ಹರಪನಹಳ್ಳಿ: ಕಾಲಿಗೆ ಗಾಯವಾಗಿ ನರಳುತ್ತಿದ್ದ ಅನಾಥ ವ್ಯಕ್ತಿಗೆ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಸ್ಥಳೀಯ ಬಿಜೆಪಿ ಮುಖಂಡರು, ಸಮಾಜ ಸೇವಕರು, ಹಾಗೂ ತೆಲಗಿ ಜಿಲ್ಲಾ ಪಂಚಾಯತಿ ಪ್ರಭಲ ಅಕಾಂಕ್ಷಿ, ಶಿರಗಾನಹಳ್ಳಿ ಬಿ.ವಿಶ್ವನಾಥ್ ತೀವ್ರ ಗಾಯಗೊಂಡಿದ್ದ, ಯಡಿಹಳ್ಳಿ ಗ್ರಾಮದ ಪರಶುರಾಮ್ ಎಂಬುವರಿಗೆ ಆಸ್ಪತ್ರೆ ಸೇರಿಸಿ ಚಿಕಿತ್ಸೆ ವೆಚ್ಚವನ್ನು ಭರಿಸಿ ಮಾನವೀಯತೆ ಮರೆದಿದ್ದಾರೆ.
ಕಿತ್ತು ತಿನ್ನುವ ಬಡತದಲ್ಲಿ ಕೂಲಿ ಕೆಲಸಕ್ಕಾಗಿ ಕೆರಳ ರಾಜ್ಯಕ್ಕೆ ಹೋಗಿದ್ದ ಪರಶುರಾಮ್ ಕೆಲಸ ಮಾಡುವ ವೇಳೆ ಕಾಲಿಗೆ ಗಾಯವಾಗಿದ್ದರಿಂದ ಮರಳಿ ತಮ್ಮ ಗುಡಿಗೆ ಸೇರಿ ನರಳಾಡು ತ್ತಿದ್ದ ಪರಶುರಾಮ್‌ನಿಗೆ ಯಡಿಹಳ್ಳಿ ಗ್ರಾಮದ ಸ್ಥಳೀಯರ ಜೋತೆ ಗೂಡಿ ತಮ್ಮ ಸ್ವಂತ ಖರ್ಚಿನಲ್ಲೆ ದಾವಣಗೆರಿ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಮನವಿಯತೆ ಮರೆದಿದ್ದಾರೆ.
ಇಂಥ ದುಸ್ಥಿತಿಯಲ್ಲಿ ಆಸ್ಪತ್ರೆಗೂ ಹೋಗದೇ ಹೈರಾಣಾಗಿದ್ದ ಅವರ ಸಹಾಯಕ್ಕೆ ಬಂದ ವರು ಯಡಿಹಳ್ಳಿ ಗ್ರಾಮಸ್ಥರು ಮತ್ತು ಶಿರಗಾನಹಳ್ಳಿ ಬಿ. ವಿಶ್ವನಾಥ್ ಇಡೀ ಕಾಲು ಕೊಳೆ ಯುವ ಹಂತಕ್ಕೆ ತಲುಪುವಷ್ಠರಲ್ಲೆ ಪರಶುರಾಮ್ ಅನುಭವಿಸಿದ ಕಷ್ಟ ನೋಡಲಾರದೆ ಗ್ರಾಮಸ್ತರು ಮತ್ತು ಶಿರಗಾನಹಳ್ಳಿ ವಿಶ್ವನಾಥ್ ಸೇರಿ ನರಳಾಡುತ್ತಿದ್ದ ಪರಶುರಾಮ್‌ಗೆ ನಿಮ್ಮ ಜೋತೆ ನಾವು ಇದ್ದೇವೆ ಎಂದು ಗಾಯವಾಗಿರುವ ವ್ಯಕ್ತಿಗೆ ದೈರ್ಯತುಂಬಿ ಆಸ್ಪತ್ರೆ ಸೇರಿಸಿ ದ್ದಾರೆ.
ವಿಶ್ವನಾಥ್ ಈ ಹಿಂದೆ ಹರಪನಹಳ್ಳಿ, ದಾವಣಗೆರಿ ಜಿಲ್ಲೆ ಸೇರಿದಂತೆ ಅನೇಕ ಕಡೆ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು, ಕಳೇದ ಮೂರು ವರ್ಷ ಹಿಂದೆ ತಮ್ಮ ಪೋಲಿಸ್ ಇಲಾಖೆಯ ಹುದ್ದೆಗೆ ರಾಜೀನಾಮೆ ಸಲ್ಲಿಸಿ, ನಂತರ ಸಮಾಜ ಸೇವೆಗೆ ಧುಮುಕಿ, ಕಳೆದ ಎರಡು ವರ್ಷಗಳಿಂದ ಕಾಡುತ್ತಿರುವ ಕಿಲ್ಲರ್ ಕರೋನಾ ವೈರಸ್ ನಲ್ಲಿ ನರಳುತ್ತಿದ್ದ ಅನೇಕ ಸಾರ್ವಜನಿಕರಿಗೆ ಅನೇಕ ರೀತಿಯಲ್ಲಿ ಸಮಾಜ ಸೇವೆಮಾಡುತ್ತಾ ಬಂದಿರುತ್ತಾರೆ. ನಿಮ್ಮ ಸಮಾಜ ಸೇವೆ ಹೀಗಿ ನಿರಂತರ ಸಾಗಲಿ ಎಂದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.