Thursday, 19th September 2024

ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಆರೋಪಿ ಬಂಧನ…? ಆಗಿದ್ದಿಷ್ಟು …

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್ ಸ್ಕೀಮ್ ಬಳಸಿ ವಂಚಿಸಿದ ಆರೋಪದ ಮೇಲೆ ಪ್ರಕರಣ ದಾಖಲಾ ಗಿದ್ದು, ಕೋವಿಡ್-19 ಲಸಿಕೆಗೆ ನೀಡಿದ ವಿವರ ಗಳಿಂದಾಗಿ ಆಕೆಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಎಸ್. ಶಶಿಕಲಾ (48) ಎಂದು ಗುರುತಿಸಲಾಗಿದೆ. 50 ಲಕ್ಷ ರೂ. ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದಳು.

2019 ರಲ್ಲಿ, ಚೆನ್ನೈನ ಕೊಡುಂಗೈಯೂರ್ ನೆರೆಹೊರೆಯ ನಿವಾಸಿ ಎಸ್. ಪ್ರೇಮಾ ಮತ್ತು ಇತರ ಠೇವಣಿದಾರರು ನೀಡಿದ ದೂರಿ ನನ್ವಯ, ಶಶಿಕಲಾ ಮತ್ತು ಈಕೆಯ ಸಂಬಂಧಿ ಈಶ್ವರಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈಶ್ವರಿಯನ್ನು ಪೊಲೀಸರು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಶಶಿಕಲಾ ತಲೆಮರೆಸಿಕೊಂಡಿದ್ದಳು. ಶಶಿಕಲಾ ಮೊಬೈಲ್ ಉಪಯೋಗಿಸುತ್ತಿರಲಿಲ್ಲ ವಾದ್ದರಿಂದ ಈಕೆಯ ಪತ್ತೆ ಕಾರ್ಯ ಪೊಲೀಸರಿಗೆ ಅಷ್ಟು ಸುಲಭದ್ದಾಗಿರಲಿಲ್ಲ.

ಅಂತಿಮವಾಗಿ, ಪೊಲೀಸರು ಆಕೆಯ ಆಧಾರ್ ಕಾರ್ಡ್ ಬಳಸಿ ಶಶಿಕಲಾ ಕೋವಿಡ್-19 ಲಸಿಕೆ ತೆಗೆದುಕೊಂಡಿದ್ದಾಳೆಯೇ ಎಂಬು ದನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಕೆ ಕಾಂಚೀಪುರಂನ ಸರ್ಕಾರಿ ಶಾಲೆಯೊಂದರಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ. ಸುಳಿವು ಪಡೆದ ಪೊಲೀಸರು ಶಶಿಕಲಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.