ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 130
ಸಂಸಾರದಲ್ಲಿ ಆಗಾಗ ವಿರಸ ಇಣುಕಿ ನೋಡಿದರೂ ದಾಂಪತ್ಯ ಎಂಬುದು ಸಮರಸದಲ್ಲೇ ಅಂತ್ಯವಾಗಬೇಕು
ಬೆಂಗಳೂರು: ಸರಸ ಜನನ, ವಿರಸ ಮರಣ, ಸಮರಸನೇ ಜೀವನ ಎಂಬ ಬೇಂದ್ರೆ ಮಾತಿನಂತೆ, ಸರಸದಿಂದ ಆರಂಭಗೊಳ್ಳುವ ಸಂಸಾರದಲ್ಲಿ ಆಗಾಗ ವಿರಸ ಇಣುಕಿ ನೋಡಿದರೂ ದಾಂಪತ್ಯ ಎಂಬುದು ಸಮರಸದಲ್ಲೇ ಅಂತ್ಯವಾಗಬೇಕು.
ಸಂಸಾರದಲ್ಲಿ ಪ್ರೀತಿ, ಗೌರವಗಳನ್ನು ಆದೇಶಿಸಬಾರದು ಮತ್ತು ಕೇಳಿ ಪಡೆಯಬಾರದು. ಅದನ್ನು ಪ್ರೀತಿಯಿಂದ ಗಳಿಸಿಕೊಳ್ಳಬೇಕು. ಇಬ್ಬರ ಸಂಬಂಧ ಪ್ರಶ್ನಾತೀತವಾಗಿರಬೇಕು. ಸುಖ ಸಂಸಾರಕ್ಕೆ ಸುಲಭ ಸೂತ್ರಗಳ ಕುರಿತು ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಣ ತಜ್ಞ ಡಾ.ಕೆ.ಪಿ.ಪುತ್ತೂರಾಯ ಅವರ ಮಾತುಗಳಿವು. ನಾವೆಲ್ಲರೂ ಈ ಜಗತ್ತಿಗೆ ಬರುವಾಗ ಒಬ್ಬೊಬ್ಬರಾಗಿಯೇ ಬರುತ್ತೇವೆ.
ಬಿಟ್ಟು ಹೋಗುವಾಗಲೂ ಒಬ್ಬೊಬ್ಬರಾಗಿಯೇ ಹೋಗುತ್ತೇವೆ. ಆದರೆ, ಈ ಬಂದು ಹೋಗುವ ನಡುವೆ, ಒಬ್ಬೊಬ್ಬರಾಗಿ ಉಳಿಯುವುದಿಲ್ಲ. ಪ್ರಾಯಕ್ಕೆ ಬಂದಂತೆ ಮದುವೆ ಮಾಡಿಕೊಳ್ಳುತ್ತೇವೆ. ಮಕ್ಕಳನ್ನು ಪಡೆದು ಸಂಸಾರಿಗಳಾಗುತ್ತೇವೆ. ನಮ್ಮದು ಸುಖ ಸಂಸಾರವಾಗಬೇಕೆಂಬುದು ಬಯಸುತ್ತೇವೆ. ಆದರೆ, ಎಷ್ಟೋ ಸಲ ಬಯಕೆಗಳೇ ಬೇರೆ, ಆಗುವುದೇ ಬೇರೆ. ಎಲ್ಲರದ್ದೂ ಸುಖ ಸಂಸಾರ ಆಗುವುದಿಲ್ಲ. ಒಂದೊಂದು ಮನೆಯದ್ದೂ ಒಂದೊಂದು ಕಥೆ. ಒಂದೊಂದು ಮನದಲ್ಲೂ ಒಂದೊಂದು ವ್ಯಥೆ ಇರುತ್ತದೆ ಎಂದು ಹೇಳಿದರು.
ಕುಟುಂಬದ ಜನರ ನಡುವೆ ನಾನಾ ಕಾರಣಗಳಿಂದ ವಾದ- ಪ್ರತಿವಾದಗಳು ಏರ್ಪಡುತ್ತಿರುತ್ತವೆ. ಪರಿಣಾಮವಾಗಿ ವಾಜ್ಯಗಳು
ನಡೆಯುತ್ತವೆ. ಮಕ್ಕಳು ಹೆತ್ತವರಿಂದ ದೂರವಾಗುತ್ತಾರೆ. ಜತೆಗಿದ್ದರೂ ಪರಸ್ಪರ ಅರ್ಥ ಮಾಡಿಕೊಳ್ಳದೆ ಅನಿವಾರ್ಯವಾಗಿ
ಎಲ್ಲವನ್ನೂ ಸಹಿಸಿಕೊಳ್ಳುತ್ತಾ ದಾಂಪತ್ಯಕ್ಕೆ ಅಂಟಿಕೊಂಡು ದಿನದೂಡುತ್ತಿರುವ ದಂಪತಿಯೆಷ್ಟಿಲ್ಲ? ಹೆತ್ತವರ ಮತ್ತು ಮಕ್ಕಳ
ಸಂಬಂಧ ಎಷ್ಟು ಮನೆಗಳಲ್ಲಿ ಹಳಸಿ ಹೋಗಿಲ್ಲ ಹೇಳಿ ಎಂದರು.
ಒಬ್ಬರಾಜನಿಗೆ ಮೂವರು ರಾಣಿಯರಿರುತ್ತಾರೆ. ಒಂದು ದಿನ ರಾಜ ಮೂವರು ರಾಣಿಯರನ್ನು ಕರೆದು, ನಾನು ಸತ್ತಾಗ ನನ್ನೊಂದಿಗೆ ಯಾರು ಬರುತ್ತೀರಾ ಎಂದು ಪ್ರಶ್ನಿಸುತ್ತಾನೆ. ಆಗ ಹಿರಿಯ ರಾಣಿ, ನಾನು ನಿಮ್ಮೊಂದಿಗೆ ಬಂದರೆ ನೀವು ಕೊಟ್ಟಂತಹ
ವಸಾಭರಣ ಹಾಕಿಕೊಳ್ಳುವವರು ಯಾರು ಎಂದು ಪ್ರಶ್ನಿಸಿ ಸುಮ್ಮನಾಗುತ್ತಾಳೆ. ಎರಡನೆಯ ರಾಣಿ, ಈ ಸಂಸ್ಥಾನ ನೋಡಿಕೊಳ್ಳು ವವರು ಯಾರು ಎಂದು ಪ್ರಶ್ನಿಸಿ ನಿರಾಕರಿಸುತ್ತಾಳೆ. ಮೂರನೇ ರಾಣಿ, ನಿಮ್ಮ ಜತೆ ನಾನು ಬಂದು ಬಿಟ್ಟರೆ ಮಕ್ಕಳನ್ನು ನೋಡಿ ಕೊಳ್ಳುವವರು ಎಂದು ಕೇಳುತ್ತಾಳೆ. ಇದು ಗಂಡ-ಹೆಂಡತಿಯ ಸಂಬಂಧ ಎಂದು ವಿವರಿಸಿದರು.
ಉಪ್ಪಿನಕಾಯಿಯೇ ಊಟವಾಗಬಾರದು: ಸಮಸ್ಯೆಗಳಿಲ್ಲದ ಸಂಸಾರಗಳಿಲ್ಲ, ವಿರಸಗಳೇ ಇಲ್ಲದ ದಾಂಪತ್ಯವೂ ಇಲ್ಲ. ಊಟಕ್ಕೆ ಉಪ್ಪಿನ ಕಾಯಿ ಇರುವಂತೆ ಸಂಸಾರ ದಲ್ಲಿ ಸಣ್ಣ ಪುಟ್ಟ ಚರ್ಚೆಗಳು ಇರಲೇ ಬೇಕು. ಆದರೆ, ಉಪ್ಪಿನಕಾಯಿಯೇ ಊಟವಾಗ ಬಾರದು. ಸರಸ ಜನನ, ವಿರಸ ಮರಣ, ಸಮರಸನೇ ಜೀವನವಾಗಬೇಕು ಎಂದರು.
ಜೀವನದಲ್ಲಿ ಸಂತಾನೋತ್ಪತ್ತಿ ಸಾಧ್ಯ, ಸಂತೋಷ ಅಸಾಧ್ಯ
ಸಂತೋಷ ಮತ್ತು ಸಂತಾನೋತ್ಪತ್ತಿ ವಿವಾಹದ ಉದ್ದೇಶ. ಜೀವನದಲ್ಲಿ ಸಂತೋಷ ಕಾಣಲು ಸಾಧ್ಯವಿಲ್ಲ. ಆದರೆ, ಸಂತಾ ನೋತ್ಪಿ ಕಾಣಬಹುದು. ಅದರಿಂದಲೇ ಜನಸಂಖ್ಯೆ ಹೆಚ್ಚಾಗಿರುವುದು. ವಿವಾಹದ ಕುರಿತು ಹಲವರು ಅವರ ಅನುಭವ ಹೇಳು ತ್ತಾರೆ. ಹೆಚ್ಚಿನವರು ಮದುವೆ ಆಗಲ್ಲ ಎಂದವರೂ ಮದುವೆ ಮಾಡುತ್ತಾರೆ. ಮದುವೆಯಾದ ಬಳಿಕ ಬೀದಿ ಬಸವ ನಾಯಿಮರಿ ಆಗುತ್ತಾನೆ. ಗೂಳಿಯಂತಿರುವವನು ಇಲಿಯಾಗುತ್ತಾನೆ. ಬಾಳಸಂಗಾತಿಯ ಆಯ್ಕೆಯಲ್ಲಿ ಹುಡುಗಾಟ ಮಾಡಿದರೆ ಜೀವನ ಪರ್ಯಂತ ಪರಿತಪಿಸಬೇಕಾಗುತ್ತದೆ ಎಂದು ಡಾ.ಕೆ.ಪಿ.ಪುತ್ತೂರಾಯ ತಿಳಿಸಿದರು.
***
ಡಾ.ಕೆ.ಪಿ.ಪುತ್ತೂರಾಯರು ಕಳೆದ ೪೦ ವರ್ಷಗಳಿಂದ ಶರೀರ ಕ್ರಿಯಾಶಾಸ ಕುರಿತು ಬೋಧಿಸಿದ ಗುರುಗಳು. ಹಲವು ವಿವಿಗಳಲ್ಲಿ ಶರೀರ ಕ್ರಿಯಾಶಾಸ್ತ್ರ ಕುರಿತು ಬೋಧಿಸಿದ್ದಾರೆ. ೨೫ಕ್ಕೂ ಹೆಚ್ಚು ಸಂಶೋಧನಾ ಗ್ರಂಥ ಪ್ರಕಟಿಸಿದ್ದಾರೆ. ಅನೇಕ ಮಂಡಳಿ,
ಆಯೋಗ ನಿಖಾಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಿರುತೆರೆ ಹಾಸ್ಯ ಕಲಾವಿದರೂ ಹೌದು. ಅವರ ಮಾತಿನಲ್ಲಿ ತಿಳಿಹಾಸ್ಯ ಇರುತ್ತದೆ. ಜೀವನ ಸತ್ಯ ಕಾಣಿಸುತ್ತದೆ.
-ವಿಶ್ವೇಶ್ವರ ಭಟ್, ವಿಶ್ವವಾಣಿ ಪ್ರಧಾನ ಸಂಪಾದಕರು
***
ಗಂಡಸರಿಗೆ ಕಿವಿ ಮಾತುಗಳು
ಹೆಂಡತಿ ಅಲಂಕಾರ ಮಾಡಿಕೊಂಡಾಗ, ಸೀರೆಯುಟ್ಟಾಗ, ಒಳ್ಳೆ ಆಹಾರ ಮಾಡಿದಾಗ ಪ್ರೋತ್ಸಾಹಿಸಬೇಕು
ಹೆಂಡತಿಯ ಆರೋಗ್ಯ ಕುರಿತು ವಿಚಾರಿಸಬೇಕು
ಹೆಂಡತಿಯ ತವರುಮನೆಯವರನ್ನು ಟೀಕಿಸಬಾರದು.
ಪತ್ನಿಯನ್ನು ಸ್ನೇಹ ಭಾವದಿಂದ ಕಾಣಬೇಕು.
ಪತ್ನಿಯ ಜನ್ಮದಿನ ಮರೆಯಬಾರದು
ಆಗಾಗ್ಯೆ ಅವರ ಕಷ್ಟಗಳನ್ನು ಆಲಿಸಬೇಕು
ಹೆಂಗಸರ ದೌರ್ಬಲ್ಯ ಅರ್ಥ ಮಾಡಿಕೊಳ್ಳಬೇಕು
ಸಂಸಾರಕ್ಕೊಂದು ಕಿವಿ ಮಾತು…
? ಸಂಸಾರದಲ್ಲಿ ಗೆದ್ದು ಸೋಲಬಾರದು, ಸೋತು ಗೆಲ್ಲಬೇಕು.
? ಗಂಡ ಹೆಂಡತಿಗೆ ವಯಸ್ಸಾದರೂ ಪ್ರೀತಿ ಮುಪ್ಪಾಗಲ್ಲ.
?ಎಲ್ಲವನ್ನೂ ಸಹಿಸುತ್ತಾ ಜೀವನ ಸಾಗಿಸದರೆ ಸುಖ ಸಂಸಾರ.
? ಸಮಾಲೋಚನೆ, ಪ್ರೋತ್ಸಾಹದಿಂದ ಇರಬೇಕು.
?ಇಬ್ಬರೂ ಅರ್ಥಮಾಡಿಕೊಳ್ಳಬೇಕು, ಪೈಪೋಟಿ ಇರಬಾರದು.
? ಇಬ್ಬರ ನಡುವಿನ ಜಗಳ ಹೊರಗಿನವರಿಗೆ ಗೊತ್ತಾಗಬಾರದು.
? ಮಾತು ಚೆನ್ನಾಗಿರಬೇಕು. ಧ್ವನಿ ಮೃದುವಾಗಿರಬೇಕು.
? ಮಕ್ಕಳ ಜವಾಬ್ದಾರಿ ಇಬ್ಬರಿಗೂ ಇರಬೇಕು.
? ಪ್ರಶ್ನಾತೀತ ಪ್ರೀತಿ ಇರಬೇಕು.
ಗಂಡ-ಹೆಂಡತಿಗೆ ಕಿವಿ ಮಾತು
? ಪರಸ್ಪರ ಆಸೆ-ಆಕಾಂಕ್ಷೆ ಅರ್ಥ ಮಾಡಿಕೊಳ್ಳಬೇಕು
? ಇಬ್ಬರ ನಡುವೆ ಹೊಂದಾಣಿಕೆ ಇರಬೇಕು
? ಎಲ್ಲಾ ವಿಷಯಗಳಲ್ಲೂ ಮನಸ್ಸುಗಳು ಒಪ್ಪಿಕೊಳ್ಳಬೇಕು
? ಅನುರಾಗದ ದಾಂಪತ್ಯ ಇರಬೇಕು.
? ಅತಿಥಿ ಸತ್ಕಾರದಲ್ಲಿ ಸಮಾನ ಮನಸ್ಥಿತಿ ಇರಬೇಕು
ಹೆಂಗಸರಿಗೆ
ಕಿವಿಮಾತು
? ನಿಮ್ಮ (ಗಂಡ) ಕೈ ಹಿಡಿದಿರುವುದು
ಏಳೇಳು ಜನ್ಮದ ಪುಣ್ಯ ಎಂದು
ಹೇಳಬೇಕು
? ಗಂಡನ ಎದುರು ನಿಧಾನವಾಗಿ
ಮಾತನಾಡಬೇಕು
? ಆತನಿಗೆ ಇಷ್ಟವಾದ ಅಡುಗೆ
ಮಾಡಬೇಕು
? ಗೌರವದಿಂದ ನಡೆದುಕೊಳ್ಳಬೇಕು