ಮೈತ್ರಿಿ ಸರಕಾರ ಬೀಳಿಸಿದವರ ವಿರುದ್ಧ ಪ್ರತೀಕಾರಕ್ಕೆೆ ಪಣ ಮತಗಳ ಚದುರಿಸುವ ತಂತ್ರ
ಬಿಜೆಪಿ ಪ್ರಬಲವಾಗಿರುವ ಕ್ಷೇತ್ರದಲ್ಲಿ ಮತಗಳನ್ನು ಚದುರಿಸುವುದು ಹಾಗೂ ಕಾಂಗ್ರೆೆಸ್ ಅಥವಾ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮಾಡುವುದು ಮಾಜಿ ಮುಖ್ಯಮಂತ್ರಿಿ ಎಚ್.ಡಿ.ಕುಮಾರಸ್ವಾಾಮಿ ಅವರ ತಂತ್ರಗಾರಿಕೆ. ಬಿಜೆಪಿ ಸರಕಾರ ಉಳಿದರೆ ಪರೋಕ್ಷ ಬೆಂಬಲ, ಇಲ್ಲದಿದ್ದರೆ ಕಾಂಗ್ರೆೆಸ್ ಜತೆ ಇದೇ ಎಚ್‌ಡಿಕೆ 2.0 ಆಪರೇಷನ್ ಪ್ಲ್ಯಾಾನ್.
ರಾಜ್ಯದಲ್ಲಿ ಪಕ್ಷ ಪ್ರಬಲವಾಗಿಲ್ಲದಿದ್ದರೂ ಹೊಂದಾಣಿಕೆ ಮಾಡುವುದು ಜೆಡಿಎಸ್‌ಗೆ ಅನಿವಾರ್ಯವಾಗಿದೆ. ಬಿಜೆಪಿ ಪ್ರಬಲ ಅಭ್ಯರ್ಥಿಗಳು ಸ್ಪರ್ಧಿಸುತ್ತಿಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಅಲೆ ಇಲ್ಲಿದಿದ್ದರೂ ಅಲ್ಲಿ ಬಿಜೆಪಿ ಮತಗಳನ್ನು ಚದುರಿಸುವ ಲೆಕ್ಕಾಾಚಾರವನ್ನು ದಳ ಹಾಕಿಕೊಂಡಿದೆ. ಅನರ್ಹರು ಗೆಲ್ಲಬಾರದೆಂದು ಬಿಜೆಪಿಯ ಬಂಡಾಯ ಕಾರ್ಯಕರ್ತರನ್ನು ಬುಟ್ಟಿಿಗೆ ಹಾಕಿಕೊಳ್ಳಲಾಗುತ್ತಿಿದೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದರೂ ಗೆಲ್ಲಲಿ, ಇಲ್ಲವೇ ಕಾಂಗ್ರೆೆಸ್ ಅಭ್ಯರ್ಥಿಯಾದರೂ ಗೆಲ್ಲಲಿ, ಮತ್ತೆೆ ‘ಕೈ’ ಜೋಡಿಸಲು ಎಚ್‌ಡಿಕೆ ಮುಂದಾಗಿದ್ದಾಾರೆ.
ದಿಢೀರನೆ ಬದಲಾವಣೆಯ ಅನಿವಾರ್ಯತೆ ಏನಿತ್ತು ಎಂಬುದು ಜೆಡಿಎಸ್‌ನಲ್ಲಿ ಪ್ರಶ್ನಿಿಸುವವರಿಲ್ಲವಾಗಿದ್ದಾಾರೆ. ಜೆಡಿಎಸ್‌ನಲ್ಲಿ ರಾತ್ರೋೋರಾತ್ರಿಿ ಹಿರೇಕೆರೂರು ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿ ಪಕ್ಷ ಅಚ್ಚರಿ ಮೂಡಿಸಿದೆ. ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಾಚಾರ ನಡೆಸಿರುವ ಜೆಡಿಎಸ್ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಈ ಹಿಂದೆ ಕ್ಷೇತ್ರದಿಂದ ಉಜಿನಪ್ಪ ಅವರಿಗೆ ಟಿಕೆಟ್ ನೀಡಿದ್ದ ಪಕ್ಷ, ಈಗ ಇಲ್ಲಿನ ರಟ್ಟಿಿಹಳ್ಳಿಿ ಕಬ್ಬಿಿಣಕಂಥಿ ಮಠದ ಶಿವಾಚಾರ್ಯ ಅವರನ್ನು ಕಣಕ್ಕಿಿಳಿಸಿದೆ.
ಬಿಜೆಪಿ ಬಂಡಾಯ ಅಭ್ಯರ್ಥಿ ಅಶೋಕ್ ಪೂಜಾರಿ ಅವರಿಗೆ ಟಿಕೆಟ್ ಘೋಷಿಸುವ ಮೂಲಕ ಉಪ ಚುನಾವಣಾ ಕಣಕ್ಕೆೆ ಜೆಡಿಎಸ್ ಕಾಲಿಟ್ಟಿಿದೆ. ನಾಮಪತ್ರ ಸಲ್ಲಿಸಲು ಸೋಮವಾರ ಕೊನೆ ದಿನವಾದ ಹಿನ್ನೆೆಲೆಯಲ್ಲಿ ಭಾನುವಾರ ರಾತ್ರಿಿ ಅಭ್ಯರ್ಥಿ ಹೆಸರನ್ನು ಜೆಡಿಎಸ್ ಘೋಷಿಸಿತು.
ಸ್ವತಂತ್ರವಾಗಿ ಚುನಾವಣಾ ಕಣಕ್ಕೆೆ ಇಳಿಯಲು ಸಿದ್ಧತೆ ನಡೆಸಿದ್ದ ಅವರಿಗೆ ಮಣೆ ಹಾಕಿದ ಜೆಡಿಎಸ್, ಉತ್ತರ ಕರ್ನಾಟಕದಲ್ಲಿ ಜಯ ಸಾಧಿಸುವ ಯೋಜನೆ ರೂಪಿಸಿದೆ. ಶಾಸಕರು ರೆಬೆಲ್ ಆಗಲು ಮೂಲ ಕಾರಣ ಎಂದು ಹೇಳಲಾಗುತ್ತಿಿರುವ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಈಗ ಎಚ್‌ಡಿಕೆ ಹೊಸ ತಂತ್ರಗಾರಿಕೆ ರೂಪಿಸಿದ್ದಾರೆ. ರಮೇಶ್ ಸ್ಪರ್ಧೆ ಮಾಡುತ್ತಿಿರುವ ಗೋಕಾಕ್ ಕ್ಷೇತ್ರದಲ್ಲಿ ಜೆಡಿಎಸ್ ಬಲವೇ ಇಲ್ಲ. ಆದರೂ ಎಚ್‌ಡಿಕೆ ಹೊಸ ಯೋಜನೆ ರೂಪಿಸಿದ್ದಾಾರೆ.
ಚಿಕ್ಕಬಳ್ಳಾಾಪುರದಲ್ಲಿ ರಾಧಾಕೃಷ್ಣ ಹಾಗೂ ಕೆ.ಪಿ.ಬಚ್ಚೇಗೌಡ ಅವರಿಂದ ವರಿಷ್ಠರು ನಾಮಪತ್ರ ಹಾಕಿಸಿದ್ದಾಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರನ್ನು ಸೋಲಿಸಲು ಈ ತಂತ್ರ ರೂಪಿಸಿದ್ದಾಾರೆ. ಇಲ್ಲಿ ಪಕ್ಷದ ಪ್ರಭಾವ ಇಲ್ಲದಿದ್ದರೂ ಜಾತಿ ಲೆಕ್ಕಾಾಚಾರದ ಮೇಲೆ ಮತಗಳನ್ನು ಕೈತಪ್ಪಿಿಸುವ ಹುನ್ನಾಾರವಾಗಿದೆ.
ಚಿಕ್ಕಬಳ್ಳಾಾಪುರದ ಮೇಲೆ ಎಚ್‌ಡಿಡಿ ಕಣ್ಣು!
ಬಿಜೆಪಿ ಅಭ್ಯರ್ಥಿ ಸುಧಾಕರ್ ಮೇಲೆ ದ್ವೇಷ ಕಾರುತ್ತಿಿರುವ ಎಚ್.ಡಿ.ಕುಮಾರಸ್ವಾಾಮಿ ಅವರು ಕೆ.ಪಿ.ಬಚ್ಚೇಗೌಡ ಅವರನ್ನು ಸ್ಪರ್ಧೆಗೆ ನಿಲ್ಲಿಸಿರುವ ಹಿಂದಿನ ರಹಸ್ಯ ಬೆಳಕಿಗೆ ಬಂದಿದೆ. ಕಳೆದ ಚುನಾವಣೆಯಲ್ಲಿ ಸೋತು ಜೇಬು ಖಾಲಿ ಮಾಡಿಕೊಂಡಿರುವ ಕೆ.ಪಿ.ಬಚ್ಚೇಗೌಡ ಅವರಿಗೆ ಶಾಸಕಿ ಅನಿತಾ ಕುಮಾರಸ್ವಾಾಮಿ ಅವರ ಸಂಬಂಧಿ ರಂಗನಾಥ್ ಎಂಬುವವರು ಹಣಕಾಸು ಸಹಾಯಕ್ಕೆೆ ಮುಂದಾಗಿದ್ದು, ಗೆಲ್ಲಿಸುವ ಹೊಣೆ ಹೊತ್ತಿಿದ್ದಾಾರೆ. ಇಲ್ಲಿ ಕಾಂಗ್ರೆೆಸ್ ಮತಗಳು ಹೆಚ್ಚಾಾಗಿರುವ ಕಾರಣ ಸುಧಾಕರ್ ಅವರಿಗೆ ಹೊಡೆತ ನೀಡಲು ಎಚ್‌ಡಿಡಿ ತನ್ನ ಅಭ್ಯರ್ಥಿಗೆ ಸಾಥ್ ನೀಡುತ್ತಿಿದ್ದಾಾರೆ.
ಬಿಜೆಪಿ ಮೇಲೆ ಜೆಡಿಎಸ್‌ಗೆ ಮಮಕಾರ
ಉಪ ಚುನಾವಣೆಯಲ್ಲಿ ಬಿಜೆಪಿ ಮೇಲೆ ಒಲವು ತೋರುತ್ತಿಿರುವ ಎಚ್.ಡಿ.ಕುಮಾರಸ್ವಾಾಮಿ, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಮೂಲಕ ಸರಕಾರ ಆಡಳಿತ ಮುಂದುವರಿಸಿದರೆ ಅವರಿಗೆ ಪರೋಕ್ಷವಾಗಿ ಬೆಂಬಲ ನೀಡಲಿದ್ದಾಾರೆ. ಚುನಾವಣೆಯಲ್ಲಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡಿದರೆ ಮುಂದೆ ಕಷ್ಟವಾಗುತ್ತದೆ ಎಂದು ಅರಿತಿರುವ ಎಚ್‌ಡಿಡಿ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ವಾಗ್ದಾಾಳಿ ನಡೆಸುತ್ತಿಿದ್ದಾಾರೆ. ಈಗಾಗಲೇ ಜೆಡಿಎಸ್ ಬೆಂಬಲದ ಅವಶ್ಯಕತೆ ಇಲ್ಲ ಮುಖ್ಯಮಂತ್ರಿಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿರುವುದರಿಂದ ಜೆಡಿಎಸ್‌ಗೆ ನುಂಗಲಾರದ ತುತ್ತಾಾಗಿದೆ.