Thursday, 19th September 2024

ಮಾಜಿ ಪ್ರಧಾನಿ ಇಂದಿರಾ ಗಾಂಧಿ 37ನೇ ಪುಣ್ಯತಿಥಿ: ರಾಹುಲ್ ಪುಷ್ಪನಮನ

ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 37ನೇ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್‌ ನಾಯಕರು ಭಾನುವಾರ ಇಂದಿರಾ ಗಾಂಧಿ ಅವರ ಸ್ಮಾರಕ ‘ಶಕ್ತಿ ಸ್ಥಳ’ ದಲ್ಲಿ ಪುಷ್ಪನಮನ ಸಲ್ಲಿಸಿದರು.

ಇಂದಿರಾ ಅವರು ಮಹಿಳಾ ಶಕ್ತಿಗೆ ಉತ್ತಮ ಉದಾಹರಣೆಯಾಗಿದ್ದರು. ನನ್ನ ಅಜ್ಜಿ ದೇಶಕ್ಕೆ ನಿರ್ಭೀತಿಯಿಂದ ಸೇವೆ ಸಲ್ಲಿಸಿದ್ದಾರೆ. ಅವರ ಜೀವನವು ನಮಗೆ ಸ್ಪೂರ್ತಿಯ ಸೆಲೆಯಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಭಾರತದ ಉಕ್ಕಿನ ಮಹಿಳೆ, ಭಾರತದ ಮೊದಲ ಮಹಿಳಾ ಪ್ರಧಾನಿ, ನಿಜವಾದ ಭಾರತ ರತ್ನವಾದ ಅವರಿಗೆ ಅವರ ಪುಣ್ಯತಿಥಿ ಯಂದು ಶತಕೋಟಿ ನಮನಗಳು’ ಎಂದು ಕಾಂಗ್ರೆಸ್‌ ಟ್ವೀಟ್‌ ಖಾತೆಯಲ್ಲಿ ಗೌರವ ಸಲ್ಲಿಸಿದೆ.

ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ 1984ರಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯಿಂದ ಹತ್ಯೆಗೀಡಾದರು.

Leave a Reply

Your email address will not be published. Required fields are marked *