋಧನಾ ಪ್ರಬಂಧಗಳ್ನ್ನು ಹುಡುಕಾಡಿದರು. ಇದು ತಲೆಬುಡವಿಲ್ಲದ ಮಾಹಿತಿ ಎಂಬುದನ್ನು ಖಚಿತಪಡಿಸಿ ಕೊಂಡರು. ಪ್ರಕಟವಾದ ಯಾವುದೇ ಸಂಶೋಧನಾ ಅಧ್ಯಯನದಲ್ಲೂ ಋತುಸ್ರಾವವನ್ನು ಹೀರಿಕೊಳ್ಳಲು ಹೆಂಗಸರು ಬೂದಿ, ಮರಳು,
ಹೊಟ್ಟು ಮುಂತಾದ ವಸ್ತುಗಳನ್ನು ಬಳಸುತ್ತಿರು ವುದರ ಬಗ್ಗೆ ಪ್ರಸ್ತಾಪವಾಗಿಲ್ಲ.
ಹಿಂದೆ ನಡೆಸಿದ ಸಂಶೋಧನೆಯೊಂದರಂತೆ ೨೦೦೫ರಗಲೇ ಶೇಕಡಾ 35 ಭಾರತೀಯ ನಾರಿಯರು ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಿದ್ದರು. ಇತ್ತೀಚಿಗೆ (2015-16) ಹೊರಬಿದ್ದ ರಾಷ್ಟ್ರೀಯ ಕೌಟಂಬಿಕ ಆರೋಗ್ಯ ಅಧ್ಯಯನದ (National Family Health Study) ಪ್ರಕಾರ ನಗರವಾಸೀ ಸ್ತ್ರೀಯರಲ್ಲಿ ಪ್ರತಿಶತ 77.5 ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಶತ 48.5 ಹೆಂಗಸರು ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ. ಅಂದ ಮೇಲೆ ಬೂದಿ, ಮರಳು, ಹೊಟ್ಟು ಎಂಬುದು ಮಂಕುಬೂದಿ ಎರಚಲೆಂದೇ ನಿಯೋಜಿತವಾದ ಸುಳ್ಳು.
ಶಿಕ್ಷಣವೇ ಬೇಡ ಎಂದು ವಿದ್ಯಾರ್ಥಿನಿಯರು ಶಾಲೆಯಿಂದ ಹೊರಬೀಳುತ್ತಿದ್ದಾರೆಂಬುದು ಮತ್ತೊಂದು ಸುಳ್ಳೆನ್ನುತ್ತಾರೆ ಸಿನು. ಅಬ್ಬಬ್ಬಾ ಎಂದರೆ
ಆ ದಿನಗಳಂದಷ್ಟೇ ಕೆಲವರು ಶಾಲೆಯಿಂದ ದೂರ ಉಳಿಯುತ್ತಾರೆ. ಅದಕ್ಕೆ ಕಾರಣ ಆರೋಗ್ಯದಲ್ಲಿನ ಏರುಪೇರಷ್ಟೇ ವಿನಃ ಮುಟ್ಟಿನ ಉತ್ಪನ್ನಗಳ
ಕೊರತೆಯೂ ಅಲ್ಲ, ಶೌಚಾಲಯದ ಕೊರತೆಯೂ ಅಲ್ಲ. ಮುಟ್ಟಿನ ಅವಽಯಲ್ಲಿ ಸೆಳೆತ-ನೋವುಗಳ ಕಾರಣಕ್ಕಾಗಿ ಶಾಲೆಯಿಂದ ದೂರವುಳಿಯುವ
ವಿದ್ಯಾರ್ಥಿನಿಯರ ಸಂಖ್ಯೆ ಭಾರತದಲ್ಲಿ ಶೇಕಡಾ 24, ಮುಂದುವರಿದ ಅಮೆರಿಕದ ಟೆಕ್ಸಾಸ್ ನಗರದಲ್ಲಿ ಶೇಕಡಾ 38, ನ್ಯೂ ಯಾರ್ಕ್ ನಗರದಲ್ಲಿ ಶೇಕಡಾ 46 ಹಾಗೂ ಆಸ್ಟ್ರೇಲಿಯಾದಲ್ಲಿ ಶೇಕಡಾ 26 ಎಂಬ ಮಹತ್ವದ ಅಂಕಿಅಂಶಗಳ ಬತ್ತಳಿಕೆ ಸಿನು ಬಳಿಯಿದೆ.
ಆದರೆ ವಾಸ್ತವವನ್ನು ಸುಳ್ಳು ಅಂಕಿ-ಅಂಶಗಳ ಮೂಲಕ ತಿರುಚಿ ತನ್ಮೂಲಕ ನಮ್ಮ (ಗ್ರಾಮೀಣ) ಮಹಿಳೆಯರನ್ನು ಅವಮಾನಿಸುವ ಮತ್ತು ನಮ್ಮ
ಸಂಸ್ಕೃತಿಯನ್ನು ಕೀಳಾಗಿ ನೋಡುವ ಷಡ್ಯಂತರದತ್ತ ಸಿನು ನನ್ನ ಗಮನ ಸೆಳೆಯುತ್ತಾರೆ. ಆಧುನಿಕ ಮಹಿಳೆ ವ್ಯಾಪಕವಾಗಿ ಬಳಸುವ ಸ್ಯಾನಿಟರಿ ನ್ಯಾಪ್ಕಿನ್ನಿನ ಬಗ್ಗೆ ಸಿನು ಅವರ ತಕರಾರಿದೆ. ಮುಟ್ಟಾಗಿರಲಿ, ಇಲ್ಲದಿರಲಿ, ರಕ್ತಸ್ರಾವವಿರಲಿ, ಇಲ್ಲದಿರಲಿ ದಿನಂಪ್ರತಿ ಕನಿಷ್ಠ ಎಂಟು ತಾಸಿನಷ್ಟು ಕಠಿಣ ಶ್ರಮದಲ್ಲಿ ನಿರತರಾಗುವ ದಿನಗೂಲಿ ಮಹಿಳೆಯರ ಅಭ್ಯಾಸಗಳ ಬಗ್ಗೆ ಸಿನು ಅವರಿಗೆ ಅಪಾರವಾದ ಗೌರವವಿದೆ. ಅವರಾರೂ ನ್ಯಾಪ್ಕಿನ /ಪ್ಯಾಡ್ ಬಳಸುವುದಿಲ್ಲ. ಸಡಿಲವಾದ ಒಳಲಂಗವನ್ನೇ ಕಚ್ಚೆಯಂತೆ ಧರಿಸಿ ಅದರೊಳಗೇ ರಕ್ತಸ್ರಾವಾಗಬಿಡುತ್ತಾರೆ. ಅದು ಅ ಒಣಗುತ್ತದೆ.
ಯಾವುದೇ ಆಧುನಿಕ ಮಾಸಿಕ ಬಳಕೆಯ ಉತ್ಪನ್ನದಿಂದ ಅವಳು ದೂರ. ಅವಳು ನ್ಯಾಪ್ಕಿನ್ ಬಳಸಿದಲ್ಲಿ ಅದರಿಂದ ಸಮಸ್ಯೆಯೇ ಹೆಚ್ಚು. ಶ್ರಮಿಕ ಳಾದ್ದರಿಂದ ಧಾರಾಳವಾಗಿ ಬೆವರುತ್ತಾಳೆ. ತೇವ ಮತ್ತು ಉಷ್ಣತೆಗಳೆರಡೂ ಇದ್ದು, ನ್ಯಾಪ್ಕಿನ್ನಿನ ಪ್ಲಾಸ್ಟಿಕ್ ಹೊರಕವಚ ಗಾಳಿಯಾಡುವುದಕ್ಕೆ ಬಿಡದೆ ಸೋಂಕು ತಗಲುವ ಎಲ್ಲ ಸಾಧ್ಯತೆಗಳೂ ಇದೆ. ನಗರವಾಸೀ ಮಹಿಳೆ ಅರಿವರಿತು ಆಯ್ಕೆ (informed choice) ಮಾಡುತ್ತಾಳೆ. ಅವಳಿಗೆ ಅರಿವು ನೀಡುವುದು ಗೂಗಲ್ ಅಥವಾ ಜಾಹೀರಾತು(!), ಎಂದು ಖೇದ ವ್ಯಕ್ತಪಡಿಸುತ್ತಾರೆ ಸಿನು.
ಮುಟ್ಟಿನ ಶಿಕ್ಷಕಿಯಾಗಿ ಕಾರ್ಯಾರಂಭ ಮಾಡಿದಾಗ ನಮ್ಮ ಹಳ್ಳಿಯ ಹುಡುಗಿಯರಿಗೆ ಮತ್ತು ಮಹಿಳೆಯರಿಗೆ ಯಾವರೀತಿ (ಋತು) ಶಿಕ್ಷಣ ಕೊಡಬಹು ದೆಂಬುದರ ಬಗ್ಗೆ ಯೋಚಿಸುತ್ತಿದೆ. ಆದರೆ, ನನ್ನ ಗ್ರಹಿಕೆ ತಪ್ಪಾಗಿತ್ತು. ಅವರಿಗೆ ನಾನು ತಿಳುವಳಿಕೆ ಕೊಡುವುದಲ್ಲ, ಅವರಿಂದ ನಾನು ಶಿಕ್ಷಣ ಪಡೆಯ ಬೇಕು ಎಂಬುದರ ಅರಿವಾಯಿತು. ಅವರ ಜ್ಞಾನಭಂಡಾರ ಅಪಾರ. ನಾನು ಕಲಿತದ್ದನ್ನು ಪಕ್ಕಕ್ಕೆಸರಿಸಿ ಹೊಸತಾಗಿ ಕಲಿಯಬೇಕಾಯಿತು. ಋತು ವಿದ್ಯೆ ಕುರಿತಾದ ನನ್ನ ಪುಸ್ತಕ ಬರಲು ಅವರಷ್ಟೇ ಕಾರಣ. ರೂಢಮೂಲವಾದ ತಮ್ಮ ನಂಬಿಕೆ ಕುರಿತು ಅವರು ನಿರರ್ಗಳವಾಗಿ ಮಾತನಾಡಲಾರರು, ಆದರೆ ಆ ಕೊರತೆ ಅವರ ಜ್ಞಾನದ ಮಹತ್ವವನ್ನು ತಗ್ಗಿಸಲಾರದ್ದು ಎನ್ನುತ್ತಾರೆ ಸಿನು.
ಅನ್ಯ ಮತಸ್ಥ ಮಹಿಳೆಯರ ರಜಸ್ವಲ ನಿಯಮಗಳಿಗೆ ಸಂಬಂಧಿಸಿದಂತೆ ಕೇಳಲಾದ ನನ್ನ ಪ್ರಶ್ನೆಗೆ ಅವರ ಉತ್ತರ: ಸಂಪ್ರದಾಯಸ್ಥ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಹಿಳೆಯರ ಋತು ಅವಧಿಯ ಆಚರಣೆ ಬಹುತೇಕ ಹಿಂದೂ ರಜಸ್ವಲೆಯರ ಆಚರಣೆಯಂತೇ. ಹಿಂದೂ ಮಹಿಳೆಯರ ಅಭ್ಯಾಸಗಳನ್ನು ಪರಿಚಯಮಾಡಿಕೊಂಡರೆ, ಅನ್ಯ ಮತಸ್ಥರ ಆಚರಣೆಗಳನ್ನು ಅರ್ಥೈಸುವುದು ಸುಲಭ.
ಏಕೆಂದರೆ, ಹಿಂದೂ ಧರ್ಮವೇ ಉಳಿದೆಲ್ಲ ಧರ್ಮಗಳ ಮತ್ತು ಧಾರ್ಮಿಕತೆಯ ಮೂಲ. ಬಹಿಷ್ಠೆಯಾದ ಮುಸ್ಲಿಂ ಹೆಂಗಸು ನಮಾಜ್ ಮಾಡುವಂತಿಲ್ಲ. ಅವರಲ್ಲನೇಕರಿಗೆ ಅದರ ಕಾರಣ ತಿಳಿದಿಲ್ಲ. ಅವರ ಆಚರಣೆಯ ಹಿಂದೆ ಭಯ ಅಥವಾ ಭಯಮಿಶ್ರಿತ ಗೌರವವಿದೆ. ನಮಾಜ್ ಮಾಡಲು ವಜ್ರಾಸನದ ದಲ್ಲಿ ಕೂಡಬೇಕಾಗುತ್ತದೆ. ಹಾಗೆ ಕೂತಾಗ ರಕ್ತಸ್ರಾವ ಹೆಚ್ಚಾಗುತ್ತದೆ. ಬಹಳಷ್ಟು ಮಂದಿಗೆ ಅದು ತಿಳಿದಿಲ್ಲ.
ಋತು ವಿದ್ಯೆ ಸಂಪೂರ್ಣವಾಗಿ ಭಾರತೀಯ ಜ್ಞಾನ ಪರಂಪರೆಯನ್ನು ಆಧರಿಸಿದ್ದು. ಹಿಂದೊಮ್ಮೆ ಇದರ ಅರಿವು ಸಾರ್ವತ್ರಿಕವಾಗಿತ್ತು, ಹಾಗೆಯೇ
ಅದರ ಬಗ್ಗೆ ಸಂಪೂರ್ಣವಾದ ವಿಶ್ವಾಸ ಗೌರವಗಳಿದ್ದವು. ಪ್ರತಿಯೊಂದು ಮನೆಯಲ್ಲೂ ಆ ವಿಶೇಷ ಕ್ರಮಗಳನ್ನು ಆದರಿಸುತ್ತಿದ್ದರು, ಅನುಸರಿಸು ತ್ತಿದ್ದರು. ಋತುಮತಿಯಾಗುವುದನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ವಸಾಹತುಶಾಹಿ ಅದೆಲ್ಲವನ್ನೂ ಬದಲಿಸಿತು. ಹೊಸ ಪಠ್ಯಕ್ರಮ ನಮ್ಮ
eನಪರಂಪರಯನ್ನು ನಾಶಮಾಡಿತು. ಆಯುರ್ವೇದ, ಯೋಗ, ಜ್ಯೋತಿಷಗಳನ್ನು ಮೂಲೆಗುಂಪು ಮಾಡಲಾಯಿತು.
ಪಾಶ್ಚಿಮಾತ್ಯ ವಿಜ್ಞಾನವೇ ನಮ್ಮ ಮುಖ್ಯವಾಹಿನಿಯಲ್ಲಿದೆ. ಆಯುರ್ವೇದವನ್ನೇ ಬದಲೀ ವೈದ್ಯಪದ್ಧತಿಯೆನ್ನುವ ಹಂತ ತಲಪಿದ್ದೇವೆ. ವಸಾಹತಿಗೆ ದೂಡಲ್ಪಟ್ಟ ಇತರೆ ರಾಷ್ಟ್ರಗಳ ಸಂಸ್ಕೃತಿಯನ್ನು, ಅದರಲ್ಲೂ ರಜಸ್ವಲಾ ಕ್ರಮ ಗಳನ್ನು, ಗಮನಿಸಿದಾಗ ಅದಕ್ಕೂ ಮತ್ತು ಭಾರತೀಯ ಸಂದರ್ಭಕ್ಕೂ ಸಾಕಷ್ಟು ಸಾಮ್ಯತೆ ಕಂಡುಬರುತ್ತವೆ. ಉದಾಹರಣೆಯಾಗಿ ಆಫ್ರಿಕಾ, ಚೀನಾ, ಶ್ರೀ ಲಂಕಾ, ಫಿಲಿಪೀನ್ಸ ಗಳಿವೆ. ಯೆಹೂದಿ ಹೆಂಗಸರಲ್ಲೂ ಕೆಲವು ನಿರ್ದಿಷ್ಠ ಪದ್ಧತಿಗಳಿವೆ. ನವ ಪೀಳಿಗೆ ಅದಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಆದರೆ ಹಿಂದೂಗಳ ಪರಂಪರೆ ಅವುಗಳನ್ನು ತಕ್ಕಮಟ್ಟಿಗೆ ಉಳಿಸಿಕೊಂಡುಬಂದಿದೆ. ಅದರ ಹಿಂದಿನ ವೈಚಾರಿಕತೆಯನ್ನು ಮರೆತಿದ್ದರೂ, ಆಚರಣೆಯನ್ನು ಉಳಿಸಿಕೊಂಡುಬರುವಲ್ಲಿ ಅಜ್ಜಿಯಂದಿರು ಮುಖ್ಯ ಪಾತ್ರವಹಿಸಿಕೊಂಡುಬಂದಿದ್ದಾರೆ.
ವಿಶ್ವದ ಉಳಿದೆಡೆ ಅದು ಕಾಣೆಯಾಗಲು ಕ್ರಿಶ್ಚಿಯನ್ ಮತ ಕಾರಣವಾಗಿದೆ. ಋತು ವಿದ್ಯೆಯಿಂದ ನಮ್ಮ ಆಳವಾದ ಸಾಂಸ್ಕೃತಿಕ ಬೇರುಗಳನ್ನು ನಾವು
ಕಂಡುಕೊಳ್ಳಬೇಕಿದೆ.ರಜಸ್ವಲಾ ನಿಯಮಗಳನ್ನು ಪಾಲಿಸುವಲ್ಲಿ ಮನೆಯಲ್ಲಿನ ಗಂಡಸರ ಪಾತ್ರವೂ ಉಂಟು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ ಸಿನು ಹೇಳುವುದೇನೆಂದರೆ, ಗಂಡ ಮತ್ತು ಮಕ್ಕಳ ಸಹಾಯ, ಸಹಕಾರವಿಲ್ಲದಿದ್ದರೆ ನಿಯಮಪಾಲನೆ ಸಾಧ್ಯವಿಲ್ಲ.
ದಕ್ಷಿಣ ಭಾರತದಲ್ಲಿ ಇದು ದೊಡ್ಡ ಸಮಸ್ಯೆಯಲ್ಲ. ಉತ್ತರ ಮತ್ತು ಮಧ್ಯ ಭಾರತದಲ್ಲೂ ಋತು ಸಂಹಿತೆ ಜಾರಿಯಲ್ಲಿದ್ದಿತು. ಕೌಮಾರ್ಯವನ್ನು ಸ್ವಾಗತಿಸಿ ಸಂಭ್ರಮಿಸುತ್ತಿದ್ದರು. ಆ ಹಬ್ಬಕ್ಕೆ ಗೌಣ ಎಂಬ ಹೆಸರಿದೆ. ಆದರೆ ಮುಸ್ಲಿಂ ಆಕ್ರಮಣಕಾರರ ಭಯದಿಂದಾಗಿ ಹುಡುಗಿ ದೊಡ್ಡವಳಾಗುವುದನ್ನು
ಗೋಪ್ಯವಾಗಿಡುವ ಪದ್ಧತಿ ಬೆಳೆದುಬಂದು ಕೊನೆಗೆ ಸಡಗರವೇ ನಶಿಸಿಹೋಯಿತು.
ಸಿನು ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ, ಋತು ವಿದ್ಯೆ ಮತ್ತು ಮಹಿಳಾ ಆರೋಗ್ಯ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಗಮನಿಸಿ ಅವರಿಗೇಕೆ ಮ್ಯಾಗ್ಸೇಸೆ ಪ್ರಶಸ್ತಿ ಇನ್ನೂ ನೀಡಿಲ್ಲ ಎಂಬುದು ಆಶ್ಚರ್ಯ. ಸನಾತನ ಪರಂಪರೆಯ ಬಗ್ಗೆ ಮಾತನಾಡುವವರನ್ನು ಕಂಡರೆ ಮ್ಯಾಗ್ಸೇಸೆ ಸಮಿತಿಗೆ ತಿರಸ್ಕಾರವೇ?