Friday, 22nd November 2024

ತೆರಿಗೆಯ ಒಂದು ವಿಮರ್ಶೆ

ವಿಶ್ಲೇಷಣೆ

ಜೆ.ಸಿ.ಜಾಧವ

ತೆರಿಗೆ ಎನ್ನುವುದು ಸರಕಾರಕ್ಕೆ ಆದಾಯದ ಮೂಲವಾದರೆ, ಜನಸಾಮಾನ್ಯರಿಗೆ ತೆರಿಗೆ ತಪ್ಪಿಸಿಕೊಳ್ಳುವ ಚಿಂತೆ. ಆದರೆ ಸಾಮಾಜಿಕ ಹೊಣೆಗಾರಿಕೆಗೆ, ಮೂಲಭೂತ ಸೌಕರ್ಯಗಳಿಗೆ, ಸರಕಾರದ ಆಡಳಿತಾತ್ಮಕ ವೆಚ್ಚಗಳಿಗೆ, ರಕ್ಷಣಾ ವೆಚ್ಚಗಳಿಗೆ, ಆಧುನಿಕ ಸೌಲಭ್ಯಗಳಿಗೆ ಹೀಗೆ ಹಲವಾರು ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸರಕಾರಗಳು ತೆರಿಗೆಯ ದರಗಳನ್ನು ಆಗಾಗ ಪರಿಷ್ಕರಿಸುತ್ತವೆ.

ತೆರಿಗೆಯ ಬಗ್ಗೆ ಗಾದೆ ಹೀಗಿದೆ ‘ಪ್ರಾಮಾಣಿಕರಿಗೆ ತೆರಿಗೆಯ ದಂಡ, ಅಪ್ರಾಮಾಣಿಕರಿಗೆ ಬಹುಮಾನದ ಪುಂಜ’. ವ್ಯಾಪರ-ವ್ಯವಹಾರಸ್ಥರು, ವೃತ್ತಿಪರರು, ಉದ್ಯಮಿಗಳು, ಕೃಷಿ ಉದ್ಯಮಿಗಳು, ಸ್ವಯಂ ಉದ್ಯೋಗಸ್ಥರು ಹೀಗೆ ಹಲವಾರು ವೃತ್ತಿಯವರು ಸರಕಾರಕ್ಕೆ ಆದಾಯದ ಗಳಿಕೆಯ ಸರಿಯಾದ ಲೆಕ್ಕ ನೀಡುವುದೇ ಇಲ್ಲ. ಹಾಗಾಗಿ ಅಂತಹವರ ಸಂಪತ್ತು ವೃದ್ಧಿಯಾಗುತ್ತಲೇ ಇರುತ್ತದೆ.

ಆದರೆ ಸರಕಾರಿ ಅಥವಾ ಸರಕಾರದ ಸಹಯೋಗದ ಸಂಸ್ಥೆಗಳ ಉದ್ಯೋಗಿಗಳ ಆದಾಯದ ಲೆಕ್ಕ ಸರಕಾರಕ್ಕೆ ನಿಖರವಾಗಿ ತಿಳಿಯುವುದರಿಂದ ವೇತನದ ಮೂಲದಲ್ಲೇ ಕಡಿತ ಮಾಡಿ ನಿವ್ವಳ ವೇತನ ಸಿಗುತ್ತದೆ. ಹಾಗಾಗಿ ರು.1000/- ಮೌಲ್ಯದ ವಸ್ತುವನ್ನು ಕೊಳ್ಳಬೇಕಾದರೆ ಆದಾಯ ತೆರಿಗೆದಾರ ಎಷ್ಟು ಹಣ ನೀಡಿ ಖರೀದಿಸ ಬೇಕು, ಹಾಗೆಯೇ ಆದಾಯ ತೆರಿಗೆದಾರರಲ್ಲದಿದ್ದರೆ ಎಷ್ಟು ಹಣ ನೀಡಿ ಖರೀದಿಸಬೇಕೆಂಬ ವಿಷಯವನ್ನು ಈ ಉದಾಹರಣೆಯ ಮೂಲಕ ನಾವು ಗಮನಿಸಬಹುದು.

ರು.1000/- ಮೌಲ್ಯದ ಒಂದು ವಸ್ತು ಖರೀದಿಸ ಬೇಕಾದರೆ ಆದಾಯ ತೆರಿಗೆದಾರನಲ್ಲದಿದ್ದರೆ ರು.1180/- ನೀಡಿ ಖರೀದಿಸಬೇಕು. ಅದೇ ಆದಾಯ ತೆರಿಗೆದಾರನಾಗಿದ್ದರೆ ರು.1423.08/- ನೀಡಿ ಖರೀದಿಸಬೇಕಾಗು ತ್ತದೆ. ಈ ಅಸಮಾನತೆ ಹೇಗೆಂದು ಗಮನಿಸೋಣ. ರು.1000/- ಬೆಲೆಯ ವಸ್ತುಗೆ ಸರಕು ಮತ್ತು ಸೇವೆಗಳ ತೆರಿಗೆ(ಜಿ. ಎಸ್.ಟಿ.) ಶೇ.೧೮ರ ದರ ಎಂದು ಭಾಸಿದರೆ, ರು.1000/- ಮೂಲ ಬೆಲೆ ಹಾಗೂ ಜಿ.ಎಸ್.ಟಿ. ರೂ.180/- ಸೇರಿ ಒಟ್ಟು ರು.1180/-  ನೀಡಿ ಆದಾಯ ತೆರಿಗೆದಾರನಲ್ಲದಿದ್ದರೆ ಖರೀದಿಸಬೇಕಾಗುತ್ತದೆ. ಅದೇ ಆದಾಯ ತೆರಿಗೆದಾರ ರು.1180/- ಆದಾಯವನ್ನು ಗಳಿಸಬೇಕಾದರೆ ಎಷ್ಟು ತೆರಿಗೆ ನೀಡಬೇಕೆಂದು ಗಮನಿಸೋಣ.

ಆದಾಯ ತೆರಿಗೆದಾರ ಶೇ.20ರ ದರದ ಆದಾಯ ತೆರಿಗೆ ಗುಚ್ಛದಲ್ಲಿದ್ದರೆ(ವಾರ್ಷಿಕ ರು.5ಲಕ್ಷಗಳಿಂದ ರು.10ಲಕ್ಷಗಳವರೆಗೆ) ರು.1000/- ಮೌಲ್ಯದ ವಸ್ತು ಖರೀದಿಸಬೇಕಾದರೆ ರು.1423.08/- ಗಳಿಸಬೇಕಾಗುತ್ತದೆ. ರು.1180ಕ್ಕೆ ಶೇ.20ರ ಆದಾಯ ತೆರಿಗೆ, ಅಂದರೆ ರು.236/- ಹಾಗೂ ಆದಾಯ ತೆರಿಗೆಯ ಶೇ.3ರಷ್ಟು ಸೆಸ್ ಅಂದರೆ ರು.3.08/- ಹೀಗೆ ರು.243.08/- ಆದಾಯ ತೆರಿಗೆ ನೀಡಬೇಕಾಗುತ್ತದೆ. ಅಂದರೆ ಆದಾಯ ತೆರಿಗೆದಾರ ರು.1000/- ಮೌಲ್ಯದ ವಸ್ತು ಖರೀದಿಸಬೇಕಾದರೆ ರು.1423.08/- ಗಳಿಸಬೇಕಾಗುತ್ತದೆ. ಅಂದರೆ ರೂ.423.08ತೆರಿಗೆ ನೀಡಿದಂತಾಗುತ್ತದೆ.

ಶೇ.೪೨.೩ತೆರಿಗೆಯ ಭಾರ. ಹೀಗೆ ರು.೧೦೦೦/- ಮೌಲ್ಯದ ವಸ್ತುನ ಖರೀದಿಗೆ ಆದಾಯ ತೆರಿಗೆದಾರನಲ್ಲದಿದ್ದರೆ ರು.೧೧೮೦/- ಜಿ.ಎಸ್.ಟಿ. ಸೇರಿ ನೀಡ ಬೇಕು. ಆದರೆ ಆದಾಯ ತೆರಿಗೆದಾರನಾಗಿದ್ದರೆ ರು.೧೪೨೩.೦೮/- ನೀಡಬೇಕು. ಈ ಒಂದು ಉದಾಹರಣೆಯಿಂದ ನಮಗೆ ತಿಳಿಯುವುದೇನೆಂದರೆ
ಈ ಕಾರಣಗಳಿಗಾಗಿ ಆದಾಯ ತೆರಿಗೆಯನ್ನು ಬಹಳಷ್ಟು ಜನರು ತಪ್ಪಿಸುವ ದಾರಿಯನ್ನು ಹುಡುಕುತ್ತಾರೆ. ಹಾಗಾಗಿ ಅವರ ಸಂಪತ್ತು ಬೆಳೆಯುತ್ತಾ ಹೋಗುತ್ತದೆ. ಹೀಗೆ ಬೆಳೆದ ಸಂಪತ್ತು ಕಪ್ಪು ಹಣಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದರೆ ಆದಾಯ ತೆರಿಗೆಯ ದರಕಡಿಮೆ ಮತ್ತು ಸರಳೀಕೃತ ನಿಯಮಗಳನ್ನು ಜಾರಿಗೆ ತಂದಿದ್ದೇ ಆದಲ್ಲಿ ಆದಾಯ ತೆರಿಗೆಯಿಂದ ಯಾರೂ ತಪ್ಪಿಸಿಕೊಳ್ಳುವ ಮನಸ್ಸು ಮಾಡುವುದಿಲ್ಲ ಮತ್ತು ಸರಿಯಾದ ಆದಾಯ ತೆರಿಗೆ ಪಾವತಿಸಿ ನಿಶ್ಚಿಂತರಾಗಿರು ತ್ತಾರೆ. ಅಲ್ಲದೇ ಜನಸಾಮಾನ್ಯರಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗಲು ಅವಕಾಶವಾಗುತ್ತದೆ.