Saturday, 23rd November 2024

ರಜನಿಕಾಂತ್’ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ನವದೆಹಲಿ: ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ನವದೆಹಲಿಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಚಿತ್ರರಂಗದಲ್ಲಿ ಅತ್ಯಮೋಘ ಸೇವೆ ಸಲ್ಲಿಸಿರುವ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಕರೊನಾ ಕಾರಣ ದಿಂದ ಪ್ರಶಸ್ತಿ ಪ್ರದಾನವಾಗಿರಲಿಲ್ಲ. ಸೋಮವಾರ ನವದೆಹಲಿಯಲ್ಲಿ ನಡೆದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ರಜನಿ ಕಾಂತ್ ಅವರಿಗೆ ಫಾಲ್ಕೆ ಪ್ರದಾನ ಮಾಡಲಾಗಿದೆ.

ಕಂಗನಾ ರಾಣಾವತ್‍ಗೆ ಉತ್ತಮ ನಟಿ, ಧನುಷ್ ಮತ್ತು ಮನೋಜ್ ಬಾಜಪೇಯಿ ಅವರಿಗೆ ಉತ್ತಮ ನಟ ಎಂಬ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಗಾಯಕರಾದ ಬಿ.ಪಾರಕ್, ಸವಣಿ ರವೀಂದ್ರ ಅವರಿಗೆ ಉತ್ತಮ ಹಿನ್ನೆಲೆ ಗಾಯಕರು ಎಂಬ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಜನಿಕಾಂತ್, ಪ್ರಶಸ್ತಿಗಾಗಿ ಸರ್ಕಾರಕ್ಕೆ ಧನ್ಯವಾದಗಳು. ನನ್ನ ಗುರು, ಹಾಗೂ ಚಿತ್ರ ನಿರ್ದೇಶಕ ಕೆ.ಬಾಲಚಂದರ್’ರಿಗೆ ಪ್ರಶಸ್ತಿ ಅರ್ಪಿಸುತ್ತೇನೆ. ನನ್ನ ಸಹೋದರ ಸತ್ಯನಾರಾಯಣ ರಾವ್ ಅವರಿಗೆ ಧನ್ಯವಾದಗಳು’ಎಂದು ಹೇಳಿದರು.

ನನ್ನ ಸ್ನೇಹಿತ ಸಾರಿಗೆ ಸಹೋದ್ಯೋಗಿ ರಾಜ್ ಬಹದ್ದೂರ್ ಅವರು ನನ್ನಲ್ಲಿ ನಟನೆಯ ಪ್ರತಿಭೆಯನ್ನು ಗುರುತಿಸಿದರು. ನನ್ನ ಸಿನಿಮಾಗಳನ್ನು ನಿರ್ಮಿಸಿದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ವಿತರಕರು, ಮಾಧ್ಯಮದವರು, ನನ್ನ ಎಲ್ಲಾ ಅಭಿಮಾನಿಗಳು, ಮತ್ತು ತಮಿಳು ಜನರಿಗೆ ಧನ್ಯ ವಾದಗಳು’ ಎಂದರು.

ತಮಿಳು ನಟ ಧನುಷ್‌ ಮತ್ತು ಹಿಂದಿಯ ಮನೋಜ್‌ ಬಾಜಪೇಯಿ ಅವರು ಕ್ರಮವಾಗಿ ʼಅಸುರನ್‌ʼ ಹಾಗೂ ʼಭೋನ್ಸ್ಲೇʼ ಸಿನಿಮಾದಲ್ಲಿನ ನಟನೆಗಾಗಿ ʼಅತ್ಯುತ್ತಮ ನಟʼ ಪ್ರಶಸ್ತಿ ಪಡೆದಿದ್ದಾರೆ. ಬಾಲಿವುಡ್ ನಟಿ ಕಂಗನಾ ರನೌತ್‌ ʼಮಣಿಕರ್ಣಿಕಾʼ, ʼಪಂಗಾʼ ಚಿತ್ರಗಳಲ್ಲಿನ ಅಭಿನಯಕ್ಕಾಗಿ ʼಅತ್ಯುತ್ತಮ ನಟಿʼ ಪ್ರಶಸ್ತಿ ಸ್ವೀಕರಿಸಿದ್ದಾರೆ.