Friday, 22nd November 2024

ಬಿಜೆಪಿಯಲ್ಲಿ ಆಕಾಂಕ್ಷಿಗಳನ್ನು ಸಂತೈಸುವುದೇ ಬಿಜೆಪಿಗೆ ಸವಾಲು

 ಈಶ್ವರಪ್ಪ ಪುತ್ರನಿಗೆ ತಪ್ಪಿದ ಟಿಕೆಟ್
ಬಂಡಾಯವೇಳದ ರೀತಿ ಎಚ್ಚರವಹಿಸುವಂತೆ ಉಸ್ತುವಾರಿಗಳಿಗೆ ಸೂಚನೆ
ಉಪಚುನಾವಣೆ ಬಳಿಕ ಸೂಕ್ತ ಸ್ಥಾಾನಮಾನದ ಭರವಸೆ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು
ಸರಕಾರದ ಅಳಿವು-ಉಳಿವಿನಲ್ಲಿ ಮಹತ್ವ ವಹಿಸಿರುವ ಉಪಚುನಾವಣೆಗೆ ಬಿಜೆಪಿ ತನ್ನ ಹುರಿಯಾಳುಗಳನ್ನು ಅಂತಿಮಗೊಳಿಸಿದ್ದು, ಇದೀಗ ಅಭ್ಯರ್ಥಿಗಳ ಘೋಷಣೆಯಿಂದ ಶುರುವಾಗಿರುವ ಅಸಮಾಧಾನ ತಣಿಸುವುದೇ ದೊಡ್ಡ ಸವಾಲಾಗಿದೆ.

ಗುರುವಾರ ಟಿಕೆಟ್ ಘೋಷಣೆಯಾಗುತ್ತಿಿದ್ದಂತೆ, ಕೆಲ ಕ್ಷೇತ್ರದಲ್ಲಿ ಅಸಮಾಧಾನದ ಬೆಂಕಿ ಭುಗಿಲೆದಿದೆ. ಪ್ರಮುಖವಾಗಿ ಉಪಮುಖ್ಯಮಂತ್ರಿಿ ಲಕ್ಷ್ಮಣ ಸವದಿ ಸ್ಪರ್ಧಿಸಬೇಕಿದ್ದ ಅಥಣಿ, ಶಂಕರ್ ಅವರು ಸ್ಪರ್ಧಿಸಬೇಕಿದ್ದ ರಾಣೆಬೆನ್ನೂರು, ಮಹಾಲಕ್ಷ್ಮೀ ಲೇಔಟ್ ಸೇರಿದಂತೆ ಕೆಲ ಭಾಗದಲ್ಲಿ ಬಂಡಾಯ ಭುಗಿಲೆದಿದ್ದೆೆ.

ಇದೀಗ ಮುಖ್ಯಮಂತ್ರಿಿ ಯಡಯೂರಪ್ಪ ಸೇರಿದಂತೆ ಹಲವು ನಾಯಕರು ಬಂಡಾಯ ಎದ್ದಿರುವ ಕ್ಷೇತ್ರಗಳ ಮುಖಂಡರನ್ನು ಸಂತೈಸುವಲ್ಲಿ ಮುಳುಗಿದ್ದು, ಯಾವುದೇ ಕಾರಣಕ್ಕೂ ಬಂಡಾಯದ ಬಿಸಿ ಬಿಜೆಪಿ ಅಭ್ಯರ್ಥಿಗಳಿಗೆ ಕಾಡಬಾರದು ಎನ್ನುವ ಖಡಕ್ ಸೂಚನೆನೀಡಿದ್ದಾಾರೆ ಎನ್ನಲಾಗಿದೆ.

ಶುಕ್ರವಾರ ಉಪಚುನಾವಣೆಗೆ ಸಂಬಂಧಿಸಿದಂತೆ ಸಾಲು ಸಾಲು ಸಭೆ ನಡೆಸಿರುವ ಯಡಿಯೂರಪ್ಪ ಅವರು, ಕ್ಷೇತ್ರವಾರು ಬಂಡಾಯ ತಣಿಸುವ ಪ್ರಯತ್ನವನ್ನು ಮಾಡಿದ್ದಾಾರೆ. ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಟಿಕೆಟ್ ಕೈತಪ್ಪಿಿರುವುದರಿಂದ, ಪಕ್ಷಾಾಂತರವಾಗುವ ಸಾಧ್ಯತೆಯಿರುವುದರಿಂದ ಅದನ್ನು ತಡೆಯಬೇಕೆಂದು ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾಾರೆ. ಅನರ್ಹರಿಗೆ ಕ್ಷೇತ್ರ ಬಿಟ್ಟುಕೊಟ್ಟಿಿರುವವರಿಗೆ ಮುಂದಿನ ದಿನದಲ್ಲಿ ನಿಗಮ ಮಂಡಳಿ ಸೇರಿದಂತೆ ಪಕ್ಷದ ವಲಯದಲ್ಲಿ ಸೂಕ್ತ ಸ್ಥಾಾನಮಾನ ನೀಡುವ ಭರವಸೆಯನ್ನು ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಬಂಡಾಯ ಶಮನಕ್ಕೆೆ ಸಿಎಂ ಗುಪ್ತ ಸಭೆ
ಉಪಚುನಾವಣೆಯಲ್ಲಿ ಎಂಟರಿಂದ 10 ಕ್ಷೇತ್ರಗಳನ್ನು ಗೆಲ್ಲಬೇಕಾದ ಒತ್ತಡದಲ್ಲಿರುವ ಯಡಿಯೂರಪ್ಪ ಅವರು, ಪಕ್ಷದಲ್ಲಿ ಉಂಟಾಗಿರುವ ಗೊಂದಲ, ಬಂಡಾಯದ ಬಗ್ಗೆೆ ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿ ಕಾರ್ಯತಂತ್ರಗಳ ಬಗ್ಗೆೆ ಚರ್ಚೆ ನಡೆಸಿದ್ದಾಾರೆ. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಾಮಿ, ಉಪಮುಖ್ಯಮಂತ್ರಿಿ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿಿತರ ಆಪ್ತರೊಂದಿಗೆ ಉಪಚುನಾವಣೆಯಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನಗಳ ಬಗ್ಗೆೆ ಚರ್ಚೆ ನಡೆಸಿದರು. ಇನ್ನು ಈಗಾಗಲೇ ಹಂಚಿಕೆಯಾಗಿರುವ ಕ್ಷೇತ್ರಗಳಲ್ಲಿ ಸಚಿವರು ಮತ್ತು ಉಸ್ತುವಾರಿಗಳು ಚುನಾವಣೆ ಮುಗಿಯುವವರೆಗೂ ಬೀಡುಬಿಟ್ಟು ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡಬೇಕೆಂದು ಸೂಚನೆ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಈ ಬಗ್ಗೆೆ ಸುದೀರ್ಘ ಚರ್ಚೆ ನಡೆಸಿರುವ ಯಡಿಯೂರಪ್ಪ ಅವರು, 15 ಕ್ಷೇತ್ರಗಳಲ್ಲಿ ಬಂಡಾಯವೇಳುವ ನಾಯಕರನ್ನು ತಣಿಸುವುದು, ಬಂಡಾಯವೆದ್ದು ಪಕ್ಷಾಾಂತರ ಮಾಡಿದರೂ ಅದರಿಂದ ಪಕ್ಷಕ್ಕೆೆ ಯಾವುದೇ ರೀತಿಯ ಸಮಸ್ಯೆೆಯಾಗದ ರೀತಿ ಎಚ್ಚರವಹಿಸುವುದು ಕ್ಷೇತ್ರದ ಉಸ್ತುವಾರಿ ಹಾಗೂ ಸಚಿವರ ಹೊಣೆ ಎಂದು ಸಭೆಯಲ್ಲಿ ಖಡಕ್ ಸೂಚನೆ ನೀಡಿದ್ದಾಾರೆ ಎಂದು ಮೂಲಗಳು ತಿಳಿಸಿವೆ.

ಶಂಕರ್ ಬೆಂಬಲಿಗರಿಂದ ಪ್ರತಿಭಟನೆ
ಇನ್ನು ಪಕ್ಷೇತರವಾಗಿ ಸ್ಪರ್ಧಿಸಿದ್ದ ರಾಣೆಬೆನ್ನೂರಿನಿಂದ ಸ್ಪರ್ಧಿಸಿದ್ದ ಶಂಕರ್‌ಗೆ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಖಚಿತವಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಟಿಕೆಟ್ ಕೈತಪ್ಪಿಿದ್ದರಿಂದ ಆಕ್ರೋೋಶಗೊಂಡ ಆರ್. ಶಂಕರ್ ಅಭಿಮಾನಿಗಳು, ಮುಖ್ಯಮಂತ್ರಿಿ ಯಡಿಯೂರಪ್ಪ ಅವರ ಧವಳಗಿರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋೋಶವ್ಯಕ್ತಪಡಿಸಿದರು. ಪ್ರಮುಖವಾಗಿ ಮೈತ್ರಿಿ ಸರಕಾರದಲ್ಲಿ ಸಚಿವರಾಗಿದ್ದಾಾಗ ಟಿಕೆಟ್ ನೀಡುವ ಭರವಸೆ ನೀಡಿ ಬಿಜೆಪಿ ಸೇರಿಸಿಕೊಂಡು ಇದೀಗ ಮೋಸ ಮಾಡಲಾಗಿದೆ ಎನ್ನುವ ಆರೋಪ ಮಾಡಲಾಯಿತು. ಈ ವೇಳೆ ಶಂಕರ್‌ರನ್ನು ಯಡಿಯೂರಪ್ಪ ಕರೆಸಿ, ಸಚಿವ ಸ್ಥಾಾನ ನೀಡಲಾಗುವುದು. ಪಕ್ಷದ ತೀರ್ಮಾನವನ್ನು ಒಪ್ಪಿಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾಾರೆ. ಇದಾದ ಬಳಿಕ ಶಂಕರ್ ಅವರ ಅಭಿಮಾನಿಗಳು ತಮ್ಮ ಪ್ರತಿಭಟನೆ ಹಿಂಪಡೆದರು.

ಕೈನಲ್ಲಿ ಮುಗಿಯದ ಟಿಕೆಟ್ ಹಂಚಿಕೆ ಪ್ರಕ್ರಿಿಯೆ
ಒಂದೆಡೆ ಬಿಜೆಪಿಯಲ್ಲಿ ಅಭ್ಯರ್ಥಿಗಳ ಪಟ್ಟಿಿ ಘೋಷಣೆಯಿಂದ ಗೊಂದಲ ಉಂಟಾಗಿದ್ದರೆ, ಇತ್ತ ಕಾಂಗ್ರೆೆಸ್‌ಗೆ ಬಾಕಿ ಉಳಿಸಿಕೊಂಡಿರುವ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆಯೇ ದೊಡ್ಡ ತಲೆಬಿಸಿಯಾಗಿದೆ. 15 ಕ್ಷೇತ್ರಗಳಲ್ಲಿ ಎಂಟು ಕ್ಷೇತ್ರಗಳ ಅಭ್ಯರ್ಥಿ ಘೋಷಿಸಿರುವ ಕಾಂಗ್ರೆೆಸ್, ಇನ್ನುಳಿದ ಏಳು ಕ್ಷೇತ್ರಗಳಿಗೆ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ. ಆದರೆ ಇದೀಗ ಈ ಏಳು ಕ್ಷೇತ್ರಕ್ಕೆೆ ಅಭ್ಯರ್ಥಿಯಾಗಲು ಕಾಂಗ್ರೆೆಸ್ ಸ್ಥಳೀಯ ನಾಯಕರು ಮುಂದೆ ಬರುತ್ತಿಿಲ್ಲ. ಇದು ಕಾಂಗ್ರೆೆಸ್ ವರಿಷ್ಠರ ಚಿಂತೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ರಾಣೆಬೆನ್ನೂರಿನಿಂದ ಅರುಣ್ ಅಭ್ಯರ್ಥಿ
ರಾಣೆಬೆನ್ನೂರು ಕ್ಷೇತ್ರದ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಕುಮಾರ್ ಪೂಜಾರ ಅವರಿಗೆ ಬಿಜೆಪಿ ಬಿ.ಫಾರ್‌ಂ ನೀಡಿದೆ.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿಿ ಯಡಿಯೂರಪ್ಪ ಈ ಕುರಿತು ಸೂಚನೆ ನೀಡಿದ್ದರು. ಇದೀಗ ಬಿಜೆಪಿ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಮಾಡಿದೆ. ಸಿಎಂ ಯಡಿಯೂರಪ್ಪ ಈ ಕುರಿತು ಮಾತನಾಡಿ, ಆರ್. ಶಂಕರ್ ಹಾಗೂ ಅವರ ಪತ್ನಿಿ ಜತೆ ಮಾತನಾಡಿದ್ದೇನೆ. ಯಾರೇ ಕಣದಿಂದ ಸ್ಪರ್ಧಿಸಿದರೂ ಅವರಿಗೆ ಬೆಂಬಲ ಕೊಡುತ್ತೇನೆ ಎಂದು ಶಂಕರ್ ಹಾಗು ಅವರ ಪತ್ನಿಿ ಭರವಸೆ ನೀಡಿದ್ದಾರೆ ಎಂದರು.
ಅರುಣ್ ಕುಮಾರ್ ಗುತ್ತಲ್ ಒಳ್ಳೆೆಯ ಅಭ್ಯರ್ಥಿ ಹೀಗಾಗಿ ಅವರ ಪರ ಕೆಲಸ ಮಾಡುವಂತೆ ಹೇಳಿದ್ದೇನೆ. ಅದಕ್ಕೆೆ ಅವರು ಕೂಡ ಒಪ್ಪಿಿ ತೆರಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾವತ್ತು ಕುರ್ಚಿಗೆ ಅಂಟಿಕೊಂಡವನಲ್ಲ, ಯಾರಿಗೆ ಆಗಲಿ ನಾನು ಏನು ಭರವಸೆ ಕೊಡುತ್ತೀನೋ ಆ ಭರವಸೆ ಈಡೇರಿಸುತ್ತೇನೆ ಅದರಂತೆ ಆರ್ ಶಂಕರ್‌ಗೆ ಕೊಟ್ಟಿಿರುವ ಬೇಡಿಕೆ ಕೂಡ ಈಡೇರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.