ಆಯುಷ್ ಸಚಿವಾಲಯ ಈ ಸಂಬಂಧ ಎಲ್ಲ ಸಚಿವಾಲಯಗಳಿಗೆ ಸೂಚನೆ ನೀಡಿ, ಉದ್ಯೋಗಿಗಳು ಯೋಗ ವಿರಾಮ ಪಡೆದು ಕೊಳ್ಳಲು ಉತ್ತೇಜಿಸಬೇಕು ಎಂದು ಹೇಳಿದೆ. ಇದಕ್ಕೆ ಅನುಗುಣವಾಗಿ, ರಸ್ತೆ ಮತ್ತು ಸಾರಿಗೆ ಸಚಿವಾಲಯ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಎನ್‌ಎಚ್ ಐಡಿಸಿ) ಸಿಬ್ಬಂದಿಗೆ ನ.2ರಿಂದ ಇದನ್ನು ಜಾರಿಗೊಳಿಸಿದೆ.
ದೇಶದ ಆರು ಮುಖ್ಯ ನಗರಗಳಲ್ಲಿ ಜನವರಿ 1ರಿಂದ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲಾಗಿತ್ತು. ಇದರಲ್ಲಿ ಐದು ನಿಮಿಷ ಗಳ ಯೋಗ ವಿರಾಮ ನೀಡಲಾಗಿತ್ತು. ಇದು ಕೆಲಸದ ಸಂಬಂಧಿ ಒತ್ತಡ ನಿವಾರಿಸಿ ಹೊಸತನದ ಅನುಭವ ಪಡೆಯಲು ಉದ್ಯೋಗಿ ಗಳಿಗೆ ನೆರವಾಗಲಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.