Friday, 22nd November 2024

ಏಮ್ಸ್ ಹಿರಿಯ ವೈದ್ಯ ವಿರುದ್ದ ಅತ್ಯಾಚಾರ ಆರೋಪ: ಪ್ರಕರಣ ದಾಖಲು

ನವದೆಹಲಿ: ಏಮ್ಸ್ (AIIMS) ಹಿರಿಯ ವೈದ್ಯ ಏಮ್ಸ್ ಕ್ಯಾಂಪಸ್ ನಲ್ಲಿಯೇ ಅತ್ಯಾಚಾರ ಎಸಗಿ ದ್ದಾರೆ ಎಂದು ಆರೋಪಿಸಿ ಕಿರಿಯ ವೈದ್ಯೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಡಾ.ಹೌಸ್ ಖಾಸ್ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಕಿರಿಯ ವೈದ್ಯೆಯನ್ನು ಬರ್ತ್ ಡೇ ಪಾರ್ಟಿಗೆ ಕರೆದು ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್ 26ರಂದು ವೈದ್ಯನ ಮನೆಯಲ್ಲಿ ಹುಟ್ಟುಹಬ್ಬ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂತ್ರಸ್ತೆ ಸಹ ಏಮ್ಸ್ ನಲ್ಲಿಯೇ ಕೆಲಸ ಮಾಡುತ್ತಿದ್ದರಿಂದ ಬರ್ತ್ ಡೇ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಸಂತ್ರಸ್ತೆಯೂ ಸೇರಿದಂತೆ ಬರ್ತ್ ಡೇ ಪಾರ್ಟಿಯಲ್ಲಿ ಹಲವರು ಆಗಮಿಸಿದ್ದರು. ಬರ್ತ್ ಡೇ ಮುಗಿದ ಬಳಿಕ ವೈದ್ಯೆಯನ್ನು ರೂಮಿಗೆ ಬಿಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.

ಅ.11ರಂದು ಹೌಜ್ ಖಾಸ್ ಪೊಲೀಸ್ ಠಾಣೆಗೆ ಆಗಮಿಸಿದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.