Sunday, 15th December 2024

ರಂಗನ ಕ್ಷಮೆಯಾಚಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ

ಮಿಸ್ಟರ್ ಮಹಾ ಗುರುಗಳೇ, ಒಂದೋ 12 ದಿನದಲ್ಲಿ ಬೆಟ್ಟಕ್ಕೆ ಬಂದು ಬಹಿರಂಗ ಕ್ಷಮೆ. ಇಲ್ಲವೋ 343 ದಿನಗಳಲ್ಲಿ ಬಿಳಿಗಿರಿರಂಗ ನಿಂದಲೇ ಶಿಕ್ಷೆ… ಆಯ್ಕೆ ನಿಮ್ಮದು.

ಹಂಸಲೇಖ ಸಾಹೇಬ್ರೇ ಏನಿದು??!! ಏನ್ ಮಾತು ಅಂತ ಆಡ್ತಾ ಇದ್ದೀರಾ?? ಮನುಷ್ಯನಿಗೆ ಹೊಟ್ಟೆ ತುಂಬಿದಾಗ ತಲೆ ಖಾಲಿ ಆಗುತ್ತೆ ಅಂದ್ರೆ ಇದೇ ಇರ್ಬೇಕು ನೋಡಿ. ‘ಬುದ್ಧಿನಾಶಾತ್ ವಿನಶ್ಯತಿ’. ಅದೂ ತಾವಾಡಿರೋದು ಯಾರ್ ಬಗ್ಗೆ ಅಂತನಾದ್ರೂ ಯೋಚನೆ ಮಾಡಿದ್ದೀರಾ!? ಜೀವನ ಪರ್ಯಂತ ಪರಿಶುದ್ಧ ಸನ್ಯಾಸ ಜೀವನ ನಡೆಸಿ, ನಿರ್ವ್ಯಾಜವಾದ ರಾಷ್ಟ್ರಕಾರ್ಯ ನಡೆಸಿ ಅಸಂಖ್ಯ ಜನರಿಗೆ ಪ್ರೇರಣೆಯಾದ ಮತ್ತು ಶತಶತಮಾನಗಳಿಂದ ಈ ದೇಶದಲ್ಲಿ ಜೀವಂತವಿದ್ದ ಅಸ್ಪೃಶ್ಯತೆಯ ನಿವಾರಣೆಗೆ ಮೊದಲ ಬಾರಿಗೆಂಬಂತೆ ಕ್ರಾಂತಿಕಾರಿ ಹೆಜ್ಜೆ ಇಟ್ಟು ಸಂಚಲನ ಮೂಡಿಸಿದ ಪೂಜ್ಯ ಪೇಜಾವರ ಶ್ರೀಗಳ ಬಗ್ಗೆ.

ಓರ್ವ ಅತ್ಯಂತ ಸಾಂಪ್ರದಾಯಿಕ ಕಟ್ಟುಪಾಡಿನ ವ್ಯವಸ್ಥೆ ಇರುವ ಪೀಠದಾಧಿಪತಿಯಾಗಿ ಅವುಗಳ ನಡುವೆಯೂ ಇಂಥಾ ದಿಟ್ಟ  ನಿರ್ಧಾರ ಗಳನ್ನು ತಳೆದು ಪ್ರಾಮಾಣಿಕ ಹೆಜ್ಜೆ ಇಟ್ಟ ಪೇಜಾವರ ಶ್ರೀಗಳ ಬಗ್ಗೆ ಹೇಳಕ್ಕೆ ನಿಮಗಿರುವ ಯೋಗ್ಯತೆಯಾದರೂ ಏನು ಅನ್ನೋದನ್ನು ಯೋಚಿಸಿದ್ದೀರಾ?? ನಮ್ಮ ನಿಮ್ಮ ಅಪೇಕ್ಷೆಗಳು ನಿರೀಕ್ಷೆಗಳು ಸಾವಿರ ಇರಬಹುದು ಮಹಾನುಭಾವರೇ. ಆನೆ ಹೋಗುವಾಗ ನಾಯಿ ಬೊಗಳಿದಂತಾಗಿಲ್ವಾ?? ನಿಮ್ಮ ಅವಸ್ಥೆ ??!! ಆಯ್ತು ಬಿಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ.

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಒಬ್ಬನಿಗೆ ಸರಿ ಅನಿಸಿದ್ದು ಮತ್ತೊಬ್ಬನಿಗೆ ಇರಬೇಕಂತಿಲ್ಲ. ಆದ್ದರಿಂದ ತನಗೆ ಅನಿಸಿದ್ದನ್ನು ಹೇಳೋದು ಹಕ್ಕು ಅಂತಾನೇ ಇಟ್ಕೊಳ್ಳಿ. ಅದೂ ಅಲ್ಲದೇ ಜೀವನ ಇಡೀ ನಿಮ್ಮಂಥ ಪುಟಗೋಸಿಗಳ ಆರೋಪ ಟೀಕೆಗಳನ್ನು ಸಂತೋಷ ದಿಂದ ಸ್ವೀಕರಿಸಿ ಅದರಿಂದಲೇ ಉತ್ಸಾಹವನ್ನು ತುಂಬಿಕೊಂಡು ಕೆಲಸ ಮಾಡಿದ ಮಹಾನುಭಾವರು ಅವರು. ನೂರು ಜನ್ಮತಾಳಿ ಬಂದ್ರೂ ನಿಮ್ಗೆ ಅವರ ಯೋಗ್ಯತೆ ಅರ್ಥ ಆಗಲ್ಲ ಬಿಡಿ.

ಅದೂ ಸಾಲದೆಂಬಂತೆ ಬಿಳಿಗಿರಿರಂಗನ ಬಗ್ಗೆ ತಾವಾಡಿದ ಮಾತು ಅಕ್ಷರಶಃ ನಿಮ್ಮ ದುರಹಂಕಾರದ, ಬುದ್ಧಿ ಭ್ರಮಣೆಯ ಪರಮಾವಽಯೇ ಸರಿ. ಅ.. ರೀ ಭಗವಂತನ ನಿರ್ಧಾರ ಭಗವಂತನ ಸಂಕಲ್ಪಗಳನ್ನು ಅಳೆಯೋ ಯೋಗ್ಯತೆ ನಿಮಗಿದ್ಯಾ?? ಭಗವಂತನ ಅನುಗ್ರಹ ದಯೆ ಯಿಂದಲೇ ಒಂದು ಉಸಿರು ಬಿಡೋದ್ರಿಂದ ಹಿಡಿದು ಸಕಲ ವೈಭೋಗಗಳನ್ನು ತಾವೂ ಅನುಭವಿಸ್ತಾ ಇರೋದು ಮರೆತು ಹೋಯ್ತಾ?? ಈ ನಿಮ್ಮ ಜನ್ಮದಲ್ಲಿ ಆತನ ದಯೆ ಹೊರತು ನೀವಾಗಿಯೇ ಪಡೆದದ್ದು ಏನು ಅಂತ ಪಟ್ಟಿ ಕೊಡ್ತೀರಾ?? ‘ನ ಮೇ ಭಕ್ತಃ ಪ್ರಣಶ್ಯತಿ’ ಅಂತ ಹೇಳಿದವನು ಬಿಳಿಗಿರಿರಂಗ.

ತಾನು ಭಕ್ತ ಪರಾಧೀನ ಅನ್ನೋದನ್ನು ಸಾರಿ ಸಾರಿ ಹೇಳಿದ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ ಮಹಾಕವಿಗಳೇ. ತನ್ನ ಭಕ್ತರಿಗೆ ಏನೇ ನೋವಾದರೂ ಆ ನೋವು ನೀಡಿದವರನ್ನು ಅದ್ಯಾವ ಪರಿ ನೋಡಿಕೊಂಡ ಅನ್ನೋದು ತಿಳಿದೇ ಇದೆ. ಆದ್ದರಿಂದ ಮಾನ್ಯ ಹಂಸಲೇಖ.. ಅವರೇ. ನೀವು ಮತ್ತು ನಿಮ್ಮ ಮನೆ ಮಂದಿ ಎಲ್ಲರೂ ಒಂದು ವಿಚಾರ ಗಮನ ಇಟ್ಟು ಕೇಳಿ. ತಾವು , ಪೂಜ್ಯ ಪೇಜಾವರ ಶ್ರೀಗಳ ಮತ್ತು ಬಿಳಿಗಿರಿರಂಗನ ವಿರುದ್ಧ ಅಸಂಬದ್ಧ ಆಲಾಪ ತೆಗೆದು ಅವರ ಅಸಂಖ್ಯ ಭಕ್ತರನ್ನು ನೋಯಿಸಿದ್ದೀರಿ.

ಬಿಳಿಗಿರಿ ರಂಗ ಬೇರೆ ಅಲ್ಲ. ಉಡುಪಿ ಕೃಷ್ಣ ತಿರುಮಲ ವೆಂಕಟ, ಪಂಡರಾಪುರ ವಿಠಲ, ಪುರಿ ಜಗನ್ನಾಥ, ದ್ವಾರಕಾ ಕೃಷ್ಣ, ಮೇಲು ಕೋಟೆಯ ಚೆಲುವರಾಯ, ತಿರುವಂತಪುರ ಅನಂತಶಯನ, ತೊರವೆ ನರಸಿಂಹ, ಅಹೋಬಲ ನರಸಿಂಹ ಮೊದಲಾದ ಸನ್ನಿಧಾನಗಳು ಬೇರೆ ಅಲ್ಲ. ಆದ್ದರಿಂದ ತಮ್ಮ ಅಧಿಕ ಪ್ರಸಂಗದ ಮಾತುಗಳು ಈ ಎಲ್ಲ ಸನ್ನಿಧಾನಗಳ ಅಸಂಖ್ಯಭಕ್ತರಿಗೂ ಸಮಸ್ತ ಆಸ್ತಿಕ ಸಮುದಾ ಯಕ್ಕೇ ನೋವು ತಂದಿದೆ. ಇದು ನಿಶ್ಚಯವಾಗಿಯೂ ತಮಗೆ ಶೋಭೆ ಅಲ್ಲ.

ಆದ್ದರಿಂದ ನೀವು ಮತ್ತು ನಿಮ್ಮ ಮನೆಯವರು ಈ ಮುಂದಿನ ಮಾತುಗಳನ್ನು ದಯವಿಟ್ಟು ಗಮನವಿಟ್ಟು ಕೇಳಿಸಿಕೊಳ್ಳಿ. ನಾನಾಗಲೀ ಅಥವಾ ಇನ್ಯಾರಾಗಲೀ ನಿಮಗೆ ಏನೂ ಮಾಡಲ್ಲ.. ಇದು ನೂರಕ್ಕೆ ನೂರು ಸತ್ಯ.. ಹಿಂಸೆಯನ್ನು ಒಪ್ಪಿದವರು ನಾವಲ್ಲ. ಆದರೆ ಬಿಳಿಗಿರಿ ರಂಗನ ಭಕ್ತರನ್ನು ತಾವು ನೋಯಿಸಿದ್ದಕ್ಕೆ ನಿಶ್ಚಯವಾಗಿ ಒಂದು ನೋವು ಅನುಭವಿಸಲು ಸಿದ್ಧರಾಗಿ.

ಇವತ್ತಿಗೆ ಸರಿಯಾಗಿ ಹನ್ನೆರಡು ದಿನಗಳ ಒಳಗಾಗಿ ತಾವು ಮತ್ತು ತಮ್ಮ ಮನೆ ಮಂದಿ ಸೇರಿಕೊಂಡು ಯಾವುದೇ ಮುಚ್ಚು ಮರೆ ಇಲ್ಲದೇ ಬಹಿರಂಗವಾಗಿ ಬಿಳಿಗಿರಿರಂಗನ ಸನ್ನಿಧಿಗೆ ಮತ್ತು ಬೆಂಗಳೂರಿನಲ್ಲಿರುವ ಪೇಜಾವರ ಶ್ರೀಗಳ ವೃಂದಾವನ ಸನ್ನಿಽಗೆ ತೆರಳಿ ಆಡಿದ ಬುದ್ಧಿ ಭ್ರಮಣೆಯ ಮಾತುಗಳಿಗೆ ಅವನಲ್ಲಿ ಕ್ಷಮೆಯಾಚಿಸಲೇ ಬೇಕು.

ಇಲ್ಲ .. ನಿಮ್ಮ ಧೀಮಾಕು ಅದಕ್ಕೆ ಒಪ್ಪಲ್ಲ ಅಂತ ಇದ್ರೆ ಇದೋ ಕೇಳಿಸಿಕೊಳ್ಳಿ ಆ ಹನ್ನೆರಡನೇ ದಿನದಿಂದ ಆರಂಭಿಸಿ ಮುಂದಿನ 343 ದಿನ ಮತ್ತು ಹನ್ನೊಂದೂವರೆ ಘಳಿಗೆ ಒಳಗೆ ತಮಗೆ ಅಥವಾ ತಮ್ಮ ಮನೆಮಂದಿಯ ಯಾರಿಗಾದರೂ, ಜೀವನ ಪರ್ಯಂತ ಯಾತನೆ ಸಂಕಟ ನೋವು ಅನುಭವಿಸುವ ಆಘಾತವೊಂದು ಸಂಭವಿಸುತ್ತದೆ. ಅದು ನಿಮ್ಮ ಇಡೀ ಮನೆಯ ಸುಖ ನೆಮ್ಮದಿಯನ್ನು ಕಸಿಯೋದಂತೂ ಶತ ಸಿದ್ಧ . ಇದು ಶಾಪ ಅಲ್ಲ. ಬೆದರಿಕೆ ಅಂತೂ ಅಲ್ಲವೇ ಅಲ್ಲ. ಆದರೆ ಬಿಳಿಗಿರಂಗನ ಭಕ್ತನಾಗಿ ಹೇಳುತ್ತೇನೆ ಇದು ಸತ್ಯ..ಆದ್ರಿಂದ ಯೋಚನೆ ಮಾಡಿ.. ತೀರ್ಮಾನಿಸಿ. ಆಯ್ಕೆ ನಿಮ್ಮದು.
-ವಾಸುದೇವ ಭಟ್ ಪೆರಂಪಳಿ