Saturday, 23rd November 2024

ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನ ಹೊಂದಿದೆ: ನರೇಂದ್ರ ಮೋದಿ

ನವದೆಹಲಿ: ಅಕ್ಟೋಬರ್ 21ಕ್ಕೆ ದೇಶದಲ್ಲಿ ಶತಕೋಟಿ ಕೋವಿಡ್-19 ಲಸಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲ ಆರೋಗ್ಯ ಸಮುದಾಯದ ಕಾರ್ಯಕರ್ತರು, ವೈದ್ಯರು, ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನುದ್ದೇಶಿಸಿ ಹೇಳಿದರು.

ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶ 100 ಕೋಟಿ ಲಸಿಕೆ ಗುರಿ ಸಾಧಿಸಿದ ಸಂತೋಷ ವನ್ನು ಹಂಚಿಕೊಂಡರು. ಇದು ಎಲ್ಲರ ಸಾಧನೆ, ಹೃದಯಪೂರ್ವಕವಾಗಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳು ತ್ತೇನೆ. ವ್ಯಾಕ್ಸಿನೇಷನ್ ನಲ್ಲಿ ಭಾರತ ಜಗತ್ತಿನಲ್ಲಿಯೇ 2ನೇ ಸ್ಥಾನದಲ್ಲಿದೆ. ಲಸಿಕೆ ನೀಡಿಕೆಯಲ್ಲಿ ಇಂದು ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.

ಮೊದಲ ಅಲೆ ಕಂಡುಬಂದ ಸಂದರ್ಭದಲ್ಲಿ ದೇಶದ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಸಮಯ ಕಳೆದಂತೆ ಪರಿಸ್ಥಿತಿಗೆ ಹೊಂದಿಕೊಂಡೆವು. ಸೋಂಕನ್ನು ಸಮರ್ಥವಾಗಿ ನಾವು ಭಾರತೀಯರು ಎದುರಿಸಿದ್ದೇವೆ. ಕಳೆದ ಜನವರಿಯಲ್ಲಿ ಕರೋನಾ ಲಸಿಕೆ ಬಂದ ಮೇಲೆ 9 ತಿಂಗಳಲ್ಲಿ ಸಾಧನೆ ಮಾಡಿದ್ದೇವೆ. ಸವಾಲನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅದರ ಪರಿಣಾಮವೇ ಇಂದು ಶತಕೋಟಿ ಲಸಿಕೆ, ನಮ್ಮ ದೇಶದ ಸಾಮರ್ಥ್ಯದ ಪ್ರತಿಬಿಂಬ ವಾಗಿದೆ ಎಂದರು.