ನೋಟು ರದ್ದತಿ ಯಶಸ್ವಿಯಾದರೆ, ಭ್ರಷ್ಟಾಚಾರ ಏಕೆ ಕೊನೆಗೊಂಡಿಲ್ಲ? ಕಪ್ಪು ಹಣ ಏಕೆ ವಾಪಸ್ ಬಂದಿಲ್ಲ? ಆರ್ಥಿಕತೆ ಏಕೆ ನಗದು ರಹಿತವಾಗಿ ಹೋಗಿಲ್ಲ? ಭಯೋತ್ಪಾದನೆಗೆ ಏಕೆ ಹೊಡೆತ ಬಿದ್ದಿಲ್ಲ? ಬೆಲೆ ಏರಿಕೆ ಏಕೆ ಕಡಿಮೆ ಆಗಿಲ್ಲ? ‘ಡಿಮೊನಿ ಟೈಸೇಶನ್ ಡಿಸಾ ಸ್ಟರ್’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಪ್ರಿಯಾಂಕ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ನೋಟು ಅಮಾನ್ಯೀಕರಣವು ಜನರ ಹಿತಾಸಕ್ತಿಯಲ್ಲ ಮತ್ತು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ, ಮೋದಿ ಸರ್ಕಾರವು ಪದೇ ಪದೇ ಆರೋಪವನ್ನು ತಳ್ಳಿ ಹಾಕಿದೆ.
ನವೆಂಬರ್ 8, 2016 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ 500 ಮತ್ತು 1,000 ರೂಪಾಯಿಗಳ ಹೆಚ್ಚಿನ ಮುಖಬೆಲೆಯ ಎಲ್ಲಾ ಕರೆನ್ಸಿ ನೋಟುಗಳನ್ನು ನಿಷೇಧಿಸುವ ನಿರ್ಧಾರವನ್ನು ಪ್ರಕಟಿಸಿದರು.