Thursday, 19th September 2024

ಲಸಿಕಾ ಅಭಿಯಾನದ ಯಶಸ್ಸು ದೇಶದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ: ನರೇಂದ್ರ ಮೋದಿ

ನವದೆಹಲಿ: ಭಾರತದ ಕೋವಿಡ್‌ ಲಸಿಕಾ ಅಭಿಯಾನದ ಯಶಸ್ಸು ದೇಶದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತಮ್ಮ ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ಭಾನುವಾರ ಮಾತನಾಡಿ, .  100 ಕೋಟಿ ಲಸಿಕೆಯ ಡೋಸ್‌ಗಳ ಮೈಲಿಗಲ್ಲನ್ನು ದಾಟಿದ ನಂತರ ಹೊಸ ಶಕ್ತಿ ಯೊಂದಿಗೆ ಮುಂದುವರಿಯುತ್ತಿದೆ. ಸಾಧನೆಗೆ ಕಾರಣರಾದ ಆರೋಗ್ಯ ಕಾರ್ಯಕರ್ತರನ್ನು ಶ್ಲಾಘಿಸಿ, ‘ಆರೋಗ್ಯ ಕಾರ್ಯ ಕರ್ತರು ದೇಶದಲ್ಲಿ ಲಸಿಕೆ ಹಾಕಿಸಿ ಕೊಳ್ಳದ ಯಾರನ್ನೂ ಬಿಡುವುದಿಲ್ಲ ಎಂದು ನನಗೆ ತಿಳಿದಿದೆ’ ಎಂದರು.

ನಮ್ಮ ಲಸಿಕಾ ಅಭಿಯಾನದ ಯಶಸ್ಸು ಭಾರತದ ಸಾಮರ್ಥ್ಯ ಮತ್ತು ಸಾಮೂಹಿಕ ಪ್ರಯತ್ನದ ಶಕ್ತಿ ಯನ್ನು ತೋರುತ್ತದೆ. ಈ ಮೈಲಿಗಲ್ಲನ್ನು ದಾಟಿದ ನಂತರ ದೇಶವು ಹೊಸ ಶಕ್ತಿ ಮತ್ತು ಉತ್ಸಾಹದಿಂದ ಮುನ್ನಡೆಯುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

‘ಭಾರತವು ಯಾವಾಗಲೂ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿದೆ. ಅದರ ಭಾಗವಾಗಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ನೆರವು ನೀಡಿದೆ’ ಎಂದು ಪ್ರಧಾನಿ ಹೇಳಿದರು.