Saturday, 23rd November 2024

ಪಟಾಕಿ ಅಕ್ರಮ ಸಾಗಾಟ: 6 ಸಾವಿರ ಕೆಜಿ ವಶಕ್ಕೆ

ನವದೆಹಲಿ: ಪಟಾಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ 6,000 ಕಿಲೋ ಗ್ರಾಮ್‌ ತೂಕದ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ 55 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟಾಕಿ ನಿಷೇಧ ಮಾಡಿದ್ದರೂ ಕೂಡಾ ಪಟಾಕಿಯನ್ನು ಮಾರಾಟ ಮಾಡಿದ, ಪಟಾಕಿಯನ್ನು ಸಂಗ್ರಹ ಮಾಡಿ ಇರಿಸಿದ ಹಾಗೂ ಪಟಾಕಿಯನ್ನು ಸಿಡಿಸಿದ ಕಾರಣಕ್ಕೆ 55 ಮಂದಿಯ ವಿರು‌ದ್ಧ 56 ಪ್ರಕರಣಗಳು ದಾಖಲಾಗಿದೆ.

56 ಪ್ರಕರಣಗಳಲ್ಲಿ ಒಟ್ಟು 6,050 ಕೆಜಿ ಪಟಾಕಿಯನ್ನು ಜಪ್ತಿ ಮಾಡಲಾಗಿದೆ. ಈ 6,050 ಕೆಜಿ ಪಟಾಕಿಗಳ ಪೈಕಿ 2,400 ಕೆಜಿ ಪಟಾಕಿ ಯನ್ನು ಉತ್ತರ ಜಿಲ್ಲೆಯ ದೆಹಲಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದೆ. ದೆಹಲಿಯಲ್ಲಿ ಪಟಾಕಿ ನಿಷೇಧ ಮಾಡ ಲಾದ ಹಿನ್ನೆಲೆ ಯಲ್ಲಿ, ಪಟಾಕಿ ತಯಾರಿಕ ಸಂಸ್ಥೆಗಳು, ಪಟಾಕಿ ಸಂಗ್ರಹ ಘಟಕಗಳ್ನು ಮುಚ್ಚಲಾಗಿದೆ.

ದೆಹಲಿ ಸರ್ಕಾರವು ಕೂಡಾ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಆದರೆ ಈಗ ಅಕ್ರಮವಾಗಿ ಪಟಾಕಿ ಮಾರಾಟವು ನಡೆಯುತ್ತಿದ್ದು, ಹಲವಾರು ಕಡೆಗಳಲ್ಲಿ ಪೊಲೀಸರು ಪಟಾಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚಾಂದಿನಿ ಚೌಕ್, ಪಹರ್‌ಗಂಜ್, ಕರೋಲ್ ಬಾಗ್ ಮತ್ತು ಇತರ ಮಾರುಕಟ್ಟೆ ಪ್ರದೇಶಗಳಲ್ಲಿ ಒಟ್ಟು 286 ಕೆಜಿ ಪಟಾಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಾಹದಾರ ಜಿಲ್ಲಾ ಪೊಲೀಸರು ನಾಲ್ವರನ್ನು ಬಂಧಿಸಿ 294 ಕೆಜಿ ಅಕ್ರಮ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ. ಆ ನಂತರ ಶಹದಾರ ಜಿಲ್ಲೆಯ ಇತರ ತಂಡಗಳು 59 ಕೆಜಿ ಅಕ್ರಮ ಪಟಾಕಿಗಳನ್ನು  ವಶಪಡಿಸಿಕೊಂಡಿದೆ.