Thursday, 12th December 2024

ರಂಗಿನ ದುನಿಯಾದಲ್ಲಿ ನಶೆಯ ಕರಾಳತೆ

dry day

ಪ್ರಚಲಿತ

ಹರೀಶ್ ಪುತ್ತೂರು

ಈ ರಾಷ್ಟ್ರದ ಇತಿಹಾಸ ಜ್ಞಾನವನ್ನು ರಪ್ತು ಮಾಡಿದ ದೇಶ ಭಾರತ. ಈ ರಾಷ್ಟ್ರ ಈಗ ನಶೆಯ ವರ್ತುಲಕ್ಕೆ ಸಿಲುಕಿ ಒದ್ದಾಡಿದಂತೆ ಕಾಣುತ್ತಿದೆ. ದಿನ ಕಳೆದಂತೆ ಯುವಕರೇ ಅಮಲಿನ ದಾಸರಾಗುತ್ತಿದ್ದಾರೆ. ದೇಶದ ಮುಂದಿನ ಭವಿಷ್ಯದ ನಿರ್ಧಾರ ಮಾಡುವಂತ ಯುವಕರನ್ನೇ ಟಾರ್ಗೆಟ್ ಮಾಡುತ್ತಿದೆ ನಶೆಯ ಗ್ಯಾಂಗ್ ಇದಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಶೂನ್ಯವಾಗಿ ಉಳಿದಿದೆ. ದಾರಿ ತಪ್ಪಿದ ಸೆಲೆಬ್ರಿಟಿಗಳು ನಶಾ ಲೋಕದ ಅಂಬಾಸಿಡರ್ಸ್. ಕಾನೂನಿನ ಕಣ್ಣಿಗೆ ಮಣ್ಣೆರಚಿ ನಶೆಯ ಲೋಕವನ್ನು ಸೃಷ್ಟಿಸುತ್ತಿzರೆ, ಅಷ್ಟೆ ಅಲ್ಲ ನಶಾ ಲೋಕದ ಅಂಬಾಸಿಡರ್ಸ್‌ಗಳಿಂದ ದೊಡ್ಡ ದಂಧೆ ನಡೆಯತ್ತಿರುವುದು ಬೆಳಕಿಗೆ ಬಂದಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ದೇಶದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ.

ಅಮಲಿನ ಲೋಕದಲ್ಲಿ ತೇಲಾಡುತ್ತಿದವರ ಕೆಲವೊಂದು ಘಟನೆಗಳನ್ನು ನೆನಪಿಸಿಕೊಂಡರೆ ಮೈ ಜುಮ್ಮೆನ್ನುತ್ತದೆ, ಅದರಲ್ಲಿಯೂ ಅಚ್ಚರಿ ಎಂದರೆ ಸ್ವದೇಶದಿಂದಲೇ ರಪ್ತು ಆಗುತ್ತಿದೆ ಡ್ರಗ್ ಎಂಬ ಕಳವಳಕಾರಿ ಸುದ್ದಿಗಳು ಕೇಳಿಬರುತ್ತಿದೆ. ಇದನ್ನು ಮಟ್ಟ ಹಾಕುವಂತ ಕೆಲಸ ಆಗಬೇಕಿದೆ. ಡ್ರಗ್ ನಂತ ನಶೆ ತೀರ ಆಗರ್ಭ ಶ್ರೀಮಂತ ನಿಗೆ ಮಾತ್ರ ಸಿಗುವ ವಸ್ತು ಆಗಿತ್ತು. ಆದರೆ ಇದೀಗ ಈ ವಸ್ತು ಸಾಮಾನ್ಯನ ಅಂಗೈಯನ್ನು ಸೇರುತ್ತಿದೆ.

ಇದನ್ನೆಲ್ಲ ಕಂಡಾಗ ಭಾರತದ ಪರಿಸ್ಥಿತಿ ಮಾದಕ ವಸ್ತುಗಳ ಮೂಲಕ ಕೆಟ್ಟು ಹೋಗುತ್ತಿದೆಯೆ ಎಂದು ಭಾಸ ವಾಗುವುದು. ನಶೆಯ ಗಮ್ಮತ್ತಿಗೆ ನಮ್ಮ ದೇಶದಲ್ಲಿ ಪಂಜಾಬಿನ ಪರಿಸ್ಥಿತಿ ಕೆಟ್ಟು ಹೋಗಿದ್ದು ಕಂಡಿದ್ದೇವೆ. ಭಾರತವನ್ನು ಫವರ್‌ಪುಲ್ ದೇಶ ಎಂದು ಇತರೆ ದೇಶಗಳು ಕರೆಯುತ್ತಿವೆ ಆದರೆ ಇಲ್ಲಿ ಡ್ರಗ್ ನಂಟು ಬೆಳೆಯುತ್ತಿದೆ. ಅಮಲಿನ ಪದಾರ್ಥಗಳಿಗೆ ಯುವ ಶಕ್ತಿ ಟಾರ್ಗೆಟ್ ಆಗುತ್ತಿವೆ, ಸುಲಭವಾಗಿ ಯುವಕರ ಕೈ ಸೇರುತ್ತಿದೆ ಸಿಂಥೆಟಿಕ್ ಡ್ರಗ್‌ಗಳು. ಇದರ ಹಿಂದೆ ಪ್ರಬಲ ವಿದೇಶಿ ಶಕ್ತಿಗಳ ಕೈವಾಡ ಇದೆ ಎಂಬುದಂತು ಸುಳ್ಳಲ್ಲ.

ದಿನಗಳು ಉರುಳಿದಂತೆ ದೇಶದಲ್ಲಿ ಡ್ರಗ್ಸ್ ನಂಟು ಹೆಚ್ಚೆಚ್ಚಾಗಿ ಬೆಳೆಯುತ್ತಿರುವುದನ್ನು ಚಿವುಟಬೇಕಿದೆ. ದಿನಕ್ಕೊಂದರಂತೆ ಅಧಿಕಾರಿಗಳು ಅಮಲಿನ ರಹಸ್ಯವನ್ನು ಬಯಲು ಮಾಡುತ್ತಿದ್ದಾರೆ. ಮೊನ್ನೆ ತಾನೆ ನಶೆ ಏರಿಸಿಕೊಂಡು ಅಮಲಿನ ಹಡಗಿನಲ್ಲಿ ಗಾಂಜಾ ಗಮ್ಮತ್ತು ನಡೆಸುತ್ತಿದ್ದವರನ್ನು ಅಧಿಕಾರಿಗಳು ಪತ್ತೆ ಹಚ್ಚಿ ತನಿಖೆಗೆ ಒಳಪಡಿಸಿzರೆ. ಇದೇ ರೀತಿ ಉಳಿದವರನ್ನು ಪತ್ತೆ ಹಚ್ಚಿ ತನಿಖೆಗೊಳಪಡಿಸಿದರೆ ರಂಗಿನ ದುನಿಯಾದಲ್ಲಿ ನಶೆಯ ಕರಾಳ ಕಥೆ ಕೊನೆಯಾಗಬಹುದು.