Friday, 22nd November 2024

ಅಡುಗೆ ಎಣ್ಣೆ ದರದಲ್ಲಿ ಗಣನೀಯ ಇಳಿಕೆ

ನವದೆಹಲಿ: ಪೆಟ್ರೋಲ್‌, ಡಿಸೇಲ್‌ ಬಳಿಕ ಅಡುಗೆ ಎಣ್ಣೆ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಿದೆ.

ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ತೈಲದ ಮೂಲ ಸುಂಕವನ್ನು ಶೇ.2.5 ರಿಂದ ಶೂನ್ಯಕ್ಕೆ ಕಡಿತಗೊಳಿಸಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣೆ ತಿಳಿಸಿದೆ.

ಕಚ್ಚಾ ತಾಳೆ ಎಣ್ಣೆಗೆ ಒಟ್ಟು ಸುಂಕವು 7.5% ಆಗಿದ್ದು, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ತೈಲಕ್ಕೆ 5% ಆಗಿದೆ. ಇನ್ನು ಆರ್ ಬಿಡಿ ಪಾಲ್ಮೋಲಿನ್ ಆಯಿಲ್, ಸಂಸ್ಕರಿಸಿದ ಸೋಯಾಬೀನ್ ಮತ್ತು ಸಂಸ್ಕ ರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನ ಪ್ರಸ್ತುತ 32.5% ನಿಂದ 17.5% ಗೆ ಕಡಿತಗೊಳಿಸ ಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತೈಲಗಳ ಮೇಲಿನ ಕೃಷಿ-ಸೆಸ್ ಅನ್ನು ಕಚ್ಚಾ ತಾಳೆ ಎಣ್ಣೆಗೆ ಶೇ.20ರಿಂದ ಶೇ.7.5ಕ್ಕೆ ಇಳಿಕೆ ಮಾಡಲಾಗಿದ್ದು, ಕಚ್ಚಾ ಸೋಯಾಬೀನ್ ತೈಲ ಮತ್ತು ಕಚ್ಚಾ ಸೂರ್ಯಕಾಂತಿ ತೈಲದ ಮೇಲಿನ ಸೆಸ್‌ ಶೇ.5ಕ್ಕೆ ಇಳಿಸಲಾಗಿದೆ.

ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದ್ದು, ಪಾಮ್‌ ಆಯಿಲ್‌, ಶೇಂಗಾ ಎಣ್ಣೆ, ಸೋಯಾಬಿನ್‌ ಎಣ್ಣೆ, ಸೂರ್ಯಕಾಂತಿ ಸೇರಿ ಬಹುತೇಕ ಅಡುಗೆ ಎಣ್ಣೆ ದರ ಕಡಿಮೆಯಾಗಿದೆ ಎಂದರು.