Wednesday, 23rd October 2024

ನಾಳೆಯಿಂದ 1ರಿಂದ 5ನೇ ತರಗತಿ ಆರಂಭ

ಬೆಂಗಳೂರು: ನಾಳೆಯಿಂದ 1ರಿಂದ 5ನೇ ತರಗತಿಯವರೆಗೆ ಶಾಲೆಗಳು ಆರಂಭಗೊಳ್ಳಲಿದೆ.

ಕರೊನಾ ಹಿನ್ನೆಲೆಯಲ್ಲಿ ಬರೋಬ್ಬರಿ 18 ತಿಂಗಳ ಕಾಲ ಶಾಲೆಗಳು ಮುಚ್ಛಲ್ಪಟ್ಟಿದ್ದು, ನಾಳೆಯಿಂದ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ 1ರಿಂದ 5ರವರೆಗೆ ತರಗತಿಗಳನ್ನು ಆರಂಭಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿವೆ.

ಸೋಮವಾರದಿಂದ ಶುಕ್ರವಾರದವರೆಗೆ 5 ದಿನಗಳ ಕಾಲ ಅರ್ಧ ದಿನ ಮಾತ್ರ ಶಾಲೆಗಳು ನಡೆಯುತ್ತವೆ. ಕೊಠಡಿ ಯೊಂದರಲ್ಲಿ 20 ವಿದ್ಯಾರ್ಥಿಗಳು ಕೂರಲು ಅವಕಾಶ ಕಲ್ಪಿಸಲಾಗಿದೆ.

ಶನಿವಾರ ಮತ್ತು ಭಾನುವಾರ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್‍ನಿಂದ ಸ್ವಚ್ಚಗೊಳಿಸಬೇಕು. ಎರಡು ಕೋವಿಡ್ ಲಸಿಕೆ ಪಡೆದ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗಿ ಮಕ್ಕಳಿಗೆ ಬೋಧನೆ ಮಾಡುವಂತೆ ಸೇರಿದಂತೆ ಹಲವಾರು ಮಾರ್ಗಸೂಚಿಗಳನ್ನು ಸರ್ಕಾರ ರೂಪಿಸಿದ್ದು, ಇದರ ಅನ್ವಯ ರಾಜ್ಯಾದ್ಯಂತ ಎಲ್ಲ ಕಡೆ ಶಾಲೆ ಗಳನ್ನು ಪ್ರಾರಂಭವಾಗಲಿವೆ.

ಸ್ನಾತಕೋತ್ತರ, ಪದವಿ, ಪದವಿಪೂರ್ವ ಹಾಗೂ 6ರಿಂದ 8ನೇ ತರಗತಿವರೆಗಿನ ಶಾಲೆಗಳು ಈಗಾಗಲೇ ಪ್ರಾರಂಭ ವಾಗಿದ್ದು, ಯಶಸ್ವಿಯಾಗಿ ನಡೆಯುತ್ತಿವೆ. ಸಾಧಕ-ಬಾಧಕಗಳನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಪೂರ್ತಿ ದಿನ ಶಾಲೆ ನಡೆಸುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.