ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಭಾರತದ ಸಂಪನ್ಮೂಲಗಳು ತನ್ನ ಅಪ್ಪನ ಮನೆಯ ಆಸ್ತಿಯೆಂಬಂತೆ ಪಕ್ಕದ ದೇಶಗಳಿಗೆ ನೆಹರು ಹಂಚಿರುವುದಕ್ಕೆ ಸಾಕ್ಷಿ ಬಹಳಷ್ಟಿದೆ. ದೂರದೃಷ್ಟಿಯಿಲ್ಲದೆ ಸಂಪನ್ಮೂಲಗಳನ್ನು ಇತರರಿಗೆ ಹಂಚಿ, ನೀರಿನ ಕೊರತೆಯನ್ನು ತಂದೊದಗಿಸುವ ಒಪ್ಪಂದಕ್ಕೆ ನೆಹರು ಸಹಿ ಮಾಡಿದ್ದರು. ಇವರ ಈ ಅವೈಜ್ಞಾನಿಕ ಒಪ್ಪಂದ ದಿಂದ ಅದೆಷ್ಟು ಮಕ್ಕಳು ನೀರಿನ ಕೊರತೆಯಿಂದ ಕಷ್ಟಪಡುತ್ತಿರಬಹುದಲ್ಲವೇ ? ಇಂತಹ ವ್ಯಕ್ತಿಯ ಹುಟ್ಟು ಹಬ್ಬ ಯಾಕೆ ?
ನಾಳೆ ಭಾರತದ ಮೊಟ್ಟಮೊದಲ ಪ್ರಧಾನಮಂತ್ರಿ ’ಜವಾಹರಲಾಲ್ ನೆಹರು’ ಹುಟ್ಟುಹಬ್ಬ,ಇವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸ ಲಾಗುತ್ತದೆ. ನೆಹರೂರಿಗೆ ಮಕ್ಕಳೆಂದರೆ ಇಷ್ಟವಂತೆ ಅದಕ್ಕಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು ಶಾಲೆ ಗಳಲ್ಲಿ ನಾವೆಲ್ಲ ಓದಿದ್ದೀವಿ. ಹೌದು ನೆಹರೂಗೆ ಮಕ್ಕಳೆಂದರೆ ಇಷ್ಟ, ಆದರೆ ಯಾರ ಮಕ್ಕಳು ? ಅವರಿಗೆ ಕೇವಲ ಅವರ ಕುಟುಂಬದ ಮಕ್ಕಳೆಂದರೆ ಮಾತ್ರ ಇಷ್ಟ. ಅವರ ನಿಧನದ ನಂತರ ಮಗಳು ಇಂದಿರಾ ಗಾಂಧಿ ಕಾಂಗ್ರೆಸ್ ಸಾರಥ್ಯ ವಹಿಸಿದರು,ಆಕೆಯ ನಿಧನದ ನಂತರ ಅವರ ಮಗ ’ರಾಜೀವ್ ಗಾಂಧಿ’ ಕಾಂಗ್ರೆಸ್ ಸಾರಥ್ಯ ವಹಿಸಿದ್ದರು, ಅವರ ನಿಧನದ ನಂತರ ಅವರ ಮಗ ’ರಾಹುಲ್ ಗಾಂಧಿ’ ಕಾಂಗ್ರೆಸ್ಸಿನ ಸಾರಥ್ಯ ವಹಿಸಿದ್ದಾರೆ, ಮಗನ ಜೊತೆಗೆ ಮಗಳು ’ಪ್ರಿಯಾಂಕಾ ವಾದ್ರಾ’ ರನ್ನೂ ಸಹ ಕಾಂಗ್ರೆಸ್ಸಿನ ಸಾರಥ್ಯದಲ್ಲಿ ಬಳಸಿಕೊಳ್ಳಲಾಗು ತ್ತಿದೆ, ಮುಂದಿನ ದಿನಗಳಲ್ಲಿ ’ಪ್ರಿಯಾಂಕಾ ವಾದ್ರಾ’ಳ ಮಕ್ಕಳು ಸಹ ಕಾಂಗ್ರೆಸ್ಸಿನ ಸಾರಥ್ಯ ವನ್ನು ವಹಿಸಿಕೊಳ್ಳುವುದು ಪಕ್ಕ.
’ಜವಾಹರಲಾಲ್ ನೆಹರು’ ತನ್ನ ಕುಟುಂಬದ ಮಕ್ಕಳ ಮೇಲೆ ತೋರಿಸುವ ಪ್ರೀತಿಯನ್ನೇ ಅವರ ಮುಂದಿನ ಪೀಳಿಗೆ ಇಲ್ಲಿಯವರೆಗೂ ತೋರಿಸಿಕೊಂಡು ಬಂದಿದೆ,ಮುಂದೆಯೂ ತೋರಿಸಿಕೊಂಡು ಬರುತ್ತದೆ. ನೆಹರು ತನ್ನ ಕುಟುಂಬದಲ್ಲಿನ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ದೇಶದ ಮಕ್ಕಳ ಮೇಲಿಟ್ಟಿದ್ದಂತಹ ಪ್ರೀತಿಯೆಂದು ಯಾಕೆ ತಿಳಿಯಬೇಕೆಂಬ ಪ್ರಶ್ನೆ ಕಾಡುತ್ತಿದೆ. ತನ್ನ ಕುಟುಂಬದ ಮಕ್ಕಳ ಮೇಲಿನ ಪ್ರೀತಿಯನ್ನು ದೇಶದ ಮಕ್ಕಳ ಮೇಲಿನ ಪ್ರೀತಿಯೆಂಬಂತೆ ಬಿಂಬಿಸಿ ನೆಹರು ಹುಟ್ಟುಹಬ್ಬವನ್ನು ಮಕ್ಕಳ ದಿನಾಚಾರಣೆಯೆಂದು ಆಚರಿಸುವುದು ಯಾವ ರೀತಿಯ ನ್ಯಾಯ ? ಸ್ವತಂತ್ರ್ಯ ಪೂರ್ವದಿಂದಲೂ ರಾಜಕೀಯವನ್ನೇ ಮಾಡುತ್ತಾ ಬಂದಿದ್ದ ನೆಹರು, ಬ್ರಿಟಿಷ ರೊಂದಿಗೆ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದಂತಹ ಸದಾರ್ರ ವಲ್ಲಭಾಯಿ ಪಟೇಲ, ಸುಭಾಷ್ ಚಂದ್ರ ಬೋಸ, ಮಹಾತ್ಮಾ ಗಾಂಧಿ, ವೀರ ಸಾವಕರ್ರ, ಉದಮ್ ಸಿಂಗ, ಭಗತ್ ಸಿಂಗ, ಚಂದ್ರಶೇರ್ಖ ಆಜಾದ್ ರಂತಹ ದೇಶಪ್ರೇಮಿಗಳ ಹೋರಾಟವನ್ನು ಹೈಜಾಕ್ ಮಾಡಿ ದೇಶದ ಪ್ರಧಾನಿಯಾದಂತಹ ನೆಹರು ಹೇಗೆ ತಾನೆ ಮಕ್ಕಳಿಗೆ ಆದರ್ಶವಾಗಲು ಸಾಧ್ಯ ? ಸ್ವಾತಂತ್ರ್ಯಾ ನಂತರ ನೆಹರು ಮಾಡಿರುವ ಹಲವು ಪ್ರಮಾದದ ಫಲವನ್ನು ಇಂದಿಗೂ ಭಾರತೀಯರು ಅನುಭವಿಸುತ್ತಿರು ವಾಗ, ಅವರ ಹುಟ್ಟುಹಬ್ಬದ ನೆಪದಲ್ಲಿ ಮಕ್ಕಳ ದಿನಾಚರಣೆಯನ್ನು ಯಾಕೆ ಆಚರಿಸಬೇಕು ? ನೆಹರು ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದಾಗ 1936-37 ರಲ್ಲಿ ಉತ್ತರ ಪ್ರದೇಶದ ಪ್ರಾಂತ್ಯವಾರು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಭೀತಿಯಿಂದ ಚುನಾವಣಾ ಪೂರ್ವವಾಗಿ ಜಿನ್ನಾನ ’ಮುಸ್ಲಿಂ ಲೀಗ’ಜೊತೆ ಮೈತ್ರಿ ಮಾಡಿ ಕೊಂಡಿದ್ದರು.
ಆದರೆ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಗೆದ್ದು ಕಾಂಗ್ರೆಸ್ ಸರ್ಕಾರ ರಚಿಸಿತ್ತು, ಸ್ವತಂತ್ರವಾಗಿ ಸರ್ಕಾರ ರಚಿಸಿದ ಕಾಂಗ್ರೆಸ್ ’ಮುಸ್ಲಿಂ ಲೀಗ ’ಗೆ ಇಲ್ಲಸಲ್ಲದ ಷರತ್ತುಗಳನ್ನು ಹಾಕಿತ್ತು, ಇದರಿಂದ ಕಾಂಗ್ರೆಸ್ಸಿನ ಮೇಲೆ ನಂಬಿಕೆ ಕಳೆದುಕೊಂಡಿದ್ದಂತಹ ಮುಸಲ್ಮಾನರ ಒಗ್ಗಟ್ಟು ಹೆಚ್ಚಾಯಿತು. ಈ ಒಗ್ಗಟ್ಟೇ ಮುಂದೆ
ಮುಸಲ್ಮಾನರು ತಮಗಾಗಿ ಪ್ರತ್ಯೇಕ ದೇಶವನ್ನು ಕೇಳುವ ಹೋರಾಟಕ್ಕೆ ನಾಂದಿಯಾಯಿತು, ಇಂತಹ ವ್ಯಕ್ತಿಯ ಹುಟ್ಟುಹಬ್ಬದಂದು ಮಕ್ಕಳ ದಿನಾಚರಣೆ ಆಚರಿಸಬೇಕೆ ? 1946 ರಲ್ಲಿ ನಡೆದ ಕಾಂಗ್ರೆಸ್ಸಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಗೆದ್ದವರು ಭಾರತದ ಪ್ರಥಮ ಪ್ರಧಾನಮಂತ್ರಿ ಯಾಗುತ್ತಾರೆಂಬುದು ಎಲ್ಲರಿಗೂ ತಿಳಿದಿತ್ತು, ಅದರಂತೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯು ಸದಾರ್ರ ವಲ್ಲಭಾಯಿ ಪಟೇಲರನ್ನು ಅತೀ ಹೆಚ್ಚು ಮತಗಳಿಂದ ಆಯ್ಕೆ ಮಾಡಿತ್ತು, 15 ಮತಗಳಲ್ಲಿ 12 ಮತಗಳು ಪಟೇಲರಿಗೆ ಬಿದ್ದಿದ್ದವು, ಉಳಿದ 3 ಮತಗಳು ಯಾರಿಗೂ ಬಿದ್ದಿರಲಿಲ್ಲ.
ಆದರೆ ಮಹಾತ್ಮಾ ಗಾಂಧಿಯವರ ಮಾತಿನಂತೆ ಪಟೇಲರು ತಾವು ಗೆದ್ದಿದ್ದರೂ ಸಹ ನೆಹರೂವಿಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟರು. ನೆಹರು ಯಾವುದೇ
ವಿಷಯದಲ್ಲಿಯೂ ಪಟೇಲರಿಗೆ ಸಮನಾಗಿರಲಿಲ್ಲ, ಇಂಗ್ಲೆಂಡಿನಲ್ಲಿ ನೆಹರು ಮಾಡಿದ್ದ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಅವರ ತಂದೆಯವರು ಭರಿಸಿದ್ದರು, ಆದರೆ ಪಟೇಲರು ತಮ್ಮ ಸ್ವಂತ ದುಡಿಮೆಯಿಂದ ಇಂಗ್ಲೆಂಡಿನಲ್ಲಿ ತಮ್ಮ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಂಡಿದ್ದರು.
ಹಾಗಾದರೆ ಮಕ್ಕಳಿಗೆ ನಿಜವಾಗಿಯೂ ಆದರ್ಶವಾಗಬೇಕಿರುವುದು ಪಟೇಲರು ತಾನೇ ? ನೆಹರು ಎರಡನೇ ಶ್ರೇಣಿಯಲ್ಲಿ ಉತ್ತೀರ್ಣರಾದರೆ, ಪಟೇಲರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಅಹ್ಮದಾಬಾದಿನಲ್ಲಿ ಪಟೇಲರ ವಕೀಲ ವೃತ್ತಿ ಜೋರಾಗಿ ನಡೆಯುತ್ತಿತ್ತು, ಅಂದಿನ ಕಾಲದಲ್ಲಿಯೇ ಪಟೇಲರು ಅತೀ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಂತಹ ವಕೀಲರಾಗಿದ್ದರು, ಆದರೆ ನೆಹರೂವಿನ ವಕೀಲ ವೃತ್ತಿಯೇನು ಚೆನ್ನಾಗಿರಲಿಲ್ಲ,ವೃತ್ತಿಯ ದೃಷ್ಟಿಯಿಂದಲೂ ಸಹ ನೆಹರು ಮಕ್ಕಳಿಗೆ ಆದರ್ಶವಾಗಲು ಸಾಧ್ಯವೇ ಇಲ್ಲ.
ಉತ್ತರ ಪ್ರದೇಶದಲ್ಲಿ ರಚನೆಯಾದಂತಹ ಸರ್ಕಾರದಲ್ಲಿ ನೆಹರು ಸೋದರಿ ’ವಿಜಯಲಕ್ಷಿ ಪಂಡಿತ’ರನ್ನು, ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ತಮ್ಮ ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದರು. ನೆಹರು ಸೋದರಿಯನ್ನು ಸಂಪುಟದಲ್ಲಿ ಸೇರಿಸಿಕೊಂಡರೆ ರಾಜ್ಯಕ್ಕೆ ನೆಹರೂರಿಂದ ಉತ್ತಮ ಯೋಜನೆಗಳನ್ನು ತರಿಸಿಕೊಳ್ಳಬಹುದೆಂಬ ಉದ್ದೇಶ ಅವರದ್ದಾಗಿತ್ತು, ನೆಹರು ತುಸು ಮಾತನಾಡದೆ ಒಪ್ಪಿಕೊಂಡಿದ್ದರು. ಇದಾದ ನಂತರ 1946 ರಲ್ಲಿ ರಚನೆ ಯಾಗಿದ್ದಂತಹ ಮಧ್ಯಂತರ ಸರ್ಕಾರದಲ್ಲಿ ’ವಿಜಯಲಕ್ಷಿ ಪಂಡಿತ’ರನ್ನು ಭಾರತದ ಮೊಟ್ಟಮೊದಲ ರಷ್ಯಾ ದೇಶದ ರಾಯಭಾರಿಯನ್ನಾಗಿಸಾಲು ನೆಹರು
ಸಿದ್ಧವಾಗಿದ್ದರು, ಲಿಕಾಯತ್ ಅಲಿ ಖಾನ್ ವಿರೋಧಿಸಿದರೂ ಸಹ ನೆಹರು ಕೇಳಲಿಲ್ಲ,ಆ ಸಮಯದಲ್ಲಿ ಇಂದಿರಾ ಗಾಂಧಿ ಸಣ್ಣ ಹುಡಿಗಿಯಾಗಿದ್ದರಿಂದ ಆಕೆಯನ್ನು ರಾಜಕೀಯಕ್ಕೆ ಕರೆತರಲು ಆಗಿರಲಿಲ್ಲ.
ಭಾರತದ ಮೊಟ್ಟಮೊದಲ ’ಗವನರ್ರ ಜನರಲ’ನನ್ನಾಗಿ ಬ್ರಿಟಿಷ್ ಅಧಿಕಾರಿ ’ಮೌಂಟ್ ಬ್ಯಾಟನ ’ನನ್ನು ನೇಮಿಸಲಾಗಿತ್ತು, ಒಬ್ಬ ಬ್ರಿಟಿಷ್ ಅಧಿಕಾರಿ ಭಾರತದ
’ಗವನರ್ರ ಜನರಲ’ ಆಗುವುದನ್ನು ನೆಹರು ವಿರೋದಿಸಲೇ ಇಲ್ಲ, ಆದರೆ ಪಾಕಿಸ್ತಾನದ ಮೊದಲ ’ಗವನರ್ರ ಜನರಲ ’ಆಗಿ ’ಜಿನ್ನಾ’ಆಯ್ಕೆಯಾಗಿದ್ದ, ಆತನಿಗೆ ಬ್ರಿಟಿಷರ ಕುತಂತ್ರ ತಿಳಿದಿದ್ದರಿಂದ ಅವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ನೆಹರು ಮಾಡಿದ ಈ ದೊಡ್ಡ ಪ್ರಮಾದದಿಂದ ಕಾಶ್ಮೀರದ ಸಮಸ್ಯೆ ಶುರುವಾಯಿತೆಂದರೆ ತಪ್ಪಿಲ್ಲ.ಸ್ವಾತಂತ್ರಾನಂತರ 1947 ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನವು ಆಕ್ರಮಣ ಮಾಡಲು ಶುರು ಮಾಡುತ್ತದೆ, ಕಾಶ್ಮೀರದ ಮಹಾರಾಜ ’ಹರಿಸಿಂಗ’ ಸೆಪ್ಟೆಂರ್ಬ 1947 ರಲ್ಲಿ ಕಾಶ್ಮೀರವನ್ನು ಭಾರತದ ಜೊತೆಗೆ ಸೇರ್ಪಡಿಸಲು ಸಿದ್ಧನಿರುತ್ತಾನೆ, ಆದರೆ ನೆಹರು ’ಶೇಕ್ ಅಬ್ದು’ನನ್ನು ಬಿಡುಗಡೆ ಮಾಡಿ ಕಾಶ್ಮೀರದ ಮೊಟ್ಟಮೊದಲ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಷರತ್ತನ್ನು ಹಾಕಿರುತ್ತಾರೆ, ಮಹಾರಾಜ ಹರಿಸಿಂಗ್ ಒಪ್ಪಿಕೊಳ್ಳುವುದಿಲ್ಲ.
ಅಂದು ನೆಹರು ಮಹಾರಾಜ ಹರಿಸಿಂಗನ ಮಾತನ್ನು ಕೇಳಿದ್ದರೆ, ಕಾಶ್ಮೀರದ ಭಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಳ್ಳಲಾಗುತ್ತಿರಲಿಲ್ಲ.ತನ್ನ ಷರತ್ತಿಗೆ ಒಪ್ಪಿದರೆ ಮಾತ್ರ ಸಹಾಯ ಮಾಡುವೆನೆಂದು ಹಠ ಹಿಡಿದಿದ್ದ ನೆಹರು, ಭಾರತೀಯ ಸೈನ್ಯವನ್ನು ಕಾಶ್ಮೀರಕ್ಕೆ ಕಳುಹಿಸುವಲ್ಲಿ ತಡ ಮಾಡುತ್ತಾರೆ. ಪರಿಣಾಮ ಪಾಕಿಸ್ತಾನದ
ಸೈನ್ಯ ಕಾಶ್ಮೀರದ ಮೇಲೆ ದಾಳಿ ನಡೆಸಿ ಹಲವು ಭಾಗಗಳನ್ನು ಆಕ್ರಮಿಸಿಕೊಳ್ಳುತ್ತದೆ, ಅಂದು ನೆಹರು ಮಾಡಿದ ಈ ಪ್ರಮಾದಕ್ಕೆ ಇಂದೂ ಸಹ ಕಾಶ್ಮೀರದಲ್ಲಿ ಸಮಸ್ಯೆಯನ್ನು ಭಾರತ ಅನುಭವಿಸುತ್ತಿದೆ.ಸಂವಿದಾನದಲ್ಲಿ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಮೂಲಕ ಮತ್ತೊಂದು ಬೃಹತ್ ಪ್ರಮಾದವನ್ನು ನೆಹರು ಮಾಡಿದ್ದರು.
ಭಾರತದ ಆಂತರಿಕ ವಿಚಾರವಾಗಿದ್ದಂತಹ ಕಾಶ್ಮೀರದ ಪ್ರತ್ಯೇಕ ಸ್ಥಾನಮಾನವನ್ನು ವಿಶ್ವಸಂಸ್ಥೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಿ, ಅಂತರ್ರಾಷ್ಟ್ರೀಯ ಸಮಸ್ಯೆಯನ್ನಾಗಿಸಿದ್ದು ’ನೆಹರು’, ಈ ಮಟ್ಟದ ಪ್ರಮಾದ ಮಾಡಿದ ವ್ಯಕ್ತಿ ಮಕ್ಕಳಿಗೆ ಹೇಗೆ ತಾನೆ ಆದರ್ಶವಾಗುತ್ತಾನೆ ? ನೆಹರೂವಿನ ಬೇಜವಾಬ್ದಾರಿ ಮಟ್ಟ ಎಷ್ಟಿತ್ತೆಂದರೆ, ಸ್ವಾತಂತ್ರ್ಯಾನಂತರ ಭಾರತಕ್ಕೆ ರಕ್ಷಣಾ ನೀತಿಯ ಅವಶ್ಯಕತೆಯಿಲ್ಲವೆಂದು ಸೈನ್ಯಾಧಿಕಾರಿಯೊಬ್ಬನ ಮುಂದೆ ಹೇಳಿದ್ದರು.
ಉತ್ತರ ಹಾಗು ಪಶ್ಚಿಮದಲ್ಲಿ ಪಾಕಿಸ್ತಾನದ ಕುತಂತ್ರ, ಈಶಾನ್ಯ ಭಾಗದಲ್ಲಿ ಚೀನಾ ದೇಶದ ನರಿಬುದ್ಧಿಯ ಆಕ್ರಮಣಕಾರಿ ನೀತಿಯ ಅರಿವಿದ್ದರೂ ಸಹ, ಅಹಿಂಸೆ ಯೆಂಬ ವಿಷಯವನ್ನು ಮುಂದಿಟ್ಟುಕೊಂಡು ಸೈನ್ಯದಲ್ಲಿನ ಸುಮಾರು ೫೦,೦೦೦ ಸೈನಿಕರ ಸಂಖ್ಯೆಯನ್ನು ಕಡಿಮೆ ಮಾಡಿದ್ದರು. ಹತ್ತಾರು ವರ್ಷಗಳ ಕಾಲ ಭಾರತದ ಸ್ವತಂತ್ರ ಹೋರಾಟದ ಅರಿವಿದ್ದವರಿಗೆ ಸೇನಾ ನೀತಿಯನ್ನು ರಚಿಸಬೇಕೆಂಬ ಸಾಮಾನ್ಯ ಜ್ಞಾನವಿರಲಿಲ್ಲದವ ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿಯಾಗಿದ್ದು ಭಾರತೀಯರ ದುರದೃಷ್ಟ, ಇಂತಹ ವ್ಯಕ್ತಿಯ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಏಕೆ ಆಚರಿಸಬೇಕು ? ಈ ವ್ಯಕ್ತಿಯ ಅಜ್ಞಾನದಿಂದ
ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಈವರೆಗೂ ಅದೆಷ್ಟು ಮಕ್ಕಳು ತಮ್ಮ ಪ್ರಾಣ ಕಳೆದುಕೊಂಡಿರಬಹುದು, 1962 ರ ಚೀನಾ ಯುದ್ಧದಲ್ಲಿ ಎಷ್ಟೋ ಮಕ್ಕಳ ಅಪ್ಪಂದಿರು ಗಡಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ, ಭಾರತ ಇಬ್ಬಾಗವಾದಾಗ ನಡೆದ ಹಿಂಸಾಚಾರದಲ್ಲಿ ಅದೆಷ್ಟು ಮಕ್ಕಳು ತಮ್ಮ ಪ್ರಾಣವನ್ನು ಕಳೆದು ಕೊಂಡಿರ ಬಹುದು ? ಯಾವ ನೈತಿಕತೆಯ ಆಧಾರದ ಮೇಲೆ ನೆಹರು ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು ? ನೆಹರೂಗೆ
ಮಕ್ಕಳೆಂದರೆ ಇಷ್ಟವಂತೆ ಅದಕ್ಕಾಗಿ ಅವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸಬೇಕಂತೆ ಎಂಬ ಟೊಳ್ಳು ಸುಳ್ಳನ್ನು ಶಾಲಾ ಪಠ್ಯಪುಸ್ತಕದಲ್ಲಿ ಮುದ್ರಿಸಿ ಮಕ್ಕಳ ತಲೆಗೆ ತುಂಬಲಾಯಿತು.
ಚೀನಾ ಜೊತೆಗಿನ ಗಡಿ ವಿಷಯವನ್ನು ಎಂದೋ ಬಗೆಹರಿಸಬಹುದಿತ್ತು, 1950ರ ದಶಕದಲ್ಲಿ ಚೀನಾ ಆಂತರಿಕವಾಗಿ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿತ್ತು, ಚೀನಾ ಈಗಿರುವ ರೀತಿಯಲ್ಲಿ ಬಲಿಷ್ಟವಾಗೇನು ಇರಲಿಲ್ಲ. ಚೀನಾ ಜೊತೆಗೆ ಮಾತುಕತೆಯ ಮೂಲಕ ಗಡಿ ಸಮಸ್ಯೆಯನ್ನು ಬಗೆಹರಿಸಿಕೊಂಡು ಗಡಿ ರೇಖೆಯನ್ನು ರಚಿಸುವ ಬಹಳಷ್ಟು ಅವಕಾಶಗಳು ನೆಹರೂಗಿತ್ತು.ಪ್ರಮಾದ ಮೇಲೆ ಪ್ರಮಾದವನ್ನು ಮಾಡುತ್ತಿದ್ದ ನೆಹರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಪರಿಣಾಮ ಭಾರತದ ’ಅಕ್ಸಯ್ ಚಿನ’ ಭಾಗವನ್ನು ಚೀನಾ ಆಕ್ರಮಿಸಿಕೊಂಡಿತು. ನೆಹರೂನ ತಪ್ಪು ತಿಳುವಳಿಕೆ ಹಾಗು ಅಸಮರ್ಥತೆಗೆ ಮತ್ತೊಂದು ಸಾಕ್ಷಿಯಾ
ದದ್ದು ’ಗೋವಾ’ದ ವಿಮೋಚನೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ೧೪ ವರ್ಷ ಕಳೆದ ಬಳಿಕವೂ ಪೋರ್ಚುಗೀಸರನ್ನು ಗೋವಾದಿಂದ ಓಡಿಸಲು ನೆಹರುಗೆ ಆಗಿರಲಿಲ್ಲ, ತನ್ನ ಜಡತ್ವದಿಂದ ಗೋವಾದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನೆಹರು, ಸದಾರ್ರ ಪಟೇಲರ ಮಾತಿಗೆ ಕಿವಿಗೊಡಲಿಲ್ಲ.
ಎರಡು ಘಂಟೆಯ ಸಮಯ ನೀಡಿದರೆ ಸಾಕು ಪೋರ್ಚುಗೀಸರನ್ನು ಗೋವಾನಿಂದ ಓಡಿಸುತ್ತೇನೆಂದು ಪಟೇಲರು 1950 ರಲ್ಲಿ ಹೇಳಿದ್ದರೂ ಸಹ ನೆಹರು ಒಪ್ಪಲಿಲ್ಲ, ಇದರ ಪರಿಣಾಮ ಗೋವಾವನ್ನು ಭಾರತದೊಂದಿಗೆ ಸೇರಿಸಲು ಸ್ವಾತಂತ್ರ್ಯ ಬಂದು ೧೪ ವರ್ಷಗಳೇ ಬೇಕಾಯಿತು. ನೆಹರು ಮಾಡಿರುವ ಪ್ರಮಾದಗಳು ಒಂದಲ್ಲ ಎರಡಲ್ಲ, ತನ್ನ ಆಡಳಿತಾವಽಯುದ್ದಕ್ಕೂ ಪ್ರಮಾಧಗಳನ್ನೇ ಮಾಡಿಕೊಂಡು ಬಂದಿದ್ದಂತಹ ನೆಹರು ಪ್ರಧಾನಮಂತ್ರಿಯ ಹುದ್ದೆಯನ್ನು ಆನಂದಿಸುವು ದರಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದರು. ದೂರದೃಷ್ಟಿಯಿಲ್ಲದೆ ನೆಹರು ನಡೆಸಿದ ಆಡಳಿತದ ಪರಿಯನ್ನು ಯಾರೂ ಸಹ ಒಪ್ಪಲಾಗುವುದಿಲ್ಲ, ಪ್ರಧಾನಮಂತ್ರಿಯ ಹುದ್ದೆ ಹಾಗು ತನ್ನ ಕುಟುಂಬ ದವರ ರಕ್ಷಣೆಯೊಂದೇ ನೆಹರು ಪಾಲಿನ ಸರ್ವಕಾಲಿಕ ಉದ್ದೇಶವಾಗಿತ್ತು. 1960 ರಲ್ಲಿ ಪಾಕಿಸ್ತಾನದ ಜೊತೆಗೆ ಸಿಂಧು ಬಯಲಿನ ನೀರಿನ ಪಾಲಿನ ಒಪ್ಪಂದವನ್ನು ಮಾಡಿಕೊಂಡಂತಹ ನೆಹರು, ಕೊಡುಗೈ ದಾನಿಯಂತೆ ಶೇ 80% ರಷ್ಟು ನೀರನ್ನು ಪಾಕಿಸ್ತಾನಕ್ಕೆ ಕೊಡಲು ಒಪ್ಪಿಕೊಂಡಿದ್ದರು.
ಈ ಒಪ್ಪಂದವು ಆಧುನಿಕ ಜಗತ್ತಿನ ಇತಿಹಾಸದಲ್ಲಿಯೇ ಅತೀ ಹೆಚ್ಚು ನೀರನ್ನು ಇತರ ದೇಶದೊಂದಿಗೆ ಹಂಚಿಕೊಂಡಂತಹ ಬೃಹತ್ ಒಪ್ಪಂದವಾಗಿತ್ತು, 1944 ರಲ್ಲಿ ಅಮೇರಿಕಾ ದೇಶವು ಮೆಕ್ಸಿಕೋ ದೇಶಕ್ಕೆ ನೀರಿನ ಹಂಚಿಕೆಯಲ್ಲಿ ಮಾಡಿಕೊಂಡಂತಹ ಒಪ್ಪಂದದ 90 ಪಟ್ಟು ಹೆಚ್ಚು ನೀರಿನ ಒಪ್ಪಂದಕ್ಕೆ ನೆಹರು ಪಾಕಿಸ್ತಾನದ ಜೊತೆ ಹಂಚಿಕೊಳ್ಳಲು ಸಹಿ ಹಾಕಿದ್ದರು. ಭಾರತದ ಸಂಪನ್ಮೂಲಗಳು ತನ್ನ ಅಪ್ಪನ ಮನೆಯ ಆಸ್ತಿಯೆಂಬಂತೆ ಪಕ್ಕದ ದೇಶಗಳಿಗೆ ನೆಹರು ಹಂಚಿರುವುದಕ್ಕೆ ಈ ಒಪ್ಪಂದ ಸಾಕ್ಷಿಯಾಗಿದೆ. ದೂರದೃಷ್ಟಿಯಿಲ್ಲದೆ ಸಂಪನ್ಮೂಲಗಳನ್ನು ಇತರರಿಗೆ ಹಂಚಿ, ನೀರಿನ ಕೊರತೆಯನ್ನು ತಂದೊದಗಿಸುವ ಒಪ್ಪಂದಕ್ಕೆ ನೆಹರು ಸಹಿ ಮಾಡಿದ್ದರು.
ಇವರ ಈ ಅವೈಜ್ಞಾನಿಕ ಒಪ್ಪಂದದಿಂದ ಅದೆಷ್ಟು ಮಕ್ಕಳು ನೀರಿನ ಕೊರತೆಯಿಂದ ಕಷ್ಟಪಡುತ್ತಿರಬಹುದಲ್ಲವೇ ? ಇಂತಹ ವ್ಯಕ್ತಿಯ ಹುಟ್ಟು ಹಬ್ಬವನ್ನು ಯಾಕೆ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬೇಕು ? ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಸಿಕ್ಕಿ ದಶಕಗಳೇ ಕಳೆಯಬೇಕಿತ್ತು, ಅಂತಹ ಒಂದು ಸುವರ್ಣಾವಕಾಶವನ್ನು ಹಾಳು ಮಾಡಿದ ಕೀರ್ತಿ ನೆಹರುಗೆ ಸಲ್ಲಬೇಕು. ಚೀನಾ ದೇಶವನ್ನು ಪಕ್ಕಕ್ಕೆ ಸರಿಸಿ ಭಾರತವನ್ನು ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವಕ್ಕೆ ಸೇರಿಸಿಕೊಳ್ಳಲು ಅಮೇರಿಕಾ ದೇಶವು ಸಹಕರಿಸಿತ್ತು. ಆದರೆ ಪಕ್ಕದ ಚೀನಾ ದೇಶಕ್ಕೆ ನೋವಾಗುತ್ತದೆಯೆಂಬ ನೆಪವೊಡ್ಡಿದ ನೆಹರು ಭಾರತವನ್ನು ವಿಶ್ವಸಂಸ್ಥೆಯ ಶಾಶ್ವತ ಸದಸ್ಯತ್ವದಿಂದ ದೂರ ಉಳಿಯುವಂತೆ ಮಾಡಿಬಿಟ್ಟಿದ್ದರು, ಸರ್ವಾಧಿಕಾರಿ ಧೋರಣೆ ತೋರಿದ್ದ ನೆಹರು ದೇಶದ ಅಷ್ಟೂ ಮುಖ್ಯಮಂತ್ರಿಗಳಿಂದ ಪತ್ರ ವನ್ನು ತರಿಸಿಕೊಂಡು ಶಾಶ್ವತವಾಗಿ ವಿಶ್ವಸಂಸ್ಥೆಯ ಬಾಗಿಲನ್ನು ಮುಚ್ಚುವಂತೆ ಮಾಡಿದ್ದರು, ನೆಹರು ತನ್ನ ಜೀವನದಲ್ಲಿ ಮಾಡಿದ ಬಹುದೊಡ್ಡ ಪ್ರಮಾದ ಇದಾಗಿತ್ತು.
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ, ಹೋರಾಟವನ್ನು ಹೈಜಾಕ್ ಮಾಡಿ ಪ್ರಧಾನಿಯಾದ ನೆಹರು ಮಕ್ಕಳಿಗೆ ಯಾವ ರೀತಿಯಲ್ಲಿ ಆದರ್ಶ ವಾಗುತ್ತಾರೆ ? ಕುಟುಂಬ ರಾಜಕಾರಣವನ್ನೇ ಬಂಡವಾಳ ಮಾಡಿಕೊಂಡಿದ್ದಂತಹ ನೆಹರು ಮಕ್ಕಳಿಗೆ ಆದರ್ಶವೇ ? ಸರ್ಕಾರದ ಸಂಪನ್ಮೂಲಗಳ ಬೆಲೆಯನ್ನು ತಿಳಿಯದೆ ಪಕ್ಕದ ದೇಶಗಳಿಗೆ ಹಂಚಿದ ನೆಹರು ಮಕ್ಕಳ ಆದರ್ಶ ವ್ಯಕ್ತಿಯೇ ? ಕಾಶ್ಮೀರದ ಸಮಸ್ಯೆಯನ್ನು ದಶಕಗಳ ಕಾಲ ಜೀವಂತವಾಗಿರಿಸುವಂತೆ ಮಾಡಿದ ನೆಹರು ಮಕ್ಕಳಿಗೆ ಆದರ್ಶವಾಗಬೇಕೆ ? ಭಾರತದ ’ಸೇನಾ ಯೋಜನೆಯ’ ನೀತಿಯನ್ನು ವಿರೋಽಸಿದ ಪ್ರಧಾನಮಂತ್ರಿ, ಮಕ್ಕಳಿಗೆ ಆದರ್ಶವಾಗಲು ಹೇಗೆ ಸಾಧ್ಯ ? ಈಶಾನ್ಯ ಭಾರತದ ರಾಜ್ಯಗಳ ಅಭಿವೃದ್ಧಿಯ ಕಡೆಗೆ ಗಮನ ಹರಿಸದೆ ದಶಕಗಳ ಕಾಲ ಅವರನ್ನು ಕತ್ತಲಲ್ಲಿಟ್ಟ ನೆಹರು ಮಕ್ಕಳಿಗೆ ಆದರ್ಶ ವಾಗಬೇಕೆ ? ಬಹುಷ್ಯ ಜಗತ್ತಿನಲ್ಲಿ ಪ್ರಧಾನಮಂತ್ರಿಯಾಗಿ ನೆಹರು ಮಾಡಿದ ಪ್ರಮಾದಗಳನ್ನು ಯಾರೊಬ್ಬರೂ ಮಾಡಿರಲು ಸಾಧ್ಯವಿಲ್ಲ, ಪ್ರಮಾದಗಳ ರಾಜನಾಗಿದ್ದ ನೆಹರು ಹುಟ್ಟು ಹಬ್ಬವನ್ನು ಮಕ್ಕಳ ದಿನಾಚರಣೆಯೆಂದು ಆಚರಿಸುವುದು ಎಷ್ಟು ಸರಿಯೆಂಬ ಪ್ರಶ್ನೆ ಕಾಡುತ್ತಿರುವುದಂತೂ ನಿಜ!