Thursday, 19th September 2024

ಇಂಧನಗಳ ಬೆಲೆ ಲೀಟರ್ ಗೆ 35 ಪೈಸೆ ಏರಿಕೆ

#Petrol #Diesel

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದು, ಭಾನುವಾರವೂ ದೇಶದ ಎರಡು ಪ್ರಮುಖ ಇಂಧನಗಳ ಬೆಲೆ ಲೀಟರ್ ಗೆ 35 ಪೈಸೆ ಏರಿಕೆ ಮಾಡಲಾಗಿದೆ.

ತೈಲ ಕಂಪನಿಗಳು ಭಾನುವಾರವೂ ದರ ಏರಿಕೆ ಮಾಡಿದ್ದರಿಂದ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 107.24ರೂ.ನಿಂದ 107.59ರೂ.ಗೆ ಏರಿಕೆ ಕಂಡಿ ದ್ದರೆ, ಡೀಸೆಲ್ ಬೆಲೆ ಲೀಟರ್ ಗೆ 95.97ರೂ.ನಿಂದ 96.32 ರೂ.ಗೆ ಏರಿಕೆ ಕಂಡಿದೆ.

ಮುಂಬೈನಲ್ಲಿ ಭಾನುವಾರ ಪೆಟ್ರೋಲ್ ದರ 113.46 ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 104.38 ರೂ., ಕೋಲ್ಕತಾದಲ್ಲಿ ಪೆಟ್ರೋಲ್ ದರ ಲೀಟರ್ ಗೆ 108.11 ರೂ. ಡೀಸೆಲ್ ದರ ಲೀಟರ್ ಗೆ 99.43 ರೂ. ಹಾಗೂ ಚೆನ್ನೈನಲ್ಲಿ 104.52ರೂ. ಹಾಗೂ ಡೀಸೆಲ್ ದರ ಲೀಟರ್ ಗೆ 110.59 ರೂ. ತಲುಪಿದೆ.

Leave a Reply

Your email address will not be published. Required fields are marked *