Saturday, 23rd November 2024

ಜಿಂಜುಡಾದಲ್ಲಿ 120 ಕೆಜಿ ಹೆರಾಯಿನ್ ವಶ

ಗಾಂಧಿನಗರ: ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಗುಜರಾತ್ ನ ಮೋರ್ಬಿ ನಗರದ ಜಿಂಜುಡಾ ಗ್ರಾಮದಲ್ಲಿ ಕೋಟಿ ಮೌಲ್ಯದ 120 ಕೆಜಿಗೂ ಅಧಿಕ ಹೆರಾಯಿನ್ ವಶಪಡಿಸಿಕೊಂಡಿದೆ.

ಗುಜರಾತ್ ಎಟಿಎಸ್ ಸುಮಾರು 120 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದೆ’ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ ನಲ್ಲಿ ಕಚ್‌ನ ಮುಂಡ್ರಾ ಬಂದರಿನಿಂದ 21,000 ಕೋಟಿ ರೂಪಾಯಿ ಮೌಲ್ಯದ 3,000 ಕಿಲೋಗ್ರಾಂಗಳಷ್ಟು ಹೆರಾಯಿನ್ ನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡ ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.

ಎರಡು ಸರಕು ಕಂಟೈನರ್‌ ಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಕಂಡುಬಂದಿದೆ. ಡ್ರಗ್ಸ್ ಅಫ್ಘಾನಿಸ್ತಾನದಿಂದ ರವಾನೆಯಾಗಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆ ಬಳಿ ಇರುವ ಪ್ರಕರಣದಲ್ಲಿ ಚೆನ್ನೈ ಮೂಲದ ದಂಪತಿ ಮತ್ತು ಕೊಯಮತ್ತೂರಿನಿಂದ ಮತ್ತೊಬ್ಬ ಆರೋಪಿಯನ್ನು ಡಿಆರ್‌ಐ ಬಂಧಿಸಿದೆ. ವಶಪಡಿಸಿಕೊಂಡ ಹೆರಾಯಿನ್ ಅನ್ನು ಕಂದಹಾರ್ ಮೂಲದ ಹಸನ್ ಹುಸೇನ್ ಲಿಮಿಟೆಡ್ ರಫ್ತು ಮಾಡಿತ್ತು.