Saturday, 23rd November 2024

229 ದಿನಗಳಲ್ಲೇ ಕರೋನಾ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ

#corona

ನವದೆಹಲಿ: ದಿನೇ ದಿನೇ ಸೋಂಕು ಕ್ಷೀಣಿಸುತ್ತಿರುವುದರಿಂದ ಸಕ್ರಿಯ ಕರೋನಾ ಸೋಂಕಿನ ಪ್ರಮಾಣ 1.78 ಲಕ್ಷಕ್ಕೆ ಕುಸಿದಿದೆ.

ಕಳೆದ 229 ದಿನಗಳ ಮೊದಲ ಭಾರಿಗೆ ಸಕ್ರೀಯ ಸೋಂಕು ಪ್ರಮಾಣದಲ್ಲಿ ಭಾರೀ ಇಳಿಕೆ ಕಂಡು ಬಂದಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಒಟ್ಟು ಸೋಂಕಿತರ ಸಂಖ್ಯೆ 3,41,08,996 ಆಗಿದೆ. ಜೊತೆಗೆ 197 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿಗೆ ಇದುವರೆಗೂ ಬಲಿ ಯಾದವರ ಸಂಖ್ಯೆ 4,52,651 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕಳೆದ 26 ದಿನಗಳಿಂದ ಪ್ರತಿನಿತ್ಯ 30 ಸಾವಿರದೊಳಗೆ ಕೊರೊನಾ ಸೋಂಕು ದಾಖಲಾಗುತ್ತಿದೆ.