ನವದೆಹಲಿ: ಕಳೆದ 24 ಗಂಟೆಗಳಲ್ಲಿ 18 ಸಾವಿರದ 454 ಹೊಸ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 3 ಕೋಟಿಯ 41 ಲಕ್ಷದ 27 ಸಾವಿರದ 450ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ 1 ಲಕ್ಷದ 78 ಸಾವಿರದ 831ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಸೋಂಕಿಗೆ 160 ಮಂದಿ ಬಲಿಯಾಗುವುದರೊಂದಿಗೆ ದೇಶದಲ್ಲಿ ಒಟ್ಟು ಇದುವರೆಗೆ ಮೃತಪಟ್ಟವರ ಸಂಖ್ಯೆ 4 ಲಕ್ಷದ 52 ಸಾವಿರದ 811ಕ್ಕೆ ತಲುಪಿದೆ. ಕಳೆದ 27 ದಿನಗಳಿಂದ ಸತತವಾಗಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ದಿನಕ್ಕೆ 30 ಸಾವಿರಕ್ಕಿಂತ ಕೆಳಗೆ ಬರುತ್ತಿದೆ.
ಕಾಯಿಲೆಯಿಂದ ಚೇತರಿಸಿಕೊಂಡ ಜನರ ಸಂಖ್ಯೆ 3 ಕೋಟಿಯ 34 ಲಕ್ಷದ 95 ಸಾವಿರದ 808 ಕ್ಕೆ ಏರಿದೆ, ಪ್ರಕರಣದ ಸಾವಿನ ಪ್ರಮಾಣವು 1.33 ಶೇಕಡಾ ದಾಖಲಾಗಿದೆ. ರಾಷ್ಟ್ರವ್ಯಾಪಿ ಕೋವಿಡ್ -19 ಲಸಿಕೆ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ಈವರೆಗೆ ನೀಡಲಾದ ಕೋವಿಡ್ ಡೊಸೇಜ್ 100 ಕೋಟಿ ಮೀರಿದೆ.