ಆಭಿಮತ
ಜಯಶ್ರೀ ಕಾಲ್ಕುಂದ್ರಿ ಬೆಂಗಳೂರು
ಶ್ರೀರಾಮಚಂದ್ರನ ಮಂದಿರ ಹಿಂದೂ ಅನುಯಾಯಿಗಳ ಶ್ರದ್ಧೆೆಯ ತಾಣ ಮಾತ್ರವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಲಿ. ಮಂದಿರ-ಮಸೀದಿ ನಿರ್ಮಾಣಕ್ಕೆೆ ಜಾತಿ-ಮತ-ಧರ್ಮಗಳ ಬೇಧ ಮರೆತು ಎಲ್ಲಾಾ ಪ್ರಜ್ಞಾಾವಂತ ನಾಗರಿಕರೂ ಕೈಜೋಡಿಸಿದೆ.
ಭಾರತೀಯ ಸಂಸ್ಕೃತಿಯ ಮೇಲೆ ಅಳಿಸಲಾಗದ, ಮರೆಯಲಾಗದ ಇಂತಹ ನೋವಿನ ಗುರುತುಗಳು ಅನತಿ ಕಾಲದವರೆಗೂ ಭಾರತೀಯರ ಕಣ್ಣಂಚಿನಲ್ಲಿ ಕಂಬನಿಯುಕ್ಕುವಂತೆ ಮಾಡುತ್ತಲಿವೆ.
ಕೈಕೇಯಿ ಮತ್ತು ಆಕೆಯ ದಾಸಿ ಮಂಥರೆ ಸೇರಿ ಶ್ರೀರಾಮಚಂದ್ರನಿಗೆ ಕೇವಲ ಹದಿನಾಲ್ಕು ವರ್ಷ ವನವಾಸ ವಿಧಿಸಿದರೆ, ಅನಪೇಕ್ಷಿತ ವಿದ್ಯಮಾನಗಳಿಂದ, ಶೃಧ್ಧಾಾಳುಗಳು ಮರ್ಯಾದಾ ಪುರುಷೋತ್ತಮನಿಗೆ ರಾಮಮಂದಿರವೆಂಬ ದೇವಮಂದಿರವೊಂದನ್ನು ನಿರ್ಮಿಸಿ, ಪೂಜಿಸಿ ಆರಾಧಿಸಿಬಹುದೆಂಬ ಸುಸಮಯ ಆಗಮಿಸಿದ್ದು ಸುಮಾರು ಐದು ಶತಮಾನಗಳ ನಂತರವೇ. ವಿಶ್ವದಾದ್ಯಂತ ಕೋಟಿ-ಕೋಟಿ ಹಿಂದೂಗಳು ಸಂಭ್ರಮಿಸುವಂತಹ ತೀರ್ಪನ್ನು ದೇಶದ ಸರ್ವೋಚ್ಚ ನ್ಯಾಾಯಾಲಯ ನೀಡಿದೆ. ಇಲ್ಲಿಯವರೆಗೆ ವಿವಾದಿತ ಪ್ರದೇಶವೆಂದೇ ಬಿಂಬಿತವಾಗಿದ್ದ ಶ್ರೀರಾಮಜನ್ಮಭೂಮಿ ಪ್ರದೇಶದ 2.77ಎಕರೆ ಜಾಗವನ್ನು ಪೂರ್ತಿಯಾಗಿ ರಾಮಮಂದಿರದ ನಿರ್ಮಾಣಕ್ಕೆೆ ಹಸ್ತಾಾಂತರಿಸಲಾಗಿದೆ. ಮಂದಿರ ರಚನೆಗಾಗಿ ಟ್ರಸ್‌ಟ್ ಒಂದನ್ನು ನಿರ್ಮಿಸಿಲು ಸರಕಾರಕ್ಕೆೆ ನಿರ್ದೇಶಿಸುವದರೊಂದಿಗೆ, ಮತ್ತೋೋರ್ವ ಅರ್ಜಿದಾರರಾದ ಸುನ್ನಿಿ ವಕ್‌ಫ್ ಬೋರ್ಡ್‌ಗೆ ಪರ್ಯಾಯ ಐದು ಎಕರೆಗಳಷ್ಟು ಜಾಗವನ್ನು ಮಸೀದಿ ನಿರ್ಮಾಣಕ್ಕೆೆ ನೀಡಲು ಆದೇಶಿಸಿರುವುದು ಸಹ ಸ್ವಾಾಗತಾರ್ಹ.
ಲೋಕ ಕಲ್ಯಾಾಣಕ್ಕಾಾಗಿ ಶ್ರೀರಾಮಚಂದ್ರನಿಗೆ ಹದಿನಾಲ್ಕು ವರ್ಷಗಳ ವನವಾಸ ವಿಹಿತವೆನಿಸಿದರೂ, ನಮ್ಮದೇ ನೆಲದಲ್ಲಿ ಶ್ರೀರಾಮಚಂದ್ರನಿಗೆ ಮಂದಿರವೊಂದನ್ನು ಕಟ್ಟಲು ಇಷ್ಟು ದೀರ್ಘಾವಧಿಯ ಸಮಯದ ಅಗತ್ಯವಿತ್ತೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆೆ. ಧಾರ್ಮಿಕ ಪ್ರಶ್ನೆೆಗಿಂತ ರಾಜಕೀಯ ಇಚ್ಛಾಾಶಕ್ತಿಿಯ ಕೊರತೆಯಿಂದ ರಾಮಜನ್ಮಭೂಮಿ ವಿವಾದಕ್ಕೆೆ ಪರಿಹಾರ ದೊರಕಲು ವಿಳಂಬವಾಯಿತೆನ್ನುವ ವಾದವೂ ಸಹ ಗಮನಾರ್ಹ. ದೇಶದಾದ್ಯಂತ ಪಕ್ಷ-ಮತ-ಧರ್ಮಗಳ ಬೇಧವಿಲ್ಲದೆ ಹೆಚ್ಚಿಿನಾಂಶ ಭಾರತೀಯರು ಸರ್ವೋಚ್ಚ ನ್ಯಾಾಯಾಲಯದ ಈ ಕ್ರಮವನ್ನು ಸ್ವಾಾಗತಿಸಿರುವುದು ಸಹ ಪ್ರಶಂಸಾರ್ಹ.
ಶ್ರೀರಾಮಚಂದ್ರನಿಗೊಂದು ರಾಮಮಂದಿರವನ್ನು ನಿರ್ಮಿಸುವ ವಿಚಾರದಲ್ಲಿ ಸವೋಚ್ಚ ನ್ಯಾಾಯಾಲಯ, ಇಡೀ ಪ್ರಕರಣವನ್ನು ವಿವಾದ ಮಾತ್ರವೆಂದು ಪರಿಗಣಿಸದೆ, ಹಿಂದೂ ಧರ್ಮದ ಅನುಯಾಯಿಗಳ ಶ್ರಧ್ಧೆೆ ಹಾಗೂ ಶ್ರೀರಾಮಚಂದ್ರನ ಆದರ್ಶವನ್ನು ಪರಿಗಣಿಸಿರುವುದರಿಂದಲೇ ಈ ನಿರ್ಣಯಕ್ಕೆೆ ಬರಲು ಸಾಧ್ಯವಾಯಿತೆಂಬ ಮಾತಿನಲ್ಲಿ ಸತ್ಯಾಾಂಶವಿಲ್ಲದಿಲ್ಲ. ಶತಮಾನಗಳಿಂದಲೂ ‘ಸೋನೆ ಕಿ ಚಿಡಿಯಾ’ ಎಂದೇ ಹೆಸರಾದ ಭಾರತ ದೇಶ, ವಿಶ್ವದ ಹಲವಾರು ದೇಶಗಳು, ಜನಾಂಗಗಳು ನಿಬ್ಬೆೆರಗಾಗುವಂತಹ ಸಂಪತ್ತಿಿನ ತವರೂರು. ಬೆರಗಾಗುವ ಮಾತಂತಿರಲಿ, ಇಲ್ಲಿಯ ಸಂಪತ್ತನ್ನು ಲೂಟಿ ಹೊಡೆಯುವ, ತಮ್ಮ ಧರ್ಮವನ್ನೇ ಸ್ಥಾಾಪಿಸಿ, ಸಮೃದ್ಧ ದೇಶವನ್ನು ಧೂಳಿಪಟವಾಗಿಸುವ ಇತರ ದೇಶಗಳ ಹುನ್ನಾಾರ ಶತಮಾನಗಳಿಂದಲೂ ನಡೆದು ಬಂದಿರುವುದು ಸಹ ಅರಗಿಸಿಕೊಳ್ಳಲಾಗದ ಕಹಿಸತ್ಯ.
ನಮ್ಮ ದೇಶವನ್ನು ಆಳುವ ನೆಪದಲ್ಲಿ, ದೇಶದುದ್ದಕ್ಕೂ ಸಾವಿರಾರು ದೇವಾಲಯಗಳು, ಗರ್ಭ ಗುಡಿಯಲ್ಲಿ ಪೂಜಿಸಲ್ಪಡುತ್ತಿಿದ್ದ ದೇವತೆಗಳ ಮೂರ್ತಿಗಳು, ಅವುಗಳಿಗೆ ಹೊದಿಕೆಯೆನ್ನಿಿಸಿದ ಚಿನ್ನದ ಕಳಶ-ಗೋಪುರಗಳನ್ನು ಧ್ವಂಸಗೊಳಿಸಿ ಅಲ್ಲಿದ್ದ ಧನ-ಕನಕಗಳನ್ನು ಕೈವಶ ಮಾಡಿಕೊಂಡು, ಭಾರತೀಯರ ಹೃದಯ ಸಾಮ್ರಾಾಜ್ಯದ ಮೇಲೆ ಬಲವಾದ ಬರೆಯೆಳೆದಿದ್ದಾಾರೆ. ಪುರಾತನ ದೇವಾಲಯಗಳನ್ನೆೆಲ್ಲಾಾ ಧ್ವಂಸಗೊಳಿಸಿ, ಮಸೀದಿಗಳನ್ನು ನಿರ್ಮಿಸಿದ್ದಾಾರೆ. ಇಂದಿಗೂ ಹಲವಾರು ದೇವಾಲಯಗಳಲ್ಲಿ ಭಗ್ನವಾಗಿರುವ ಸುಂದರ ಮೂರ್ತಿಗಳು, ತಮ್ಮ ನೋವಿನ ಕಥೆಯನ್ನು ಬಿಡಿಸಿಡುತ್ತಲಿವೆ. ಭಾರತೀಯ ಸಂಸ್ಕೃತಿಯ ಮೇಲೆ ಅಳಿಸಲಾಗದ, ಮರೆಯಲಾಗದ ಇಂತಹ ನೋವಿನ ಗುರುತುಗಳು ಅನತಿ ಕಾಲದವರೆಗೂ ಭಾರತೀಯರ ಕಣ್ಣಂಚಿನಲ್ಲಿ ಕಂಬನಿಯುಕ್ಕುವಂತೆ ಮಾಡುತ್ತಲಿವೆ.
ಕ್ರಿಿ.ಶ 1528ರಲ್ಲಿ ಮೊಘಲ್ ದೊರೆ ಬಾಬರ್‌ನ ದಳಪತಿಯಾದ ಮೀರ್ ಬಾಕಿ ತಾಶ್ಕಂಡಿ ರಾಮ ಜನ್ಮಭೂಮಿ ದೇವಾಲಯವನ್ನು ಧ್ವಂಸಗೊಳಿಸಿ, ಮಸೀದಿಯೊಂದನ್ನು ನಿರ್ಮಿಸಿದ್ದರಿಂದ ಬಾಬರ್ ಮಸೀದಿಯೆಂಬ ಹೆಸರು ಬಂದಿತೆನ್ನಲಾಗಿದೆ. ಭಾರತದ ಮೂಲೆಮೂಲೆಗೂ ಮಂದಿರಗಳನ್ನು ಕೆಡವಿ, ಮಸೀದಿಗಳ ನಿರ್ಮಾಣ ಕಾರ್ಯ ಔರಂಗಜೇಬನ ಆಳ್ವಿಿಕೆಯವರೆಗೂ ಅವ್ಯಾಾಹತವಾಗಿ ನಡೆಯುತ್ತಿಿದ್ದ ಕಾಲವಿದು. ರಾಮನನ್ನು ಹೃದಯದಲ್ಲಿ ಪ್ರತಿಷ್ಠಾಾಪಿಸಿಕೊಂಡ ಪರಸಹಿಷ್ಣು ಹಿಂದೂಗಳು ಮಸೀದಿಯ ಅವರಣದಲ್ಲಿಯೇ ಮರ್ಯಾದಾ ಪುರುಷೋತ್ತಮನಿಗೆ ಪೂಜೆ ಸಲ್ಲಿಸುತ್ತಿಿದ್ದರಂತೆ.
ಆದರೆ, ಮಂದಿರ-ಮಸೀದಿ ವಿವಾದ ಮುನ್ನೆೆಲೆಗೆ ಬಂದಿದ್ದು 1859ರ ಬ್ರಿಿಟಿಷರ ಆಳ್ವಿಿಕೆಯಲ್ಲಿ. ಮಸೀದಿ-ಮಂದಿರಗಳ ನಡುವೆ ಆವರಣಗಳು ನಿರ್ಮಿತವಾದರೂ ರಾಮಮಂದಿರಕ್ಕಾಾಗಿ ಹಿಂದೂಗಳ ಪ್ರತಿಭಟನೆ, ಹೋರಾಟಗಳು ನಡೆಯುತ್ತಲೇ ಇದ್ದವು. 1949ರಲ್ಲಿ ಸರಕಾರ ಮಸೀದಿ-ಮಂದಿರಗಳಿದ್ದ ಸ್ಥಳವನ್ನು ವಿವಾದಿತ ಪ್ರದೇಶವೆಂದು ಘೋಷಿಸಿ ಕಟ್ಟಡವನ್ನೇ ಸ್ವಾಾಧೀನಪಡಿಸಿಕೊಂಡಿತಂತೆ. ಮೂರು ದಶಕಗಳ ನಂತರ ಈ ಕಟ್ಟಡದ ಹಕ್ಕಿಿಗಾಗಿ ನಡೆದ ಹೋರಾಟದಲ್ಲಿ, ರಕ್ತಪಾತವೊಂದು ನಡೆದು ಉಭಯ ಧರ್ಮಗಳ ಸುಮಾರು 600 ಅನುಯಾಯಿಗಳು ಪ್ರಾಾಣ ತೆರಬೇಕಾಗಿ ಬಂತು. 1950ರಲ್ಲಿ ಹಿಂದೂಗಳಿಂದ ರಾಮಜನ್ಮಭೂಮಿಗಾಗಿ ಫೈಜಾಬಾದ್ ನ್ಯಾಾಯಾಲಯಕ್ಕೆೆ ಅರ್ಜಿ ಸಲ್ಲಿಸಲಾಗಿ ರಾಮನಿಗೆ ಹೊರಗಿನಂದಲೇ ಪೂಜೆ ಸಲ್ಲಿಸಲು ಅವಕಾಶ ದೊರೆಯಿತಂತೆ. ಇಷ್ಟು ಸಾಲದೆಂಬಂತೆ 1959ರಲ್ಲಿ, ನಿರ್ಮೋಹಿ ಅಖಾಡಾ ಮೂರನೆಯ ಪಾರ್ಟಿಯಾಗಿ ಅರ್ಜಿಯೊಂದನ್ನು ದಾಖಲಿಸಿ, ವಿವಾದಿತ ಪ್ರದೇಶವನ್ನು ತಮ್ಮ ವಶಕ್ಕೆೆ ನೀಡಬೇಕು ಮತ್ತು ರಾಮಜನ್ಮಭೂಮಿ ಪೋಷಕರೆಂದು ಗುರುತಿಸಬೇಕೆಂದು ಕೇಳಿ ಕೊಂಡಿತಂತೆ.
ಹಿಂದೂ ಧರ್ಮ ಅನುಯಾಯಿಗಳ ಸಹನೆಯ ಕಟ್ಟಯೊಡದಿದ್ದು ಡಿಸೆಂಬರ್ 6, 1992ರಂದು. ನ್ಯಾಾಯಾಲಯದ ಅನುಮತಿಯೊಂದಿಗೆ ಕರಸೇವೆ ನಡೆಸಲು ಸೇರಿದ್ದ ಭಕ್ತರಲ್ಲಿ ಹಲವರು ವಿವಾದಿತ ಕಟ್ಟಡದ ಭಾಗವೊಂದು ನೆಲಸಮಗೊಳಿಸಿದ್ದರಿಂದ ಉದ್ರಿಿಕ್ತ ವಾತಾವರಣವೊಂದು ನಿರ್ಮಾಣವಾಯಿತು. ಭಾರತ ಮಾತ್ರವಲ್ಲ, ನೆರೆರಾಷ್ಟ್ರಗಳಾದ ಪಾಕಿಸ್ತಾಾನ ಹಾಗೂ ಬಾಂಗ್ಲಾಾ ದೇಶಗಳಲ್ಲೂ ಹಿಂಸಾಚಾರ ಭುಗಿಲೆದ್ದಿತು. ದೇಶವ್ಯಾಾಪಿ ನಡೆದ ದಂಗೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಾವುನೋವು ಮಾತ್ರವಲ್ಲ ಅಪಾರ ಸೊತ್ತುಗಳ ನಷ್ಟವಾಯಿತು. 2002ರಲ್ಲಿ ಅಂದಿನ ಪ್ರಧಾನಿ ದಿ.
ಅಟಲ್ ಬಿಹಾರಿ ವಾಜಪೇಯಿಯವರು ತಮ್ಮ ಕಚೇರಿಯಲ್ಲಿ ಅಯೋಧ್ಯೆೆ ಸೆಲ್ ಸ್ಥಾಾಪಿಸಿದರಾದರೂ ವಿವಾದದ ಕಾವು ಏರುತ್ತಲೇ ಇತ್ತು. 2003ರಲ್ಲಿ ವಿವಾದಿತ ತಾಣ, ಶ್ರೀರಾಮನ ಜನ್ಮಸ್ಥಳವೇ ಎಂಬುದನ್ನು ಪರಿಶೀಲಿಸಲು ಭೂಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಆರಂಭ ವಾಯಿತು. 2009ರಲ್ಲಿ ಲಿಬರ್ಹಾನ್ ಆಯೋಗವು 17 ವರ್ಷಗಳ ನಂತರ ತನ್ನ ವರದಿಯನ್ನು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಲ್ಲಿಸಿತು. 2019ರಲ್ಲಿ ವಿವಾದದ ಇತ್ಯರ್ಥಕ್ಕಾಾಗಿ ಸಂಧಾನ ಸಮಿತಿಯೂ ಪ್ರಯತ್ನಿಿಸಿತು. ಗೊಂದಲದ ಗೂಡಾಗಿದ್ದ ಇತಿಹಾಸದ ಪುಟಗಳ ತೆರೆ ಸರಿದು, ಕೊನೆಗೆ 2019ರ ನವಂಬರ್ 9ರಂದು ಸರ್ವೋಚ್ಚ ನ್ಯಾಾಯಾಲಯ ನೀಡಿದ ಐತಿಹಾಸಿಕ ತೀರ್ಪಿನಿಂದ ರಾಮಮಂದಿರ ನಿರ್ಮಾಣಕ್ಕೆೆ ಆನೆಬಲ ಬಂದಂತಾಗಿದೆ.
ಶ್ರೀರಾಮಚಂದ್ರ ನೆಲೆಸಿದ ಕೋಸಲ ದೇಶವನ್ನು ಅವಧ ಎಂದೂ ಕರೆಯಲಾಗುತ್ತದೆ. ಅಯೋಧ್ಯೆೆ, ಲಕ್ನೋೋ, ರಾಯ್ ಬರೇಲಿ, ಮುಂತಾದ ಪ್ರಸಿದ್ಧ ಪಟ್ಟಣಗಳು ಅವಧ ಪ್ರದೇಶಕ್ಕೆೆ ಸೇರಿವೆ. ಈ ಪ್ರದೇಶದಲ್ಲಿ ಬಳಕೆಯಲ್ಲಿರುವ ‘ಅವಧಿ’ ಭಾಷೆಯಲ್ಲಿ ಸಂತ ತುಲಸೀದಾಸರು, ಮಹಾಕಾವ್ಯವೆನಿಸಿದ ‘ಶ್ರೀರಾಮ ಚರಿತ ಮಾನಸ’ ರಚಿಸಿದರು. ಮುಖ್ಯ ಪೂಜಾ ಸ್ಥಳವೆನಿಸಿದ, ಅಯೋಧ್ಯೆೆಯ ಪಶ್ಚಿಿಮ ಭಾಗದಲ್ಲಿರುವ ರಾಮ್‌ಕೋಟ್‌ನಲ್ಲಿ ರಾಮನವಮಿಯಂದು ಪೂಜೆ-ಉತ್ಸವಗಳು ಭಾರಿ ಸಂಭ್ರಮದಿಂದ ನಡೆಯುತ್ತವೆ. ಸರಯೂ ನದಿ ತೀರದಲ್ಲಿ ನಡೆಯುವ ಲಕ್ಷ ದೀಪೋತ್ಸವ ವಿಶ್ವದೆಲ್ಲೆೆಡೆಯಿಂದ ಭಕ್ತರನ್ನು ಆಕರ್ಷಿಸುತ್ತದೆ. ರಾಮಜನ್ಮಸ್ಥಳದ ಅತಿ ಹತ್ತಿಿರದಲ್ಲಿಯೇ ಇರುವ ಸೀತಾ ಕೀ ರಸೋಯಿಯಲ್ಲಿ, ಲೋಕಮಾತೆ ಸೀತೆ ಶ್ರೀರಾಮಚಂದ್ರನನ್ನು ವಿವಾಹವಾದ ಬಳಿಕ ಪ್ರಥಮ ಬಾರಿಗೆ ಅಡುಗೆಯನ್ನು ತಯಾರಿಸಿದ್ದಳೆಂಬ ಪೌರಾಣಿಕ ಹಿನ್ನೆೆಲೆ ಇದೆ. ಶ್ರೀರಾಮಚಂದ್ರ ಅಶ್ವಮೇಧ ಯಾಗ ಮಾಡಿದ ಸ್ಥಳಕ್ಕೆೆ ತ್ರೇತಾ ಕೇ ಠಾಕುರ್ ಎಂದು ಕರೆಯಲಾಗುತ್ತದೆ. ಇದಲ್ಲದೆ, ಕೌಸಲ್ಯಾಾ ಭವನ, ಲಕ್ಷ್ಮಣ ಕಿಲ್ಲಾಾ, ರಘುನಾಥ ಕಿ ಛಾವಣಿ ಮಂದಿರಗಳು ಸಹ ಶ್ರಧ್ಧಾಾಳುಗಳ ಗಮನ ಸೆಳೆಯುತ್ತವೆ.
ಶ್ರೀರಾಮಚಂದ್ರನ ಆದರ್ಶಗಳು ತ್ರೇತಾಯುಗದಲ್ಲಿ ಮಾತ್ರವಲ್ಲ, ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತ. ದೇಶದುದ್ದಕ್ಕೂ ಶ್ರೀರಾಮಚಂದ್ರ ಹೆಜ್ಜೆೆಯಿರಿಸಿದ ನೆಲವನ್ನು ಕಣ್ಣಿಿಗೊತ್ತಿಿಕೊಳ್ಳುತ್ತೇವೆ. ದಟ್ಟ ಅರಣ್ಯವಾಗಿರಲಿ, ನದಿಗಳಾಗಲಿ, ಬೆಟ್ಟಗಳಾಗಲಿ ಶ್ರೀರಾಮಚಂದ್ರ, ಹನುಮಂತ, ಸೀತಾಮಾತೆ ಮತ್ತು ಲಕ್ಷ್ಮಣ ಅಡಿಯಿರಿಸಿದ ಎಲ್ಲ ನೆಲಗಳೂ ನಮಗೆ ತೀರ್ಥಕ್ಷೇತ್ರಗಳೇ ಆಗಿವೆ. ಶ್ರೀರಾಮಚಂದ್ರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಮತ್ತು ಆರ್ಥಿಕ ರಂಗಗಳಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ, ರಾಮರಾಜ್ಯವೆಂಬ ಆದರ್ಶ ರಾಜ್ಯವೆಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಅವತಾರ ಪುರುಷ. ಕೈಕೇಯಿ-ಮಂಥರೆಯರ ಸಂಚು ಬಹಿರಂಗಗೊಂಡರೆ, ಪ್ರಜೆಗಳು ವೃದ್ಧ ತಂದೆಯ ವಿರುದ್ಧ ದಂಗೆಯೇಳಬಹುದೆಂದು ಊಹಿಸಿ ಇರುಳಿನಲ್ಲಿಯೇ ವನವಾಸಕ್ಕೆೆ ನಡೆದ ಧೀಮಂತ ದೊರೆ. ಕುಟಿಲ ತಂತ್ರದ ಬಳಕೆಯಿಂದಾದರೂ ಸರಿ, ತಾನು ತನ್ನ ಮಕ್ಕಳು, ಮೊಮ್ಮಕ್ಕಳು ಅಧಿಕಾರವನ್ನು ಅನುಭವಿಸುತ್ತಲೇ ಇರಬೇಕೆಂಬ ರಾಜಕೀಯ ದಾಹ ತೋರದೆ, ಜೇಷ್ಠ ಪುತ್ರನಾಗಿ ಆಧಿಕಾರಿಯುತವಾಗಿ ಬರಬೇಕಾದ ರಾಜ ಪದವಿಯನ್ನು ಧಿಕ್ಕರಿಸಿ ವನವಾಸಕ್ಕೆೆ ತೆರಳಿದ ಸಂತ.
ಸೋದರ ಭರತ, ಮಾತೆಯರು, ಅಮಾತ್ಯರು ಶ್ರೀರಾಮನ ಮನವೊಲಿಸಿ ಅಯೋಧ್ಯೆೆಗೆ ಮರಳಲು ಗೋಗರೆದರೂ, ಪಿತೃವಾಕ್ಯ ಪರಿಪಾಲನೆಗಿಂತ ಮುಖ್ಯವಾದುದು ಬೇರೆನಿಲ್ಲ ಎನ್ನುವ ವಚನಪರಿಪಾಲಕ ಶ್ರೀರಾಮಚಂದ್ರ.. ಮಾತೆ ಕೈಕೇಯಿಯನ್ನು ತಾನು ಮಾತ್ರವಲ್ಲ, ಸೋದರನಾದ ಭರತನನ್ನು ಕ್ಷಮಿಸುವಂತೆ ವಿನಂತಿಸಿದ್ದು ಶ್ರೀರಾಮಚಂದ್ರನ ಕ್ಷಮಾಶೀಲತೆ, ಹೃದಯ ವೈಶಾಲ್ಯತೆಯನ್ನು ತೋರುತ್ತದೆ. ವನವಾಸ ಕಾಲದಲ್ಲಿಯೂ ಯಾವುದೇ ನಗರ ಪ್ರವೇಶಿಸದೆ, ಋಷಿ-ಮುನಿಗಳಿಂದ ಆಧ್ಯಾಾತ್ಮಿಿಕ ಜ್ಞಾಾನ ಮತ್ತು ಶಾಂತಿ ಕರ್ಮಗಳ ಕಲಿಕೆ, ತಂದೆಯ ಅಪರ ಕರ್ಮಗಳ ನೆರವೇರಿಕೆ, ಸುಗ್ರೀವ-ವಿಭೀಷಣರೊಡನೆ ಮೈತ್ರಿಿ, ಸೀತಾನ್ವೇಷನೆಯ ತಂತ್ರಗಾರಿಕೆ, ರಾವಣಾಸುರನ ವಧೆಯೊಂದಿಗೆ ಲೋಕಮಾತೆ ಸೀತೆಯನ್ನು ಮರಳಿ ಕರೆತರುವ ಕ್ರಿಿಯೆಗಳನ್ನು ನಿರ್ವಹಿಸಿ, ಅಧಿಕಾರವಿಲ್ಲದಿದ್ದರೂ ಸಮಚಿತ್ತನಾಗಿ ಬದುಕಿದ ಮರ್ಯಾದಾ ಪುರುಷೋತ್ತಮನೀತ. ಹದಿನಾಲ್ಕು ವರ್ಷ ವನವಾಸದಿಂದ ಮರಳಿದರೂ, ಭರತನಿಗೆ ರಾಜ್ಯವಾಳುವ ಅಭಿಲಾಷೆ ಇರುವುದಾದರೆ, ಆತನೇ ರಾಜನಾಗಿ ಮುಂದುವರಿಯಲಿ ಎನ್ನುವ ಶ್ರೀರಾಮಚಂದ್ರನ ಉದಾರತೆ, ಹೃದಯ ವೈಶಾಲ್ಯತೆಗಳನ್ನು ಶಬ್ದಗಳಿಂದ ಹಿಡಿದಿಡಲಾಗದು.
ಅರಸನಾದ ಶ್ರೀರಾಮಚಂದ್ರನ ಕಾರ್ಯನಿಷ್ಠೆೆ, ತ್ಯಾಾಗ, ಕುಟುಂಬ ವಾತ್ಸಲ್ಯ, ಸೋದರ ವಾತ್ಸಲ್ಯ, ಹಿರಿಯರಲ್ಲಿ ಗೌರವ, ಸ್ಥಿಿತಪ್ರಜ್ಞೆ, ಕಾರ್ಯಕುಶಲತೆ, ಪ್ರಜೆಗಳ ಮಾತಿಗೆ ಸ್ಪಂದನೆ, ನ್ಯಾಾಯ ನಿಷ್ಟುರತೆ, ಪ್ರಾಾಮಾಣಿಕತೆಗಳು ಆದರ್ಶ ರಾಜ್ಯವೊದನ್ನು ರಾಮರಾಜ್ಯವನ್ನಾಾಗಿಸಲು ಸಾಧ್ಯವಾಗಿಸಿದವು. ಅದಕ್ಕೆೆಂದೇ ರಾಮಾಯಣ, ಹಿಂದೂಗಳಿಗೆ ಪವಿತ್ರ ಗ್ರಂಥ ಮಾತ್ರವಲ್ಲ, ವೈಕ್ತಿಿತ್ವದಲ್ಲಿ ಔನ್ನತ್ಯವನ್ನು ಬೆಳೆಸಿಕೊಳ್ಳುವ ಬಗೆಯನ್ನು ಹಾಗೂ ಬದುಕುವ ರೀತಿಯನ್ನು ಕಲಿಸುವ ಸಾಧನವಾಗಿದೆ. ರಾಮನು ದೇವತಾಪುರುಷನೆನಿಸಿದರೂ ಮಾನವಜನ್ಮ ತಳೆದು, ಆದರ್ಶಗಳು ಹಾಗೂ ಮೌಲ್ಯಗಳನ್ನೇ ಬದುಕಿನ ಸಾರವನ್ನಾಾಗಿಸಿಕೊಂಡು ದಾರಿದೀವಿಗೆಯಾಗಿರುವುದು ಸರ್ವವಿದಿತ. ಶ್ರೀರಾಮಚಂದ್ರನ ಮಂದಿರ ಹಿಂದೂ ಅನುಯಾಯಿಗಳ ಶ್ರದ್ಧೆೆಯ ತಾಣ ಮಾತ್ರವಲ್ಲ, ಸರ್ವಜನಾಂಗದ ಶಾಂತಿಯ ತೋಟವಾಗಲಿ. ಮಂದಿರ-ಮಸೀದಿ ನಿರ್ಮಾಣಕ್ಕೆೆ ಜಾತಿ-ಮತ-ಧರ್ಮಗಳ ಬೇಧ ಮರೆತು ಎಲ್ಲಾಾ ಪ್ರಜ್ಞಾಾವಂತ ನಾಗರಿಕರೂ ಕೈಜೋಡಿಸಿ, ಭಾರತೀಯರು ಸಹೃದಯಿಗಳು ಮತ್ತು ಸೌಹಾರ್ದ ಸಹಬಾಳ್ವೆೆಗೆ ಹೆಸರುವಾಸಿಗಳೆಂದು ನಿರೂಪಿಸುವಂತಾಗಲೆಂಬ ಸದಾಶಯ ಪ್ರತಿಯೊಬ್ಬ ನಾಗರಿಕರದ್ದು. ಪ್ರತಿಯೊಬ್ಬ ಭಾರತೀಯರ ಮನದಲ್ಲಿ ರಾಮಮಂದಿರವೆಂಬ ದೇವಮಂದಿರ ನಿರ್ಮಿತವಾಗುವದನ್ನು ತಮ್ಮದೇ ವೈಯಕ್ತಿಿಕ ಕಾರಣಗಳಿಂದ ವಿರೋಧಿಸುವವರನ್ನು ಕುರಿತು ಎಚ್ಚರ ವಹಿಸುವುದು ಅತ್ಯಗತ್ಯ.