Saturday, 23rd November 2024

ಮೋದಿ ನಾಯಕತ್ವದಲ್ಲಿ ರಾಜಭಾಷೆಗೆ ವಿಶೇಷ ಒತ್ತು ನೀಡಿದ್ದೇವೆ : ಅಮಿತ್ ಶಾ

ವಾರಣಾಸಿ: ಗುಜರಾತಿ ಭಾಷೆಗಿಂತಲೂ ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ನಮ್ಮ ರಾಜ್ಯ ಭಾಷೆಯನ್ನು  ಬಲಪಡಿಸ ಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಭಾರತೀಯ ರಾಜಭಾಷಾ (ಅಧಿಕೃತ ಭಾಷೆ) ಸಮ್ಮೇಳನ’ದಲ್ಲಿ ಭಾಗವಹಿಸಿರುವ ಶಾ ಅವರು, ನಾನು ಗುಜರಾತಿ ಭಾಷೆಗೂ ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ಅಧಿಕೃತ ಭಾಷೆಯಾಗಿರುವ ಹಿಂದಿಯನ್ನು ಬಲಪಡಿಸ ಬೇಕಿದೆ ಎಂದು ಹೇಳಿದ್ದಾರೆ,

‘ನಿಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲೇ ಮಾತನಾಡಿ. ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ,’ ಎಂದು ತಿಳಿಸಿದ್ದಾರೆ.

ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯನ್ನು ಜನಾಂದೋಲನವನ್ನಾಗಿ ಪರಿವರ್ತಿಸಿ ದರು. ಅದಕ್ಕೆ ಮೂರು ಆಧಾರ ಸ್ತಂಭ ಗಳಿದ್ದವು – ಸ್ವರಾಜ್, ಸ್ವದೇಶಿ ಮತ್ತು ಸ್ವಭಾಷಾ. ಸ್ವರಾಜ್ಯವನ್ನು ಸಾಧಿಸಲಾಯಿತು. ಆದರೆ ಸ್ವದೇಶಿ ಮತ್ತು ಸ್ವಭಾಷಾ ಇನ್ನೂ ಹಿಂದೆ ಉಳಿದಿದೆ. ಹಿಂದಿ ಮತ್ತು ನಮ್ಮ ಎಲ್ಲಾ ಸ್ಥಳೀಯ ಭಾಷೆಗಳ ನಡುವೆ ಯಾವುದೇ ಸಂಘರ್ಷವಿಲ್ಲ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ನಾವು ರಾಜಭಾಷೆಗೆ ವಿಶೇಷ ಒತ್ತು ನೀಡಿದ್ದೇವೆ ಎಂದು ಹೇಳಿದ್ದಾರೆ.