ಬಿಜೆಪಿಯ ರಾಜ್ಯ ಘಟಕದ ವೈದ್ಯಕೀಯ ವಿಭಾಗ ವೈದ್ಯರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಿತ್ತು. ರಾಜ್ಯ ಸರ್ಕಾರ ಜೈವಿಕ-ವೈದ್ಯಕೀಯ ತ್ಯಾಜ್ಯ ನಿರ್ವಹಣೆಯ ಶುಲ್ಕವನ್ನು ಹೆಚ್ಚಿಸಿರುವುದನ್ನು ವಿರೋಧಿಸಿದ ಕೆಲ ದಂತವೈದ್ಯರು, ಈ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಭಟಿಸಿದರು.
ಭಾರತೀಯ ದಂತವೈದ್ಯಕೀಯ ಸಂಸ್ಥೆ (ಐಡಿಎ) ಸದಸ್ಯ ಡಾ.ಅನಿಲ್ ಡಿಸಿಲ್ವ, ‘ಕೆಲವು ವೈದ್ಯರು ಅಪಾರ ಪ್ರಮಾಣದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದನೆ ಮಾಡುತ್ತಾರೆ. ಅಂತಹ ವೈದ್ಯರ ವರ್ಗಕ್ಕೆ ದಂತವೈದ್ಯ ರನ್ನು ಸೇರಿಸಿರುವುದು ಸರಿಯಲ್ಲ’ ಎಂದು ಹೇಳಿದರು.
‘ದಂತವೈದ್ಯರ ಬೇಡಿಕೆಗಳ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ನಿರ್ವಹಣಾ ಶುಲ್ಕ ನಿರ್ಧರಿಸುವುದು ರಾಜ್ಯಕ್ಕೆ ಸಂಬಂಧಿಸಿದ ವಿಷಯ. ಹಾಗಾಗಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಪಾಲ್ಗೊಂಡಿರುವ ಇಂಥ ಕಾರ್ಯ ಕ್ರಮದ ವೇಳೆ ಪ್ರತಿಭಟನೆ ನಡೆಸುವ ಅಗತ್ಯ ಇರಲಿಲ್ಲ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು.