Saturday, 23rd November 2024

ಇಂದು ಐಪಿಎಲ್ ಫೈನಲ್: ಚೆನ್ನೈಗೆ ಮಾರ್ಗನ್ ಪಡೆ ಚ್ಯಾಲೆಂಜ್

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಶುಕ್ರವಾರ ಮುಖಾಮುಖಿಯಾಗುತ್ತಿವೆ.

ಇದೇ ಮೊದಲ ಬಾರಿಗೆ ವಿಶ್ವಕಪ್ ವಿಜೇತ ನಾಯಕರು ಐಪಿಎಲ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಸಿಎಸ್‌ಕೆ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಹಾಗೂ ಕೆಕೆಆರ್ ತಂಡವನ್ನು ಇಂಗ್ಲೆಂಡ್‌ನ ಏಯಾನ್ ಮಾರ್ಗನ್ ಮುನ್ನಡೆಸುತ್ತಿದ್ದಾರೆ.

ಮುಂಬೈ ಅತ್ಯಧಿಕ ಐದು ಬಾರಿ ಟ್ರೋಫಿ ಗೆದ್ದಿದೆ. ಆದರೆ ಈ ಬಾರಿ ಪ್ಲೇ-ಆಫ್ ಹಂತಕ್ಕೆ ತಲುಪುವಲ್ಲಿ ವಿಫಲವಾಗಿದ್ದವು. 2012ರಲ್ಲಿ ಚೆನ್ನೈ ತಂಡವನ್ನೇ ಮಣಿಸಿ ಕೆಕೆಆರ್, ಐಪಿಎಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. ಬಳಿಕ 2014ರಲ್ಲಿ ಗಂಭೀರ್ ನಾಯಕತ್ವದಲ್ಲೇ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆದ್ದು ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕ ರಿಸಿತ್ತು.

ಧೋನಿ ನಾಯಕತ್ವದ ಚೆನ್ನೈ ದಾಖಲೆಯ ಒಂಬತ್ತನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಈ ಪೈಕಿ ಮೂರು ಬಾರಿ ಟ್ರೋಫಿ ಎತ್ತಿ ಹಿಡಿದಿದ್ದು, ನಾಲ್ಕನೇ ಕಿರೀಟವನ್ನು ಎದುರು ನೋಡುತ್ತಿದೆ. ಅತ್ತ ಕೋಲ್ಕತ್ತ, ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಅತ್ತ ಚೆನ್ನೈ ತಂಡವು ಈ ನಡುವೆ ಎರಡು ವರ್ಷಗಳ ನಿಷೇಧವನ್ನು (2016 ಹಾಗೂ 2017) ಎದುರಿಸಿತ್ತು ಎಂಬುದು ಗಮನಾರ್ಹವೆನಿಸುತ್ತದೆ. 2020ರಲ್ಲಿ ಮಾತ್ರ ಅಂತಿಮ ನಾಲ್ಕರ ಘಟ್ಟಕ್ಕೆ ತೇರ್ಗಡೆ ಹೊಂದುವಲ್ಲಿ ವಿಫಲವಾಗಿತ್ತು.