ಹರಪನಹಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದರೆ ಕಸದ ಬುಟ್ಟಿಗೆ ಹಾಕಿದಂತೆ ಆದ್ದರಿಂದ ಹಡಗಿನಂತೆ ಮುಳುಗುತ್ತಿರುವ ಕಾಂಗ್ರೆಸ್ ಪಕ್ಷದ ಅಭ್ಯಾರ್ಥಿ ಕೆ.ಸಿ.ಕೊಂಡಯ್ಯ ಅವರಿಗೆ ಮತ ನೀಡದೇ ಬಿಜೆಪಿಯ ನಿಷ್ಠವಂತ ನಾಯಕರಾದ ವೈ.ಎಂ.ಸತೀಶ್ ಅವರಿಗೆ ನಿಮ್ಮ ಮತವನ್ನು ಕೋಟ್ಟು ಕೋಡಿಸಿ ಎಂದು ತಾಲೂಕಿನ ಚುನಾಯಿತ ಪ್ರತಿನಿಧಿಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.
ಪಟ್ಟಣದ ನಟರಾಜ್ ಕಲಾಭವನದಲ್ಲಿ ಬುಧವಾರ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸ ಲಾಗಿದ ವಿಧಾನ ಪರಿಷತ್ತ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಿರ್ಣಾಮವಾಗುತ್ತಲಿದೆ, ವಿರೋಧ ಪಕ್ಷವಾಗಲು ಯೋಗ್ಯತೆ ಇಲ್ಲ, ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವ ಧನ ೧೦ ಸಾವಿರಕ್ಕೆ ಹೆಚ್ಚಿಸಲು ಹಾಗೂ ಅಧ್ಯಕ್ಷರಿಗೆ ಸಂಚರಿ ಸಲು ೧ ವಾಹನ ನೀಡುವಂತೆ ಬಿಜೆಪಿ ÷ಅದ್ಯಕ್ಷ ನಳೀನಕುಮಾರ ಕಟೀಲು ಒತ್ತಾಯ ಮಾಡಿ ದ್ದಾರೆ, ಅದೂ ಸಹ ಈಡೇರುತ್ತದೆ ಬಿಜೆಪಿ ಯವರ ಪ್ರಚೋದನೆ ನೋಡಿದರೆ ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಸೋಲಿಸಲು ಕಾಂಗ್ರೆಸ್ ನವರೇ ಸಿದ್ದತೆ ನಡೆಸಿ ದಂತಿದೆ. ಕಾಂಗ್ರೆಸ್ ನ ಕೆಲವೊಂದು ಶಾಸಕರುಗಳು ದೈಹಿಕವಾಗಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಇದ್ದಾರೆ, ಮಾನಸಿಕವಾಗಿ ಇಲ್ಲ, ಅವರ ಅಭ್ಯರ್ಥಿಯನ್ನು ಅವರೇ ಸೋಲಿಸುತ್ತಾರೆ ಎಂದು ತಿಳಿಸಿದರು.
ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಹಗಲು, ರಾತ್ರಿ ಎನ್ನದೆ ದೇಶದ ಅಭಿವೃದ್ದಿಗೆ ಕೆಲಸ ಮಾಡುತ್ತಿರುವ ಮೋದಿಯವರ ಬಗ್ಗೆ ವಿಪಕ್ಷದವರು ಏಕ ವಚನದಲ್ಲಿ ಮಾತನಾಡುತ್ತಿರುವುದು ಖಂಡನೀಯ ಎಂದರು.
ಗ್ರಾಮ ಪಂಚಾಯ್ತಿಗಳಿಗೆ ಜನಸಂಖ್ಯೆಗನುಗುಣವಾಗಿ ಕೇಂದ್ರ ಸರ್ಕಾರ ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿ ೫ ಕೋಟಿ ವರೆಗೂ ಅನುದಾನ ನೀಡುತ್ತದೆ. ಕೋವಿಡ್ ನಿಂದ ಉಂಟಾದ ಆರ್ಥಿಕ ಸಂಕಷ್ಟ ಸುದಾರಿಸಿದ ನಂತರ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆ ಸೇರಿದಂತೆ ಸಮಗ್ರ ಅಭಿವೃದ್ದಿಯನ್ನು ಕೈಗೊಳ್ಳುತ್ತೇವೆ.
ಬೆಳೆ ಹಾನಿ ಪರಿಹಾರವನ್ನು ೧ ಹೆಕ್ಟರ್ ಗೆ ೨೦ ಸಾವಿರ ರು.ಗಳಿಗೆ ಹೆಚ್ಚಿಸಬೇಕು ಎಂದು ಕೇಂದ್ರವನ್ನು ಒತ್ತಾಯ ಮಾಡಿದ್ದೇವೆ. ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ೨೦ ಸ್ಥಾನಗಳಲ್ಲಿ ಬಿಜೆಪಿ ಪಕ್ಷವು ೧೪ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ವಿಶ್ವಾಸ ವ್ಯಕ್ತ ಪಡಿಸಿದರು.
ವಿಧಾನಸಭೆಯಲ್ಲಿ ಪಾಸ್ ಆದ ಮಸೂದೆಗಳು ವಿಧಾನ ಪರಿಷತ್ತಿನಲ್ಲೂ ಪಾಸ್ ಆಗಬೇಕಾದರೆ ನಮಗೆ ಮೇಲ್ಮನೆಯಲ್ಲಿ ಬಹುಮತ ಬೇಕು, ಆದ್ದರಿಂದ ತಾವು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಯಕರ ಕೋರತೆ ಇದೆ. ಬಿಜೆಪಿ ಅಭ್ಯರ್ಥಿ ಸತೀಶ ಉತ್ತಮ ಅಭ್ಯರ್ಥಿ, ಕಾಂಗ್ರೆಸ್ ಪಕ್ಷದವರ ಆಮೀಷಕ್ಕೆ ಒಳಗಾಗದೆ ಹೆಚ್ಚು ಅಂತರದಿAದ ನಮ್ಮ ಅಭ್ಯರ್ಥಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಸಪಾಯಿ ಕರ್ಮ ಚಾರಿ ನಿಗಮದ ಅಧ್ಯಕ್ಷ ಹನುಮಂತಪ್ಪ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ ಮತ ಯಾಚನೆ ಮಾಡಿದರು.
ಜಿಲ್ಲಾ ಬಿಜೆಪಿ ಅದ್ಯಕ್ಷ ಚೆನ್ನಬಸವನಗೌಡ,ಡಾ.ಮಹಿಮಾ ಪಾಟೀಲ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ, ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾದ್ಯಕ್ಷೆ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ, ತಾಂಡ ಅಭಿವೃದ್ಧಿ ನಿಗಮದ ನಿರ್ಧೇಶಕರಾದ ಎಸ್.ಪಿ.ಲಿಂಭ್ಯಾನಾಯ್ಕ, ಜಿಲ್ಲಾ ಬಿಜೆಪಿ ಎಸ್.ಟಿ ಘಟಕದ ಕಾರ್ಯದರ್ಶಿ ಆರ್ .ಲೋಕೇಶ, ತಾ.ಪಂ ಮಾಜಿ ಉಪಾದ್ಯಕ್ಷ ಮಂಜನಾಯ್ಕ, ಪುರಸಭೆ ಸದಸ್ಯರುಗಳಾದ ಎಚ್ .ಎಂ.ಅಶೋಕ, ವಿನಾಯಕ, ಕಿರಣ್ ಶಾನಬಾಗ್ , ಜಾವೇದ್ , ತಾರ ಮಂಜುನಾಥ, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ , ಎಂ.ಸAತೋಷ ಕೆಂಗಳ್ಳಿ ಪ್ರಕಾಶ, ಮುತ್ತಿಗಿ ರೇವಣಸಿದ್ದಪ್ಪ, ಎಂ. ಮಲ್ಲೇಶ್, ಕೋಟ್ರೇಶ್, ಸೇರಿದಂತೆ ಇತರರು ಇದ್ದರು.