ಸಂಗೀತ ನಿರ್ದೇಶಕ ಹಂಸಲೇಖ ಅವರ ಹಾಡುಗಳಿಗೆ ತಲೆ ದೂಗದವರಿಲ್ಲ. ಹಾಗಂತ ಅವರು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಸುಮ್ಮನಿರ
ಬೇಕಾ?! ಮೊನ್ನೆಯವರೆಗೂ ಅವರ ಮೇಲೆ ವೈಯಕ್ತಿಕವಾಗಿ ನನಗೂ ತುಂಬಾ ಅಭಿಮಾನ ಇತ್ತು. ದಿನದಲ್ಲಿ ಒಂದು ಬಾರಿಯಾದರೂ
ಅವರ ಹಾಡುಗಳನ್ನು ಗುನುಗುವ ನನ್ನಂತಹ ಸಾವಿರಾರು ಮನಸ್ಸುಗಳಿಗೆ ಹಂಸಲೇಖರು ಮೈಸೂರಿನ ಕಾರ್ಯಕ್ರಮದಲ್ಲಿ ಆಡಿದ ಮಾತು ಗಳು ನೋವು ತರುವಂಥದ್ದು ಹಾಗೂ ಸಮಾಜದ ದಾರಿ ತಪ್ಪಿಸುವಂತವು!
ಒಂದು ಕ್ಷಣ ಯೋಚಿಸಿದರೆ ಹಂಸಲೇಖ ಅವರಿಗೆ ಇದೆಲ್ಲ ಬೇಕಿತ್ತ? ಹೆಂಗೋ ನಾಡಿ ನಾದ್ಯಂತ ದೊಡ್ಡ ಹೆಸರು ಸಂಪಾದಿಸಿದ್ದರು. ಏನೋ ಮಾತನಾಡಲು ಹೋಗಿ, ಬೇರೆ ಏನನ್ನೋ ಮಾತನಾಡಿ ಇದ್ದ ಮರ್ಯಾದೆಯನ್ನು ಹಂಸಲೇಖ ಅವರು ಹಾಳು ಮಾಡಿ ಕೊಂಡಿರುವುದು ಅವರ ದೌರ್ಭಾಗ್ಯವೆಂದೇ ಹೇಳಬೇಕು. ಹಂಸಲೇಖರಿಗೆ ಸಮಾಜ ಕ್ಕಾಗಿ ದುಡಿದ ಶ್ರೀಗಳ ಬಗ್ಗೆ ಇಂಥ ಹೇಳಿಕೆ ಕೊಡುವ ದುರ್ಬುದ್ಧಿ ಅದೇಕೆ ಬಂತೋ ನಾ ಕಾಣೆ. ಏಕೆಂದರೆ ಪೇಜಾವರ ಶ್ರೀಗಳ ಹೋರಾಟದ ಬಗ್ಗೆ, ಅವರ ತತ್ವ-ಸಿದ್ಧಾಂತ ಗಳ ಬಗ್ಗೆ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ಗೊತ್ತಿದೆ. ಅವರೊಬ್ಬ ಬ್ರಾಹ್ಮಣ ಸಂತರಾಗಿದ್ದರೂ ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಗೆ ಅವರು ತೆಗೆದುಕೊಂಡ ನಿರ್ಧಾರಗಳು ಅನೇಕ ವೇಳೆ ವಾದ-ವಿವಾದಕ್ಕು, ಚರ್ಚೆಗೂ ಗ್ರಾಸವಾಗಿದೆ.
ಪೇಜಾವರ ಶ್ರೀಗಳು ದಲಿತರ ಮನೆಗಿರಲಿ, ಕೇರಿಯೊಳಗೆ ಪ್ರವೇಶಿಸುವುದನ್ನೂ ಅವರ ಸಮುದಾಯವೇ ಉಗ್ರವಾಗಿ ವಿರೋಧಿಸಿತ್ತು. ಆದರೂ ಶ್ರೀಗಳು ಸಮಾಜದಲ್ಲಿನ, ಅದರಲ್ಲೂ ಹಿಂದೂ ಸಮುದಾಯದಲ್ಲಿನ ಅಸ್ಪೃಶ್ಯತೆ ಬಗ್ಗೆ ಬಂಡೆದ್ದು ತಾನೊಬ್ಬ ಬ್ರಾಹ್ಮಣ ಸಂತ ಎಂಬುದನ್ನು ಲೆಕ್ಕಿಸದೆ ದಲಿತರ ಕೇರಿಗಳಿಗೆ ಹೋಗಿದ್ದಲ್ಲದೆ, ಅವರ ಮನೆಯೊಳಗೆ ಕುಳಿತು ದಲಿತರನ್ನು ಮುಕ್ತ ಸಮಾಜದೊಳಗೆ ತರುವ ಕೈಂಕರ್ಯಕ್ಕೆ ಮುಂದಾಗಿ ದ್ದಂತಹ ಶ್ರೇಷ್ಠ ಸಂತ ಪೇಜಾವರಶ್ರೀ.
ಜನಪರವಾದ ಯಾವ ಯಾವ ಹೋರಾಟಗಳಲ್ಲಿ ಹಂಸಲೇಖ ಭಾಗಿಯಾಗಿದ್ದಾರೆ? ಸಮಾಜಕ್ಕಾಗಿ ಎಷ್ಟು ಅಂದೋಲನಗಳನ್ನು ರೂಪಿಸಿ ದ್ದಾರೆ? ಆದರೆ ಪೇಜಾವರ ಶ್ರೀಗಳ ಬದುಕು ಆಗಿರಲಿಲ್ಲ. ಅವರ ಬದುಕೇ ಹೋರಾಟದ ಬದುಕಾಗಿತ್ತು. ಅಯೋಧ್ಯೆಯ ರಾಮ ಮಂದಿರ ಹೋರಾಟದಲ್ಲಿ ಪೇಜಾವರ ಶ್ರೀಗಳ ಹೆಸರು ಅಗ್ರಗಣ್ಯವಾಗಿ ಕಾಣಿಸಿಕೊಳ್ಳುತ್ತದೆ. ರೈತರು, ಬಡವರು, ದಲಿತರು, ನಿರ್ಗತಿಕರ ಪಾಲಿನ ದನಿಯಾಗಿದ್ದರು ಶ್ರೀಗಳು. ಕಾವೇರಿ ಹೋರಾಟ, ಮಹಾದಾಯಿ ಹೋರಾಟ, ಕನ್ನಡ ಪರ ಹೋರಾಟಗಳಲ್ಲೂ ಶ್ರೀಗಳ ಮುಂದಾಳತ್ವ ವಿರುತ್ತಿತ್ತು.
ನಾಡಿನ ಹಾಗೂ ದೇಶದ ನಾನಾ ಭಾಗಗಳಲ್ಲಿ ಅವರ ಭಕ್ತವೃಂದ ಪೇಜಾವರ ಶ್ರೀಗಳ ಫೋಟೋಗಳನ್ನು ತಮ್ಮ ಮನೆಯ ದೇವರ ಕೊಠಡಿಯಲ್ಲಿಟ್ಟು ಪೂಜಿಸುತ್ತಿದ್ದಾರೆ. ಇಷ್ಟೇ ಅಲ್ಲ ಪೇಜಾವರ ಶ್ರೀಗಳು ಕೃಷ್ಣ ಮಠದಲ್ಲಿ ಮುಸ್ಲಿಂ ಬಾಂಧವರಿಗಾಗಿ ಇ- ಕೂಟ ಆಯೋಜಿಸಿ ದ್ದಾಗ ಅವರ ಮೇಲೆ ಅನೇಕರು ತಿರುಗಿಬಿದ್ದರು. ಆದರೆ ಶ್ರೀಗಳು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬದಲಾಗಿ ‘ಮುಸ್ಲಿಮರು ನಮ್ಮವರೇ, ನಮ್ಮ ಸಹೋದರರೇ’ ಎನ್ನುವ ಮೂಲಕ ವಿಶ್ವಮಾನವ ಸಂದೇಶವನ್ನು ಎತ್ತಿ ಹಿಡಿದಿದ್ದವರು.
ಸದಾ ಸಮಾಜದ ಒಳಿತಿಗಾಗಿ ಮಿಡಿಯುತ್ತಿದ್ದ ಶ್ರೀಗಳನ್ನು ಕೇವಲ ಕಾರ್ಯಕ್ರಮವೊಂದರಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕೋಸ್ಕರ ಹಂಸಲೇಖ ತೆಗಳುತ್ತಾರೆಂದರೆ ಅವರ ತಲೆಯೊಳಗೆ ಮೆದುಳಿದೆಯೋ ಅಥವಾ ಆ ಜಾಗದಲ್ಲಿ ಮೂತ್ರಪಿಂಡವೇನಾದರೂ ಇದೆಯೋ?
ಅನಿಸುತ್ತದೆ. ಪೇಜಾವರ ಶ್ರೀಗಳು ಸಮಾಜದಲ್ಲಿದ್ದ ಅಸ್ಪೃಶ್ಯತೆಯೆಂಬ ಕಲ್ಮಶವನ್ನು ಕಿತ್ತೋಗೆದು ಸಮಾಜದ ಎಲ್ಲ ವರ್ಗದ ಜನರ ಒಳಗೊಳ್ಳುವಿಕೆಯ ಸಮಾಜವನ್ನು ಕಟ್ಟಬೇಕೆಂದು ಹೊರಾಡಿದರೆ, ಹಂಸಲೇಖ ತಮ್ಮ ಮನಸ್ಸಿನಲ್ಲಿದ್ದ ಕಲ್ಮಶವನ್ನು ಮಾತಿನ ಮೂಲಕ ಹೊರಹಾಕಿ ಸಮಾಜದೆದುರು ಸಣ್ಣತನ ತೋರಿದ್ದಾರೆ.
ಜತೆಗೆ ತಮ್ಮ ಮನಸ್ಸು ಎಷ್ಟು ಕಲ್ಮಶದಿಂದ ಕೂಡಿದೆ ಎಂಬುದನ್ನು ಅವರೇ ತಮ್ಮ ಮಾತುಗಳ ಮೂಲಕ ಬಹಿರಂಗ ಪಡಿಸಿದ್ದಾರೆ.ಶ್ರೇಷ್ಠ ಸಂತರ ತೆಗಳುವಿಕೆ ಹಂಸಲೇಖ ಅಂಥವರಿಗೆ ನಿಜವಾಗಿಯೂ ಶೋಭೆ ತರುವುದಿಲ್ಲ. ಹಂಸಲೇಖ ಅವರ ಹೇಳಿಕೆ ನೋಡಿದರೆ ಇಷ್ಟು ದಿನ
ಇಂಥ ದೊಡ್ಡ ಸಂಗೀತಗಾರನಬ್ಬ ಕಂಸನೆಂಬ ದುಷ್ಟ ಅಡಗಿದ್ದುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಂದ ಹಾಗೆ ಇಸ್ಲಾಮಿನ ಧರ್ಮ ಗುರುಗಳು, ಮು-ಮೌಲ್ವಿಗಳು ಅನೇಕ ಬಾರಿ ಹಿಂದೂಗಳ ಮನೆಗಳಿಗೆ ಹೋಗುತ್ತಾರೆ.
ಹಾಗಾಂತ ಅವರು ಹಂದಿ ಮಾಂಸ ಸೇವಿಸುತ್ತಾರೆಯೇ? ಹಂದಿ ಮಾಂಸದ – ಕೊಟ್ಟರೆ ತಿನ್ನುತ್ತಾ ರೆಯೇ? ಎಂದು ಹೇಳುವ ತಾಕತ್ತು, ಒಂದು ವೇಳೆ ಹಾಗೇನಾದರೂ ಹೇಳಿದರೆ ಬರುವ ರಿಯಾಕ್ಷನ್ ಅನ್ನು ತಡೆದುಕೊಳ್ಳುವ ಶಕ್ತಿ ಹಂಸಲೇಖ ಅವರಿಗೆ ಇದೆಯಾ? ಇಂಥ ಅವಿವೇಕದ ಮಾತನ್ನು ಯಾರೂ ಕೂಡ ಆಡಬಾರದು. ದೊಡ್ಡವರಾದವರು ಬೇರೊಬ್ಬ ಸಾಧಕನ ಬಗ್ಗೆ, ಸಮಾಜಕ್ಕಾಗಿ ಬದುಕನ್ನು
ಮೀಸಲಿಟ್ಟವರ ಬಗ್ಗೆ ಮಾತನಾಡುವಾಗ ನಾಲಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು.
ಇಲ್ಲದಿದ್ದರೆ ಹೀಗೆ ಆಗೋದು. ಹೇಳೋದೆಲ್ಲ ಹೇಳಿ ಬಿಟ್ಟು ಆಮೇಲೆ ಕ್ಷಮೆ ಕೇಳಿದರೆ ಏನು ಬಂತು. ಅದೇನೋ ಹೇಳ್ತಾರಲ್ಲ ‘ಮಾತು
ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು ಅಂತಾರಲ್ಲ ಹಾಗಾಯ್ತು ಹಂಸಲೇಖ ಅವರು ಮಾಡಿದ್ದು. ಬಸವಣ್ಣ ಅದಕ್ಕೇ ಹೇಳಿದ್ದು ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ?’ ಈ ವಚನವನ್ನು ಹಂಸಲೇಖ ನೆನಪಿಸಿಕೊಂಡರೆ ಒಳ್ಳೆಯದು.
-ಮಾರುತೀಶ್ ಅಗ್ರಾರ